Horoscope 6 Mar: ದಿನಭವಿಷ್ಯ; ಈ ರಾಶಿಯವರು ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ
Nitya Bhavishya: 2024 ಮಾರ್ಚ್ 06ರ ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ವ್ಯತಿಪಾತ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 47 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:44 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:16 ರಿಂದ 09:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:15 ರಿಂದ ಮಧ್ಯಾಹ್ನ 12:44ರ ವರೆಗೆ.
ಮೇಷ ರಾಶಿ: ಇಂದು ನೀವು ಬಹಳ ತಜ್ಞತೆಯಿಂದ ಕೆಲಸ ಮಾಡುವಿರಿ. ಸಂಗಾತಿಯ ಆಯ್ಕೆಯ ಬಗ್ಗೆ ನಿಮಗೆ ಖುಷಿ ಇರುವುದು. ಕುಟುಂಬದ ಕಡೆಯಿಂದ ನಿಮಗೆ ಬೇಕಾದ ಸಹಕಾರವು ಸಿಗಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಿ ಭಾರವನ್ನು ಕಡಿಮೆ ಮಾಡಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಎಲ್ಲ ಸಂದರ್ಭದಲ್ಲಿಯೂ ನೀವು ಏಕತಾನತೆಯನ್ನು ಕಾಪಾಡಿಕೊಳ್ಳುವಿರಿ. ಉದ್ವೇಗದಿಂದ ಮುಕ್ತರಾಗಲು ಬಯಸುವಿರಿ.
ವೃಷಭ ರಾಶಿ: ಇಂದು ಮನಶ್ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಶಿಕ್ಷಣದಿಂದ ಉತ್ತಮ ವಾರ್ತೆಯನ್ನು ಕೇಳುವರು. ವಿಶೇಷವಾಗಿ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಉತ್ಸಾಹವನ್ನು ತೋರುವಿರಿ. ಹಣದ ಆಸೆಗೆ ಏನನ್ನಾದರೂ ಮಾಡುವಿರಿ. ನಿಮ್ಮ ಮಿತವಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜಮುಖಿಯಾಗಿ ನಿಮ್ಮ ಕಾರ್ಯಗಳು ಹೆಚ್ಚು ಪ್ರಬಲವಾಗಬಹುದು. ಉದ್ಯೋಗದಲ್ಲಿ ಆಗುವ ಬದಲಾವಣೆಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಿತ್ರರ ಕೋಪಕ್ಕೆ ಕ್ಷಮೆಯನ್ನು ಕೇಳುವಿರಿ. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಲಾಭದಿಂದ ವಂಚಿತರಾಗುವರು. ಪ್ರೀತಿಯನ್ನು ಪ್ರಕಟಪಡಿಸಲು ಕಾಯುವಿರಿ.
ಮಿಥುನ ರಾಶಿ: ಇಂದು ನಿಮಗೆ ತಪ್ಪಿತಸ್ಥ ಭಾವನೆ ಬರಬಹುದು. ಕ್ರಿಯಾತ್ಮಕ ಚಟುವಟಿಕೆಯಿಂದ ನಿಮಗೆ ಪ್ರಶಂಸೆ ಸಿಗಲಿದೆ. ಹೆಚ್ಚಿನ ಆದಾಯವನ್ನು ನೀವು ನಿರೀಕ್ಷಿಸುವಿರಿ. ಪ್ರೀತಿಯ ಮಾತುಗಳಿಂದ ಯಾರನ್ನೂ ಗೆಲ್ಲುವಿರಿ. ಯಾರ ಮೇಲೂ ಅತಿಯಾದ ಹೇರಿಕೆ ಬೇಡ. ಸ್ವತಂತ್ರವಾಗಿ ಇರಲು ಬಿಡಿ. ದೂರದ ಊರಿನಲ್ಲಿ ಅನಾಥಪ್ರಜ್ಞೆಯು ನಿಮ್ಮನ್ನು ಕಾಡಬಹುದು. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಯಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ನಿಮ್ಮ ಮಾತನ್ನು ಸಂಗಾತಿಯು ತಳ್ಳಿಹಾಕಿದ್ದು ನಿಮಗೆ ಬೇಸರ ತಂದೀತು. ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮನ್ನು ಯಾರಾದರೂ ಪ್ರಶ್ನಿಸಬಹುದು.
