AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 03 October: ಇಂದು ಈ ರಾಶಿಯವರ ತಂಟೆಗೆ ಹೋಗಲೇ ಬೇಡಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಶುಕ್ರವಾರೆ ಅಸ್ಪಷ್ಟ ಮಾತು, ವ್ಯವಹಾರದ ನಿಯಂತ್ರಣ, ಕೃತಘ್ನತೆ, ವೇತನದ ಆಧಿಕ್ಯ, ನೌಕರರ ವಂಚನೆ, ವಿಳಂಬಕ್ಕೆ ಬೇಸರ ಇವೆಲ್ಲ ಇಂದಿನ ವಿಶೇಷ.

Horoscope Today 03 October: ಇಂದು ಈ ರಾಶಿಯವರ ತಂಟೆಗೆ ಹೋಗಲೇ ಬೇಡಿ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 03, 2025 | 12:10 AM

Share

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಆಯುಷ್ಮಾನ್, ಕರಣ : ಬವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 06 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:39 – 12:08, ಗುಳಿಕ ಕಾಲ 07:40 – 09:09, ಯಮಗಂಡ ಕಾಲ 15:08 – 16:37

ಮೇಷ ರಾಶಿ: ಇಂದಿನ ಅಮೂಲ್ಯ ಕ್ಷಣಗಳನ್ನು ನೀವು ತಪ್ಪಿಸಿಕೊಳ್ಳಬಹುದು.‌ ತೊಂದರೆಗೆ ನೀವೇ ಕಾರಣವೆಂದು ಪಶ್ಚಾತ್ತಾಪವಾದೀತು. ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಆತಂಕ ಇರುವುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹವು ಇರಲಿದೆ. ದಾಂಪತ್ಯದಲ್ಲಿ ನೀವು ಸಂತೋಷವಾಗಿರಲು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ.‌ ಅಯ್ಯೋ ಪಾಪ ಎನಿಸುವವರಿಗೆ ಕಿಂಚಿತ್ ಸಹಾಯವನ್ನೂ ಮಾಡುವಿರಿ. ಕುಟುಂಬವನ್ನು ಸಂತೋಷದಿಂದ ಇಡುವಿರಿ. ಅಸಪ್ತರನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಉದ್ಯಮಕ್ಕೆ ಸಂಬಂಧಿಸಿದಂತೆ ಆಪ್ತರ ನಡುವೆ ನಿಮ್ಮ ಸಮಾಲೋಚನೆಗಳು ನಡೆಸಿ. ಆಮದು ವ್ಯವಹಾರವನ್ನು ನಿಮ್ಮ ಹತೋಟಿ ತಂದುಕೊಳ್ಳಲು ಸಾಧ್ಯವಾಗುವುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾಗಬಹುದು. ನಿಮ್ಮ ಮಾತನ್ನು ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿ. ಮಾತು ಅಲ್ಪವಾಗಿದ್ದರೂ ಯೋಗ್ಯವಾದ ಮಾತುಗಳನ್ನು ಆಡುವಿರಿ.

ವೃಷಭ ರಾಶಿ: ಅಧಿಕಾರಿಗಳ ಒತ್ತಡವೇ ನಿಮ್ಮ ಉದ್ವೇಗಕ್ಕೆ ಕಾರಣವಾಗಲಿದೆ. ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗಬಹುದು. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ನಾನಾ ವಿಧವಾದ ಕಸರತ್ತು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸವನ್ನು ಮಾಡಲು ಕಷ್ಟವಾದೀತು. ಎಲ್ಲ ಕಾರ್ಯಗಳನ್ನೂ ಮುಗಿಸಿ ಆರಾಮಾಗಿ ಇರುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಹಲವಾರು ಅಭಿಪ್ರಾಯಗಳು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರುವುದು. ತಪ್ಪಿಲ್ಲದೇ ಹೆದರುವ ಅವಶ್ಯಕತೆ ಇರದು. ಇಂದಿನ‌ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಏಕಾಂತಕ್ಕೆ ತೆರಳುವಿರಿ. ಸ್ನೇಹಿತರು ಅವರಿಗೆ ಅರಿವಿಲ್ಲದೇ ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯಬಹುದು.‌ ನಿಮ್ಮ ಬಳಿ ಹಣವಿದ್ದರೂ ಇಂದು ನಿಮಗೆ ಬಳಕೆಗೆ ಬಾರದು. ಬೆಲೆ ಬಾಳುವ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ.

