Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆದಾಯ ಹೆಚ್ಚುವುದು, ವ್ಯವಹಾರಿಕ ಏಳ್ಗೆ ಇರುವುದು
Horoscope ಅಕ್ಟೋಬರ್ 13, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಆಶ್ವಯುಜ ಮಾಸ, ಶರದೃತು, ಶುಕ್ಲಪಕ್ಷ, ಅಷ್ಟಮಿ ತಿಥಿ, ಬುಧವಾರ, ಅಕ್ಟೋಬರ್ 13, 2021. ಪೂರ್ವಾಷಾಢ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 12.02 ರಿಂದ ಇಂದು ಮಧ್ಯಾಹ್ನ 1.30 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.08. ಸೂರ್ಯಾಸ್ತ: ಸಂಜೆ 5.56
ತಾ.13-10-2021 ರ ಬುಧವಾರದ ರಾಶಿಭವಿಷ್ಯ.
ಮೇಷ: ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಶುಭ ಸಂಖ್ಯೆ: 9
ವೃಷಭ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 1
ಮಿಥುನ: ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವುದು. ಉದ್ಯೋಗವನ್ನು ವಿಸ್ತರಿಸುವ ಕಾಲ ಇರುವುದು. ಶುಭ ಸಂಖ್ಯೆ: 4
ಕಟಕ: ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಮಂದಗತಿ ಇರುವುದು. ವ್ಯಾಪಾರದಲ್ಲಿ ಜಾಗರೂಕತೆ ಅವಶ್ಯ. ಹಾನಿ ತಡೆಗಟ್ಟುವ ಪ್ರಯತ್ನಕ್ಕೆ ಫಲ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಶುಭಫಲವಿದೆ. ಶುಭ ಸಂಖ್ಯೆ: 8
ಸಿಂಹ: ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಆರ್ಥಕ ಸಂಕಷ್ಟಗಳು ಎದುರಾಗುವವು. ಶುಭ ಸಂಖ್ಯೆ: 3
ಕನ್ಯಾ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆಕೇಳುವ ಪ್ರಸಂಗ ಇರುವದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು. ಶುಭ ಸಂಖ್ಯೆ: 2
ತುಲಾ: ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವುದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಶುಭ ಸಂಖ್ಯೆ: 7
ವೃಶ್ಚಿಕ: ಅಪರಿಮಿತ ಖರ್ಚು ತೋರಿದರೂ ಅಡಚಣೆಯಾಗುವ ಸಂಭವವಿಲ್ಲದೆ. ಸ್ಥಾನಮಾನಗಳೂ ಭದ್ರವಾಗಿ ಸಾಂಸಾರಿಕ ದೃಷ್ಟಿಯಲ್ಲೂ ಸುಖದಾಯಕ, ವಿಶೆಷ ಪ್ರಯತ್ನದಿಂದ ವ್ಯವಹಾರ ಸಿದ್ಧಿ ಇರುವುದು. ಶುಭ ಸಂಖ್ಯೆ: 4
ಧನು: ಆದಾಯ ಹೆಚ್ಚುವುದು. ವ್ಯವಹಾರಿಕ ಏಳ್ಗೆ ಇರುವುದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಶುಭ ಸಂಖ್ಯೆ: 5
ಮಕರ: ನಿಮ್ಮ ಮನೆಬಾಗಿಲಲ್ಲಿ ಅದೃಷ್ಟ ಲಕ್ಷ್ಮೀ ಒಲಿದು ಬರುತ್ತಾಳೆ. ಆರೋಗ್ಯ ಸುಧಾರಣೆಯಾಗುವುದು. ಸ್ಥಿತಿಗಳು ಅನುಕೂಲಕರವಾಗಿ ಮುಂದವರೆಯುವುದು. ಗ್ರಹಸುಖ ಯೋಗವು ಇದೆ. ಮನೋಚಿಂತಿತ ಕನಸು ನನಸಾಗಲಿದೆ. ಶುಭ ಸಂಖ್ಯೆ: 2
ಕುಂಭ: ಸ್ವೀಕೃತ ಕಾರ್ಯವು ಫಲಪ್ರದವಾಗಿ ಗೌರವ ಆದರಗಳು ಪ್ರಾಪ್ತವಾಗುವವು. ಈ ಸಮಯದಲ್ಲಿ ಉತ್ತಮ ಧನಾರ್ಜನೆ ಯಾಗುವುದು ವಿದೇಶಪ್ರಯಾಣ, ಪ್ರೇಮಸಂಭಾಷಣೆ, ದೇವ ಬ್ರ್ರಾಹ್ಮಣ, ಧರ್ಮಕಾರ್ಯಗಳು ನಡೆಯುವವು. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪರಿಹಾರವಾಗುವವು. ಶುಭ ಸಂಖ್ಯೆ: 8
ಮೀನ: ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 3
Published On - 6:42 am, Wed, 13 October 21