
ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಇಂದು ಮನೆಯಲ್ಲಿ ಏನಾದರೂ ತೊಂದರೆ ಕಾಣಿಸಿಕೊಳ್ಳಬಹುದು. ನಿಮ್ಮ ನಿರೀಕ್ಷಿತ ಗುರಿಯನ್ನು ತಲುಪಲು ನೀವು ವಿಳಂಬ ಆಗಬಹುದು. ಸಂತೋಷವು ಇಂದು ಹೆಚ್ಚಾಗಬಹುದು. ಬಂಧುಗಳು ನಿಮ್ಮನ್ನು ಬೇಕೆಂದೇ ತಪ್ಪು ದಾರಿ ತೋರಿಸುವರು. ಸಣ್ಣ ಕಾರ್ಯವನ್ನು ಮಾಡಲು ನಿಮಗೆ ಬಾರದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ.
ಇಷ್ಟಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಕ್ಷೇಮಸಮಾಚಾರವನ್ನು ಹಂಚಿಕೊಳ್ಳುವರು. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಹೂಡಿಕೆಯ ಚಿಂತನೆಯಲ್ಲಿ ನೀವು ಇರುವಿರಿ. ಸಂತಾನದ ಸುಖವನ್ನು ನೀವುಬಪಡೆಯುವಿರಿ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗುವಿರಿ. ಅತಿಯಾದ ಮರೆವು ಉಂಟಾಗಲಿದೆ ಇಂದು. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ.
ನಿಮಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಹೆಚ್ಚಾಗುವುದು. ಸರ್ಕಾರದಲ್ಲಿ ಆಗಬೇಕಾದ ನಿಮ್ಮ ಕೆಲಸವು ಸ್ವಲ್ಪ ವೇಗವನ್ನು ಪಡೆಯವುದು. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಪ್ರಭಾವವು ಹೆಚ್ಚಾಗಬಹುದು. ಅಳಿವು ಉಳಿವಿನ ವಿಚಾರಕ್ಕೆ ತಟಸ್ಥರಾಗುವುದು ಸೂಕ್ತ. ಶಾಂತವಾದ ಮನಸ್ಸಿನಿಂದ ನೆಮ್ಮದಿ ಕಾಣುವುದು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ.
ಇಂದು ನೀವು ಮಾಡುವ ಕೆಲಸಗಳು ಲಾಭದಾಯಕ ಆಗಿದ್ದರೂ ಪರಿಶ್ರಮವೂ ಹೆಚ್ಚಿರಲಿದೆ. ನಿಮ್ಮನ್ನು ಭಾವನಾತ್ಮಕವಾಗಿ ಬಂಧಿಸುವ ಪ್ರಯತ್ನ ಸಾಗಲಿದೆ. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ಬೇಕಾದ ಕ್ರಮವನ್ನು ಅನುಸರಿಸಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮನ್ನು ಕೇಳಿಯಾರು. ನಿಮ್ಮ ಕ್ಷುಲ್ಲಕ ಕಾರಣದಿಂದ ಅದನ್ನು ಬಿಟ್ಟ ಬಿಡುವುದು ಬೇಡ. ಮನಸ್ಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳಿ.
ಅಧಿಕಾರದ ಬಲಾಬಲವನ್ನು ತಿಳಿದುಕೊಳ್ಳ ವಾಗ್ವಾದವು ಅಧಿಕಾರಿಗಳ ನಡುವೆ ನಡೆಯಬಹುದು. ಕುಂಟುತ್ತಿರುವ ಉದ್ಯಮಕ್ಕೆ ವೇಗವನ್ನು ನೀವೇ ಕೊಡಬೇಕು. ಒಬ್ಬರಿಂದ ಆಗದ್ದನ್ನು ಮಾಡಲು ಹೋಗಬೇಡಿ. ಸಾಲ ಪಡೆದವರಿಂದ ಅಲ್ಪ ಹಣವನ್ನು ಹಿಂದಿರುಗಲಿದೆ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡಬಹುದು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಪ್ರೇಮವು ಬುದ್ಧಿಯ ನೇತೃತ್ವದಲ್ಲಿ ನಡೆಯಲಿ.