ಮಿಥುನ ರಾಶಿ: ದೊಡ್ಡ ಯೋಜನೆಯನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ದಿಢೀರ್ ಬರಲಿದೆ. ಅನೇಕ ವಿಚಾರಗಳ ಕಡೆ ನಿಮ್ಮ ಗಮನವಿರುವುದು. ಹಾಗಾಗಿ ಇಂದಿನ ಕಾರ್ಯವು ಸಫಲವಾಗದು. ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು. ನೀವು ಮಾಡಬೇಕಂದು ಹೊರಟ ಕೆಲಸದಲ್ಲಿ ಜಯ ಆಗಲಿದೆ. ಸ್ತ್ರೀರಿಂದ ನಿಮಗೆ ವೃತ್ತಿಯಲ್ಲಿ ಸಹಕಾರವು ಸಿಗಲಿದೆ. ಹೊಸ ಬಂಧುಗಳ ಪರಿಚಯವು ನಿಮಗಾಗುವುದು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಉಂಟಾಗಬಹುದು. ಚಮತ್ಕಾರದಂತೆ ಇಂದಿನ ಕೆಲಸವನ್ನು ಮಾಡುವಿರಿ. ಅವಿವಾಹಿತರು ವಿವಾಹ ಚಿಂತನೆಯನ್ನು ಮನೆಯಲ್ಲಿ ಪ್ರಸ್ತಾಪಿಸುವಿರಿ. ನೀವು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳಗಳಿಗೆ ಹೋಗುವಿರಿ. ನಿಮ್ಮ‌ ಮಾತುಗಳು ಅಹಂಕಾರದಂತೆ ತೋರಬಹುದು. ನಿಮಗೆ ನಿರ್ದಿಷ್ಟ ವೇತನವನ್ನು ಪಡೆಯುವ ಹಂಬಲವಿರುವುದು. ಕಾನೂನಾತ್ಮಕ ವಿಚಾರಕ್ಕೆ ನಿಮ್ಮ ಒತ್ತು ಹೆಚ್ಚಿರುವುದು. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ.

ಕರ್ಕಾಟಕ ರಾಶಿ: ಕೃತಘ್ನತೆಯಿಂದ ದುಃಖ. ಅನ್ವೇಷಣೆಯ ಮನಃಸ್ಥಿತಿಯವರಿಗೆ ಯಾವುದಾದರೂ ಮಾರ್ಗವು ಸಿಗುವುದು. ರಾಜಕೀಯ ಪರಿವರ್ತನೆಯು ನಿಮ್ಮಲ್ಲಿ ಅಚ್ಚರಿ ತಂದೀತು. ನೀವು ಇಂದು ನಿಮಗೆ ಮಾತ್ರ ಗೊತ್ತಿರುವ ಇನ್ನೊಬ್ಬರ ರಹಸ್ಯವನ್ನು ಹೇಳುವಿರಿ. ಬಾಡಿಗೆ ಮನೆಯವರಾಗಿದ್ದರೆ ಮನೆಯನ್ನು ಬದಲಿಸುವಿರಿ. ಭೂವ್ಯವಹಾರವನ್ನು ಮಾಡುವವರಿಗೆ ಹೆಚ್ಚು ಲಾಭವು ಸಿಗಲಿದೆ. ಮನೆಯ ನವೀಕರಣದ ಕಡೆ ಯೋಚನೆ ಮಾಡುವಿರಿ. ಕಡಿಮೆಯಾಗುತ್ತಿದ್ದ ಅನಾರೋಗ್ಯವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ಇಷ್ಟದವರು ನಿಮಗೆ ವಂಚನೆ ಮಾಡುವರು. ನಿಮ್ಮ ನೌಕರರು ನೀವು ಹೇಳಿದ ಕೆಲಸವನ್ನು ಸರಿಯಾಗಿ ಮಾಡದೇ ಇರಬಹುದು. ನಿಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ನಾಯಕರನ್ನು ಹಿಂಬಾಲಿಸುವ ಬದಲು ನೀವೇ ನಾಯಕರಾಗಬಹುದು. ನಿಮ್ಮ ಬಗ್ಗೆಯೇ ನಿಮಗೆ ಕೀಳು ಅರಿಮೆ ಉಂಡಾಗಬಹುದು. ದುರಸ್ತಿಗೆ ಮಾಡಿಸುವ ಕೆಲಸವು ಬೇಸರ ತರಿಸುವುದು. ಇಂದು ಬಿದ್ದ ಕನಸು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು.

