AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 22 February 2025: ಕಾರ್ಯ ಕೆಟ್ಟರೂ ಮನಸ್ಸು ಕೆಡದಿರಲಿ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ದಶಮೀ ತಿಥಿ, ಶನಿವಾರ ಕಾರ್ಯದಲ್ಲಿ ಅನಾಸಕ್ತಿ, ಆಸ್ತಿ ಖರೀದಿ, ಸ್ಥಾನ ಬದಲಾವಣೆ, ಅಲ್ಪ ಆದಾಯ, ಕಷ್ಟಕ್ಕೆ ಸ್ಪಂದನೆ ಇವೆಲ್ಲ ಈ ದಿನದ ವಿಶೇಷ. ಪ್ರತಿ ರಾಶಿಯವರ ಆರೋಗ್ಯ, ಹಣಕಾಸು, ಸಂಬಂಧಗಳು ಮತ್ತು ಕೆಲಸದ ಬಗ್ಗೆ ಸಲಹೆಗಳನ್ನೂ ಒಳಗೊಂಡಿದೆ.

Horoscope Today 22 February 2025: ಕಾರ್ಯ ಕೆಟ್ಟರೂ ಮನಸ್ಸು ಕೆಡದಿರಲಿ
ನಿತ್ಯ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 22, 2025 | 6:41 AM

Share

ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ 06: 54 ನಿಮಿಷಕ್ಕೆ, ಸೂರ್ಯಾಸ್ತ 06: 38 ನಿಮಿಷಕ್ಕೆ, ಇಂದಿನ ಶುಭಾಶುಭಕಾಲ: ರಾಹು ಕಾಲ 09:50:11:18 ನಿಮಿಷಕ್ಕೆ, ಯಮಘಂಡ ಕಾಲ ಮಧ್ಯಾಹ್ನ 02:14 : 03:42 ನಿಮಿಷಕ್ಕೆ ಗುಳಿಕ ಕಾಲ 06:54 – 08:22

ಮೇಷ ರಾಶಿ: ವಿದ್ಯಾಭ್ಯಾಸಕ್ಕೆ ಅನ್ಯರಿಗೆ ನಿಮ್ಮಿಂದ ಧನಸಹಾಯ. ಎಲ್ಲವನ್ನೂ ನೀವು ಸಮಾನ ದೃಷ್ಟಿಯಿಂದ ಕಾಣುವುದು ನಿಮಗೆ ಧನಾತ್ಮಕ ಅಂಶವಾಗಲಿದೆ. ಮಾತಿನ ಘರ್ಷಣೆಯನ್ನು ಮುಂದುವರಿಸಲು ನಿಮಗೆ ಇಷ್ಟವಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ನಿಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳಿ. ವ್ಯಕ್ತಿಯ ದ್ವೇಷಕ್ಕಿಂತ ವ್ಯಕ್ತಿತ್ವದ ಮೇಲೆ ದ್ವೇಷವಿರುವುದು. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ನೀವು ಇಂದು ಸೌಂದರ್ಯಕ್ಕೆ ಬೆಲೆ ಕೊಡುವಿರಿ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದಾರು. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮುದುವಾದ ಮಾತು ಕೃತಕತೆಯಂತೆ ತೋರಬಹುದು. ನೀವು ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸಬಹುದು. ಭಯವು ನಿಮ್ಮ ಮನಸ್ಸನ್ನು ಕಟ್ಟಿಹಾಕುವುದು.

ವೃಷಭ ರಾಶಿ: ಸಮೂಹದಲ್ಲಿ ಕಾರ್ಯವನ್ನು ಮಾಡಲು ಇಷ್ಟವಾಗದು. ವೈಯಕ್ತಿಕವಾಗಿ ಏನನ್ನೂ ಮಾಡುವಿರಿ. ಸೃಜನಶೀಲ ಕ್ಷೇತ್ರಗಳಲ್ಲಿ ಆಸಕ್ತಿಯು ಹೆಚ್ಚಿರುವುದು. ನಿಮ್ಮ ಖ್ಯಾತಿಯನ್ನು ಇತರರು ಸಹಿಸಲಾರರು. ಶಾರೀರಿಕ ಸೌಂದರ್ಯದ ಬಗ್ಗೆ ಮೋಹ ಅಧಿಕವಾಗಲಿದೆ. ದೂರಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಇಂದು ನಿಮ್ಮ ಕೆಲಸವು ನೀವಂದುಕೊಂಡಷ್ಟು ಸುಲಭವಾಗಿ ಇರದು. ಮಕ್ಕಳ ಜೊತೆಗಿದ್ದು ಸಂತೋಷವನ್ನು ಪಡೆಯುವಿರಿ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಆಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ. ನಿಮ್ಮ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ.