ಕಟಕ ರಾಶಿ: ನಿಮ್ಮ ಪ್ರಗತಿಯಲ್ಲಿ ತೊಂದರೆ ಕಾಣಿಸಿಕೊಂಡರೂ ಅದನ್ನು ಎದುರಿಸುವ ಹುಮ್ಮಸ್ಸು ಇರುವುದು. ಉನ್ನತ ವಿದ್ಯಾಭ್ಯಾಸದ ಕನಸನ್ನು ಪೂರ್ಣ ಮಾಡಿಕೊಳ್ಳುವಿರಿ. ಸ್ವಾಭಿಮಾನಕ್ಕೆ ಕುಂದುಂಟುಮಾಡಬಹುದು. ಯಾವ ಕಾರ್ಯಕ್ಕೂವ ನಿಮಗೆ ಪೂರ್ಣ ಧೈರ್ಯವಿರದು. ಸಂಗಾತಿಯ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ಜೀವನು ಸಪ್ಪೆಯಾದಂತೆ ಅನ್ನಿಸೀತು. ಹೊಸ ಜನ, ಹೊಸ ಸ್ಥಳ ಹಾಗೂ ಹೊಸ ವಿಚಾರದ ಕಡೆ ಗಮನವು ಬೇಕೆನಿಸುವುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಸಹಾಯಕ್ಕೆ ಯಾರೂ ಬಾರದೇ ಇರಬಹುದು.
ಸಿಂಹ ರಾಶಿ: ನಿಮಗೆ ಖುಷಿಯಾಗುವ ಉದ್ಯೋಗವನ್ನು ಮಾಡಲು ಹುಡುಕಾಟ ನಡೆಸುವಿರಿ. ನೀವು ನಂಬಿಕೆಯನ್ನು ಉಳಿಸಿಕೊಳ್ಳುವುದು ಮುಖ್ಯವಾಗಲಿದೆ. ನಿಮ್ಮ ಬಾಕಿಯಿರುವ ಹಣಕಾಸಿನ ವಹಿವಾಟುಗಳನ್ನು ಪೂರ್ಣ ಮಾಡುವಿರಿ. ಯಾರೋ ಟೀಕಿಸಿದ ಮಾತ್ರಕ್ಕೆ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಗ್ಗೆ ಒಂದು ಅವಲೋಕನವನ್ನು ನೀವು ಮಾಡಿಕೊಳ್ಳಿ ಸಾಕು. ನೀವಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ಇಂದಿನ ಓಡಾಟದ ದಣಿವು ನಿಮ್ಮ ಉತ್ಸಾಹವನ್ನು ಕುಗ್ಗಿಸೀತು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಮಾತನಾಡುವಾಗ ಎಚ್ಚರ ಬೇಕಾದೀತು. ಬಾರದ ಭಾಗ್ಯವನ್ನು ಬಯಸುತ್ತ ಬಳಲುವುದು ಬೇಡ.
ಕನ್ಯಾ ರಾಶಿ: ಇಂದು ಅವಿವಾಹಿತರಿಗೆ ವಿವಾಹದ ಚಿಂತೆ ಇದ್ದು ಅದಕ್ಕೆ ಬೇಕಾದ ಕ್ರಮವನ್ನು ಮಾಡುವಿರಿ. ಬಣ್ಣದ ಮಾತುಗಳಿಂದ ಯಾರನ್ನಾದರೂ ವಶಮಾಡಿಕೊಳ್ಳುವಿರಿ. ಯಾವುದಾದರೂ ಪುಣ್ಯಸ್ಥಳಗಳಿಗೆ ಹೋಗಬೇಕು ಎನಿಸಬಹುದು. ಮನೆಯಲ್ಲಿ ಇಂದು ಸಹಜ ವಾತಾವರಣ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಬಂಧುಗಳು ನಿಮ್ಮವರ ಬಗ್ಗೆ ಆಡಿಕೊಳ್ಳುವಾಗ ನಿಮಗೆ ಸಹಿಸಲಾಗದು. ನಿಮ್ಮ ಶ್ರಮದ ಸಾಧನೆಯನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿಯಿಂದ ಗೊಂದಲವಾದೀತು. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದರೂ ಅದನ್ನು ನೀವು ಒಪ್ಪಿಕೊಳ್ಳಲಾರಿರಿ.
