Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ
ಮಾರ್ಚ್ ೨೪, ೨೦೨೬ ರ ನಿತ್ಯ ಭವಿಷ್ಯ: ಇಂದು ಕೆಲವು ರಾಶಿಯವರಿಗೆ ಸಣ್ಣ ತಪ್ಪುಗಳೂ ದೊಡ್ಡ ಪರಿಣಾಮ ಬೀರಬಹುದು. ಎಲ್ಲಾ ೧೨ ರಾಶಿಗಳ ದಿನ ಭವಿಷ್ಯ, ಗ್ರಹಗಳ ಸ್ಥಾನ, ಶುಭ-ಅಶುಭ ಕಾಲ, ಮತ್ತು ಅದೃಷ್ಟದ ಸಲಹೆಗಳನ್ನು ಇಲ್ಲಿ ಪರಿಶೀಲಿಸಿ. ನಿಮ್ಮ ಮುಂದಿನ ಹೆಜ್ಜೆಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಉತ್ತಮ ದಿನಕ್ಕಾಗಿ ಸಿದ್ಧರಾಗಿರಿ.

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಮಂಗಳವಾರ ಪ್ರಚೋದನೆ, ಉತ್ತಮರ ಸಂಗ, ಸಾಮಾಜಿಕ ಕಾರ್ಯಕ್ಕೆ ಯತ್ನ, ಪ್ರೋತ್ಸಹ, ಧಾರ್ಮಿಕ ಕಾರ್ಯ, ಅನ್ಯಾಯ, ಗೆಲುವಿನ ಸಂಭ್ರಮ ಇದೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ – 06 – 27 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:04, ಯಮಗಂಡ ಕಾಲ 09:29 – 10:59, ಗುಳಿಕ ಕಾಲ 12:31 – 14:02
ಮೇಷ ರಾಶಿ :
ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ ಬೇಸರ ತರಿಸಬಹುದು. ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗುತ್ತಿದ್ದಂತೆಲ್ಲ ಭಾಸವಾಗಿ, ಏನಾದರೂ ಹೊಸತನ್ನು ಮಾಡುವ ಆಸೆಯಾಗುವುದು ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.
ವೃಷಭ ರಾಶಿ :
ನಿಮ್ಮ ಉದ್ಯಮಕ್ಕೆ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾತಿಗೆ ಸಂಬಂಧಿಸಿದಂತೆ ದೋಷವು ನಿಮಗೆ ಕಾಣಲು ಸಿಗುವುದು. ಇಂದು ನಿಮಗೆ ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.
ಮಿಥುನ ರಾಶಿ :
ಕೆಲವು ಸೂಕ್ಷ್ಮ ವಿಚಾರವನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲವನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಆಪ್ತರ ಅಗಲಿಕೆಯನ್ನು ಸಹಿಸಲಾಗದು.
ಕರ್ಕಾಟಕ ರಾಶಿ :
ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಬೇಕಾದವರನ್ನು ದೂರ ಮಾಡಿಕೊಂಡು ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸದೇ ನಿಮ್ಮ ಕಾರ್ಯವನ್ನು ಮಾಡುವಿರಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ ಉಂಟಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಅಧಿಕ ಲಕ್ಷ್ಯ ಅವಶ್ಯಕ.
ಸಿಂಹ ರಾಶಿ :
ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ಸ್ಥಾಪಿಸಿ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ನಿಮಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ರೂಢಿಸಿಕೊಳ್ಳಿ.
ಕನ್ಯಾ ರಾಶಿ :
ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸಬೇಕಾಗುವುದು. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗುವುದು ಬೇಡ. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.
ತುಲಾ ರಾಶಿ :
ಶತ್ರುಗಳ ಬಗೆಗೆ ನಿಮಗೆ ಸರಿಯಾದ ಮಾಹಿತಿ ಇರದು. ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಪರರ ಜೀವನಕ್ಕೆ ಸಣ್ಣ ಉಪಕಾರವಾಗಲಿದೆ. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು.