ಮಿಥುನ ರಾಶಿ: ಹೊಂದಾಣಿಕೆಯ ಮನೋಭಾವ ಇಂದು ಇರದು. ನಿಮ್ಮ ಸ್ವಭಾವದಲ್ಲಿ ಸ್ವಲ್ಪ ನಿಷ್ಠುರತೆಯು ಕಾಣಿಸುತ್ತದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ನಿಮ್ಮ ಆದಾಯದ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಬೇಕಾಗುವುದು. ನೀವು ಇಂದು ಯಾವುದನ್ನೂ ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ನಿಮ್ಮನ್ನು ಅಬಲಂಬಿಸಿದವರಿಗೆ ನಿಮ್ಮ ಬಿಸಿ ತಟ್ಟಬಹುದು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಗೆಳೆಯನನ್ನು ಆಪ್ತನನ್ನಾಗಿ ಮಾಡಿಕೊಳ್ಳುವಿರಿ. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಕೆಲಸ ಕೆಟ್ಟರೂ ಮನಸ್ಸು ಕೆಡದಿರಲಿ. ದುರಭ್ಯಾಸವು ನಿಮಗೆ ಬೇಡವೆನಿಸುವುದು. ಪ್ರೇಮಿಗಳು ಪರಸ್ಪರ ಒಪ್ಪಂದವನ್ನು ಮಾಡಿಕೊಂಡು ಮುಂದುವರಿಯುವರು.

ಕರ್ಕಾಟಕ ರಾಶಿ: ಸ್ಥಿರಾಸ್ತಿಯ ಖರೀದಿಗೆ ಮನಸ್ಸು ಇರದು, ಒತ್ತಾಯಕ್ಕೆ ಮಣಿಯಬೇಕಾಗುವುದು. ನಿಮ್ಮ ಹಣಕಾಸಿನ ವ್ಯವಹಾರವು ಗೊಂದಲವಾಗಿರುವುದು. ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ಅಮೂಲ್ಯ ವಸ್ತುಗಳ ಖರೀದಿಯಿಂದ ವಂಚನೆಯಾಗಬಹುದು. ನಿರಂತರ ಕೆಲಸದಿಂದ ಸಮಾಧಾನವು ಬೇಕಾಗುವುದು. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ದ್ವಿಚಕ್ರ ವಾಹನದಿಂದ ಸಣ್ಣ ಅಪಘಾತವಾಗಲಿದೆ. ಆಕಸ್ಮಿಕವಾಗಿ ವಿವಾಹ ಮಾತುಕತೆಗೆ ತಯಾರಿಯಾಗಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ವರ್ತನೆಯಲ್ಲಿ ಆಗುವ ಬದಲಾವಣೆಯನ್ನು ಯಾರೂ ಊಹಿಸಲಾರರು. ಎಲ್ಲದರ ಮೇಲೂ ನಂಬಿಕೆಯನ್ನು ಕಳೆದುಕೊಳ್ಳುವಿರಿ.