ಸಿಂಹ ರಾಶಿ: ವೇತನದ ಭಡ್ತಿಯ ಸುದ್ದಿ ನಿಮಗೆ ಯಾರಿಂದಲೋ ಗೊತ್ತಾಗುವುದು. ಸಂಗಾತಿಯ ಮನೋಭಾವವನ್ನು ನೀವು ಅರ್ಥಮಾಡಿಕೊಳ್ಳಲಾರಿರಿ. ಅಧಿಕಾರ ಮತ್ತು ಸಂಪತ್ತು ಪ್ರದರ್ಶನಕ್ಕೆ ಅಲ್ಲ ಎಂಬುದು ತಿಳಿಯುವುದು. ತೀರಿಸಲಾಗದಷ್ಟು ಮಾಡಿದ ಸಾಲಬಾಧೆಯಿಂದ ನಿಮಗೆ ಬಹಳ ತೊಂದರೆ. ನಿಮಗೆ ಸಹಾಯವನ್ನು ಕೇಳಲು ಮುಜುಗರವಾದೀತು. ವ್ಯಾಪಾರದ ಸಲುವಾಗಿ ದೂರಪ್ರಯಾಣವನ್ನು ಮಾಡಬೇಕಾಗಬಹುದು. ನೀವಾಗಿಯೇ ಸ್ವಂತ ನಿರ್ಧಾರಕ್ಕೆ ಬರುವವರೆಗೆ ನಿಮಗೆ ಕಷ್ಟವಾಗುವುದು.‌ ಇಂದು ನೀವು ಒತ್ತಡ ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಬರುವುದು. ಸಂವಹನಕ್ಕಾಗಿ ಬಳಸುವ ವ್ಯಕ್ತಿಯಿಂದ ಆಪತ್ತು. ಆರೋಗ್ಯವನ್ನು ಗಟ್ಟಿಯಾಗಿಸಿಕೊಳ್ಳಲು ನೀವು ಪ್ರಯತ್ನಿಸಬೇಕು.‌ ಸಣ್ಣ ವಿಚಾರದಲ್ಲಿ ನಿಮಗೆ ಇನ್ನೊಬ್ಬರ ಜೊತೆ ಕಲಹವಾದೀತು. ಒಳ್ಳೆಯ ಸಮಯವನ್ನು ನೀವು ನಿರೀಕ್ಷಿಸುವಿರಿ. ಉಳಿತಾಯವನ್ನೂ ಖರ್ಚನ್ನು ಸಮಾನವಗಿ ಕಾಣುವುದು ಕಷ್ಟ. ಉದ್ಯಮದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸುವಿರಿ.

ಕನ್ಯಾ ರಾಶಿ: ಹೂಡಿಕೆಯನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸುವಿರಿ. ವ್ಯವಹಾರವನ್ನು ಹಾಗಿಯೇ ನೋಡುವುದುನ್ನು ಕಲಿಯಿರಿ. ಸಂಬಂಧಗಳು ಸಂಬಂಧಗಳಾಗಿಯೇ ಇರಲಿ. ಮಕ್ಕಳ ಅನಾರೋಗ್ಯದ ಕಾರಣ ಅವರ ಜೊತೆ ಇರಬೇಕಾಗುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ಪಾಲಕರಿಗೆ ಆತಂಕವಾಗುವುದು. ಸ್ನೇಹಿತರಿಂದ ಉಡುಗೊರೆಗಳು ಸಿಗಬಹುದು. ತಾಯಿಯ ಪ್ರೀತಿಯು ನಿಮಗೆ ಹೆಚ್ಚು ಸಿಗುವುದು. ಇಂದು ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ. ಚುಟುಕಾದ ಮಾತುಗಳಿಗೆ ವಿವರಣೆಯ ಅವಶ್ಯಕತೆ ಇದೆ. ನಿಮ್ಮ ನಡವಳಿಕೆಯಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಕಲಹವಾದಮೇಲೆ ಪಶ್ಚಾತ್ತಾಪಪಡುವಿರಿ‌. ಕೆಲವನ್ನು ನೀವು ಬಿಟ್ಟುಕೊಡುವುದೇ ಸೂಕ್ತ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿ ಸುಮ್ಮನಿರಿ. ನಿಮ್ಮ ಕಾರ್ಯದ ಸಫಲತೆಗೆ ಕಾರಣರಾದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮ್ಮ ಯೋಜನೆಯನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾದೀತು. ನಿಮಗೆ ಸಮ್ಮಾನಗಳು ಸಿಗುವ ಸಾಧ್ಯತೆ ಇದೆ. ಮಕ್ಕಳ ಜೊತೆ ಇಂದು ಕಾಲವನ್ನು ಕಳೆಯುವುದು ನಿಮಗೆ ಇಷ್ಟವಾದೀತು.

