Horoscope Today 26 January 2025: ನಿಮ್ಮ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸುವಿರಿ
ಶಾಲಿವಾಹನ ಶಕೆ 1947ರ ಮಾರ್ಗಶಿರ ಮಾಸದ ಕೃಷ್ಣ ಪಕ್ಷದ ಪಂಚಮಿಯ ದಿನದ ನಿತ್ಯ ಪಂಚಾಂಗವನ್ನು ಮತ್ತು ಎಲ್ಲಾ 12 ರಾಶಿಗಳಿಗೆ ದಿನದ ಭವಿಷ್ಯವನ್ನು ಒಳಗೊಂಡಿದೆ. ಪ್ರತಿಯೊಂದು ರಾಶಿಗೂ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಮೇಲೆ ದಿನದ ಪ್ರಭಾವವನ್ನು ವಿವರಿಸಲಾಗಿದೆ. ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ತಿಳಿದುಕೊಳ್ಳಲು ಈ ಲೇಖನ ಸಹಾಯ ಮಾಡುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ವ್ಯಾಘಾತ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 27 ನಿಮಿಷಕ್ಕೆ, ರಾಹು ಕಾಲ ಸಂಜೆ 05: 02 ರಿಂದ 06:28ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:45ರಿಂದ 02:11 ರವರೆಗೆ, ಗುಳಿಕ ಮಧ್ಯಾಹ್ನ 03:37 ರಿಂದ 05:02 ರವರೆಗೆ.
ಮೇಷ ರಾಶಿ; ಆಡಂಬರವನ್ನು ಬಿಟ್ಟು ಸರಳವಾಗಿ ಇರುವುದು ಹಿತವಾಗುವುದು. ನೀವು ಸಕ್ರಿಯರಾಗಿ ಓಡಾಡುವುದು ಇತರರಿಗೆ ಅಸೂಯೆಯಾಗುವುದು. ನಿಮಗೆ ಸಿಕ್ಕ ಜವಾಬ್ದಾರಿಯನ್ನು ತಪ್ಪಿಸಲು ಯಾರಾದರೂ ಪ್ರಯತ್ನಿಸುತ್ತಲೇ ಇರಬಹುದು. ಇನ್ನೊಬ್ಬರಿಂದ ಮತ್ತೆ ಮತ್ತೆ ಹೇಳಿಸಿಕೊಳ್ಳಬೇಕಾಗುವುದು. ನಿಮ್ಮ ಬಗ್ಗೆ ಇರುವ ಭಾವವನ್ನು ನೀವು ಸದಾ ಉಳಿಸಿಕೊಳ್ಳುವ ಯೋಚನೆಯಲ್ಲಿಯೇ ಇರುವಿರಿ. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ಹೊಸ ಪ್ರೇಮವು ಹುಟ್ಟಿಕೊಳ್ಳಬಹುದು. ಇಂದು ಯಾರಿಗಾದರೂ ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ವಿದ್ಯಾರ್ಥಿಗಳಿಗೆ ಭವಿಷ್ಯದ ವಿದ್ಯಾಭ್ಯಾಸದ ಬಗ್ಗೆ ಆತಂಕ ಕಾಣಿಸುವುದು.
ವೃಷಭ ರಾಶಿ: ಯಾರ ಮನಸ್ಸನ್ನೂ ಅರ್ಥಮಾಡಿಕೊಳ್ಳುವ ತಾಳ್ಮೆ ಇರದು. ವಿದೇಶದಲ್ಲಿ ವಾಸಿಸುವವರಿಗೆ ತಮ್ಮ ಬಗ್ಗೆಯೇ ಅಸದ್ಭಾವ ಮೂಡುವುದು. ಸಂಬಂಧಗಳನ್ನು ಕಡಿದುಕೊಂಡ ಭಾವವು ಬರುವುದು. ನಿಮ್ಮ ಬಗ್ಗೆ ಅನಗತ್ಯ ಮಾತುಗಳು ಬರುವುದು. ಸ್ವಯಾರ್ಜಿತ ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಕೆಲವರು ದೂರವಾದಷ್ಟು ನಿಮಗೆ ನೆಮ್ಮದಿ ಇರುವುದು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಪ್ರಯಾಣದ ಆಯಾಸದಿಂದ ಜ್ವರ, ಆಶಕ್ತತೆಯು ಬರಬಹುದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ನಿಮ್ಮ ಮತ್ತೊಂದು ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ನಿಮ್ಮ ಶ್ರಮವು ಹಾಕಬೇಕಾದಲ್ಲಿ ಹಾಕದೇ ಮತ್ತೆಲ್ಲೋ ಹಾಕುವಿರಿ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಾಡಿಕೊಳ್ಳಿ. ನಿಮ್ಮ ವಸ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ.
ಮಿಥುನ ರಾಶಿ: ಯಾರೂ ನಿಮ್ಮ ಭಾವನೆಗೆ ಸ್ಪಂದಿಸದೇ ಇರಬಹುದು. ಆದರೆ ಎಲ್ಲರಿಗೂ ಪ್ರೀತಿಯನ್ನು ಕೊಟ್ಟು ಸಂತೋಷಪಡಿಸುವಿರಿ. ಇಂದು ಮಾಡಲಾಗದ ಕಾರ್ಯವನ್ನು ಮತ್ತೆಂದೋ ಮಾಡುವ ಬದಲು ಅದಕ್ಕಾಗಿ ಇಂದೇ ದಿನವನ್ನು ನಿಶ್ಚಯಿಸಿ. ನಿಮ್ಮ ಗೌರವಕ್ಕೆ ದಕ್ಕೆ ಬರುವ ಕಡೆ ಹೋಗಲಾರಿರಿ. ಉತ್ಪನ್ನ ಮಾಡುವವರಿಗೆ ಬೇಡಿಕೆ ಅಧಿಕವಾಗಿದ್ದು, ಪೂರೈಸೈಲು ನಿಮಗೆ ಅಷ್ಟವಾಗುವುದು. ಅಧೈರ್ಯಗೊಂಡ ನಿಮಗೆ ಆಪ್ತರು ಧೈರ್ಯ ತುಂಬುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ಮಾನಸಿಕ ಒತ್ತಡವು ನಿಮ್ಮ ಕಾರ್ಯವನ್ನು ನಿಧಾನ ಮಾಡುವುದು. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ದೀರ್ಘಕಾಲದ ರೋಗವು ಇಂದು ಗೊತ್ತಾಗಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ ನಡೆಸುವ ಸಂದರ್ಭವು ಬರಬಹುದು. ಇಂದು ಕೆಲವರ ಮಾತುಗಳು ಉತ್ಸಾಹವನ್ನು ಕಡಿಮೆ ಮಾಡಬಹುದು.
ಕರ್ಕಾಟಕ ರಾಶಿ: ನೀವು ನಕಾರಾತ್ಮಕ ಅಂಶಗಳು ನಿಮ್ಮ ಬಗ್ಗೆ ಬರಲು ಅವಕಾಶ ಕೊಡಲಾರಿರಿ. ನಿಮ್ಮ ತಂತ್ರಗಳಿಂದ ನಿಮಗೆ ಉಪಯೋಗವಾಗಲಿದೆ. ಸಾಹಿತ್ಯಾಸಕ್ತರಿಗೆ ಉತ್ತಮ ಅವಕಾಶಗಳು ಪ್ರಾಪ್ತವಾಗಿ, ತಮ್ಮ ಜೀವನವನ್ನು ಬದಲಿಸಿಕೊಳ್ಳುವರು. ಆಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡುವಿರಿ. ಸಮಯವನ್ನು ಬಹಳ ದುರುಪಯೋಗ ಮಾಡಿಕೊಳ್ಳುವ ಸಂಭವವಿದೆ. ಸಂಗಾತಿಯಿಂದ ನಿಮಗೆ ಅಪರೂಪದ ವಸ್ತುಗಳು ಸಿಗಬಹುದು. ದೊಡ್ಡ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನ ಮಾಡುವಿರಿ. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಸ್ವಯಂ ಸ್ಫರ್ತಿಯಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ನಿಮ್ಮ ಶ್ರೇಯಸ್ಸಿಗೆ ದೈವದ ಕೃಪೆಯನ್ನು ಬೇಡುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡಿರುವ ಹಣೆಪಟ್ಟಿ ಬರಬಹುದು. ದುರ್ಬಲರ ಜೊತೆ ಹೋರಾಡಿ ಗೆದ್ದು ಹೆಮ್ಮೆಪಡುವಿರಿ.
