AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 15 September : ಇಂದು ಈ ರಾಶಿಯವರೇ ಎಲ್ಲರಿಗೂ ಎದ್ದು ಕಾಣಿಸುಬರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ ಸೋಮವಾರ ಒಮ್ಮತಕ್ಕೆ ಅಡ್ಡಿ, ವಾಗ್ವಾದ, ಭಕ್ತಿ ಅಧಿಕ, ಅತಿಥಿ ಸತ್ಕಾರ, ಸ್ತ್ರೀಸಹವಾಸ, ಪ್ರೇಮದಲ್ಲಿ ತಪ್ಪು ಗ್ರಹಿಕೆ ಇವೆಲ್ಲ ಈ ದಿನದ ಭವಿಷ್ಯ.

Horoscope Today 15 September : ಇಂದು ಈ ರಾಶಿಯವರೇ ಎಲ್ಲರಿಗೂ ಎದ್ದು ಕಾಣಿಸುಬರು
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Sep 15, 2025 | 1:46 AM

Share

ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಷ್ಟಮೀ ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಧ್ರುವ, ಕರಣ : ಬವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:54 – 09:25, ಗುಳಿಕ ಕಾಲ 13:59 – 15:30, ಯಮಗಂಡ ಕಾಲ 10:56 – 12:28

ಮೇಷ ರಾಶಿ : :ಬಂಧುಗಳಿಂದ ವಸ್ತ್ರದ ಉಡುಗೊರೆ ಸಿಗಲಿದೆ. ನಿಮ್ಮನ್ನು ಯಾರೊಂದಿಗೆ ಹೋಲಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಸಂತೋಷವು ಇರುವುದು‌ ಇಂದು ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ವೃದ್ಧಿಯು ಕಾಣಿಸಿ ಸಮಾಧಾನವಾಗುವುದು. ಬಂಧುಗಳ ಕಾರಣದಿಂದ ನಿಮ್ಮ ಹಣವು ಖರ್ಚಾಗಬಹುದು. ನಿಮ್ಮ ಸ್ಥಿರಾಸ್ತಿಯ ದಾಖಲೆಗಳನ್ನು ಸರಿ ಮಾಡಿಕೊಳ್ಳಿ. ಶತ್ರುಗಳನ್ನು ಸೋಲಿಸುವ ಸಂಚು ಸಫಲವಾಗಬಹುದು. ಕಾರ್ಯವನ್ನು ಸಂಕೀರ್ಣಗೊಳಿಸದೇ ಸರಿಯಾದ ವಿಭಾಗವನ್ನು ಮಾಡಿಕೊಳ್ಳುವುದು ಉತ್ತಮ. ಮನೆಯಲ್ಲಿ ಕ್ರೌರ್ಯದಂತೆ ವರ್ತಿಸಿ, ಎಲ್ಲರಿಗೂ ಭಯವನ್ನು ತರಿಸುವಿರಿ. ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯದ ಚಿಂತೆ ಮಾಡುವಿರಿ. ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಕಷ್ಟಪಡುವಿರಿ. ವೈಯಕ್ತಿಕ ಕೆಲಸವು ಹಾಗೇ ಇರಲಿದ್ದು ನಿಮಗೆ ಆತಂಕವಾದೀತು. ನಿಮ್ಮ ಇಂದಿನ ಒತ್ತಡವನ್ನು ನೋಡಿ ಮಾತುಕೊಡಿ. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ. ನಿಮಗೆ ಆಗದೇ ಇರುವುದನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾರಿರಿ.