ವೃಶ್ಚಿಕ ರಾಶಿ :
ಸಮಚಿತ್ತವು ನಿಮ್ಮ ದುಃಖದ ನಿವಾರಣೆಗೆ ಕಾರಣವಾಗುತ್ತದೆ. ದೊಡ್ಡ ಕನಸನ್ನು ಸಾಕಾರಗೊಳಿಸಲು ಸಣ್ಣ ಪ್ರಯತ್ನವಾದರೂ ಬೇಕು. ನಕಾರಾತ್ಮಕ ವಿಚಾರಗಳ ಕಡೆ ಗಮನ ಬೇಡ. ಆದಾಯ ಮೂಲದ ಬಗ್ಗೆ ಅಸಮಾಧಾನ ಬರಬಹುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಇದಕ್ಕೆ ಕಾರಣ ಹೊಸ ಉದ್ಯಮದ ಕಡೆ ಸೆಳೆತವು ಅತಿಯಾಗಿರುವುದು. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ.
ಧನು ರಾಶಿ :
ಮನಸ್ಸಿಗೆ ಬೇರೆ ಯಾವುದಾದರೂ ಕೆಲಸ ಕೊಡಿ. ಸಹೋದರರ ಬಗ್ಗೆ ನಿಮಗಿರುವ ಭಾವವು ಬದಲಾದೀತು. ಎಲ್ಲರ ಅನುಭವವನ್ನು ಕೇಳಿ ಸ್ವಂತ ನಿರ್ಧಾರಕ್ಕೆ ಬನ್ನಿ. ಕುಟುಂಬದ ಸಮಸ್ಯೆಗಳಿಂದಾಗಿ ನಿಮ್ಮ ಸಂಗಾತಿ ಇಂದು ಅಸಮಾಧಾನಗೊಳ್ಳಬಹುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಲಾರಿರಿ.
ಮಕರ ರಾಶಿ :
ನಿಮ್ಮ ಚುರುಕುತನದಿಂದ ಎಲ್ಲರನ್ನೂ ಎಚ್ಚರಿಸುವಿರಿ. ಶತ್ರುಪಕ್ಷದವರು ನಿಮ್ಮ ಪಕ್ಷಕ್ಕೆ ಬರುವ ಸಾಧ್ಯತೆ ಇದೆ. ಇದ್ದಕಿದ್ದಂತೆ ಅಭ್ಯಾಸದ ಕಡೆ ಸೆಳೆತ ಹೆಚ್ಚಾಗುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ನಿಮಗೆ ಬಂದರೆ ಪೂರ್ಣ ಸಮಾಧಾನ ಸಿಗದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಕಡಿಮೆ ವೆಚ್ಚವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.
ಕುಂಭ ರಾಶಿ :
ನೂತನ ಗೃಹನಿರ್ಮಾಣದ ಬಗ್ಗೆ ಚಿಂತನೆ ಆರಂಭ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಅಡ್ಡಗಾಲು ಹಾಕಿಯಾರು. ನಿಮ್ಮ ಇಚ್ಛೆಗಳು ಪೂರ್ಣವಾಗದೇ ಬೇಸರವಾಗಬಹುದು. ಪ್ರಭಾವಿಗಳ ಮನವನ್ನು ಸೋಲಿಸಿ ಅವರ ಬೆಂಬಲವನ್ನು ಪಡೆಯುವಿರಿ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನ ಮಾಡಿದ ಅಪವಾದ ಬರಬಹುದೆಂಬ ಭೀತಿ ನಿಮಗೆ ಕಾಡುವುದು.
ಮೀನ ರಾಶಿ :
ನಿವು ಮನೆ ಕೆಲಸವನ್ನು ಬೇಗ ಮುಗಿಸಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹೂಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಕೌಟುಂಬಿಕ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಇರುವುದು. ಎಲ್ಲದಕ್ಕೂ ಇಂದು ತಾಳ್ಮೆ ಅತ್ಯಂತ ಅವಶ್ಯಕ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು.
– ಲೋಹಿತ ಹೆಬ್ಬಾರ್ – 8762924271 (what’s app only)
