AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today- ದಿನ ಭವಿಷ್ಯ; ಭಾನುವಾರದ ರಾಶಿ ಫಲ ಹೇಗಿದೆ?

Horoscope ಜೂನ್ 20, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಭಾನುವಾರದ ರಾಶಿ ಫಲ ಹೇಗಿದೆ?
ದಿನ ಭವಿಷ್ಯ
TV9 Web
| Edited By: ಆಯೇಷಾ ಬಾನು|

Updated on: Jun 20, 2021 | 7:34 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲಪಕ್ಷ, ದಶಮಿ ತಿಥಿ, ಭಾನುವಾರ, ಜೂನ್ 20, 2021. ಚಿತ್ತೆ ನಕ್ಷತ್ರ, ರಾಹುಕಾಲ: ಇಂದು ಸಂಜೆ 5.13 ರಿಂದ ಇಂದು ರಾತ್ರಿ 6.51 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.42. ಸೂರ್ಯಾಸ್ತ: ಸಂಜೆ 6.52

ತಾ.20-06-2021 ರ ಭಾನುವಾರದ ರಾಶಿಭವಿಷ್ಯ:

ಮೇಷ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಸಭಾಸಮಾಜ ಕೀರ್ತಿ ಲಭಿಸುವುದು. ಶುಭ ಸಂಖ್ಯೆ: 6

ವೃಷಭ: ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವುದು. ಶುಭ ಸಂಖ್ಯೆ: 9

ಮಿಥುನ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 1

ಕಟಕ: ವಾದ-ವಿವಾದ, ಹಠಸಾಧನೆ, ತಪ್ಪುಗಳ ಸಮರ್ಥನೆ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ. ಆಯಾಸದಿಂದ ಕೂಡಿದ ಕೆಲಸ ಇರುವುದು. ಅಧಿಕಾರ ಪ್ರಾಪ್ತಿಗಾಗಿ ಅಲೆದಾಟ ಸಂಭವ. ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ. ಶುಭ ಸಂಖ್ಯೆ: 7

ಸಿಂಹ: ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಕೆಲಸ ನಿರ್ವಹಿಲು ಆಗದಂತಹ ಸ್ಥಿತಿ ಬರಬಹುದು. ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 4

ಕನ್ಯಾ: ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವುದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಟೆಗೆ ಧನವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 8

ತುಲಾ: ಆರ್ಥಿಕ ಸ್ಥಿತಿ ಸುಧಾರಿಸುವುದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವುದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಶುಭ ಸಂಖ್ಯೆ: 5

ವೃಶ್ಚಿಕ: ಹೊಸ ಆಸ್ತಿ ಖರೀದಿ ಅಥವಾ ಹೊಸ ಹೂಡಿಕೆ ಈಗ ಬೇಡ. ಕಂಟಕದಿಂದ ಪಾರಾಗುವ ಯೋಗವಿದೆ. ಒಳ್ಳೆಯ ಸ್ವಭಾವ ಇರುವದರಿಂದ ಉದ್ಯೋಗದಲ್ಲಿ ಹೆಚ್ಚಿನ ಬಡ್ತಿಯಾಗುವ ಕಾಲ.ಆಸಕ್ತಿಗೆ ತಕ್ಕಂತೆ ಅವಕಾಶಗಳು ದೊರಕುವವು. ಶುಭ ಸಂಖ್ಯೆ: 3

ಧನು: ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರುವುದು. ವೈವಾಹಿಕ ಚಿಂತೆ ಇರುವುದು. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗುವ ಯೋಗವಿದೆ.ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 9

ಮಕರ: ಸ್ವಪ್ರತಿಷ್ಟೆ ಬಿಟ್ಟು ಬಲ್ಲವರ ಸಹಾಯ ಪಡೆಯಿರಿ. ಮರೆತು ಹೋದ ವಸ್ತು ಲಾಭದಾಯಕವಾಗಿ ಪರಿಣಮಿಸುವುದು. ಹಳೆಯ ಮಿತ್ರರ ಒಡನಾಟ ಸಂತಸ ತರುವದು. ಆರ್ಥಿಕ ಸ್ಥಿತಿಯಲ್ಲಿ ಬೆಳವಣಿಗೆ ಇರುವುದು. ಶುಭ ಸಂಖ್ಯೆ: 4

ಕುಂಭ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 7

ಮೀನ: ಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಹಾನಿ ಇಲ್ಲ ಆದರೆ ಲಾಭವೂ ಇಲ್ಲದ ಸ್ಥಿತಿ ಇರುವುದು. ಶುಭ ಸಂಖ್ಯೆ: 2

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್