Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಖರ್ಚು ಜಾಸ್ತಿ, ಸಾಲಗಾರರ ತೊಂದರೆ ಬರುವುದು
Horoscope ನವೆಂಬರ್ 27, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ತಿಳಿಯಿರಿ ನಿಮ್ಮ ಈ ದಿನದ ಶುಭ ಫಲಗಳು ಹೇಗಿವೆ. ಈ ದಿನ ನಿಮಗೆ ಕಾಡುವಂತ ಸಮಸ್ಯೆ ಏನೆಂದು.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ, ಸಪ್ತಮಿ ತಿಥಿ, ಶನಿವಾರ, ನವೆಂಬರ್ 27, 2021. ಮಖೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9.14 ರಿಂದ ಇಂದು ಬೆಳಿಗ್ಗೆ 10.37 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.27. ಸೂರ್ಯಾಸ್ತ: ಸಂಜೆ 5.39
ತಾ.27-11-2021 ರ ಶನಿವಾರದ ರಾಶಿಭವಿಷ್ಯ.
ಮೇಷ: ಹಿತಶತೃಗಳ ಸಲಹೆಯಿಂದ ತೊಂದರೆ. ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವುದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ: 6
ವೃಷಭ: ಪಾಲುದಾರಿಕೆಯಿಂದ ಲಾಭ ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವುದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 9
ಮಿಥುನ: ಚತುರತೆಯಿಂದ ಜಯ, ವ್ಯಕ್ತಿತ್ವಕ್ಕೆ ತಕ್ಕ ಗೌರವಗಳು ದೊರೆಯುವವು. ಚಾಣಾಕ್ಷತನದಿಂದ ಕಷ್ಟ ಪರಿಹರಿಸಿಕೊಳ್ಳುವಿರಿ. ಅಪೇಕ್ಷಿತ ಕಾರ್ಯಗಳು ಕೈಗೂಡುವವು. ಸಂಬಂಧಿಗಳಿಂದ ಸಹಕಾರ ದೊರೆಯುವುದು. ದೂರ ಪ್ರಯಾಣ, ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 2
ಕಟಕ: ಖರ್ಚು ಜಾಸ್ತಿ ಸಾಲಗಾರರ ತೊಂದರೆ ಇರುವುದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವುದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. ಶುಭ ಸಂಖ್ಯೆ: 5
ಸಿಂಹ: ಗುರುವಿನ ಅನುಗ್ರಹದಿಂದ ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಶುಭ ಸಂಖ್ಯೆ: 7
ಕನ್ಯಾ: ಅಪರಿಚಿತರ ಸಹಾಯ ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 3
ತುಲಾ: ಗುರುಬಲವಿದೆ ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 8
ವೃಶ್ಚಿಕ: ಸ್ವಲ್ಪ ಹಿನ್ನಡೆ. ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು. ಶುಭ ಸಂಖ್ಯೆ: 1
ಧನು: ಉತ್ತಮ ಅವಕಾಶಗಳು ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ದೊರೆಯುವುದು. ಕೋರ್ಟ್ನಲ್ಲಿ ಇರುವ ನ್ಯಾಯ ಬಗೆಹರಿಯುವುದು. ಆರ್ಥಿಕ ಸುಧಾರಣೆ ಕಂಡುಬರುವುದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವುದು. ಶುಭ ಸಂಖ್ಯೆ: 9
ಮಕರ: ಗಾಬರಿ, ಆತುರ ಬೇಡ. ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ. ಶುಭ ಸಂಖ್ಯೆ: 4
ಕುಂಭ: ಆಕಸ್ಮಿಕ ಅದೃಷ್ಟ. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 2
ಮೀನ: ಹಿತ ಶತೃಗಳ ದೃಷ್ಟಿ, ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವುದು. ಸಮತೋಲಿತ ಜೀವನವಿರುವುದು. ಶುಭ ಸಂಖ್ಯೆ: 5