AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ದಿನ ಹೇಗಿರಲಿದೆ ಎನ್ನುವುದು ಪ್ರತಿಯೊಬ್ಬನೂ ತನ್ನ ಬಗ್ಗೆ ತಿಳಿಯಬಹುದು

ಯಾವ ನಕ್ಷತ್ರಗಳಿಗೆ ಯಾವ ವಾರ ಶುಭ ಹಾಗೂ ಕಾರ್ಯ ಸಿದ್ಧಿಗೆ ಯೋಗ್ಯ ಎನ್ನುವುದನ್ನು ಮನಗಾಣಬೇಕಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಯಾ ವಾರದಲ್ಲಿ ಹೆಚ್ಚು ಬಲಿಷ್ಠರೂ, ಉತ್ಸಾಹಿಗಳೂ ಆಗಿರುತ್ತಾರೆ. ಹಾಗಾಗಿ ಯಾವ ದಿನ ಹೇಗಿರಲಿದೆ ಎನ್ನುವುದು ಪ್ರತಿಯೊಬ್ಬನೂ ತನ್ನ ಬಗ್ಗೆ ತಿಳಿಯಬಹುದು. ಇಲ್ಲಿದೆ ನೋಡಿ

ಯಾವ ದಿನ ಹೇಗಿರಲಿದೆ ಎನ್ನುವುದು ಪ್ರತಿಯೊಬ್ಬನೂ ತನ್ನ ಬಗ್ಗೆ ತಿಳಿಯಬಹುದು
ಸಾಮದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Feb 13, 2025 | 4:34 PM

Share

ಈ ತಿಥಿ, ವಾರ, ನಕ್ಷತ್ರಗಳಾಗುವುದೇ ಒಂದು ವಿಸ್ಮಯ. ವಾರ ಮತ್ತು ತಿಥಿಗಳು ಹೇಗೆ ಒಂದಕ್ಕೊಂದು ಪೂರಕವಾಗಿದ್ದಾಗ ಅನುಕೂಲವೋ ಅದೇ ರೀತಿ ವಾರ ಮತ್ತು ನಕ್ಷತ್ರಗಳು ಇರುವುದೂ ಮುಖ್ಯವೇ. ಇಪ್ಪತ್ತೇಳು ನಕ್ಷತ್ರಗಳೂ ಮನುಷ್ಯನ ಮೇಲೆ ಪರಿಣಾಮವನ್ನು ಬೀರುವ ಕಾರಣ ಇದನ್ನು ಗಣನೆ ಮಾಡುವುದು ಪ್ರಾಚೀನ ಪದ್ಧತಿ. ವಿವಾಹಾದಿಗಳಿಗೆ ನಕ್ಷತ್ರದ‌ ಬಲಾಬಲವನ್ನು ಚಿಂತಿಸಿದಂತೆ ಇದಕ್ಕೂ ಚಿಂತನ‌‌ ಮಂಥನಗಳ ಅವಶ್ಯಕತೆ ಇರುತ್ತದೆ.

ಯಾವ ನಕ್ಷತ್ರಗಳಿಗೆ ಯಾವ ವಾರ ಶುಭ ಹಾಗೂ ಕಾರ್ಯ ಸಿದ್ಧಿಗೆ ಯೋಗ್ಯ ಎನ್ನುವುದನ್ನು ಮನಗಾಣಬೇಕಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಯಾ ವಾರದಲ್ಲಿ ಹೆಚ್ಚು ಬಲಿಷ್ಠರೂ, ಉತ್ಸಾಹಿಗಳೂ ಆಗಿರುತ್ತಾರೆ.