ವೃಷಭ ರಾಶಿ : :ಸಮಾಜ ಸೇವೆಗೆ ನಿಮ್ಮದೇ ಆದ ಸಮೂಹವು ನಿರ್ಮಾಣವಾಗಲಿದೆ. ನಿಮ್ಮ ಮನಸ್ಸಿಗೆ ಬಂದಿದ್ದನ್ನು ಯಾರು ಏನೇ ಅಂದರೂ ಬದಲಿಸಲಾರಿರಿ. ಇಂದು ನಿಮ್ಮ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ಆಲೋಚನೆಯನ್ನು ಮಾಡುವಿರಿ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಸಫಲರಾಗುವಿರಿ. ಏಕಪಕ್ಷೀಯ ನಿರ್ಧಾರವು ನಿಮ್ಮ ವಿರೋಧಿಗಳನ್ನು ಸೃಷ್ಟಿಸಿಕೊಳ್ಳಲು ಸಹಾಯವಾಗಲಿದೆ. ಆದಾಯದ ಹೆಚ್ಚಳಕ್ಕೆ ಸುಲಭೋಪಾಯವನ್ನು ಮಾಡುವಿರಿ. ವಿದೇಶಪ್ರಯಾಣದ ನಿರೀಕ್ಷೆಯಲ್ಲಿ ಇರುವಿರಿ‌. ಕುಟುಂಬದಲ್ಲಿ ಉಂಟಾದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಿರಿ. ಆಭರಣದ ವಿಚಾರದಲ್ಲಿ ವಂಚನೆ ಅನಂತರ ಗೊತ್ತಾಗಲಿದೆ. ಆಲಸ್ಯದಿಂದ ಮನೆಯಲ್ಲಿ ಬೈಯಿಸಿಕೊಳ್ಳುವಿರಿ. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಇಂದು ವಿಶ್ರಾಂತಿಯು ಹೆಚ್ಚು ಬೇಕೆನಿಸಬಹುದು.

ಮಿಥುನ ರಾಶಿ ::ಮನೆಯನ್ನು ಇಂದು ಬಣ್ಣದಿಂದ ಹೊಚ್ಚ ಹೊಸತನ್ನಾಗಿ ಮಾಡುವಿರಿ. ಸುಮ್ಮನಿದ್ದಾಗ ಕಳೆದ ಘಟನೆಗಳನ್ನೇ ಮತ್ತೆ ಮತ್ತೆ ನೆನಪುಮಾಡಿಕೊಳ್ಳುವಿರಿ. ನೀವು ಆರ್ಥಿಕವಾಗಿ ಸಬಲರಾಗುವತ್ತ ಗಮನವು ಇರುವುದು. ಉದ್ಯೋಗದಲ್ಲಿ ಉಂಟಾದ ಒತ್ತಡದಿಂದ ಕೆಲಸವನ್ನು ಬದಲಿಸಲು ಇಚ್ಛಿಸುವಿರಿ. ಸ್ವಂತ ಕಾರ್ಯದಲ್ಲಿ ಸಫಲತೆ ಸಂತೋಷಗಳನ್ನು ಕಾಣುವಿರಿ. ಸಿಕ್ಕ ಮೊದಲ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಶ್ರದ್ಧೆಯಿಂದ ಕೆಲಸವನ್ನು ಮಾಡುವಿರಿ. ಇಂದು ಪ್ರಶಾಂತವಾಗಿ ಇರಬೇಕು ಎಂದುಕೊಂಡರೂ ಅಸಾಧ್ಯವಾದೀತು. ಉನ್ನತ ಹುದ್ದೆಯನ್ನು ನೀವು ಅಪೇಕ್ಷಿಸುವಿರಿ. ಖಾಸಗಿ ಸಂಸ್ಥೆಯಲ್ಲಿ ಏನೇ ಹೇಳಿದರೂ ತಿರುಗಿ ಮಾತನಾಡದೇ ಮಾಡುವಿರಿ. ಹಣಕಾಸಿನ‌ ವಿಚಾರದಲ್ಲಿ ನೀವು ಯಾವ ಮುಲಾಜನ್ನು ಇಟ್ಟುಕೊಳ್ಳುವುದು ಬೇಡ. ಇಂದು ಬಹಳ ಆತುರದಲ್ಲಿ ಇರಲಿರುವಿರಿ. ಹಳೆಯ ವಸ್ತುವನ್ನೇ ದುರಸ್ತಿ ಮಾಡುತ್ತ ಬಳಸುವಿರಿ. ಉದ್ಯಮವನ್ನು ಬೇರೆ ರೀತಿಯಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಸಂಗಾತಿಯ ಮೇಲಿನ ಕೋಪವನ್ನು ಕಡಿಮೆ ಮಾಡಿಕೊಂಡರೆ ನಿರಾಳವಾಗಬಹುದು.

ಕರ್ಕಾಟಕ ರಾಶಿ : :ಶ್ರದ್ಧೆಯಿಂದ ಆರಂಭವಾದ ಕಾರ್ಯ ಕೊನೆಗೆ ತನ್ನ ದಿಕ್ಕನ್ನು ಬದಲಿಸಬಹುದು. ಇನ್ಮೊಬ್ಬರ ವಾಹನವನ್ನು ಚಲಾಯಿಸುವಾಗ ಭಯವಾಗುವುದು. ನಿಮ್ಮ ಸಾಮರ್ಥ್ಯದಿಂದ ಶತ್ರುಗಳ ಪೀಡಿಯು ಇಲ್ಲವಾಗುವುದು. ನಿರೋದ್ಯೋಗದಿಂದ ಬೇಸರಗೊಂಡ ನಿಮಗೆ ದೂರದ ಊರಿನಲ್ಲಿ ಕೆಲಸವು ಸಿಗಲಿದೆ. ಸಂದರ್ಭವನ್ನು ನೋಡಿಕೊಂಡು ಮಾತನಾಡುವುದು ಉಚಿತ. ಇಂದು ನಿಮ್ಮ ಕೆಲಸವನ್ನು ಬದಲಾಯಿಸಿಕೊಳ್ಳುವಿರಿ. ಸುತ್ತಿ ಬಳಸಿ ಕೊನೆಗೆ ನಿಮ್ಮಿಂದ ಹಣವನ್ನು ಪಡೆಯುವರು. ನಿಮ್ಮನ್ನು ನೀವೇ ಏನೋ ಅಂದುಕೊಂಡು ಬೀಗುವಿರಿ. ರಾಜಕೀಯ ಜೀವನವು ನಿಮಗೆ ಹಿಡಿದುಕೊಳ್ಳಲಾಗದ, ಬಿಡಲಾಗದ ಸ್ಥಿತಿಯನ್ನು ತಂದುಕೊಡುವುದು. ಹಣಕಾಸಿನ ಕೊರತೆಯನ್ನು ನೀವು ಮನೆಯವರಿಗೆ ಗೊತ್ತಾಗದಂತೆ ನಿಭಾಯಿಸುವಿರಿ. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸಬಹುಸು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಕೆಲವನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಸಿಂಹ ರಾಶಿ : :ಆರ್ಥಿಕವಾಗಿ ಯಾರಾದರೂ ಟೀಕಿಸದರೆ ಕೂಡಲೇ ಅಂತಹವರ ಸಹವಾಸ ಮಾಡದೇ ಹಠವನ್ನು ಬೆಳೆಸಿಕೊಳ್ಳುವಿರಿ. ಯಾರ ಜೀವನವನ್ನೂ ಸಣ್ಣದಾಗಿ ಕಾಣುವುದು ಬೇಡ. ನಿಮ್ಮ ವಿದ್ಯೆಗೆ ಉಪಯುಕ್ತವಾದ ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಮಕ್ಕಳು ನಿಮಗೆ ಆರ್ಥಿಕ ಸಹಾಯವನ್ನು ಮಾಡುವರು. ಅನಿರೀಕ್ಷಿತವಾದ ಮಿತ್ರನ ಭೇಟಿಯು ಸಂತೋಷವನ್ನು ಕೊಡಲಿದೆ. ಮಕ್ಕಳ ವಿವಾಹದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಬರಲಿದೆ. ಯಾವುದಕ್ಕೂ ಅವಸರಪಡದೇ ತಾಳ್ಮೆಯಿಂದ ಎಲ್ಲವನ್ನೂ ನಿರ್ವಹಿಸಿ. ಇಂದು ಮನೋರಂಜನೆಯ ಜೊತೆ ಕಾಲ ಕಳೆಯುವಿರಿ. ವ್ಯಾಪಾರವು ಮಂದಗತಿಯಲ್ಲಿ ಸಾಗಲಿದೆ. ಇಂದಿನ‌ ಅನುಭವವು ನಿಮಗೆ ಅನೇಕ‌ ಪಾಠವನ್ನು ಕಲಿಸುವುದು. ನೌಕರರಿಗೆ ನಿಮ್ಮಿಂದ ಖುಷಿಯಾಗಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಸಜ್ಜನರ ಭೇಟಿಯು ಅಕಸ್ಮಾತ್ ಆಗಿ ಆಗುವುದು.