ಸಿಂಹ ರಾಶಿ: ನಿಮ್ಮ ಬೆಳವಣಿಗೆಯು ಸನ್ಮಾರ್ಗದಲ್ಲಿ ಇರಲಿ. ನೀವು ಸ್ನೇಹಿತರ ಜೊತೆ ಕ್ರೀಡೆಯಲ್ಲಿ ಸಮಯವನ್ನು ಕಳೆಯುವಿರಿ. ಹಳೆಯ ನೆನಪುಗಳಿಂದ ಹಿಂದಿರುಗುವುದು ನಿಮಗೆ ಕಷ್ಟವಾಗಬಹುದು. ಸಹೋದರರ ಜೊತೆ ಕಲಹವಾಗಬಹುದು. ಜಯದಿಂದ ನಿಮಗೆ ಅಹಂಕಾರ ಬರುವ ಸಾಧ್ಯತೆ ಇದೆ. ವಿದ್ಯಾಭ್ಯಾಸವನ್ನು ಮುಗಿಸಿ ಹೊಸ ಉದ್ಯೋಗವನ್ನು ಹುಡುಕುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ತಂದೆಯ ಆರೋಗ್ಯದ ಬಗ್ಗೆ ಗಮನ ಅಧಿಕವಾಗಿರಲಿ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಬಹುದು. ಕುರುಡಾಗಿ ಮುನ್ನುಗ್ಗುವುದು ಬೇಡ. ವಿವಾಹದ ಮಾತುಕತೆಗೆ ವಿಘ್ನಗಳು ಬರಬಹುದು. ಮೊದಲೇ ನಿಶ್ಚಿತಗೊಳಿಸಿದ ಕಾರ್ಯವನ್ನು ಸರಿಯಾಗಿ ಮುಂದುವರಿಸಿ.
ಕನ್ಯಾ ರಾಶಿ: ಇತರರನ್ನು ಮೂದಲಿಸುತ್ತ ಸಮಯದ ವ್ಯರ್ಥ ಮಾಡುವಿರಿ. ಪ್ರಶಂಸೆಯಿಂದ ನೀವೂ ದೊಡ್ಡವರಾಗುವಿರಿ. ನಿಮ್ಮಿಂದ ಆಗದ ಕಾರ್ಯವನ್ನು ನೀವು ಇತರರ ಜೊತೆ ಸೇರಿ ಮಾಡಿಕೊಳ್ಳುವಿರಿ. ನಿಮ್ಮ ಉದ್ಯಮದ ಪ್ರಗತಿಯು ನಿಮಗೆ ಖುಷಿಕೊಡುವುದು. ಯಾರನ್ನೋ ನಂಬಿ ಹಣವ್ಯವಹಾರವನ್ನು ಮಾಡಿ ಮೋಸ ಹೋಗುವಿರಿ. ಅದೃಷ್ಟವು ನಿಮಗೆ ಸಂಕೇತದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದ ಹಿನ್ನಡೆಯ ಕಾರಣ ಎಲ್ಲರಿಂದ ಅವಮಾನವಾಗಬಹುದು. ಕೃಷಿಕರಿಗೆ ಲಾಭಾವಾಗಲಿದೆ. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಅತಿಥಿಗಳ ಸತ್ಕಾರದಿಂದ ಸತ್ಕಾರ್ಯದ ಪ್ರಾಪ್ತಿಯಾಗಲಿದೆ. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ ಕೆಲಸದಿಂದ ಸಾಧಿಸುವಿರಿ. ವಾಹನ ಚಾಲನೆಯಲ್ಲಿ ಸುರಕ್ಷತೆ ಇರಲಿ.
ತುಲಾ ರಾಶಿ; ಉದ್ಯೋಗದಲ್ಲಿ ಒತ್ತಡದ ಸ್ಥಿತಿ ಇದೆ. ಓಡಾಟ ಮಾಡಿ ಅದನ್ನು ಸರಿಮಾಡಿಕೊಳ್ಳುವುದು ಒಳ್ಳೆಯದು. ಮಾರಾಟದ ವಿಭಾಗದಲ್ಲಿ ಇರುವವರಿಗೆ ಲಾಭವನ್ನು ಹೆಚ್ಚಿಸಿದ ಕಾರಣಕ್ಕೆ ಪ್ರಶಂಸೆಯು ಸಿಗಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಚುರುಕು ಮಾಡುವುದು ಒಳ್ಳೆಯದು. ಹಿತಶತ್ರುಗಳನ್ನೇ ನಿಮ್ಮ ಬೆಂಬಲಕ್ಕೆ ಇಟ್ಟುಕೊಳ್ಳುವಿರಿ. ರಾಜಕೀಯದವರಿಗೆ ಬೆಂಬಲಿಗರಿಂದ ಒತ್ತಡಗಳು ಬರಬಹುದು. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ನಿಮ್ಮ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ಉಪಯೋಗಿಸುವಿರಿ. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ಭೂಮಿಯ ವ್ಯವಹಾರದಿಂದ ಅಲ್ಪ ಹಣವು ನಷ್ಟವಾಗುವುದು. ಮನೆಯ ವಾತಾವರಣವು ನಿಮಗೆ ಹಿತವೆನಿಸಲಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನದಿಂದ ನಿಮಗೆ ಕಷ್ಟ.
ವೃಶ್ಚಿಕ ರಾಶಿ: ಅಧಿಕಾರಿಗಳ ಪೀಡೆಯಿಂದ ಮನನೋಯುವ ಸಾಧ್ಯತೆ ಹೆಚ್ಚು. ಕೇವಲ ಔಷಧವೊಂದೇ ಸಾಲದು. ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗವು ಸಿಗಬಹುದು. ನೀವು ಮಾಡಿದೆ ಕಾರ್ಯಕ್ಕೆ ದಾಖಲೆ ಅವಶ್ಯಕತೆ ಇರಲಿದೆ. ಸಾಲವನ್ನು ಪಡೆಯಲು ನಿಮಗೆ ಸರಿಯಾದ ಆದಾಯ ಮೂಲದ ಅವಶ್ಯಕತೆ ಇರುವುದು. ಪೋಷಕರ ಜೊತೆ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಕಲಾವಿದರಿಗೆ ಪ್ರೋತ್ಸಾಹ ಪ್ರಶಂಸೆ ಸಿಗುವುದು. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಪರೋಪಕಾರ ಗುಣವು ನಿಮ್ಮಲ್ಲಿ ಇಂದು ಜಾಗರೂಕವಾಗಿ ಇರುವುದು. ನಿಮ್ಮನ್ನು ಅವ್ಯವಹಾರಕ್ಕೆ ಸಹೋದ್ಯೋಗಿಗಳು ಪ್ರೇರಿಸಬಹುದು. ನಿದ್ರಾಹೀನತೆ ಕಾಣಿಸುವುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಬಹಳ ದಿನಗಳಿಂದ ಮನೆಗೆ ಬಂಧುಗಳ ಆಗಮನವು ಆಗದೇ ಇರುವುದು ಬೇಸರತಂದೀತು.
ಧನು ರಾಶಿ: ನೀವಾಗಿಯೇ ಶತ್ರುಗಳ ಮೇಲೆ ಹೋಗುವುದು ಸರಿಯಲ್ಲ. ಬಂದ ಶತ್ರುವುನ್ನು ಸಮರ್ಥವಾಗಿ ಎದುರಿಸಿ. ವಿವಾಹವಾಗುವ ಕುರಿತು ಬಹಳ ಕುತೂಹಲಗಳು ಇರಬಹುದು. ಸಂಗಾತಿಯ ಜೊತೆ ಹೊರಗೆ ಸುತ್ತಾಡುವ ಬಯಕೆಯಾಗುವುದು. ವಾಹನ ಖರೀದಿಯ ಬಗ್ಗೆ ನಿಮಗೆ ಚಿಂತೆಯಾಗಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ವಿಚಾರದಲ್ಲಿ ತಜ್ಞರ ಸಂಪರ್ಕ ಮಾಡುವುದು ಉತ್ತಮ. ನಿಮ್ಮ ಇಂದಿನ ಕೆಲಸವನ್ನು ಪೂರ್ಣ ಮಾಡಲು ಬಹಳ ಆತುರದಿಂದ ಇರುವಿರಿ. ಸಹೋದರನ ಮನವೊಲಿಸಲು ನಿಮಗೆ ಕಷ್ಟವಾದೀತು. ಪರದೇಶದ ಮೇಲಿನ ವ್ಯಾಮೋಹ ಕಡಿಮೆಯಾಗದೇ ಇರಬಹುದು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಧಾರ್ಮಿಕ ಕರ್ಮಗಳಿಗೆ ಅಶ್ರದ್ಧೆ. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು.