ತುಲಾ ರಾಶಿ: ಇಂದು ವಿದ್ಯೆಗಿಂತ ಹೆಚ್ಚಾಗಿ ಬುದ್ಧಿಯೇ ಪ್ರಯೋಜನವಾಗುವ ಕೆಲಸಕ್ಕೆ ಬರಲಿದೆ. ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ. ಪ್ರೇಮಪ್ರಕರಣವು ನಿಮಗೆ ದುಃಖವನ್ನು ಕೊಟ್ಟೀತು. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪವು ಬರಲಿದೆ. ಶತ್ರುಗಳೂ ನಿಮಗೆ ಉಪದೇಶ ಮಾಡುವರು. ಮಕ್ಕಳಿಗಾಗಿ ನೀವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಅನಾದರ ತೋರುವುರಿ. ಉನ್ನತ ಸ್ಥಾನಕ್ಕೆ ಉನ್ನತವಾದುದೇ ತ್ಯಾಗವಾಗಿರುತ್ತದೆ. ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯು ಇರಲಿದೆ. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮನ್ನು ನೀವು ಕುಗ್ಗಿಸಿಕೊಳ್ಳುವುದು ಬೇಡ. ಮಕ್ಕಳ ಬಗ್ಗೆ ಸ್ವಲ್ಪ ಅತಿಯಾದ ಕಾಳಜಿ ಬೇಕು. ಆರೋಗ್ಯವು ನಿಮಗೆ ವರವಾಗಿದ್ದರೂ ಅದು ಕೆಲವು ಸಮಯ ಶಾಪವಾಗಿಯೂ ಪರಿಣಮಿಸಬಹುದು. ನಿಮ್ಮವರನ್ನು ನೀವು ಮರೆಯುವಿರಿ. ಒಳ್ಳೆಯವರ ಸಹವಾಸವು ಸಿಗಬಹುದು.

ವೃಶ್ಚಿಕ ರಾಶಿ: ಸಹನೆಯ ಗರಿಷ್ಠ ಮಟ್ಟವನ್ನು ತಲುಪುವಿರಿ.‌ ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಮೋಸವಾಗಲಿದ್ದು, ಅದರಲ್ಲೂ ನಿಮ್ಮವರೇ ಅದನ್ನು ಮಾಡಿದ್ದು ಎಂಬ ವದಂತಿಯು ನಿಮಗೆ ಸಹಿಸಲು ಅಸಾಧ್ಯವಾದುದಾಗಿದೆ. ನಿಮ್ಮ ಸಣ್ಣ ವ್ಯಾಪಾರವೂ ಆದಾಯದ ಮೂಲವಾಗಬಹುದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗಲಿದೆ. ಯಾರಾದರೂ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಮಾತಿನ ನಿಯಂತ್ರಣವು ತಪ್ಪಿ‌ಹೋಗಲಿದೆ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ವಿಳಂಬಕ್ಕಾಗಿ ನೀವು ವ್ಯಥೆ ಪಡಬೇಕಾದೀತು. ಮನೆಯ ಸದಸ್ಯರಲ್ಲಿ ಹೆಚ್ಚು ಪ್ರಮುಖಸ್ಥಾನ ವಹಿಸುವಿರಿ. ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವನ್ನು ಪಡೆಯಿರಿ. ಬಂಧುಗಳು ನಿಮ್ಮ ಮನೆಗೆ ಬರಲಿದ್ದಾರೆ. ನಿದ್ರಾಹೀನತೆಯಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ಅನಪೇಕ್ಷಿತ ಖರ್ಚನ್ನು ಮಾಡಬೇಕಾದೀತು.