ತುಲಾ ರಾಶಿ: ನೀವು ಹಣಕಾಸಿನ ಉಳಿತಾಯದ ಬಗ್ಗೆ ಅಧಿಕ ಗಮನವನ್ನು ಕೊಡಬೇಕು. ನೀವು ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ, ನಿಮ್ಮ ದಾರಿಯಲ್ಲಿ ಕೆಲವು ಅಡೆತಡೆಗಳು ಬರಬಹುದು. ಉದ್ಯೋಗಸ್ಥರಿಗೆ ಇಂದು ಆಗಬೇಕಾದ ಕೆಲಸಕ್ಕೆ ಯಾರಾದರೂ ಸಹಾಯ ಮಾಡಬಹುದು. ಪ್ರಶಾಂತವಾದ ಸ್ಥಳಗಳಲ್ಲಿ ಇಂದಿನ ಸಮಯವು ಕಳೆದುಹೋಗುವುದು. ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಧನವನ್ನು ಸಂಪಾದಿಸುವಿರಿ. ಮಂಗಲಕಾರ್ಯದಲ್ಲಿ ಇಂದು ನೀವು ಸಂತೋಷದಿಂದ ಪಾಲ್ಗೊಳ್ಳುವಿರಿ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ.
ವೃಶ್ಚಿಕ ರಾಶಿ: ಇಂದಿನ ನಿಮ್ಮ ವರ್ತನೆಯು ಪ್ರೀತಿಪಾತ್ರರ ಭಾವನೆಗಳಿಗೆ ಧಕ್ಕೆ ತರಬಹುದು. ನೀವು ಆತುರದಲ್ಲಿ ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಹಿರಿಯರ ಮಾತನ್ನು ಧಿಕ್ಕರಿಸಿ ನಡೆಯುವುದು ಬೇಡ. ಅಪರಿಚಿತರ ಮಾತಿನಿಂದ ನಿಮ್ಮ ಬಲದ ವೃದ್ಧಿಯಾಗುವುದು. ಸಣ್ಣ ಅಂತರದಲ್ಲಿ ಅವಕಾಶಗಳನ್ನು ತಪ್ಪಿಸಿಕೊಂಡು ಬೇಸರಿಸುವಿರಿ. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ಮನೆಯ ನಿರ್ಮಾಣ ಕಾರ್ಯವು ಬಹಳ ವಿಳಂಬದಂತೆ ಅನ್ನಿಸುವುದು. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಆಲಂಕಾರಿಕ ವಿಚಾರಗಳ ಬಗ್ಗೆ ಹೆಚ್ಚು ಗಮನವಿರುವುದು. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದ ವಿಚಾರವನ್ನು ಹೇಳುವ ಅಭ್ಯಾಸ ಬೇಡ.
ಧನು ರಾಶಿ: ನಿಮ್ಮ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನಗಳು ಸಫಲವಾಗುವುದು.ಇಂದು ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬಯಸಿದರೆ ಸರಳ ಉಪಾಯಗಳು ಸ್ಫುರಿಸಬಹುದು. ಇಂದು ನೀವು ಹಣದ ವಿಷಯಗಳಲ್ಲಿ ಜಾಗರೂಕತೆ ಇರಲಿ. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಿ. ಭೂವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಾಗಿದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ಕಲಹವೂ ಆಗುವುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ.