ಕನ್ಯಾ ರಾಶಿ ::ಸಾಲ‌ ಮಾಡಿ ಶಿಕ್ಷಣವನ್ನು ಪಡೆಯಬೇಕಾಗುವುದು. ನಿಮ್ಮ ಇಂದಿನ ಮೌನವೂ ಇನ್ನೊಬ್ಬರಿಗೆ ಚಿಂತೆಯಾಗುವುದು. ನಿಮ್ಮ ಸುಳ್ಳು ಯಾರಿಂದಲಾದರೂ ತಿಳಿದುಬರುವುದು. ಇಂದು ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸಬಹುದು. ವಾಹನ ಖರೀದಿಯನ್ನು ಸಾಲ‌ಮಾಡಿ ಮಾಡುವಿರಿ.‌ ಇದು ನಿಮ್ಮ ಹೊಸ ಉದ್ಯಮಕ್ಕೆ ನಾಂದಿಯನ್ನು ಹಾಡಲಿದೆ. ವಿದ್ಯಾರ್ಥಿಗಳು ಓದುವ ವಿಚಾರದಲ್ಲಿ ಹಿಂಜರಿದರೂ ಪ್ರೋತ್ಸಾಹದಿಂದ ಅಭ್ಯಾಸವನ್ನು ಮಾಡುವರು. ಪ್ರೇಮದಲ್ಲಿ ಬಿದ್ದು ಸಿಕ್ಕಿಕೊಂಡು ಕಷ್ಟಪಡುವಿರಿ. ನಮಗೆ ನೀವೇ ಸೂಕ್ತವಾದ ಚೌಕಟ್ಟು ಹಾಕಿಕೊಂಡರೆ ಒಳ್ಳೆಯದು. ನೀವು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶುಭಸಮಾಚಾರದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸ್ವಂತ ಕೆಲಸಕ್ಕೆ ಉದ್ಯೋಗಿಗಳನ್ನು ಬಳಸಿಕೊಳ್ಳುವಿರಿ. ಆಕಸ್ಮಿಕ ಧನಾಗಮನವಾದರೂ ಮತ್ತಾವುದೋ ರೀತಿಯಲ್ಲಿ ಹೋಗುವುದು. ಬಗ್ಗೆಯೂ ಸುಮ್ಮನೆ ಆಡಿಕೊಳ್ಳುವುದು ಬೇಡ.