ರವಿವಾರ – ಪುಷ್ಯಾ, ಅಶ್ವಿನೀ, ಮೂಲಾ, ಹಸ್ತಾ, ಉತ್ತರಾಫಲ್ಗುಣೀ, ಉತ್ತರಾಭಾದ್ರ, ಉತ್ತರಾಷಾಢ

ಸೋಮವಾರ – ಅನುರಾಧಾ, ಶ್ರವಣಾ, ರೋಹಿಣೀ, ಪುಷ್ಯಾ, ಮೃಗಶಿರಾ

ಮಂಗಳವಾರ – ಅಶ್ವಿನೀ, ಕೃತ್ತಿಕಾ, ಉತ್ತರಾಭಾದ್ರ, ಆಶ್ಲೇಷಾ

ಬುಧವಾರ – ಅನುರಾಧಾ, ಹಸ್ತಾ, ಕೃತ್ತಿಕಾ, ಮೃಗಶಿರಾ, ರೋಹಿಣೀ

ಗುರುವಾರ – ಅನುರಾಧಾ, ಪುಷ್ಯಾ, ಅಶ್ವಿನೀ, ರೇವತೀ, ಪುನರ್ವಸು,

ಶುಕ್ರವಾರ – ಪುನರ್ವಸು, ಅನುರಾಧಾ, ಅಶ್ವಿನೀ, ರೇವತೀ, ಮೃಗಶಿರಾ

ಶನಿವಾರ – ರೋಹಿಣೀ, ಶ್ರವಣಾ, ಸ್ವಾತೀ

ಇವಿಷ್ಟು ಒಂದು ಯೋಗವಾದರೆ, ಇನ್ನೂ ಒಂದಿಷ್ಟು ವಾರ ಮತ್ತು ನಕ್ಷತ್ರಗಳ ಸಂಯೋಗದಿಂದ ಆಗಲಿದೆ. ಈ ವಾರ ಜನಿಸಿದವರಿಗೆ ಅಥವಾ ಇವೆರಡರ ಸಂಯೋಗ ಬಂದಾಗಲೂ ಶುಭವಾಗಲಿದ್ದು, ಕೈಗೊಂಡ ಕಾರ್ಯಗಳು ಯಶಸ್ಸನ್ನು ಪಡೆಯಬಹುದು, ಯಶಸ್ಸಿನ ದಾರಿಯನ್ನು ತೋರಿಸಬಹುದು.

ರವಿ ಮತ್ತು ಸೋಮವಾರ : ಪುಷ್ಯಾ, ಹಸ್ತಾ, ಉತ್ತರಾ, ಮೂಲಾ, ರೋಹಿಣೀ

ಮಂಗಳವಾರ : ಶ್ರವಣಾ, ಮೃಗಶಿರಾ, ಪುಷ್ಯಾ, ಉತ್ತರಾಫಲ್ಗುಣೀ, ಉತ್ತರಾಭಾದ್ರ, ಉತ್ತರಾಷಾಢ

ಬುಧವಾರ : ಕೃತ್ತಿಕಾ, ಅನುರಾಧಾ, ಶತಭಿಷಾ,

ಗುರುವಾರ : ಪುನರ್ವಸು, ಪುಷ್ಯಾ

ಶುಕ್ರವಾರ : ಪೂರ್ವಾಫಲ್ಗುಣೀ, ಅಶ್ವಿನೀ, ಶ್ರವಣಾ

ಶನಿವಾರ : ಸ್ವಾತೀ, ರೋಹಿಣೀ

ಇಲ್ಲಿ ಹೇಳಲ್ಪಟ್ಟ ನಕ್ಷತ್ರಗಳು ವಾರಕ್ಕೂ ವಾರದ ಅಧಿಪತಿಗೂ, ನಕ್ಷತ್ರದ ಅಧಿಪತಿಗೂ ಸೂಕ್ತವಾಗಿದೆ.‌ ಅವರಿಗೆ ಯೋಗ್ಯವಾದ ಸಂಯೋಜನೆ ಉಂಟಾದರೆ ಬಲ ಅಧಿಕ, ಫಲವೂ ಅಧಿಕವೇ.

ವಿಶಿಷ್ಟ ಯೋಗ :

ರವಿವಾರದಂದು ಹಸ್ತಾ ನಕ್ಷತ್ರ, ಸೋಮವಾರದಂದು ಮೃಗಶಿರಾ, ಮಂಗಳವಾರದಂದು ಅಶ್ವಿನೀ, ಬುಧವಾರದಂದು ಅನುರಾಧಾ, ಗುರುವಾರದಂದು ಪುಷ್ಯಾ, ಶುಕ್ರವಾರದಂದು ರೇವತೀ, ಶನಿವಾರದಂದು ರೋಹಿಣೀ ನಕ್ಷತ್ರಗಳ ಯೋಗಗಳು ಅಮೃತಸಿದ್ಧಿಯನ್ನು ನೀಡುವುವು.

ಮೃತ್ಯು ಯೋಗ :

ಅನುರಾಧಾ ನಕ್ಷತ್ರ ಮತ್ತು ರವಿವಾರ, ಉತ್ತರಾಷಾಢ ಮತ್ತು ಸೋಮವಾರ, ಮಂಗಳವಾರ ಮತ್ತು ಶತಭಿಷಾ, ಅಶ್ವಿನೀ ಮತ್ತು ಬುಧವಾರ, ಗುರುವಾರ ಮತ್ತು ಮೃಗಶಿರಾ, ಶುಕ್ರಾರ ಮತ್ತು ಆಶ್ಲೇಷಾ, ಶನಿವಾರ ಮತ್ತು ಹಸ್ತಾ ಈ ಸಂಯೋಗದಿಂದ ಕಾರ್ಯನಾಶ, ಅನಾರೋಗ್ಯ, ಮೃತ್ಯು, ಅಪವಾದ ಇಂತಹ ಅವಗಡಗಳು ಸಂಭವಿಸುವವು.

ಮುಂದೆ ಹೆಜ್ಜೆ ಇಡುವ ಮೊದಲು ಇದರ ಮೇಲೆ ದೃಷ್ಟಿ ಇಟ್ಟರೆ ಮಾಡುವ ಕಾರ್ಯ ದೈವಬಲದಿಂದಲೂ ಕೂಡಿರುವುದು.

– ಲೋಹಿತ ಹೆಬ್ಬಾರ್ – 8762924271

Published On - 4:34 pm, Thu, 13 February 25

4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