AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ

ರಕ್ತದ ಒತ್ತಡ ನಾವು ತಿಳಿದಂತಲ್ಲ. ಇದನ್ನು ಯಾವಾಗಲೂ ನಿರ್ಲಕ್ಸ್ಯ ಮಾಡುವುದು ಸರಿಯಲ್ಲ. ಏಕೆಂದರೆ ಸಣ್ಣ ವ್ಯತ್ಯಾಸ ಕೂಡ ಜೀವಕ್ಕೆ ಅಪಾಯಕಾರಿಯಾಗಬಹುದು. ಅದರಲ್ಲಿಯೂ ತಜ್ಞರು ಬೇಸಿಗೆಯಲ್ಲಿ ಹೆಚ್ಚುತ್ತಿರುವ ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ಎಚ್ಚರಿಕೆ ನೀಡುತ್ತಿದ್ದು ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕಾಗಿದೆ. ಏಕೆಂದರೆ ಈ ಸ್ಥಿತಿಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಕೂಡ ಹೃದಯಕ್ಕೆ ಅಪಾಯ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ
Masked HypertensionImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Apr 25, 2026 | 5:51 PM

Share

ಇತ್ತೀಚಿನ ದಿನಗಳಲ್ಲಿ ಆರೋಗ್ಯ ತಪಾಸಣೆ ವೇಳೆ ರಕ್ತದ ಒತ್ತಡ (BP) ಸಾಮಾನ್ಯವಾಗಿದೆ ಎಂದು ಬಂದರೂ, ಹೃದಯಕ್ಕೆ ಅಪಾಯ ಇರುವ ಸಾಧ್ಯತೆ ಇದೆ ಎಂದು ತಜ್ಞರು . ಎಚ್ಚರಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು ಮಾಸ್ಕ್ಡ್ ಹೈಪರ್ಟೆನ್ಷನ್ (Masked Hypertension) ಎಂದು ಕರೆಯಲಾಗುತ್ತದೆ. ಅಂದರೆ, ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಬಿಪಿ ನಾರ್ಮಲ್ ಕಾಣಿಸಿಕೊಂಡರೂ, ದಿನನಿತ್ಯದ ಜೀವನದಲ್ಲಿ ಅದು ಹೆಚ್ಚಾಗಿರುವ ಸ್ಥಿತಿಯಾಗಿದೆ. ಹಾಗಾದರೆ ಇದು ಜೀವಕ್ಕೆ ಅಪಾಯಕಾರಿಯೇ, ಈ ರೀತಿಯಾಗುವುದಕ್ಕೆ ಕಾರಣವೇನು, ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಾಸ್ಕ್ಡ್ ಹೈಪರ್ಟೆನ್ಷನ್ ಎಂದರೇನು?

ತಜ್ಞರ ಪ್ರಕಾರ, ಈ ಸ್ಥಿತಿಯಲ್ಲಿ ವ್ಯಕ್ತಿಯ ಬಿಪಿ ಆಸ್ಪತ್ರೆಯಲ್ಲಿ 120/80 mmHg ಆಸುಪಾಸು ಇರುತ್ತದೆ. ಆದರೆ ಮನೆ ಅಥವಾ ಕೆಲಸದ ಸ್ಥಳದಲ್ಲಿ ಇದು 140/90 mmHg ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು.

ಏಕೆ ಇದು ಅಪಾಯಕಾರಿ?

ಮಾಸ್ಕ್ಡ್ ಹೈಪರ್ಟೆನ್ಷನ್ ಅಪಾಯಕಾರಿ ಏಕೆಂದರೆ ಇದು ಸುಲಭವಾಗಿ ಪತ್ತೆಯಾಗುವುದಿಲ್ಲ. ದೀರ್ಘಕಾಲ ಬಿಪಿ ಹೆಚ್ಚಾಗಿ ಇರುವುದರಿಂದ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ. ಇದರ ಪರಿಣಾಮವಾಗಿ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಕೆಲಸದ ಒತ್ತಡ, ಆತಂಕ ಮತ್ತು ಅಶಾಂತಿ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಅದಲ್ಲದೆ ಕೆಲವರು ಹೊರಗಿನ ಪರಿಸ್ಥಿತಿಗಳಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಾರೆ, ಆದರೆ ಆಸ್ಪತ್ರೆಯಲ್ಲಿ ಶಾಂತವಾಗಿರುವುದರಿಂದ ಬಿಪಿ ಸಾಮಾನ್ಯವಾಗಿ ಕಾಣಿಸುತ್ತದೆ.

ಇದನ್ನೂ ಓದಿ: ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಹೇಗೆ ಗುರುತಿಸಬೇಕು?

ವೈದ್ಯರು ಹೇಳುವಂತೆ, ಕೇವಲ ಆಸ್ಪತ್ರೆಯಲ್ಲಿ ಬಿಪಿ ಪರೀಕ್ಷೆ ಮಾಡಿಸಿದರೆ ಸಾಕಾಗುವುದಿಲ್ಲ. 24 ಗಂಟೆಗಳ ಆಂಬ್ಯುಲೇಟರಿ ರಕ್ತದೊತ್ತಡ ಮಾನಿಟರಿಂಗ್ (ABPM) ಮಾಡಿಸುವುದು ಉತ್ತಮ. ಇದು ದಿನಪೂರ್ತಿ ಬಿಪಿ ಮಟ್ಟವನ್ನು ತಿಳಿಯಲು ಸಹಾಯ ಮಾಡುತ್ತದೆ.

ತಡೆಗಟ್ಟಲು ಸಲಹೆಗಳು:

  • ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ
  • ಉಪ್ಪಿನ ಸೇವನೆ ಕಡಿಮೆ ಮಾಡಿ
  • ಮಾನಸಿಕ ಒತ್ತಡ ನಿಯಂತ್ರಿಸಿ
  • ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ

ತಜ್ಞರ ಸಲಹೆಯಂತೆ, ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಹೃದಯದ ಆರೋಗ್ಯ ಕಾಪಾಡಲು ಅತ್ಯಂತ ಮುಖ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More