Nitya Bhavishya: ವ್ಯಾಪರದಲ್ಲಿ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ

2023 ಫೆಬ್ರುವರಿ 04 ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. 

Nitya Bhavishya: ವ್ಯಾಪರದಲ್ಲಿ ಲಾಭ, ದಾಂಪತ್ಯದಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ
ಪ್ರಾತಿನಿಧಿಕ ಚಿತ್ರImage Credit source: indiatvnews.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 04, 2023 | 6:03 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರುವರಿ 04 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 31 ನಿಮಿಷಕ್ಕೆ. ರಾಹು ಕಾಲ ಸಂಜೆ 09:54 ರಿಂದ 11:20, ಯಮಘಂಡ ಕಾಲ 02: 13 ರಿಂದ 03 : 39, ಗುಳಿಕ ಕಾಲ 07:02 ರಿಂದ 08: 28.

ಮೇಷ: ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಸಾಧಿಸಿಕಿಳ್ಳುವ ದಿನವಾಗಿದೆ. ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಹಿರಿಯರ ಸಲಹೆಯನ್ನು ಒಡೆಯಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ನೀವು ನಿರಾಸೆಯನ್ನು ಅನುಭವಿಸುತ್ತೀರಿ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡುವುದು ನಿಮ್ಮ ಕ್ಲಿಷ್ಟಕರ ಸನ್ನಿವೇಶಕ್ಕೆ ಸಹಾಯವಾಗಲಿದೆ. ದಾಂಪತ್ಯಜೀವನ ಅಪರೂಪದ ಕ್ಷಣಗಳ ಇಂದಿರಲಿವೆ.

ವೃಷಭ: ಊರಿನಿಂದ ಹೊರಗೆ ಹೋಗುವವರಿದ್ದೀರಿ. ಸಂಗಾತಿಯೊಂದಿಗೆ ಆಪ್ತವಾಗಿ ಮಾತನಾಡಲಿದ್ದೀರಿ. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ನಿಮ್ಮ ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿರುತ್ತದೆ. ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಅವರೊಂದಿಗೆ ಸಮಯವನ್ನು ಕಳೆಯಬಹುದು. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಜೀವನದ ತೊಂದರೆಗಳನ್ನು ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಒಳ್ಳೆಯದನ್ನು ಪಡೆಯಲು ಲಲಿತಾಸಹಸ್ರನಾಮವನ್ನು ಪಠಿಸಿ.

ಮಿಥುನ: ತುರ್ತು ಪ್ರಯಾಣವನ್ನು ಮಾಡಬೇಕಾಗಬಹುದು. ಆ ಸಮಯದಲ್ಲಿ ಅಧಿಕ ಖರ್ಚು ಆಗಲಿದೆ. ಮಾನಸಿಕವಾದ ಉಲ್ಲಾಸವಿರಲಿದೆ. ದೈಹಿಕ ಸೌಕರ್ಯವನ್ನು ಸಾಧಿಸಲಾಗುತ್ತದೆ. ಈ ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನೀವು ಕೆಲವು ವ್ಯವಹಾರ ಅಥವಾ ಒಪ್ಪಂದದೊಂದಿಗೆ ಸಂಪರ್ಕ ಹೊಂದಿದ್ದರೆ, ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ವಿಷ್ಣುಸಹಸ್ರನಾಮವನ್ನು ಒಳ್ಳೆಯದಕ್ಕಾಗಿ ಪಠಿಸಿ.

ಕರ್ಕ: ಆರ್ಥಿಕ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನವೇ ನಿಮಗೆ ಧೈರ್ಯ ಕೊಡಲಿದೆ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಆರೋಗ್ಯ ಉತ್ತಮವಾಗಿರುವುದು. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಸಣ್ಣ ಮಟ್ಟಿನ ಘರ್ಷಣೆಗಳು ನಡೆಯಬಹುದು. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣ. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಕೆಲಸ ಕಾರ್ಯಗಳು ಫಲಿಸಲಿವೆ.

ಸಿಂಹ: ಉದ್ಯಮಿಗಳು ಹಳೆಯ ಹೂಡಿಕೆಯ ಕಾರಣದಿಂದಾಗಿ ಇಂದು ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ. ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಸ್ನೇಹಿತರಿಗೆ ಸಾಲವನ್ನು ನೀಡಬೇಕಾಗಿಬರಬಹುದು. ಸಂಗಾತಿಯ, ಪ್ರೇಯಸಿ ಜೊತೆಯಲ್ಲಿ ಸುತ್ತಾಟ. ಒಬ್ಬ ಆಧ್ಯಾತ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ದೊರೆಯಲಿದೆ. ಶಿವನನ್ನು ಪೂಜಿಸಿ.