ಧನು ರಾಶಿ: ವಂಚಕರಿಗೆ ಅನಾಯಾಸವಾಗಿ ಬಲಿಯಾಗುವ ಸಾಧ್ಯತೆ ಇದೆ. ನೀವೇ ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಎಲ್ಲವೂ ವಿಧಿಯ ನಿಯಮದಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖವು ಹೆಚ್ಚಾಗುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನೀವು ನಿರಾಕರಿಸುವಿರಿ.‌ ನಿರ್ಭೀತಿಯು ನಿಮ್ಮ ಮಾರ್ಗವನ್ನು ತಪ್ಪಿಸಬಹುದು. ಸ್ಥಿರಾಸ್ತಿಗಳ ಬಗ್ಗೆ ವಿವಸದವಾಗುವುದು. ಪತ್ರ ವ್ಯವಹಾರದದಿಂದ ಗೌಪ್ಯತೆ ನಷ್ಟವಾಗುವುದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಪ್ರೇಮ ವ್ಯವಹಾರವನ್ನು ತಿಳಿಸಲು ನೀವು ಭಯಪಡುವಿರಿ. ವಾಹನ ಚಾಲನೆಯಲ್ಲಿ ನುರಿತವರಾದರೂ ಕಾಲವು ಅದಾವುದನ್ನೂ ಕೇಳದು.‌ ನಿಮ್ಮ ನೇರ ನುಡಿಗಳು ಇನ್ನೊಬ್ಬರಿಗೆ ನೋವನ್ನು ಕೊಟ್ಟೀತು. ಹೇಳಿಕೊಳ್ಳಲು ಯಾರಾದರೂ ಆಪ್ತರು ಬೇಕಾಗಬಹುದು. ಕೆಲವನ್ನು ಸುಮ್ಮನೇ ಮನಸ್ಸಿನಲ್ಲಿ ಅಂದುಕೊಂಡು ಕಾಲಹರಣ ಮಾಡುವಿರಿ.

ಮಕರ ರಾಶಿ: ಸಮಯದ ಅರಿವಿನೊಂದಿಗೆ ನಿಮ್ಮ ಮಾತಿರಲಿ. ಸಮಾನಮನಸ್ಕರು ಸೇರಿದಾಗ ಮಾತ್ರ ನಿಮ್ಮ ಕಾರ್ಯವು ಸಾಧುವಾಗುವುದು. ನೀವು ಎಲ್ಲದಕ್ಕೂ ಅನುಕೂಲ ಯೋಗವನ್ನು ನೋಡುತ್ತ ಕುಳಿತಿರಲು ಆಗದು. ನೀವು ಪಡೆದುಕೊಂಡ ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ನಿಮಗೆ ಶಂಕೆ ಉಂಟಾಗಬಹುದು. ಹಣದ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ. ವ್ಯವಹಾರದಲ್ಲಿ ಬಂಧುತ್ವವನ್ನು ನಿರೀಕ್ಷಿಸುವುದು ಆಗದು. ನಿಮಗೆ ಯಾರೋ ಹೇಳುವ ನಿಯಮಗಳು ಬಂಧದಂತೆ ಅನ್ನಿಸುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯವನ್ನು ಪಡೆಯುವಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ. ಸಂತೋಷದ ಕೊನೆಯಲ್ಲಿ ದುಃಖವಿರಲಿದೆ. ಇಬ್ಬರ ನಡುವಿನ ಶೀತಲ ಸಮರವು ತಿಳಿಯಾಗಬಹುದು. ನಿಮ್ಮದೇ ಆದ ಬಳಗವು ಇರಲಿದ್ದು ಅವರ ಜೊತೆ ಸಮಯವನ್ನು ಕಳೆಯುವಿರಿ. ಕೃತಕತೆಯನ್ನು ಹೆಚ್ಚು ಕಾಲ ಪ್ರದರ್ಶಿಸಲಾಗದು. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ‌.