ತುಲಾ ರಾಶಿ : :ಪೂರ್ಣ ನಿಶ್ಚಯವಾದ ಸಂಗತಿಯನ್ನು ಮಾತ್ರ ಪ್ರಸಾರ ಮಾಡಿ. ಭೂಮಿಯ ಖರೀದಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೂ ಅದನದನು ನಿಮ್ಮದಾಗಿಸಿಕೊಳ್ಳುವುದು ಇಂದು ಕಷ್ಟ. ಇಂದು ನಿಮ್ಮ ಬೆಳವಣಿಗೆಗೆ ಪೂರಕವಾದ ಸಂದರ್ಭಗಳು ಬಂದರೂ ಅದನ್ನು ನಿರ್ಲಕ್ಷ್ಯ ಮಾಡುವಿರಿ. ಒಮ್ಮೆಲೆ ಬರುವ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಕಷ್ಟವಾಗುವುದು. ಆರ್ಥಿಕ ವ್ಯವಹಾರವನ್ನು ಮತ್ತೊಬ್ಬರ ಸಹಾಯದಿಂದ ಸರಿ ಮಾಡಿಕೊಳ್ಳುವಿರಿ. ಹಣಕ್ಕೆ ಆಸೆಪಟ್ಟು ಮೋಸಹೋಗಬಹುದು. ಸಂಗಾತಿಯ ಜೊತೆ ಸಮಯವನ್ನು ಇಂದು ಸಂತೋಷದಿಂದ ಕಳೆಯುವಿರಿ. ನಿಮ್ಮ ಜೀವನದ ಮೇಲೆ ನಿಮಗೆ ಹೆಮ್ಮೆ ಉಂಟಾಗಬಹುದು.‌ ಸೂಚನೆಯನ್ನು ಧಿಕ್ಕರಿಸಿ ಶಿಕ್ಷೆಯನ್ನು ಪಡೆಯುವಿರಿ. ಇಂದು ನಿಮಗೆ ಇಷ್ಟವಾದವರ ಜೊತೆ ಹರಟೆ ಹೊಡೆಯುವಿರಿ. ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಸಂಕಟಪಡುವಿರಿ. ಸಾಲದಿಂದ ನಿಮಗೆ ಕಿರಿಕಿರಿಯಾಗುವುದು. ನಿಮ್ಮ ಪೂರ್ಣ ಸಾಮರ್ಥ್ಯವನ್ನು ಇಂದು ತೋರಿಸಲಾರಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು.

ವೃಶ್ಚಿಕ ರಾಶಿ : :ಗಡುವು ಮುಗಿದಮೇಲೆ ನಿಮ್ನ ಕೆಲಸವು ಪ್ರಯೋಜನಕ್ಕೆ ಬಾರದು. ಯಾರನ್ನೂ ನೀವು ಹೀಗೆ ಎಂದು ಫಲಕವನ್ನು ಅಂಟಿಸಲು ಸಾಧ್ಯವಾಗದು. ಇಂದು ನಿಮಗೆ ಪಿತ್ರಾರ್ಜಿತ ಸಂಪತ್ತನ್ನು ಪಡೆಯುವ ಅವಕಾಶವಿರುವುದು. ಉದ್ಯೋಗವನ್ನು ಪಡೆಯುವ ಉತ್ಸಾಹದಿಂದ ಪ್ರಯಾಣ ಮಾಡುವಿರಿ. ಆದರೆ ಹತಾಶರಾಗುವಿರಿ. ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂಷಿಸುವರು. ಕೊನೆಯ ಹಂತಕ್ಕೆ ಬಂದಿರುವ ನಿಮ್ಮ ಕಾರ್ಯಗಳು ಕೆಡಬಹುದು. ಮನೆಯ ಕಾರ್ಯಗಳು ಇಂದು ಬಹಳ ಇರಲಿದೆ. ಹೂಡಿಕೆಯಿಂದ ಬಂದ ಹಣವು ನಿಮ್ಮ ತುರ್ತು ಸ್ಥಿತಿಗೆ ಸಹಾಯವಾಗುವುದು. ವಾಹನವನ್ನು ಖರೀದಿಸಲು ಬೇರೆ ಊರಿಗೆ ಹೋಗಬೇಕಾದೀತು. ಹೊಸ ಉದ್ಯಮವನ್ನು ಆರಂಭಿಸುವ ಯೋಜನೆಯನ್ನು ಆಪ್ತರಿಗೆ ಹೇಳಿ, ಸಹಾಯವನ್ನೂ ಬಯಸುವಿರಿ. ಸಾಲ ಮರುಪಾವತಿಯ ಆಗದೇ ಆತಂಕವಾಗಲಿದೆ. ಅಕ್ಕಪಕ್ಕದವರು ನಿಮ್ಮ ಸ್ಥಿತಿಯನ್ನು ಕಂಡು ಆಡಿಕೊಳ್ಳುವ ಸಾಧ್ಯತೆ ಇದೆ. ಅನಿವಾರ್ಯ ನಿರ್ಧಾರಗಳನ್ನು ತೆಗೆದುಕೊಂಡು ಅನಂತರ ಪಶ್ಚಾತ್ತಾಪ.

ಧನು ರಾಶಿ : :ವಾಕ್ಸಮರದಿಂದ ಯಾವುದೇ ಸದ್ವಿಕಾಸವಾಗದು. ನಿಮ್ಮ ಕಾರ್ಯವನ್ನು ಮಾಡಲು ಒಂದೊಂದೆ ಕಾರಣವನ್ನು ಹೇಳುವಿರಿ. ನಿಮ್ಮ ಇಂದಿನ ಎಲ್ಲ ಕಾರ್ಯಗಳಿಗೂ ಟೀಕೆಗಳು ಇರಲಿದ್ದು, ಅದನ್ನು ಮನಸ್ಸಿಗೆ ತಂದುಕೊಳ್ಳುವಿರಿ. ನಿಮ್ಮ‌ಕಾರ್ಯವನ್ನು ವೀಕ್ಷಿಸಿ ನಿಮಗೆ ಹೆಚ್ಚಿನ‌ ಬಡ್ತಿಯನ್ನು ಖಾಸಗಿ‌ ಸಂಸ್ಥೆ ಕೊಡಲಿದೆ. ಆರ್ಥಿಕ ಹಿನ್ನಡೆಯನ್ನು ನೀವು ಸುಧಾರಿಸಿಕೊಳ್ಳಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಇತರರಿಗೆ ಉದಾಹರಣೆಯಾಗಲಿದೆ. ಸಮಯಕ್ಕೆ ಕಾದಿದ್ದು‌ ಸಾರ್ಥಕ‌ ಎನಿಸಬಹುದು. ಮಾತಿನಲ್ಲಿ ಮೃದುತ್ವ ಇರಲಿ. ಭಾವನೆಗಳ ಜೊತೆ ತಮಾಷೆ ಮಾಡುವುದು ಇಷ್ಟವಾಗದು. ವೈಯಕ್ತಿಕ ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.‌ ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಿ ಕಾರ್ಯವನ್ನು ಸಾಧಿಸುವಿರಿ. ಕೆಲವು ದೋಷಗಳು ನಿಮಗೆ ನಗಣ್ಯವಾಗಲಿವೆ. ನಕಾರಾತ್ಮಕ ಮಾತುಗಳಿಗೆ ಸ್ಪಂದಿಸುವುದು ಬೇಡ. ಸ್ನೇಹಿತರನ್ನು ಕಳೆದುಕೊಳ್ಳುತ್ತೇನೆ‌ ಎಂಬ ಭಯವು ಕಾಡಬಹುದು. ಮನಸ್ಸಿನ ನೋವನ್ನು ನೀವೇ ಅನುಭವಿಸಿ ಕಡಿಮೆ‌ ಮಾಡಿಕೊಳ್ಳುವಿರಿ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು.