ಸಿಂಹ ರಾಶಿ: ನಿಮ್ಮ ಪ್ರಾಮಾಣಿಕ ಪ್ರಯತ್ನವು ನಿಷ್ಫಲವಾದೀತು. ಅದೃಷ್ಟವಿದೆ ಎಂದು ಏನನ್ನಾದರು ಮಾಡಲು ಸಿದ್ಧರಾಗುವುದು ಬೇಡ. ನಿಮ್ಮ ಗಮನಾಗಮನವನ್ನು ಯಾರಾದರೂ ತಿಳಿದುಕೊಳ್ಳುತ್ತಿರಬಹುದು. ದುಃಖಕ್ಕೆ ಏನನ್ನೋ ಜೋಡಣೆ ಮಾಡುವಿರಿ. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಎಲ್ಲ ಕಡೆಯಿಂದ ನಿಮಗೆ ಅನುಕೂಲವಾಗಬೇಕು ಎಂದುಕೊಳ್ಳುವುದು ಬೇಡ. ಇನ್ನೊಬ್ಬರ ಬಗ್ಗೆ ಇರುವ ಕಾಳಜಿ ನಿಮ್ಮವರ ಮೇಲೂ ಇರಲಿ. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ನಿಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಾಗ ಕಷ್ಟ. ಮಕ್ಕಳ ಸ್ವಭಾವವು ಇಷ್ಟವಾಗದೇ ಹೋಗುವುದು. ಖಾಸಗಿ ಸಂಸ್ಥೆಯೊಂದು ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಯೋಚನೆಯನ್ನು ಇಟ್ಟುಕೊಂಡಿದೆ. ನಿಮ್ಮ ಪೂರ್ವ ನಿರ್ಧಾರವನ್ನು ಬದಲಿಸಿಕೊಳ್ಳಬೇಕಾದೀತು.

ಕನ್ಯಾ ರಾಶಿ: ತ್ಯಾಗ ಕಷ್ಟವಾದರೂ ಅನಿವಾರ್ಯವಾಗಲಿದೆ. ದೂರದ ಸಂಬಂಧಿಕರ ಭೇಟಿಯಿಂದ ನೀವು ಬಹಳಷ್ಟು ಸಂತೋಷವನ್ನು ಪಡೆಯುವಿರಿ. ನೀವು ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿದ್ದರೆ, ನೀವು ಬಹಳ ದಿನಗಳ ಅನಂತರ ವಿವಿಧ ಅವಕಾಶಗಳನ್ನು ಪಡೆದುಕೊಳ್ಳುವಿರಿ. ನಿಮ್ಮ ಮಹತ್ತ್ವಾಕಾಂಕ್ಷೆಯು ಸಿದ್ಧಿಸುವುದು. ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ. ನಿಮ್ಮ ಮಕ್ಕಳ ಬಾಂಧವ್ಯದಿಂದೆ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಭೂಮಿಯ ವ್ಯವಹಾರವು ನಿಮಗೆ ಹಿನ್ನಡೆಯಾಗಬಹುದು. ಓಡಾಟದಿಂದ ಸಮಯ ವ್ಯರ್ಥ ಮಾಡುವಿರಿ. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ವಿಯೋಗದ ನೋವನ್ನು ನಿಯಂತ್ರಿಸುವ ಕ್ಷಮತೆ ಇರಲಿದೆ. ತಾಯಿಯ ಪ್ರೀತಿಯನ್ನು ಅನುಭವಿಸುವಿರಿ. ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುವರು.

ತುಲಾ ರಾಶಿ: ನಿಮ್ಮ ಸ್ಥಾನವನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುವುದು. ನಿಮ್ಮಲ್ಲಿ ಧನಾತ್ಮಕ ಚಿಂತನೆಯು ಹೆಚ್ಚಾಗಿದ್ದು, ಅದರಂತೆ ಮುಂದುವರಿಯುವುದು ಒಳ್ಳೆಯದು. ಮಾರುಕಟ್ಟೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಆಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ನೋವನ್ನೂ ಸಕಾರಾತ್ಮಕವಾಗಿ ಮಾಡಿಕೊಳ್ಳುವುದು ನೆಮ್ಮದಿಯ ಸೂತ್ರ. ದ್ವಿಚಕ್ರ ವಾಹನವನ್ನು ಚಲಾಯಿಸುವಾಗ ಎಚ್ಚರಿಕೆ ಬೇಕು. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಧಾರ್ಮಿಕ ಆಚರಣೆಗೆ ಇನ್ನೊಬ್ಬರಿಂದ ಪ್ರೇರಣೆ ಪಡೆಯುವಿರಿ. ಸ್ತ್ರೀಯರು ನಿಮ್ಮನ್ನು ಮೆಚ್ಚಿಕೊಳ್ಳುವರು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಸಮಾಜಮುಖೀ ಕಾರ್ಯಗಳನ್ನು ನಿರಪೇಕ್ಷೆಯಿಂದ ಮಾಡುವಿರಿ. ಋಣಬಾಧೆಗೆ ನಿಮ್ಮ ಉತ್ತರದಾಯಿತ್ವ ಬರಲಿದೆ. ಆರೋಗ್ಯವು ಚೆನ್ನಾಗಿ ಇರಲಿದ್ದು ಮಾನಸಿಕವಾದ ನೆಮ್ಮದಿಯು ಇರುವುದು. ತಾಳ್ಮೆ ಕಡಿಮೆ ಆದಂತೆ ತೋರುವುದು. ನಿಮ್ಮ ಉದಾರಗುಣವು ದುರುಪಯೋಗ ಆಗಬಹುದು.

