Nitya Bhavishya: ಈ ರಾಶಿಯವರ ಆಸ್ತಿಯ ಮೇಲೆ ಅನ್ಯರ ಕಣ್ಣು ಬೀಳಬಹುದು
2023 ಫೆಬ್ರವರಿ 01ಬುಧವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 01 ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಮಿಥುನ: ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯು ಇಂದು ಸಿಗಲಿದೆ. ಹಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಯಶಸ್ಸು ನಿಮಗೆ ಬೇಡವೆಂದೆನಿಸಬಹುದು. ಯಾರ ಜೊತೆಗೂ ಇರಲು ನೀವು ಇಷ್ಟಪಡುವುದಿಲ್ಲ. ಒಂಟಿತನವೇ ನಿಮಗೆ ಸಮಾಧನ ಕೊಡಲಿದೆ. ಗೃಹನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ನಿಮ್ಮ ಕೆಲಸಕ್ಕೆ ಯೋಗ್ಯವಾದ ಪ್ರಶಂಸೆಗಳು ಸಿಗಲಿವೆ. ಅಹಾರದಿಂದ ಆರೋಗ್ಯವು ಕಡುವುದು. ಕೆಟ್ಟವರ ಸಹವಾಸವನ್ನು ಮಾಡಲು ಸಂದರ್ಭವು ಬರಬಹುದು.
ಕಟಕ: ಆರ್ಥಿಕತೆಯು ಸುಧಾರಿಸಬಹುದು. ಬಂಧುಗಳು ನಿಮಗೆ ಶುಭವಾದ ಸುದ್ದಿಯನ್ನು ಹೇಳುವರು. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವ ಮನಸ್ಸು ಮಾಡುವಿರಿ. ಊರಿನ ಉತ್ಸವದಲ್ಲಿ ಭಾಗಿಯಾಗುವಿರಿ. ಕೃಷಿಕರಿಗೆ ತಮ್ಮ ಬೆಳೆಗಳಿಂದ ಲಾಭವಾಗಬಹುದು. ರಾಜಕೀಯವ್ಯಕ್ತಿಗಳಾಗಿದ್ದರೆ ಇಂದು ಜನಸೇವೆಯನ್ನು ಮಾಡುವಿರಿ. ನಿರಂತರ ಶ್ರಮಕ್ಕೆ ಸ್ವಲ್ಪ ಫಲವು ಸಿಗಲಿದೆ.
ಸಿಂಹ: ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುವ ದೃಢವಾದ ವಿಶ್ವಾಸವಿರಲಿದೆ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಸಂತೋಷವಾಗಿರಲು ಬೇಕಾದಂತೆ ನಿಮ್ಮ ಶ್ರಮವನ್ನು ಇಟ್ಟುಕೊಳ್ಳಿ. ಅಧಿಕವಾಗಿ ಮನಸ್ಸಿಗೆ ಬುದ್ಧಿಗೆ ಕೆಲಸವನ್ನು ಕೊಡಬೇಡಿ. ಧನಾಗಮನದ ವಾರ್ತೆಯು ಇರಲಿದೆ. ಮರಗೆಲಸದವರಿಗೆ ಉತ್ತಮ ಕೆಲಸಗಳು ಸಿಗಲಿವೆ. ಜನರ ನಡುವೆ ಇರಲು ಬಯಸುವಿರಿ. ಪಾಲುದಾರಿಕೆಯಲ್ಲಿ ಆದ ವ್ಯತ್ಯಾಸದಿಂದ ಕಲಹವಾಗಬಹುದು.
ಕನ್ಯಾ: ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಸರ್ಕಾರಿ ಕಾರ್ಯಗಳು ಹಿಂದೆ ಬೀಳಲಿವೆ. ಸಾಲಬಾಧೆಯು ಕಾಡಲಿದೆ. ಸಾಲಕ್ಕೆಂದು ಇನ್ನೊಬ್ಬರ ಬಳಿ ಕೈ ಚಾಚ ಬೇಕಾಗಬಹುದು. ಸತಿ ಪತಿಯ ಕಲಹವು ಅತಿಯಾಗಬಹುದು. ನೀವಂದು ಕೊಂಡಂತೆ ಆಗಲಿಲ್ಲ ಎಂದು ಬೇಸರಪಡಬೇಡಿ. ಮನೋಬಲವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಿ. ಆಗುವುದನ್ನು ಒಮ್ಮನಸ್ಸಿನಿಂದ ಒಪ್ಪಿಕೊಳ್ಳಿ. ಸಮೀಪದವರ ಮರಣವಾರ್ತೆಯು ಆಘಾತವನ್ನು ತರಬಹುದು.
ತುಲಾ: ಬಹಳ ದಿನಗಳ ಅನಂತರ ಮಿತ್ರರೊಬ್ಬರ ಭೇಟಿಯಾಗಲಿದೆ. ಆರೋಗ್ಯವು ಬಾಧಿಸಬಹುದು. ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಕೀರ್ತಿಯನ್ನು ಗಳಿಸುವರು. ಸ್ತ್ರೀಸಂಬಂಧವಾದ ಅಪವಾದಗಳು ಬರಬಹುದು. ಬ್ಯಾಂಕ್ ಉದ್ಯೋಗದಲ್ಲಿ ಸ್ಥಾನವು ದಲಾವಣೆಯಾಗಲಿದೆ. ಮಾನಸಿಕ ಕಿರುಕುಳವನ್ನು ಅನ್ಯರಿಂದ ಅನುಭವಿಸುವಿರಿ. ಹೊಸವಾಹನ ಖರೀದಿಯನ್ನು ಮಾಡಲು ಇಚ್ಚವಿಸುವಿರಿ.
ವೃಶ್ಚಿಕ: ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮವರಿಗೆ ಕಿರುಕುಳವನ್ನು ನೀಡುವರು. ಕುಟುಂಬಕ್ಕೆ ಆಗಬೇಕಾದ ಕೆಲಸಗಳಿಂದ ಖರ್ಚುಗಳು ಹೆಚ್ಚಾಗಬಹುದು. ಯಾತ್ರೆಯನ್ನು ಮಾಡಲಿದ್ದೀರಿ. ಪ್ರಯಾಣವು ನಿಮಗೆ ದುಃಖವನ್ನು ತರಲಿದೆ. ಉನ್ನತಸ್ಥಾನಕ್ಕೆ ಹೋಗಲು ಅವಕಾಶಗಳು ಒಂದೊಂದಾಗಿ ತೆರೆದುಕೊಳ್ಳುವುವು. ಕ್ರೀಡೆಯಲ್ಲಿ ಮನಸ್ಸು ಇಡುವಿರಿ. ಲೇಖಕರು, ಸಾಹಿತಿ, ಪತ್ರ ಕರ್ತರಿಗೆ ಒಳ್ಳೆಯ ಸಮಾಚಾರ ಸಿಗಲಿದೆ. ಪ್ರಶಸ್ತಿಗಳು ನಿಮ್ಮ ಕಾರ್ಯವನ್ನು ಹುಡುಕಿಕೊಂಡು ಬರಬಹುದು.
ಧನು: ಉದ್ಯೋಗವನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಇಂದು ಕಷ್ಟದ ದಿನವಾಗಲಿದೆ. ಉದ್ಯೋಗದಿಂದ ನಿಮ್ಮನ್ನು ಕೈ ಬಿಡಬಹುದು. ನಿರಾಸೆಯು ಮೂಡಲಿದೆ. ವ್ಯಾಪರವು ಅಧೋಗತಿಗೆ ಹೋಗಲಿದೆ. ಶತ್ರುಗಳ ಪಿತೂರಿಯ ಕುರಿತು ನಿಮಗೆ ಶಂಕೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕವಿರಬಹುದು. ಬುದ್ಧಿಗೆ ಸದ್ವಿಚಾರಗಳನ್ನು ನೀಡಿ. ಸರ್ಕಾರದ ಹಿರಿಯ ಅಧಿಕಾರಿಗಳ ಭೇಟಿಯಾಗಲಿದೆ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆತಂಕದ ವಾತಾವರಣವು ನಿರ್ಮಾಣವಾಗುವುದು.
ಮಕರ: ವಿವಾಹಕ್ಕೆ ಹತ್ತಾರು ಸಮಸ್ಯೆಗಳು ಬರಬಹುದು. ಅದನ್ನು ಪರಿಹರಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಹೊಸದಾದ ವಾಹನವನ್ನು ಖರೀದಿ ಮಾಡಲಿದ್ದೀರಿ. ಸಾಲದ ಹೊರೆಯನ್ನು ಕಂಡು ಚಿಂತೆಗೆ ಒಳಗಾಗಬೇಕಾಗಬಹುದು. ಅವಸರವನ್ನು ಬಿಟ್ಟು ನಿಧಾನವಾಗಿ ಆಲೋಚಿಸಿ. ರಕ್ಷಣಪಡೆಗೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಪ್ರೀತಿಯಲ್ಲಿ ಬೀಳಲಿದ್ದೀರಿ. ನಿಮ್ಮನ್ನೇ ಗುರಿಯಾಗಿಸಿಕೊಂಡು ಕೆಲವು ಘಟನೆಗಳು ನಡೆಯಲಿವೆ. ಅಪರಿಚಿತ ಸ್ನೇಹವು ಬೆಳೆಯಲಿದೆ.
ಕುಂಭ: ಹುಂಬು ಧೈರ್ಯವನ್ನು ಮಾಡಬೇಡಿ. ಅಚಾತುರ್ಯದಿಂದ ಅನಾಹುವಾದೀತು. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ನಿಮ್ಮವರನ್ನು ಬಂಧಿಸಿಡುವ ಕೆಲಸಕ್ಕೆ ಹೋಗಬೇಡಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವಿರಿ. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾಗುವುದು. ಕೆಲಸವನ್ನು ಒಂದಾದಮೇಲೊಂದರಂತೆ ಮಾಡಿಕೊಳ್ಳಿ. ಎಲ್ಲವೂ ಸರಿಯಾಗಿ ಆಗುವುದು. ನಿಮ್ಮ ಸರಿಯಾದ ಯೋಜನೆಗಳು ನಿಮ್ಮ ಯಶಸ್ಸಿನ ಗುಟ್ಟಾಗಲಿದೆ.
ಮೀನ: ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸ್ನೇಹಿತರ ಸಹಾಯವೂ ದೊರೆಯಲಿದೆ. ನಾಚಿಕೆಯನ್ನು ಬಿಟ್ಟು ಕೇಳಿದರೆ ನಿಮಗೆ ಬೇಕಾದ ವಸ್ತುಗಳು ಸಿಗಬಹುದು. ಹೆದರಿಕೆಯ ವಾತಾವರವಿರಲಿದೆ. ನಿಮಗೆ ನಿಮ್ಮ ಕೆಲಸದಿಂದ ಆದ ತಪ್ಪುಗಳು ಕಾಡಬಹುದು. ಅಪ್ರಯೋಜನದ ಮಾತುಗಳಿಂದ ನೀವು ಅಪಹಾಸ್ಯಕ್ಕೆ ಒಳಗಾಗುವಿರಿ. ಯಾರ ಮೇಲಿರುವ ಬೇಸರವನ್ನು ಮತ್ಯಾರದೋ ಮೇಲೆ ತೋರಿಸಿ ನಿಮ್ಮವರ ದ್ವೇಷಕ್ಕೆ ಕಾರಣವಾಗಬೇಡಿ. ಸಣ್ಣ ಕನಸುಗಳು ಕೈಗೂಡುವ ದಿನವಾಗಲಿದೆ.
ಲೋಹಿತಶರ್ಮಾ ಇಡುವಾಣಿ