ಮಕರ ರಾಶಿ : :ನಿಮ್ಮ ವಿವಾದವು ಸರಿ ಎನಿಸುವಂತೆ ಮಾಡುವಿರಿ. ಸಮಯವು ಸದುಪಯೋಗವಾಗಬೇಕಾದರೆ ಅದರ ಬಗ್ಗೆ ಪೂರ್ಣ ಗಮನಕೊಟ್ಟು ಸರಿಮಾಡಿಕೊಳ್ಳಿ. ಇದರಿಂದ ನಿಮ್ಮ ಕಾರ್ಯದಲ್ಲಿ ವೇಗ ಅಧಿಕವಾಗುವುದು. ನಿಮಗೆ ಇಂದು ದಾನ ಕೊಡಬೇಕೆಂಬ ಮನಸ್ಸು ಬರುವುದು. ಉತ್ತಮವಾದ ವಸ್ತುವನ್ನು ಉತ್ತಮರಿಗೇ ಕೊಡಿ. ಉದ್ಯಮದಲ್ಲಿ ನಿಮ್ಮ ಚಿಂತನಾರಹಿತ ನಿರ್ಧಾರದಿಂದ‌ ನಿಮಗೆ ನಷ್ಟವಾಗಲಿದೆ.‌ ನಿಮ್ಮ ಎಲ್ಲ‌ ಯೋಜನೆಯೂ ಬುಡಮೇಲಾಗಬಹುದು. ಸಂಗಾತಿಗೆ ಪ್ರೀತಿಯನ್ನು ನೀಡಿ ಖುಷಿಪಡಿಸಿ. ಪೂರ್ವ ಯೋಜನೆಯನ್ನು ಮಾಡದೇ ವಿನಾಕಾರಣ ಹಣವನ್ನು ನಷ್ಟಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ. ಗೆಲವು ಪ್ರತಿಷ್ಠೆಗೆ ಕಾರಣವಾಗುವುದು. ನಿಮ್ಮ ವಸ್ತುಗಳು ಇನ್ನೊಬ್ಬರಿಂದ ಹಾಳಾಗಿದ್ದು ನಿಮಗೆ ಬಹಳ‌ ಬೇಸರವಾದೀತು.‌ ಕಛೇರಿಯಲ್ಲಿ ನಿಮಗೆ ಪ್ರಶಂಸೆ‌ಯು ಸಿಗಲಿದೆ. ಸರಳತೆಯನ್ನು ರೂಢಿಸಿಕೊಳ್ಳುವುದು ನಿಮಗೇ ಒಳ್ಳೆಯದು. ಅಸೂಯೆಪಟ್ಟರೆ ನಿಮ್ಮನ್ನೇ ನೀವು ಸುಟ್ಟಕೊಂಡಂತೆ.

ಕುಂಭ ರಾಶಿ : :ಕನಸುಗಳು ಸುಂದರವಾಗಿ ಇದ್ದರೂ ಅದನ್ನು ಸಾಧಿಸುವುದು ಸುಂದರವಾಗಿರದು. ನಿಮ್ಮ ದುಃಖವನ್ನೇ ಸರಿಮಾಡಿಕೊಳ್ಳದೇ ಇನ್ನೊಬ್ಬರ ಬಗ್ಗೆ ಕಾಳಜಿ ಅಧಿಕವಾಗುವುದು. ಇಂದು ನೀವು ವಹಿಸಿಕೊಟ್ಟ ಕಾರ್ಯವನ್ನು ಮಾಡಿದ್ದು ನಿಮಗೆ ಸಂತೋಷವಾಗಲಿದೆ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ‌ ಗುರಿಯನ್ನು ತಲುಪಲು ನಿಮಗೆ ಸದ್ಯಕ್ಕೆ ಅಸಾಧ್ಯ ಎನಿಸಬಹುದು. ಬಂಧುಗಳಿಂದ ಕಿರುಕುಳ ಹೆಚ್ಚಾದಂತೆ ಅನಿಸುವುದು. ಮೀತಿಮೀರುವುದರೊಳಗೆ ಬೇಕಾದುದನ್ನು ಮಾಡಿಕೊಳ್ಳಿ. ಫಲ ಬರುವತನಕ ನಿಮ್ಮ ಪ್ರಯತ್ನವಿರಲಿ. ನೀವು ವಿರೋಧವನ್ನು ಲೆಕ್ಕಿಸದೇ ಮುನ್ನುಗ್ಗಿ ಅಪಾಯವನ್ನು ತಂದುಕೊಳ್ಳುವಿರಿ. ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳು ಕಷ್ಟವಾದೀತು. ಇನ್ನೊಬ್ಬರ ಮಾತಿಗೂ ಬೆಲೆ ಮತ್ತು ಅವಕಾಶವನ್ನು ಮಾಡಿ‌ಕೊಡಿ. ಯಾವುದರ ಮೇಲೂ ಹೆಚ್ಚಿನ ನಿರೀಕ್ಷೆ ಬೇಡ. ಅಪರಿಚಿತರು ನಿಮ್ಮನ್ನು ಟೀಕಿಸಬಹುದು. ಸ್ನೇಹಿತರು ನಿಮ್ಮ ಉದ್ಯೋಗವನ್ನು ಬದಲಿಸಲು ಬಹಳ ಒತ್ತಾಯ ಮಾಡುವರು. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯದಲ್ಲಿ ಪ್ರಶಾಂತತೆಯ ಕೊರತೆ.