ಮಕರ ರಾಶಿ: ಇಂದು ನೀವು ಯಾರದೋ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೇಗದ ಚಾಲನೆ ಬೇಡ. ನಿಮ್ಮನ್ನು ಯಾವುದಾದರೂ ಕಾರ್ಯಕ್ಕೆ ಮುಖ್ಯರನ್ನಾಗಿ ಮಾಡಬಹುದು. ಅತಿಯಾದ ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಸಂಗಾತಿಯ ಜೊತೆ ಸಾಮರಸ್ಯ ಇರುತ್ತದೆ. ನಿಮ್ಮ ನಿರ್ಧಾರಗಳಿಗೆ ಪ್ರೀತಿಪಾತ್ರರ ಬೆಂಬಲವಿರುಬುದು. ಅಸಮಾಧಾನವನ್ನು ಯಾವುದಾದರೂ ತಂತ್ರದಿಂದ ಸರಿಮಾಡಿಕೊಳ್ಳುವಿರಿ. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಉದ್ಯಮದ ಮಿತ್ರನನ್ನು ಮನೆಗೆ ಆಹ್ವಾನಿಸುವಿರಿ. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು. ಅರಿವಿಲ್ಲದೆ ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ.
ಕುಂಭ ರಾಶಿ: ಇಂದು ನಿಮ್ಮ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಂಡು ಕೆಲಸವನ್ನು ಮಾಡುವಿರಿ. ಹೊಸ ಅನುಭವವು ನಿಮ್ಮದಾಗಲಿದೆ. ನಿಮ್ಮ ಆತ್ಮವಿಶ್ವಾಸಕ್ಕೆ ಯಾವ ಆತಂಕವೂ ಬರದು. ಬಂದರೂ ಅದು ಕ್ಷಣಕಾಲದ್ದು ಮಾತ್ರ. ವ್ಯಾಪಾರಿಗಳು ಇಂದು ದೊಡ್ಡಮಟ್ಟಿನ ಆದಾಯವನ್ನು ಪಡೆಯವರು. ನೀವು ಗ್ರಾಹಕರನ್ನು ಗೆಲ್ಲುವಿರಿ. ಕೌಟುಂಬಿಕ ಜೀವನದಲ್ಲಿ ಇರುವ ಸಂತೋಷ ಇಂದು ನಿಮ್ಮ ವರ್ತನೆಯಲ್ಲಿ ಕಾಣಿಸುತ್ತದೆ. ಮನೆಯಲ್ಲಿ ನಡೆವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ಕಾರಣದಿಂದ ವೃಥಾ ಕಾಲಹರಣವಾಗಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರುವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಆದಾಯವು ಕಡಿಮೆ ಆದಂತೆ ಅನ್ನಿಸುವುದು.
ಮೀನ ರಾಶಿ: ಇಂದು ನಿಮಗೆ ಕಾರ್ಯದ ಸ್ಥಳದಲ್ಲಿ ಉತ್ತಮ ಬೆಂಬಲವಿರುವುದು. ಉದ್ಯೋಗವಾಗವನ್ನು ಕಷ್ಟಪಟ್ಟು ಖುಷಿಯಿಂದ ಮಾಡಿ ಮುಗಿಸುವಿರಿ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಇಂದು ಉತ್ತಮ ಲಾಭಾಂಶ ಗಳಿಸುವರು. ಹೂಡಿಕೆಯಲ್ಲಿ ಅಧಿಕ ಸಂಪಾದನೆ ಇರಲಿದೆ. ಆರೋಗ್ಯ ಚೆನ್ನಾಗಿರಲಿದೆ. ಮಹಿಳೆಯರ ಜೊತೆ ಹೆಚ್ಚು ಸಮಯವನ್ನು ಸಂತೋಷದಿಂದ ಕಳೆಯುವಿರಿ. ಇರುವ ಒಂದು ವ್ಯಾಪಾರವನ್ನು ಕ್ರಮಬದ್ಧವಾಗಿ ನೋಡಿಕೊಳ್ಳಲಾಗದು. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಸಹೋದ್ಯೋಗಿಗಳು ನಿಮ್ಮನ್ನು ಎಲ್ಲದಕ್ಕೂ ಬೊಟ್ಟು ಮಾಡಿ ತೋರಿಸಿಯಾರು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ




