AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nag Panchami 2024: ನಾಗರ ಕಲ್ಲಿಗೆ ಮಾಡಿದ ಅಭಿಷೇಕ ಸೇವಿಸುವುದರಿಂದ ಗರ್ಭಕ್ಕೆ ಸಂಬಂಧಿತ ಸಮಸ್ಯೆ ಪರಿಹಾರ: ವೆ। ಗಜಾನನ ಭಟ್

Nag Panchami 2024: ಈ ದಿನ ಅಭಿಷೇಕ ಮಾಡಿದಂತಹ ಹಾಲು, ಎಳನೀರನ್ನು ದೇವರ ತೀರ್ಥವೆಂದು ಸೇವನೆ ಮಾಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಇದರಲ್ಲಿಯೂ ಕೂಡ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ನಾವು ನಾಗರ ಕಲ್ಲಿಗೆ ಹಾಲು ಹಾಕಿ ಪೂಜೆ ಮಾಡುವುದರಲ್ಲಿ ಏನು ಪ್ರಯೋಜನವಿದೆ ಎಂದುಕೊಳ್ಳುತ್ತೇವೆ ಆದರೆ ಈ ದೇವರ ತೀರ್ಥ ನಾನಾ ರೀತಿಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

Nag Panchami 2024: ನಾಗರ ಕಲ್ಲಿಗೆ ಮಾಡಿದ ಅಭಿಷೇಕ ಸೇವಿಸುವುದರಿಂದ ಗರ್ಭಕ್ಕೆ ಸಂಬಂಧಿತ ಸಮಸ್ಯೆ ಪರಿಹಾರ: ವೆ। ಗಜಾನನ ಭಟ್
ವೆ। ಗಜಾನನ ಭಟ್ ಆರೊಳ್ಳಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Aug 09, 2024 | 10:01 AM

