World Food Safety Day 2021: ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿರಿಸುವುದು ಹೇಗೆ?

Food Safety at Home: ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆಹಾರ ಸುರಕ್ಷತೆ ಇನ್ನಷ್ಟು ಮಹತ್ವದ್ದಾಗಿದೆ. ವೈರಸ್ ಆಹಾರದ ಮೇಲೆ ಬದುಕಬಹುದು ಅಥವಾ ಬೆಳೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಇತರ ರೋಗದಿಂದ ಕಾಪಾಡುವುದಕ್ಕಾಗಿ ಸುರಕ್ಷಿತ, ನೈರ್ಮಲ್ಯ ಅಭ್ಯಾಸಗಳನ್ನು ಶಿಫಾರಸು ಮಾಡಲಾಗಿದೆ

World Food Safety Day 2021: ಮನೆಯಲ್ಲಿ ಆಹಾರವನ್ನು ಸುರಕ್ಷಿತವಾಗಿರಿಸುವುದು ಹೇಗೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jun 07, 2021 | 8:35 AM

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆಹಾರ ಸುರಕ್ಷತೆಯು ಗ್ರಾಹಕರಿಗೆ ಹಾನಿಯನ್ನುಂಟುಮಾಡುವ ಅಪಾಯಕಾರಿ ಸೂಕ್ಷ್ಮ ಜೀವವಿಜ್ಞಾನ, ರಾಸಾಯನಿಕ ಅಥವಾ ಭೌತಿಕ ಘಟಕಗಳ ಅನುಪಸ್ಥಿತಿ ಅಥವಾ ಸ್ವೀಕಾರಾರ್ಹ ಮಟ್ಟವನ್ನು ಸೂಚಿಸುತ್ತದೆ. ವಿಶ್ವಸಂಸ್ಥೆಯ ಲೇಖನವೊಂದು ಹೀಗೆ ಹೇಳುತ್ತದೆ, “ಆಹಾರ ಸರಪಳಿಯ ಪ್ರತಿಯೊಂದು ಹಂತದಲ್ಲೂ ಆಹಾರ ಸುರಕ್ಷಿತವಾಗಿರುತ್ತದೆ ಎಂದು ಖಾತರಿಪಡಿಸುವಲ್ಲಿ ಆಹಾರ ಸುರಕ್ಷತೆಯು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಕೊಯ್ಲು, ಸಂಸ್ಕರಣೆ, ಸಂಗ್ರಹಣೆ, ವಿತರಣೆ, ತಯಾರಿಕೆ ಮತ್ತು ಬಳಕೆ ಈ ಎಲ್ಲ ರೀತಿಯಲ್ಲಿಯೂ ಆಹಾರ ಸುರಕ್ಷಿತವಾಗಿರಬೇಕು.  ಆಹಾರವನ್ನು ಸಂಸ್ಕರಿಸುವ, ಸಂಗ್ರಹಿಸುವ, ವಿತರಿಸುವ ಮತ್ತು ಸೇವಿಸುವ ವಿಧಾನವು ಆಹಾರ ಸುರಕ್ಷತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಸುರಕ್ಷಿತ ಅಭ್ಯಾಸಗಳು ಆಹಾರದಿಂದ ಹರಡುವ ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಜಾಗತಿಕ ಆಹಾರ ಮಾನದಂಡಗಳನ್ನು ಅನುಸರಿಸುವುದು, ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಸೇರಿದಂತೆ ಪರಿಣಾಮಕಾರಿ ನಿಯಂತ್ರಕ ಆಹಾರ ನಿಯಂತ್ರಣ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಶುದ್ಧ ನೀರು ಒದಗಿಸುವುದು, ಉತ್ತಮ ಕೃಷಿ ಪದ್ಧತಿಗಳನ್ನು ಅನ್ವಯಿಸುವುದು, ಆಹಾರ ಸುರಕ್ಷತಾ ನಿರ್ವಹಣಾ ವ್ಯವಸ್ಥೆಗಳ ಬಳಕೆಯನ್ನು ಬಲಪಡಿಸುವುದಾಗಿದ್ದು, ಸರ್ಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ವಿಜ್ಞಾನಿಗಳು, ಖಾಸಗಿ ವಲಯ ಮತ್ತು ನಾಗರಿಕ ಸಮಾಜವು ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತದೆ.

ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆಹಾರ ಸುರಕ್ಷತೆ ಇನ್ನಷ್ಟು ಮಹತ್ವದ್ದಾಗಿದೆ. ವೈರಸ್ ಆಹಾರದ ಮೇಲೆ ಬದುಕಬಹುದು ಅಥವಾ ಬೆಳೆಯಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಇತರ ರೋಗದಿಂದ ಕಾಪಾಡುವುದಕ್ಕಾಗಿ ಸುರಕ್ಷಿತ, ನೈರ್ಮಲ್ಯ ಅಭ್ಯಾಸಗಳನ್ನು ಶಿಫಾರಸು ಮಾಡಲಾಗಿದೆ. ಜಾಗತಿಕ ಆಹಾರ ಮಾನದಂಡವನ್ನು ಅನುಸರಿಸಿ, ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಜನರು ತಾವಾಗಿಯೇ ಅರಿತುಕೊಂಡು ಸುರಕ್ಷಿತ ಆಹಾರ ಪದ್ಧತಿಗಳನ್ನು ಅನುಸರಿಸುವ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ನೀವು ಮನೆಯಲ್ಲಿ ಆಹಾರ ಸುರಕ್ಷತೆ ಖಾತ್ರಿ ಪಡಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಪಟ್ಟಿ ಇಲ್ಲಿದೆ.

ಹೀಗೆ ಮಾಡಿ ಶಾಪಿಂಗ್ ಮಾಡುವಾಗ, ಮಾಂಸ, ಕೋಳಿ, ಸಮುದ್ರಾಹಾರ ಮತ್ತು ಮೊಟ್ಟೆಗಳಿಂದ ಪ್ರತ್ಯೇಕವಾಗಿ ಇತರ ಉತ್ಪನ್ನಗಳನ್ನು ಇರಿಸಿ

ಮಾಂಸ, ಕೋಳಿ, ಸಮುದ್ರಾಹಾರ ಮತ್ತು ಮೊಟ್ಟೆಗಳನ್ನು ರೆಫ್ರಿಜರೇಟರ್‌ನ ಪ್ರತ್ಯೇಕ ಸ್ಥಳದಲ್ಲಿರಿಸಿ, ರೆಡಿ ಟು ಈಟ್ ಆಹಾರಗಳನ್ನು ಪ್ರತ್ಯೇಕವಾಗಿಯೇ ಇರಿಸಿ

ದಿನಸಿ ಶಾಪಿಂಗ್ ಮಾಡಿದ 2 ಗಂಟೆಗಳೊಳಗೆ ಅಥವಾ 32 ಡಿಗ್ರಿಗಳಿಗಿಂತ ಹೆಚ್ಚಿನ ಗಾಳಿಯ ಉಷ್ಣಾಂಶದಲ್ಲಿ ಇರಿಸಿದ್ದರೆ 1 ಗಂಟೆಯೊಳಗೆ ಆಹಾರವನ್ನು ರೆಫ್ರಿಜರೇಟರ್ ಒಳಗಿಡಿ

ರೆಫ್ರಿಜರೇಟರ್​ನಲ್ಲಿ ತಣ್ಣೀರಿನಲ್ಲಿ ಅಥವಾ ಮೈಕ್ರೊವೇವ್ನಲ್ಲಿ ಆಹಾರವನ್ನು ಡಿಫ್ರಾಸ್ಟ್ ಮಾಡಿ. ತಕ್ಷಣ ಬೇಯಿಸಿ

ಆಹಾರವನ್ನು ತಯಾರಿಸುವ ಮೊದಲು 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆಯಿರಿ

ನೀರಿನಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಿರಿ ಮತ್ತು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಒಣಗಿಸಿ

