ಅಂದುಕೊಂಡ ಕೆಲಸವು ಸಿದ್ಧಿಯಾಗಲು ಯಾವ ವಾರ, ಯಾವ ದಿಕ್ಕಿಗೆ ಮುಖಮಾಡಿ ಹೋಗಬೇಕು?
ದಿನವೂ ಮಾಡುವ ಕೆಲಸವು ಪೂರ್ಣವಾಗಲಿ, ಲಾಭವಾಗಲಿ ಎಂಬ ಭಾವನೆಯಿಂದ ಆರಂಭಿಸುವುದು ಇದೆ. ಆದರೆ ದಿನ ಮುಕ್ತಾಯವಾಗುವಾಗ ಕೆಲವರದ್ದು ಕೆಲವೇ ಕಾರ್ಯಗಳು ಮಾತ್ರ ಆರಂಭವಾಗುತ್ತವೆ, ಮುಕ್ತಾಯವಾಗುತ್ತವೆ. ಇನ್ನು ಉಳಿದವರದ್ದು ಆಗದು. ಇದೆಕ್ಕೆ ಮುಖ್ಯ ಕಾರಣ ಅನುಸರಿಸದೇ ಇರುವ ನಿಯಮ. ಕಾಲಕ್ಕೆ ತುಂಬ ಶಕ್ತಿ ಇದೆ. ಅದು ಸಾಧ್ಯವನ್ನೂ ಸಾಧಿಸಕೊಡಬಲ್ಲದು. ಆದರೆ ಅದನ್ನು ತಿಳಿಯುವ ಯೋಜನೆಗೆ ಯೋಚನೆ ಬೇಕು. ಅದಕ್ಕೆ ಅಂದುಕೊಂಡ ಕೆಲಸವು ಸಿದ್ಧಿಯಾಗಲು ಯಾವ ವಾರ, ಯಾವ ದಿಕ್ಕಿಗೆ ಮುಖಮಾಡಿ ಹೋಗಬೇಕು ಇಲ್ಲಿದೆ ನೋಡಿ

ಪ್ರತಿದಿನ ಚೆನ್ನಾಗಿದ್ದರೆ, ಪ್ರತಿ ವಾರವೂ ಚೆನ್ನಾಗಿಯೇ ಇರುವುದು. ಪ್ರತಿ ವಾರ ಸುಂದರವಾಗಿದ್ದರೆ, ಪ್ರತಿ ತಿಂಗಳೂ ಸುಂದರ. ಹೀಗೆ ಒಂದು ವರ್ಷ. ಮುಂದುವರಿದು ಜೀವನವೇ ಚೆನ್ನಾಗಿ ಇಟ್ಟುಕೊಳ್ಳಲು ಸಾಧ್ಯ. ಅಂತಹ ವಿಶೇಷತೆಯನ್ನು ದಿನದಲ್ಲಿ ಹಾಸುಹೊಕ್ಕಾಗುವಂತೆ ಮಾಡಿದ್ದಾರೆ.