Share

ನಾಗರ ಪಂಚಮಿ ಹಿಂದೂಗಳಿಗೆ ಬಹಳ ಪವಿತ್ರ ಹಬ್ಬ. ಈ ದಿನ ಸಾಮಾನ್ಯವಾಗಿ ನಾಗರ ಕಲ್ಲಿಗೆ ಅಭಿಷೇಕ ಮಾಡಲಾಗುತ್ತದೆ. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಳಿಕ ಅಭಿಷೇಕ ಮಾಡಿದಂತಹ ಹಾಲು, ಎಳನೀರನ್ನು ದೇವರ ತೀರ್ಥವೆಂದು ಸೇವನೆ ಮಾಡಲಾಗುತ್ತದೆ. ಆದರೆ ನಿಮಗೆ ಗೊತ್ತಾ? ಇದರಲ್ಲಿಯೂ ಕೂಡ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ನಾವು ನಾಗರ ಕಲ್ಲಿಗೆ ಹಾಲು ಹಾಕಿ ಪೂಜೆ ಮಾಡುವುದರಲ್ಲಿ ಏನು ಪ್ರಯೋಜನವಿದೆ ಎಂದುಕೊಳ್ಳುತ್ತೇವೆ ಆದರೆ ಈ ದೇವರ ತೀರ್ಥ ನಾನಾ ರೀತಿಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಈ ಬಗ್ಗೆ ವೆ। ಗಜಾನನ ಭಟ್ ಆರೊಳ್ಳಿ ಅವರು ಟಿವಿ9 ಜೊತೆಗೆ ಮಾತನಾಡಿದ್ದು, ನಮ್ಮ ಈ ಭೂಮಂಡಲವನ್ನು ಹೊತ್ತುಕೊಂಡಿರುವ ನಾಗ ದೇವನು ಕಲಿಯುಗದಲ್ಲಿ ನಮಗೆ ಪ್ರತ್ಯಕ್ಷವಾಗಿ ಕಾಣುವ ದೇವರು. ಅಲ್ಲದೆ ನಾಗರಾಜನನ್ನು ನಿಧಿ ರಕ್ಷಣೆ ಮಾಡುವವನು ಎಂದು ಕರೆಯಲಾಗುತ್ತದೆ. ಹಾಗಾಗಿ ಅವನಿಗೆ ಮಾಡಿದಂತಹ ಪೂಜೆಯು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ. ಹಾಗಾಗಿ ನಾಗರ ಕಲ್ಲಿಗೆ ಮಾಡಿದ ಅಭಿಷೇಕವನ್ನು ಭಕ್ತಿಯಿಂದ ಸೇವನೆ ಮಾಡುವುದರಿಂದ ಬಂದಂತಹ ಕಷ್ಟಗಳು ಪರಿಹಾರವಾಗುತ್ತದೆ. ಅಲ್ಲದೆ ನಾಗ ದೋಷ ಅಥವಾ ಕುಟುಂಬದಲ್ಲಿ ನಾಗನ ತೊಂದರೆ ಇದ್ದರೆ ನಿವಾರಣೆ ಆಗುತ್ತದೆ. ಇದೆಲ್ಲದರ ಜೊತೆಗೆ ನೀವು ನಾಗಮಂಡಲಗಳನ್ನು ಬಿಡಿಸುವಾಗ ಗಂಟುಗಳು ಅಂದರೆ ಹಾವು ಸುತ್ತಿದ ಮಾದರಿಯಲ್ಲಿ ಮಂಡಲ ಬಿಡಿಸುವುದನ್ನು ನೀವು ನೋಡಿರಬಹುದು, ಇದಕ್ಕೆ ಹಲವಾರು ಅರ್ಥಗಳಿದ್ದು, ಪುರಾಣಗಳಲ್ಲಿ ಇದನ್ನು ಸವಿವರವಾಗಿ ವಿವರಿಸಲಾಗಿದೆ. ಹಾಗಾಗಿ ಹಿಂದಿನದಿಂದಲೂ ಬಂದ ನಂಬಿಕೆಗಳ ಪ್ರಕಾರ ನಾಗ ದೇವರಿಗೆ ಮಾಡಿದ ಅಭಿಷೇಕವನ್ನು ಸೇವನೆ ಮಾಡುವುದರಿಂದ ನಮ್ಮ ಗಂಟುಗಳಲ್ಲಿ ಕಂಡು ಬರುವ ನೋವು, ನರ ಸಂಬಂಧಿತ ಕಾಯಿಲೆಗಳು ಮತ್ತು ಹೃದಯದ ಆರೋಗ್ಯ ಸಮಸ್ಯೆ ಮತ್ತು ಇನ್ನಿತರ ರೋಗಗಳಿಂದ ಮುಕ್ತಿ ನೀಡುತ್ತದೆ ಜೊತೆಗೆ ಹಣಕಾಸಿನ ಸಮಸ್ಯೆ ಇರುವವರು ನಾಗ ದೇವನಿಗೆ ವಿಶೇಷ ಪೂಜೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಈ ದೇವಸ್ಥಾನದ ಹುತ್ತದ ಮಣ್ಣು ಚರ್ಮ ರೋಗವನ್ನು ನಿವಾರಿಸುತ್ತದೆ

ಇದಕ್ಕಿಂತ ಮುಖ್ಯವಾಗಿ ಗರ್ಭ ಧರಿಸದ ಮಹಿಳೆಯರು ಅಥವಾ ಗರ್ಭಕ್ಕೆ ಸಂಬಂಧಿಸಿದ ನಾನಾ ರೀತಿಯ ಸಮಸ್ಯೆಗಳನ್ನು ಹೊಂದಿರುವವರು ನಾಗರ ಕಲ್ಲಿಗೆ ಮಾಡಿದ ಅಭಿಷೇಕವನ್ನು ಸೇವನೆ ಮಾಡುವುದರಿಂದ ಯಾವುದೇ ರೀತಿಯ ದೋಷಗಳಿದ್ದರೂ ಕೂಡ ನಿವಾರಣೆಯಾಗುತ್ತದೆ. ನಾಗನಿಗೆ ಪೂಜೆ ಮಾಡಲು ಹೋಗುವಾಗ ಬಾಳೆಹಣ್ಣು, ಹಾಲು ಅಥವಾ ಎಳನೀರನ್ನು ತೆಗೆದುಕೊಂಡು ಹೋಗಿ. ಬಳಿಕ ನೈವೇದ್ಯವಾಗಿ ಅಭಿಷೇಕ ಆದ ಮೇಲೆ ಅದನ್ನು ಸೇವನೆ ಮಾಡಿ ಎಂದಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:35 am, Fri, 9 August 24

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!