ಪ್ರತಿ ಬಳಕೆಯ ನಂತರ ಬಿಸಿ, ಸಾಬೂನು ನೀರಿನಿಂದ ಅಡುಗೆ ಮೇಲ್ಮೈ ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸಿ

ಮಾಂಸ, ಕೋಳಿ ಮತ್ತು ಸಮುದ್ರಾಹಾರವನ್ನು ಅಡುಗೆ ಮಾಡವಾಗ ಮತ್ತು ಬಡಿಸುವಾಗ ಬಿಸಿಯಾಗಿಯೇ (60 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು) ಇರಿಸಿ

32 ಡಿಗ್ರಿಗಳಿಗಿಂತ ಹೆಚ್ಚಿನ ಗಾಳಿಯ ಉಷ್ಣಾಂಶದಲ್ಲಿ ಆಹಾರವನ್ನು 2 ಗಂಟೆಗಳಿಗಿಂತ ಹೆಚ್ಚು ಅಥವಾ 1 ಗಂಟೆ ಇರಿಸಿ

ಶೈತ್ಯೀಕರಣದ ಮೊದಲು ಆಹಾರವನ್ನು ತಣ್ಣಗಾಗಲು ಬಿಡಿ

ಇದನ್ನು ಮಾಡಬೇಡಿ ಹರಿದ ಪ್ಯಾಕೆಟ್ ಅಥವಾ ತೆರೆದ ಪ್ಯಾಕೆಟ್ ಗಳಲ್ಲಿರುವ ಮಾಂಸ, ಕೋಳಿ, ಸಮುದ್ರಾಹಾರ ಅಥವಾ ಮೊಟ್ಟೆಗಳನ್ನು ಆರಿಸಬೇಡಿ

ಪೆಟ್ಟಿಗೆಯಲ್ಲೇ ಮೊಟ್ಟೆಗಳನ್ನು ಇರಿಸಬೇಡಿ , ಅವುಗಳನ್ನು ತೆಗೆದಿಡಿ ಅಥವಾ ರೆಫ್ರಿಜರೇಟರ್ ಬಾಗಿಲಲ್ಲಿ ಇರಿಸಿ

ಕಚ್ಚಾ ಮಾಂಸ, ಕೋಳಿ ಅಥವಾ ಸಮುದ್ರಾಹಾರವನ್ನು ರೆಫ್ರಿಜರೇಟರ್‌ನ ಮೇಲಿನ ಕಪಾಟಿನಲ್ಲಿ ಇರಿಸಲೇ ಬೇಡಿ

ಕೌಂಟರ್‌ನಲ್ಲಿ ಮಾಂಸ, ಕೋಳಿ ಅಥವಾ ಸಮುದ್ರಾಹಾರವನ್ನು ತೊಳೆಯದೆ ಬಳಸಲೇ ಬೇಡಿ. ಕಚ್ಚಾ ಮಾಂಸ, ಕೋಳಿ, ಸಮುದ್ರಾಹಾರ, ಮೊಟ್ಟೆ ಯಾವುದನ್ನೂ ಹಸಿಯಾಗಿ ಸೇವಿಸಬೇಡಿ

ಬೇಯಿಸದ ಮಾಂಸ, ಕೋಳಿ, ಸಮುದ್ರಾಹಾರ, ಮೊಟ್ಟೆ ಅಥವಾ ಕತ್ತರಿಸುವ ಉಪಕರಣಗಳನ್ನು ನೀವು ಮೊದಲು ಬಿಸಿ ಅಥವಾ ಸಾಬೂನು ನೀರಿನಿಂದ ತೊಳೆಯದೇ ಉಪಯೋಗಿಸಬೇಡಿ

ಇದನ್ನೂ ಓದಿ:  ಅನಾರೋಗ್ಯಕರ ಉತ್ಪನ್ನ ವಿವಾದಕ್ಕೆ ಮತ್ತೆ ಸಿಲುಕಿದ ನೆಸ್ಲೆ: ‘ಮ್ಯಾಗಿ’ ತಯಾರಿಕಾ ಕಂಪೆನಿಯ ಮೇಲೆ ಈ ವಿವಾದದ ಪರಿಣಾಮವೇನು?

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?