Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?

| Updated By: ನಯನಾ ರಾಜೀವ್

Updated on: May 26, 2022 | 2:23 PM

Fish Allergy:ಯಾವುದೇ ಅಲರ್ಜಿಯಾದರೂ ನೀವು ಸೇವಿಸುವ ಆಹಾರದ ಅಡ್ಡಪರಿಣಾಮವೇ ಆಗಿರುತ್ತದೆ. ಅದರಲ್ಲಿ ಮೀನು ಅಲರ್ಜಿ ಕೂಡ ಒಂದು. ಮೀನು ಸೇವಿಸಿದ ಬಳಿಕ ಕಾಣಿಸಿಕೊಳ್ಳುವ ಅಲರ್ಜಿಯನ್ನು ಮೀನು ಅಲರ್ಜಿ ಎಂದು ಕರೆಯಲಾಗುತ್ತದೆ.

Fish Allergy: ಮೀನು ಅಲರ್ಜಿ ಎಂದರೇನು? ನಿಭಾಯಿಸುವುದು ಹೇಗೆ?
ಮೀನು
Follow us on

ಯಾವುದೇ ಅಲರ್ಜಿಯಾದರೂ ನೀವು ಸೇವಿಸುವ ಆಹಾರದ ಅಡ್ಡಪರಿಣಾಮವೇ ಆಗಿರುತ್ತದೆ. ಅದರಲ್ಲಿ ಮೀನು ಅಲರ್ಜಿ ಕೂಡ ಒಂದು. ಮೀನು ಸೇವಿಸಿದ ಬಳಿಕ ಕಾಣಿಸಿಕೊಳ್ಳುವ ಅಲರ್ಜಿಯನ್ನು ಮೀನು ಅಲರ್ಜಿ ಎಂದು ಕರೆಯಲಾಗುತ್ತದೆ. ಸುಮಾರು ಶೇ.40ರಷ್ಟು ಯುವಕರು ಮೀನು ಅಲರ್ಜಿಯೊಂದಿಗೆ ಬಳಲುತ್ತಿದ್ದಾರೆ. ತಲೆನೋವು, ಮೂಗು ಕಟ್ಟುವುದು ಹಾಗೂ ಸುಸ್ತಾದ ಅನುಭವವಾಗುತ್ತದೆ.

ಕೆಲವರಿಗೆ ಯಾವುದೋ ಒಂದು ಜಾತಿಯ ಮೀನನ್ನು ತಿಂದರೆ ಮಾತ್ರ ಅಲರ್ಜಿ ಕಾಣಿಸಿಕೊಳ್ಳುತ್ತದೆ, ಇನ್ನೂ ಕೆಲವರಿಗೆ ಯಾವುದೇ ಮೀನು ತಿಂದರೂ ಅಲರ್ಜಿ ಕಾಣಿಸಿಕೊಳ್ಳುತ್ತದೆ.

ನಾವು ಪ್ರತಿನಿತ್ಯ ಸೇವಿಸುವ ಆಹಾರದ ಬಗ್ಗೆ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆ. ಏಕೆಂದರೆ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳುವ ಪರಿಪಾಠ ಸಾಮಾನ್ಯವಾಗಿ ಹೆಚ್ಚಿನ ಮಂದಿಗಿರುತ್ತದೆ.

ಆದರೆ ಕೆಲವೊಂದು ಆಹಾರಗಳನ್ನು ಮಿತವಾಗಿ ಸೇವಿಸದಿದ್ದರೆ ಅದು ಸ್ಕಿನ್‌ ಅಲರ್ಜಿ, ನಾಲಿಗೆ ಊದಿಕೊಳ್ಳುವಿಕೆ, ಬಾಯಿಹುಣ್ಣು, ಉಸಿರಾಟದಲ್ಲಿ ತೊಂದರೆ, ಶರೀರದಲ್ಲಿ ದುದ್ದುಗಳು, ಹೊಟ್ಟೆ ನೋವು, ಅಸ್ತಮಾ ಸಮಸ್ಯೆ ಉಲ್ಬಣ ಸಹಿತ ಇನ್ನೂ ಹಲವು ಗಂಭೀರ ಕಾಯಿಲೆಗೆ ಕಾರಣವಾಗಬಹುದು.

ಕೆಲವು ಮಂದಿಗೆ ಹೃದಯ ರಕ್ತನಾಳದ ಲಕ್ಷಣಗಳು ಕೂಡ ಆಹಾರದ ಅಲರ್ಜಿಯಿಂದ ಕಂಡುಬರುವ ಸಾಧ್ಯತೆ ಇದೆ. ಇದರಿಂದಾಗಿ ರಕ್ತದೊತ್ತಡ, ತಲೆನೋವು, ಮೂರ್ಛೆ ಬೀಳುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ.

ನಮ್ಮ ದಿನನಿತ್ಯದ ಆಹಾರದಲ್ಲಿ ವ್ಯತ್ಯಾಸ ಕಂಡುಬಂದಾಗ ಅಲರ್ಜಿ ಬಾಧಿಸುತ್ತದೆ. ಅದರಲ್ಲಿಯೂ ಶೇ. 4 ರಿಂದ ಶೇ. 6ರಷ್ಟು ಮಕ್ಕಳಲ್ಲಿ ಆಹಾರದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಶೇ. 4ರಷ್ಟು ವಯಸ್ಕರಲ್ಲಿ ಈ ರೋಗ ಕಂಡುಬರುತ್ತದೆ.

ಮೀನು ಅಲರ್ಜಿ ನಿರ್ವಹಣೆ ಹೇಗೆ?

-ನೀವು ರೆಸ್ಟೋರೆಂಟ್​ಗೆ ತೆರಳಿದಾಗ ನಿಮಗೆ ಮೀನಿನ ಅಲರ್ಜಿ ಇದೆ ಎಂದು ಮೊದಲೇ ಹೇಳಿಬಿಡಿ.

-ಒಂದೊಮ್ಮೆ ನೀವು ಮೀನು ಆರ್ಡರ್ ಮಾಡಿಲ್ಲವೆಂದರೂ ಅದಕ್ಕೆ ಬಳಸುವ ಪದಾರ್ಥಗಳನ್ನು ಬೇರೆ ಆಹಾರಗಳಲ್ಲಿ ಬಳಸಿರಬಹುದು.

-ಯಾವುದೇ ಆಹಾರವನ್ನು ನಿಮ್ಮ ಡಯಟ್​ನಲ್ಲಿ ಅಳವಡಿಸಿಕೊಳ್ಳಬೇಕಿದ್ದರೆ ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ಎಚ್ಚರವಿರಲಿ.

-ಮನೆಯಿಂದ ಹೊರಗೆ ಹೋಗುತ್ತಿದ್ದರೆ ನಿಮಗೆ ಬೇಕಾದ ಆಹಾರವನ್ನು ಮನೆಯಿಂದಲೇ ಒಯ್ಯಿರಿ, ಒಂದೊಮ್ಮೆ ರೆಸ್ಟೋರೆಂಟ್​ಗಳಿಗೆ ತೆರಳಿದರೆ ಮೆನುವನ್ನು ಸರಿಯಾಗಿ ಓದಿ.

-ಅಲರ್ಜಿಯನ್ನು ಹೋಗಲಾಡಿಸಲು ನೀವು ತೆಗೆದುಕೊಳ್ಳುವ ಮಾತ್ರೆಗಳನ್ನು ಯಾವಾಗಲೂ ಜತೆಗೆ ಇಟ್ಟುಕೊಂಡಿರಿ.

 

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 2:23 pm, Thu, 26 May 22