ದಿನವೂ ಮಾಡುವ ಕೆಲಸವು ಪೂರ್ಣವಾಗಲಿ, ಲಾಭವಾಗಲಿ ಎಂಬ ಭಾವನೆಯಿಂದ ಆರಂಭಿಸುವುದು ಇದೆ. ಆದರೆ ದಿನ ಮುಕ್ತಾಯವಾಗುವಾಗ ಕೆಲವರದ್ದು ಕೆಲವೇ ಕಾರ್ಯಗಳು ಮಾತ್ರ ಆರಂಭವಾಗುತ್ತವೆ, ಮುಕ್ತಾಯವಾಗುತ್ತವೆ. ಇನ್ನು ಉಳಿದವರದ್ದು ಆಗದು. ಇದೆಕ್ಕೆ ಮುಖ್ಯ ಕಾರಣ ಅನುಸರಿಸದೇ ಇರುವ ನಿಯಮ. ಕಾಲಕ್ಕೆ ತುಂಬ ಶಕ್ತಿ ಇದೆ. ಅದು ಸಾಧ್ಯವನ್ನೂ ಸಾಧಿಸಕೊಡಬಲ್ಲದು. ಆದರೆ ಅದನ್ನು ತಿಳಿಯುವ ಯೋಜನೆಗೆ ಯೋಚನೆ ಬೇಕು. ಯಾವ ವಾರ ಯಾವ ದಿಕ್ಕಿನಿಂದ ಶುಭ, ಲಾಭ, ಸಂತೋಷ, ನೆಮ್ಮದಿ ಸಿಗುತ್ತದೆ ಎಂದು ನೋಡುವುದಾದರೆ
ರವಿವಾರ ಹಾಗೂ ಶುಕ್ರವಾದದಂದು ಮೊದಲು ಹೊರಡಬೇಕಾದ ದಿಕ್ಕು ಪಶ್ಚಿಮ, ಸೋಮವಾರ ಮತ್ತು ಶನಿವಾರದಂದು ಪೂರ್ವ, ಮಂಗಳವಾರ ಮತ್ತು ಬುಧವಾ ಉತ್ತರ, ಗುರುವಾರದಂದು ದಕ್ಷಿಣ ದಿಕ್ಕಿನಲ್ಲಿ ಹಾಗೂ ಶನಿವಾರದಂದು ಆಗ್ನೇಯ ದಿಕ್ಕಿನಲ್ಲಿ ಶೂಲವಿರುವುದು. ಇದನ್ನು ದಿಕ್ ಶೂಲ ಎನ್ನುತ್ತಾರೆ. ಅದೇ ರೀತಿಯಲ್ಲಿ ಇನ್ನೊಂದಿಷ್ಟು ದಿಕ್ ಶೂಲವನ್ನು ಹೇಳಲಾಗಿದೆ.
ಸೋಮ ಮತ್ತು ಗುರುವಾರದಲ್ಲಿ ದಕ್ಷಿಣ ದಿಕ್ಕು, ಬುಧವಾರ ನೈರುತ್ಯ, ರವಿವಾರ ಪಶ್ಚಿಮ, ಶುಕ್ರವಾರ ವಾಯವ್ಯ, ಮಂಗಳವಾರ ಮತ್ತು ಬುಧವಾರದಂದು ಉತ್ತರದಿಕ್ಕಿನಲ್ಲಿ ಶೂಲವಿರಲಿದ್ದು ಈ ದಿಕ್ಕಿನ ಕಡೆ ಶುಭ ಕಾರ್ಯಗಳಿಗೆ ಮುಖಮಾಡಿ ಹೊರಡಬಾರದು. ಅಥವಾ ಆ ದಿಕ್ಕಿನಕಡೆ ಹೋಗದಿರುವುದು ಉತ್ತಮ. ಕಾರ್ಯಹಾನಿ, ಮಾನಹಾನಿ, ಧನಹಾನಿ ಎಲ್ಲವೂ ಸಂಭವಿಸುವುದು.
ಮೇಲೆ ಹೇಳಿದ ದಿಕ್ಕುಗಳನ್ನು ಹೊರತುಪಡಿಸಿ, ಬೇರೆ ದಿಕ್ಕಿನಲ್ಲಿ ಆಯಾ ದಿನ ಹೋಗಬಹುದು. ಅದರ ವಿರುದ್ಧ ದಿಕ್ಕಾದರೆ ಉತ್ತಮ. ಅಂದುಕೊಂಡ ಕಾರ್ಯಗಳು ದಿಕ್ಕು ತಪ್ಪದೇ ಇರಲು, ದಿಕ್ಕನ್ನು ಕಂಡುಕೊಳ್ಳುವುದು ಅನಿವಾರ್ಯ.
– ಲೋಹಿತ ಹೆಬ್ಬಾರ್ – 8762924271