ವೃಶ್ಚಿಕ ರಾಶಿ: ಅನಾರೋಗ್ಯದ ಕಾರಣ ಸಹನೆಯನ್ನು ಕಳೆದುಕೊಳ್ಳುವಿರಿ. ನಿಮ್ಮ ಭವಿಷ್ಯದ ಬಗ್ಗೆ ನೀವು ಹೆಚ್ಚು ಕುತೂಹಲದಲ್ಲಿ ಇರುವಿರಿ. ಹೂಡಿಕೆಗೆ ಸರಿಯಾದ ಜನರೊಂದಿಗೆ ಸಮಾಲೋಚಿಸುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ. ಮಂಗಲ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಸ್ನೇಹಿತರ ಮಾತಿನಿಂದ ನಿಮಗೆ ನೋವಾಗಬಹುದು. ಹಣಕಾಸಿನ ವಿಚಾರಕ್ಕೆ ತಂದೆಯ ನಡುವೆ ವಾಗ್ವಾದವು ಆಗಬಹುದು. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ. ಪರೋಪಕಾರದಿಂದ ನಿಮಗೆ ಸಂತೋಷವಾಗಲಿದೆ. ವಾಹನವನ್ನು ಚಲಿಸುವಾಗ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಆಪತ್ತಿಗೆ ಧನ ಬಂದು ಸೇರುವುದು. ಹಿರಿಯರು ಬೇಡ ಎಂದು ಹೇಳಿದ ಕೆಲಸವನ್ನು ಹಠದಿಂದ ಅವರ ಮಾತನ್ನು ವಿರೋಧಿಸಿ ಮಾಡುವಿರಿ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ಸಜ್ಜನರ ಸಂಗವು ಅಪೇಕ್ಷಿಸದೇ ಇದ್ದರೂ ಸಿಗುತ್ತದೆ. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ.

ಧನು ರಾಶಿ: ಸ್ನೇಹಿತರ ಮಾತು ಕೇಳಿ ಬರವ ಸಣ್ಣ ಆದಾಯವನ್ನೂ ಕಳೆದುಕೊಳ್ಳುವಿರಿ. ಆದಾಯವು ನಿರೀಕ್ಷೆಗಿಂತ ಕಡಿಮೆಯಾಗಬಹುದು. ಇಂದು ಕೆಲವು ಪರಿಸ್ಥಿತಿಯನ್ನು ಎದುರಿಸಲು ಸಂಕೋಚವಾಗಬಹುದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಸೂಕ್ತ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಮನಸ್ತಾಪವು ಬರಬಹುದು. ದಿಢೀರ್ ಬದಲಾವಣೆಯನ್ನು ನಿರೀಕ್ಷಿಸಿ ಹತಾಶರಾಗಬಹುದು. ತುರ್ತು ಹಣವು ಬೇಕಿದ್ದರಿಂದ ಸ್ನೇಹಿತರನ್ನು ಕೇಳುವಿರಿ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು. ದುರಭ್ಯಾಸದ ಕಾರಣ ಮರ್ಯಾದಿಯನ್ನು ಕಳೆದುಕೊಳ್ಳಬೇಕಾದೀತು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ದುಃಖವನ್ನು ಹಂಚಿಕೊಂಡು ಕಡಿಮೆ ಮಾಡಿಕೊಳ್ಳುವಿರಿ. ಸ್ವಂತ ವಾಹನ ಖರೀದಿಗೆ ಯೋಜನೆಯನ್ನು ತಯಾರು ಮಾಡುವಿರಿ.