ಖರ್ಚನ್ನು ನೀವು ನಿಯಂತ್ರಣ ಮಾಡುವ ಅವಶ್ಯಕತೆ ಇಂದು ಬರಬಹುದು. ಮಹಿಳೆಯರು ನಿಮ್ಮಿಂದ ಸಹಾಯವನ್ನು ಪಡೆಯುವರು. ನೀವೇ ನಿರ್ಮಿಸಿಕೊಂಡ ಹಳೆಯ ಮನೆಗೆ ಹೋಗಿ ವಾಸಮಾಡಬೇಕಾದೀತು. ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ ವಿರುದ್ಧ ಪರಿಣಾಮವನ್ನು ಉಂಟುಮಾಡಬಹುದು. ಯಾರನ್ನೂ ಅವಲಂಬಿಸಲು ಹೋಗಬೇಡಿ. ನ್ಯಾಯಾಲಯದ ವಿಚಾರದಲ್ಲಿ ನಿಮಗಾದ ಕಹಿ ಅನುಭವವನ್ನು ಸಹಿಸಲಾಗದು.
ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದೀರ್ಘಕಾಲದ ನೋವನ್ನು ಕಡಿಮೆ ಮಾಡಿಕೊಳ್ಳಲು ಇಂದು ಪ್ರಯತ್ನಿಸುವಿರಿ. ಪುಣ್ಯಸ್ಥಳದ ಕಡೆಗೆ ನಿಮ್ಮ ಗಮನವಿರುವುದು. ಉದ್ಯಮದಲ್ಲಿ ಹೊಸರೀತಿಯ ಲಾಭಾವನ್ನು ಪಡೆಯಲು ಆಲೋಚಿಸುವಿರಿ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ಅನಿರೀಕ್ಷಿತ ಅತಿಥಿಸತ್ಕಾರವು ನಿಮಗೆ ಸಿಗಲಿದೆ.
ಮಕ್ಕಳ ವಿಚಾರದಲ್ಲಿ ಸಂತೃಪ್ತಿ ಇರದು. ಸ್ತ್ರೀ ಪುರುಷರ ನಡವೆ ಪರಸ್ಪರ ದ್ವೇಷಬರಬಹುದು. ಖಾಸಗಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ ಸಿಗಬಹುದು. ನಿಮ್ಮ ಗುರಿಗಳು ಬದಲಾದಷ್ಟೂ ನಿಮ್ಮ ಶ್ರಮವೂ ವ್ಯರ್ಥವಾಗಬಹುದು. ಸಂಗಾತಿಯ ಜೊತೆ ಹೆಚ್ಚು ಕಾಲ ಕಳೆಯುವ ಮನಸ್ಸಿದ್ದರೂ ಸಮಯದ ಅಭಾವದಿಂದ ಅದು ಸಾಧ್ಯವಾಗದು. ನಿಮ್ಮ ಅಧ್ಯಯನದಿಂದ ನಿಮ್ಮನ್ನು ವಿಚಲಿತಗೊಳಿಸುವ ಅನಗತ್ಯ ವಾದಗಳನ್ನು ತಪ್ಪಿಸಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು.
ಮಕ್ಕಳ ಮೇಲೆ ನಿಮಗೆ ಬೇಸರ ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿಯು ಎದುರಾಗಬಹುದು. ಹೆಚ್ಚಿನ ಆದಾಯಕ್ಕಾಗಿ ಸುಳ್ಳುಹೇಳಬೇಕಾದೀತು ಅಥವಾ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಪ್ರವೇಶಮಾಡಬಹುದು. ಮುಂಗಡ ಹಣವನ್ನು ಪಡೆಯದೇ ಕೆಲಸ ಮಸಡಲಾರಿರಿ. ಯಾರಮೇಲೂ ಒತ್ತಡಬೇಡ. ಭೂಮಿಯ ಬಗ್ಗೆ ಜಾಗರೂಕತೆ ಅವಶ್ಯಕ. ಸಣ್ಣ ಪಾಲು ಕೈತಪ್ಪಬಹುದು. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು.