ಮಕರ ರಾಶಿ: ವೇಗವಾಗಿ ಹಣಸಂಪಾದಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಸಾಧ್ಯತೆ ಇದೆ. ಭಾವೈಕ್ಯವನ್ನು ಬೆಳೆಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಎಲ್ಲದಕ್ಕೂ ಇನ್ನೊಬ್ಬರನ್ನು ಅವಲಂಬಿಸುವುದು ನಿಮಗೆ ಇಷ್ಟವಾಗದು. ಇದಕ್ಕಾಗಿ ಬೇರೆ ಮಾರ್ಗವನ್ನೂ ಅನ್ವೇಷಿಸುವಿರಿ. ಹಿರಿಯರ ಪ್ರೀತಿ ನಿಮಗೆ ಸಿಗಲಿದೆ. ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣವಾಗದಂತೆ ನೋಡಿಕೊಳ್ಳುವರು. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಅಕಾರಣದಿಂದ ನಿಮಗೆ ಸಂತೋಷ ಸಿಗುವುದೇ ಉತ್ತಮ.ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಬಿಟ್ಟು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವರು. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹವು ಉಂಟಾಗಬಹುದು. ಮಾನಸಿಕವಾಗಿ ನೀವು ಕುಗ್ಗಬಹುದು.
ಕುಂಭ ರಾಶಿ: ನಿಮ್ಮ ಹಿತಚಿಂತಕರ ಅಭಾವದಿಂದ ತಪ್ಪು ನಿರ್ಧಾರ. ಆರ್ಥಿಕವಾಗಿಯೂ ಹಿನ್ನಡೆ ಮತ್ತು ಅಧಿಕಾರದಲ್ಲಿ ಮುಂದಾಲೋಚನೆಯ ಕೊರತೆ. ನಿಮ್ಮ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ಚಿಂತಿಸಬೇಕಾಗುವುದು. ಇಂದು ನಿಮ್ಮ ಮಕ್ಕಳ ಬಗ್ಗೆ ಸಕಾರಾತ್ಮಕ ವಾರ್ತೆಯನ್ನು ಕೇಳುವಿರಿ. ನೀವು ಇಂದು ಯಾರ ಜೊತೆಗದರೂ ಹಣವನ್ನು ವಿನಿಮಯ ಮಾಡಿಕೊಳ್ಳಲು ಯೋಚಿಸುತ್ತಿದ್ದರೆ, ಸರಿಯಾದ ಲೆಕ್ಕಾಚಾರವನ್ನು ಇಟ್ಟುಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು. ಕೇಳಿ ಸುಮ್ಮನಾಗಿ. ಪ್ರಯಾಣಕ್ಕೆ ಸಕಾರಣವಾಗಿ ವಿಘ್ನ ಬಂದಿದೆ ಎಂದು ಅನಂತರ ತಿಳಿಯುತ್ತದೆ. ಯಾರಾದರೂ ನಿಮ್ಮ ವ್ಯಕ್ತಿತ್ವವನ್ನು ತೂಗಿ ಅಳೆಯಬಹುದು. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ತಾಪವನ್ನು ಗುಟ್ಟಾಗಿಡುವುದು ಬೇಡ. ಹಾಗೆಂದು ಎಲ್ಲರ ಮುಂದೂ ಹೇಳಬೇಡಿ.
ಮೀನ ರಾಶಿ: ನಿಮ್ಮ ವರ್ತನೆಯಿಂದ ಕುಟುಂಬದ ಆರ್ಥಿಕ ಸಹಕಾರ ಸಿಗದೇ ಇರಬಹುದು. ಭವಿಷ್ಯಕ್ಕೆ ಸಂಬಂಧಿಸಿ ನಿರ್ಧಾರವನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ಮಗುವನ್ನು ಹೊರಗೆ ಓದಲು ಕಳುಹಿಸಲು ಬಯಸುವಿರಿ. ಸಂಗಾತಿಯನ್ನು ಒಪ್ಪಿಸುವುದು ಸುಲಭವಲ್ಲ. ವಿವಾಹದ ವಾತಾವರಣವು ಮನೆಯಲ್ಲಿ ಇದ್ದರೂ ಉದ್ವೇಗಕ್ಕೆ ಒಳಗಾಗದೇ ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಇಂದು ನೀವು ನಿಮ್ಮ ಸಂಬಂಧಿಕರೊಬ್ಬರಿಗೆ ಸ್ವಲ್ಪ ಹಣವನ್ನು ವ್ಯವಸ್ಥೆ ಮಾಡಬೇಕಾಗಬಹುದು. ಕಳ್ಳತನದ ಅಪವಾದಿಂದ ತಲೆಮರೆಸಿಕೊಳ್ಳುವಿರಿ. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಇದರಿಂದ ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ.
ಲೋಹಿತ ಹೆಬ್ಬಾರ್ – 8762924271 (what’s app only)