Horoscope Today – ದಿನ ಭವಿಷ್ಯ; ಶನಿವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?

ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲಪಕ್ಷ, ಏಕಾದಶಿ ತಿಥಿ, ಶನಿವಾರ, ಸೆಪ್ಟೆಂಬರ್​ 26, 2021 ಭವಿಷ್ಯ.

Horoscope Today - ದಿನ ಭವಿಷ್ಯ; ಶನಿವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?
ಭವಿಷ್ಯ
Follow us
TV9 Web
| Updated By: Vinay Bhat

Updated on: Oct 02, 2021 | 6:43 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಶುಕ್ಲಪಕ್ಷ, ಏಕಾದಶಿ ತಿಥಿ, ಶನಿವಾರ, ಸೆಪ್ಟೆಂಬರ್​ 26, 2021. ಆಶ್ಲೇಷ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 9:05 ರಿಂದ ಇಂದು ಬೆಳಿಗ್ಗೆ 10:34 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6:06. ಸೂರ್ಯಾಸ್ತ: ಸಂಜೆ 6.04.

ತಾ.02-10-2021 ರ ಶನಿವಾರದ ರಾಶಿಭವಿಷ್ಯ. *****

ಮೇಷ: ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭ ಸಂಖ್ಯೆ: 6

ವೃಷಭ: ಎಲ್ಲವನ್ನು ಹಗುರವಾಗಿ ಕಾಣುವದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭ ಸಂಖ್ಯೆ: 9

ಮಿಥುನ: ವ್ಯಕ್ತಿತ್ವಕ್ಕೆ ತಕ್ಕ ಗೌರವಗಳು ದೊರೆಯುವವು. ಚಾಣಾಕ್ಷತನದಿಂದ ಕಷ್ಟ ಪರಿಹರಿಸಿಕೊಳ್ಳುವಿರಿ. ಅಪೇಕ್ಷಿತ ಕಾರ್ಯಗಳು ಕೈಗೂಡುವವು. ಸಂಭಂಧಿಗಳಿಂದ ಸಹಕಾರ ದೊರೆಯುವದು. ದೂರ ಪ್ರಯಾಣ, ಪರಸ್ಥಳವಾಸ ಸಂಭವ. ಶುಭ ಸಂಖ್ಯೆ: 2

ಕರ್ಕ: ಸಾಲಗಾರರ ತೊಂದರೆ ಇರುವದು. ಅನಾರೋಗ್ಯ, ವ್ಯವಹಾರದಲ್ಲಿ ಹಾನಿ ಕಂಡುಬರುವದು. ನಿಧಾನಗತಿಯ ಕೆಲಸದಿಂದ ಮನೋಕ್ಷೋಭೆ ಉಂಟಾಗುವ ಸಂಭವವಿದೆ. ಶುಭ ಸಂಖ್ಯೆ: 5

ಸಿಂಹ: ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಶುಭ ಸಂಖ್ಯೆ: 7

ಕನ್ಯಾ: ಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವದು. ಶುಭ ಸಂಖ್ಯೆ: 3

ತುಲಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 8

ವೃಶ್ಚಿಕ: ವ್ಯವಹಾರದಲ್ಲಿ ಹಾನಿ ಕಂಡುಬರುವದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವದು. ಶುಭ ಸಂಖ್ಯೆ: 1

ಧನು: ದೀರ್ಘಕಾಲದ ಸಮಸ್ಯಗಳಿಗೆ ಪರಿಹಾರ ದೊರೆಯುವದು. ಕೋರ್ಟನಲ್ಲಿ ಇರುವ ನ್ಯಾಯ ಬಗೆಹರಿಯುವದು. ಆರ್ಥಿಕ ಸುಧಾರಣೆ ಕಂಡುಬರುವದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವದು. ಶುಭ ಸಂಖ್ಯೆ: 9

ಮಕರ: ಕೆಲಸದಲ್ಲಿ ತಾಳ್ಮೆ ಇರಲಿ. ಅನಿರ್ದಿಷ್ಟ ಉದ್ಯೋಗ, ಕೆಲಸದ ವಿಷಯದಲ್ಲಿ ಗೊಂದಲ ಮೂಡುವ ಸಾಧ್ಯತೆ ಇದೆ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ವ್ಯಾಪಾರಿಗಳಿಗೆ ಆರ್ಥಿಕ ತೊಂದರೆ ಆಗುವ ಯೋಗವಿದೆ. ಶುಭ ಸಂಖ್ಯೆ: 4

ಕುಂಭ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವದು. ಸಹೋದರ ಸಹಕಾರ ತೋರುವದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವದು. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭ ಸಂಖ್ಯೆ:  2

ಮೀನ: ಕುಟುಂಬದಲ್ಲಿ ವಾದ ಬೇಡ. ಉತ್ತಮ ಸಾಧನೆಯಿಂದ ಬಂಧುವರ್ಗದ ಪ್ರಶಂಸೆಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿಯ ಚತುರತೆ ಒಳ್ಳೆಯ ಆದಾಯವನ್ನು ತಂದು ಕೊಡುವದು. ಸಮತೋಲಿತ ಜೀವನವಿರುವದು. ಶುಭ ಸಂಖ್ಯೆ: 5

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