ನೀವು ಇಂದು ನಂಬಿಕೆಯನ್ನು ಸುಳ್ಳು ಮಾಡುವಿರಿ. ನಿಮ್ಮ ಪ್ರಾಬಲ್ಯವೇ ಮೇಲಾದೀತು. ದೈವದತ್ತವಾದ ಆರೋಗ್ಯವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಸ್ವಂತ ಉದ್ಯೋಗವಿದ್ದರೆ ಜನರು ವಂಚಿಸಬಹುದು. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಾರದು. ಸಾಧನೆಯ ರುಚಿ ಇನ್ನಷ್ಟು ಹಂಬಲವನ್ನು ತರಿಸಲಿದೆ. ಇದೇ ನಿಮಗೆ ಇಷ್ಟದ ವಿಚಾರವಾಗಿದೆ. ನೂತನ ವಸ್ತುಗಳ ಖರೀದಿಗೆ ಹಣವು ಖರ್ಚಾದೀತು. ಸ್ನೇಹದಿಂದ ಪ್ರೇಮವು ಉಂಟಾಗಲಿದೆ.
ಅನಿರೀಕ್ಷಿತ ಧನಾಗಮನವು ನಿಮಗೆ ಸಂತಸವನ್ನು ತಂದರೂ ಮನೆಯಲ್ಲಿ ಅಸಮಾಧಾನ. ಅನವಶ್ಯಕ ವಸ್ತುಗಳನ್ನು ಖರೀದಿಸುವ ಚಪಲತೆ ಬರುವುದು. ನಿಮ್ಮ ಪ್ರತಿಭೆಯು ನಿರಾಶಾದಾಯಕವಾಗಿರುವುದು. ಮನೆಗೆ ಬಂದರನ್ನು ಬರಿ ಕೈಯಲ್ಲಿ ಏನನ್ನಾದರೂ ಕೊಡಿಸುವುದು ಉಚಿತ. ಮಕ್ಕಳ ಮೇಲಿನ ಮೋಹವು ನಿಮ್ಮನ್ನು ಕುರುಡು ಮಾಡಬಹುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು.
ಸಂಕಟಪಟ್ಟುಕೊಂಡು ಬರುವ ಪುಣ್ಯವನ್ನೂ ಕಳೆದುಕೊಳ್ಳಬೇಡಿ. ಇಂದು ನಿಮ್ಮ ಸ್ವಂತ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಇರುವುದು. ನೀವು ಇಂದು ಸಂಪನ್ಮೂಲ ವ್ಯಕ್ತಿಳಾಗಿ ನೀವು ಇರುವಿರಿ. ನಿಮ್ಮ ಗುಣಗಳನ್ನು ಇತರರು ಹೇಳಿಯಾರು. ಸಮಯಕ್ಕೆ ನೀವು ಹೆಚ್ಚು ಮಹತ್ತ್ವವನ್ನು ಕೊಡಬಹುದು. ಸುಖದುಃಖಗಳು ಎರಡೂ ನಿಮಗೆ ಸಮವಾಗಿ ಸಿಗಬಹುದು. ಹೆಚ್ಚು ಶ್ರವಹಿಸಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ವಜ್ರ, ಕರಣ : ತೈತಿಲ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 26 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:14 – 10:46, ಯಮಗಂಡ ಕಾಲ 13:50 – 15:23, ಗುಳಿಕ ಕಾಲ 06:10 – 07:42
-ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