ಕನ್ಯಾ: ಒರಟುತನದಿಂದ ಪತಿ ಪತ್ನಿಯರ ನಡುವೆ ಕಲಹ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಹಿರಿಯರ ಸಲಹೆಯನ್ನು ಒಡೆಯಿರಿ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ಆಗದಿರುವ ಕೆಲಸಗಳಿಂದ ನಿರಾಸೆಯನ್ನು ಅನುಭವಿಸುತ್ತೀರಿ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡಬೇಕು. ದಾಂಪತ್ಯಜೀವನ ಅಪರೂಪದ ಕ್ಷಣಗಳ ಇಂದಿರಲಿವೆ.

ತುಲಾ: ಜೀವನದಲ್ಲಿ ಆಸಕ್ತಿದಾಯಕ ವಿಷಯಗಳಿಗೆ ಕಾಯುತ್ತಿರುವಿರಿ. ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಬಹುದು. ಆದರೆ ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಯೋಚಿಸಿ. ಹೆಚ್ಚು ಪ್ರಯತ್ನ ಪಟ್ಟರೆ ನಿಮ್ಮ ಸನಸ್ಯೆಗೆ ಸ್ವಲ್ಪವಾದರೂ ಪರಿಹಾರ ದೊರಕುವುದು ಖಚಿತ. ದೇವಿಯನ್ನು ಆರಾಧಿಸಿ. ಇಷ್ಟಾರ್ಥವನ್ನು ನೀಡುವಳು ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ.

ವೃಶ್ಚಿಕ: ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದ ಯಾವುದೇ ಸದಸ್ಯ ಇಂದು ನಿಮ್ಮೊಂದಿಗೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಅದು ನಿಮಗೆ ಮುಳ್ಳಾಗಬಹುದು. ಕೆಲಸದಲ್ಲಿ ತಡೆಯೊಡ್ಡುವವರು ತೀವ್ರ ಅವನತಿ ಹೊಂದುತ್ತಾರೆ. ಕಾರಣಾಂತರಗಳಿಂದ ನಿಮ್ಮ ಕೆಲವು ಸಮಯ ವ್ಯರ್ಥವಾಗಬಹುದು. ಅನಾರೋಗ್ಯ ಕಾಡಬಹುದು. ಕಾರ್ತಿಕೇಯನನ್ನು ಸ್ಮರಿಸಿ.

ಧನುಸ್ಸು: ಯಾವುದೇ ವಾದ ವಿವಾದಗಳಿಗೆ ಕಿವಿಯನ್ನು ಕೊಡಬೇಡಿ. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿವಹಿಸಿದ್ದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಲಿದೆ. ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯ ಮತ್ತಾವುದೂ ಇಲ್ಲ. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನವನ್ನು ಮಾಡಿ.

ಮಕರ: ದೀರ್ಘಪ್ರಯಾಣವನ್ನು ಇಂದು ಮಾಡುವುದು ಒಳಿತಲ್ಲ‌. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ಸಹೋದರರಿಂದ ಸಲಹೆ ಪಡೆದು ಮುನ್ನಡೆಯಿರಿ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಪ್ರೇಮ ಅಂಕುರಿಸುವ ಸಾಧ್ಯತೆ ಇದೆ. ನೀರೆರೆದರೆ ಫಲಿಸಲೂ ಬಹುದು. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ.

ಕುಂಭ: ಹಣಕಾಸಿನ ಹರಿವು ಹೆಚ್ಚಾಗಲಿದೆ. ನೀವು ಗಣ್ಯರೊಂದಿಗೆ ಇಂದಿನ ಒಡನಾಡವಿರಲಿದೆ. ಮೋಸ ಹೋಗುವ ಸಾಧ್ಯತೆ ಇದೆ. ಆತುರದ ತೀರ್ಮಾನ ಹಾಗೂ ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದಿರಿ. ಕೊಟ್ಟ ಸಾಲ ಮರಳಿಬರಹುದು. ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ, ಜಾಗರೂಕರಾಗಿರಿ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ಶಿವನ ಅನುಗ್ರಹಕ್ಕೆ ಪಾತ್ರರಾಗಿ.

ಮೀನ: ಪುಣ್ಯಸ್ಥಳಗಳ ದರ್ಶನ ಭಾಗ್ಯ ಸಿಗಲಿದೆ. ನಿಮ್ಮ ಬಗ್ಗೆ ಇಲ್ಲಸಲ್ಲದ‌ ಗುಮಾನಿಗಳು ಎಲ್ಲೆಡೆ ಹರಡಬಹುದು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಕಳೆದುಕೊಳ್ಳಬೇಕಾಗಬಹುದು. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು.

ಲೋಹಿತಶರ್ಮಾ, ಇಡುವಾಣಿ

ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