ಮಕರ ರಾಶಿ: ಹಣದ ಉಳಿತಾಯಕ್ಕೆ ಅನ್ಯ ಮಾರ್ಗವನ್ನು ಕಂಡುಕೊಳ್ಳುವಿರಿ. ನಿಮ್ಮ ಸಂಗಾತಿಯ ಆರೋಗ್ಯವೂ ವ್ಯತ್ಯಾಸವಾಗಿ ಉದ್ವೇಗಕ್ಕೆ ಒಳಗಾಗುವರು. ವಾಹನ ಚಾಲನೆ ಮಾಡುವಾಗ ಜಾಗರೂಕತೆ ಅವಶ್ಯವಾಗಿದೆ. ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ನಿರಂಕುಶವಾಗಿ ವರ್ತಿಸುವುದು ಇತರರಿಗೆ ಇಷ್ಟವಾಹದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಪಂಡಿತರ ಸಹವಾಸ ತೊರೆಯುವುದು. ಆರ್ಥಿಕತೆಯು ದುರ್ಬಲವಾದ ಕಾರಣ ಆತಂಕವು ಉಂಟಾಗಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ವಿದೇಶೀ ವ್ಯಕ್ತಿಯ ಜೊತೆಗಿನ ಸಂಬಂಧ ಹೆಚ್ಚಾಗುವುದು. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು. ಹಣದ ರಕ್ಷಣೆಗೆ ಅನ್ಯ ಉಪಾಯ ಮಾಡುವಿರಿ.

ಕುಂಭ ರಾಶಿ: ನಿಮ್ಮ ಕಷ್ಟಕ್ಕೆ ಸ್ಪಂದಿಸಲು ಯಾರೂ ಬಾರದೇ ಬೇಸರ. ನಿಮ್ಮ ಕೌಶಲ್ಯವು ಸಾರ್ವಜನಿಕವಾಗಿ ಮೆಚ್ಚುಗೆಯಾಗಲಿದೆ. ಹೊಸ ಉದ್ಯಮಕ್ಕೆ ಇಂದು ಉತ್ತಮವಿರುವುದು. ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಿ. ಆರೋಗ್ಯದ ಬಾಧೆಯ ಜೊತೆ ಶತ್ರುಬಾಧೆಯಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗುವುದು. ನಿಮ್ಮ ಏಳ್ಗೆಯನ್ನು ಇತರರು ಸಹಿಸಿಕೊಳ್ಳುವುದು ಕಷ್ಟವಾಗುವುದು. ಯಾರ ಬಗ್ಗೆಯೂ ಸಲ್ಲದ ಮಾತನಾಡಿ ಸಿಕ್ಕಿಕೊಳ್ಳುವಿರಿ. ಬೇಡವೆಂದ ವಸ್ತುವನ್ನೇ ಮರಳಿ ಬಳಸಬೇಕಾಗುವುದು. ಸ್ವಯಂ ಕೃತ ಅಪರಾಧದಿಂದ ಪಶ್ಚಾತ್ತಾಪವಾಗುವುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ಮನೆಯಲ್ಲಿ ಇಂದು ಸ್ನೇಹ ಕೂಟವು ಏರ್ಪಡುವುದು. ನಿಮ್ಮ ಬಳಿ ಇರುವ ಸಂಪತ್ತನ್ನು ಎಲ್ಲರಿಗೂ ಹೇಳಬೇಕಾದೀತು. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವಿರಿ. ಕಛೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ.

ಮೀನ ರಾಶಿ: ಉದ್ಯಮದಲ್ಲಿ ಕಾನೂನಾತ್ಮಕ ತಿಳಿವಳಿಕೆಯನ್ನು ಇಟ್ಟುಕೊಂಡು ವ್ಯವಹರಿಸಿ. ನೀವು ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮನ್ನು ಕಂಡುಕೊಳ್ಳಬಹುದು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕ. ಭೂಮಿಯ ವ್ಯವಹಾರವು ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುವ ಸಾಧ್ಯತೆಯಿದೆ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ಉದ್ಯಮಪ್ರಿಯರ ಸಮಾಗಮ, ಬಂಡವಾಳ ಹೂಡಿಕೆಗೆ ಯೋಜನೆ ತಯಾರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ವರಿಯಾಗಬಹುದು. ನೌಕರರಿಗೆ ಇಂದು ಸಂತೋಷವನ್ನು ಕೊಡುವಿರಿ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುವರು. ಅತಿಯಾದ ಭೋಜನದಿಂದ ಕಷ್ಟವಾದೀತು. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನು ನೀಡಬಹುದು.