ಕುಂಭ ರಾಶಿ: ಮಾಡಲೇಬೇಕಾದ ಕೆಲಸವು ಎಷ್ಟೇ ಆದರೂ ಸ್ಮರಣೆಗೆ ಬಾರದು. ಆಪ್ತರಿಂದ ನಿಮಗೆ ಪರೋಕ್ಷವಾಗಿ ನೋವು ಬರಬಹುದು. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಚಂದದಲ್ಲಿ ಹೊಗಳುವರು. ಪುಣ್ಯಸ್ಥಳಕ್ಕೆ ಹೋಗುವ ಮನಸ್ಸಾಗುವುದು. ಕುಟುಂಬ ನಿರ್ವಹಣೆಯನ್ನು ಒತ್ತಡದಿಂದ ನೀವು ಮಾಡಬೇಕಾದೀತು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಆರ್ಥಿಕ ವೃತ್ತಿಯನ್ನು ಇಷ್ಟ ಪಡುವವರು ಯಶಸ್ಸನ್ನು ಗಳಿಸುವರು. ನಿಮಗೆ ಎಷ್ಟೋ ವಿಚಾರವನ್ನು ಕಲಿಯಬೇಕು ಎಂಬ ಆಸೆಯು ಅತಿಯಾಗಲಿದೆ. ಪಾಲುದಾರರನ್ನು ಸೇರಿಸಿಕೊಳ್ಳುವಾಗ ಎಚ್ಚರಿಕೆ ಇರಲಿ. ಹೊಸ ಉದ್ಯೋಗಕ್ಕೆ ಪ್ರವೇಶ ಪಡೆಯುವಿರಿ. ನಿಮ್ಮ ಅನುಕೂಲವನ್ನು ನೋಡಿ ಖರ್ಚು ಮಾಡುವುದು ಉತ್ತಮ. ಯಾರಿಗಾದರೂ ನಿಮ್ಮ ವರ್ತನೆಯು ಇಷ್ಟವಾಗದೇ ಹೋಗಬಹುದು. ನಿಮಗೆ ಸೃಜನಾತ್ಮಕ ಕಾರ್ಯದಲ್ಲಿ ಆಸಕ್ತಿ ಹೆಚ್ಚು ಕಾಣಿಸುವುದು.

ಮೀನ ರಾಶಿ: ವ್ಯಕ್ತಿಗತ ವಿಶ್ವಾಸವು ನಿಮಗೆ ಧೈರ್ಯ ಕೊಡದು. ಸಂಸ್ಥೆಯ‌ ಮೇಲೆ ನಂಬಿಕೆ ಇಡಿ. ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ.‌ ನಿಮ್ಮ ಮಾನಸಿಕ ತೊಳಲಾಟಕ್ಕೆ ಪೂರ್ಣವಿರಾಮದ ಅವಶ್ಯಕತೆ ಇದ್ದು, ಸರಿಯಾದ ವ್ಯಕ್ತಿಯಿಂದ ಅದು ಸಾಧ್ಯವಾಗುವುದು. ಆಪ್ತರನ್ನು ದೂರ ಮಾಡಿಕೊಂಡು ಸಂಕಟಪಡಬೇಕಾದೀತು. ಧಾರ್ಮಿಕ ಕಾರ್ಯಗಳಿಗೆ ವಿದೇಶ ಗಮನ ಸಾಧ್ಯತೆ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಎದ್ದು ಕಾಣುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡಿ. ವಾಹನದ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರಲಿದೆ. ನಿಮ್ಮ ಅಧಿಕಾರ ಕಾರ್ಯಕ್ಕಾಗಿಯೇ ಹೊರತು ಅಧಿಕಾರಚಲಾವಣೆ ಮಾಡಲಾಗಿರದು. ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ. ತಾಳ್ಮೆಯಿಂದ ಇದ್ದಷ್ಟೂ ನಿಮಗೆ ಹೆಚ್ಚು ಲಾಭವು ಸಿಗಲಿದೆ. ಜಾಲತಾಣದಿಂದ ಅನೇಕರ ಸಂಪರ್ಕ ಸಾಧ್ಯತೆ. ಅತಿಯಾಗಿ ಯಾರನ್ನೂ ನಂಬುವುದು ಬೇಡ. ನೋವನ್ನು ನುಂಗಲು ಕಷ್ಟವಾದೀತು.‌

– ಲೋಹಿತ ಹೆಬ್ಬಾರ್ – 8762924271 (what’s app only)