ಮೀನ ರಾಶಿ : :ಹಸಿವು ನಿಮ್ಮನ್ನು ಅತಿಯಾಗಿ ಬಾಧಿಸುವುದು.‌ ಚಿಕಿತ್ಸೆಗೆ ದಾಖಲಾಗುವಂತೆ ಮಾಡುವುದು. ನಿಮ್ಮ ಮನವನ್ನು ಒಲಿಸುವುದು ಕಷ್ಟ. ಯಾವುದೂ ನಿಮಗೆ ಸಮಾಧಾನ ಕೊಡದು. ನಿಮ್ಮ ವ್ಯಾಪಾರದ ವಿಸ್ತಾರದ ಬಗ್ಗೆ ಪಾಲುದಾರರ ಜೊತೆ ಮಾತನಾಡುವಿರಿ. ವಾಹನ ಚಾಲನೆಯಿಂದ ಅಪಘಾತ ಸಂಭವಿಸಬಹುದು. ನಕಾರಾತ್ಮಕತೆಯಿಂದ ಹೊರಬರುವುದು ಸುಲಭವಲ್ಲ. ನಿಮಗೆ ಇಂದು‌ ಮನೆಯಲ್ಲಿಯೇ ಇರಬೇಕಾದ ಸ್ಥಿತಿಯು ಬಂದಿರುವುದರಿಂದ‌ ಬಂಧನದಂತೆ ಅನ್ನಿಸಬಹುದು. ಹಣದ ವ್ಯವಹಾರವು ಸುಲಲಿತವಾಗಿ ಆಗಲಿದೆ. ಆಲಸ್ಯವನ್ನು ಬಿಟ್ಟು ಮತ್ತೆ ಹೇಗೋ ಬಂದು ಸೇರುವುದು. ಪ್ರತಿಭಾನ್ವಿತರಿಗೆ ಪ್ರೋತ್ಸಹವು ಸಿಗುವುದು. ಸಕಾಲಕ್ಕೆ ಸಿಗದ ಮಾಹಿತಿಯಿಂದ ಸೌಲಭ್ಯದಿಂದ‌ ವಂಚಿತರಾಗುವಿರಿ. ನಿಮ್ಮ ವಿವಾಹದ‌ ಮಾತು‌ಕತೆಗಳು ನಡೆಯಬಹುದು. ಇಂದು ನೀವು ಸವಾಲನ್ನು ಸ್ವೀಕರಿಸುವ ಮನಸ್ಸು ಇರಲಿದೆ. ನಿಮ್ಮ ಕಲಹದಿಂದ ಮತ್ತಾರೋ ಪ್ರಯೋಜನ ಪಡೆದಾರು. ಕೃಷಿ ಕ್ಷೇತ್ರದತ್ತ ನಿಮ್ಮ‌ ಚಿತ್ತವು ಇರಲಿದೆ. ಒತ್ತಾಯ ಪೂರ್ವಕವಾಗಿ ಯಾವುದನ್ನೂ ಮಾಡಿಸುವುದು ಬೇಡ.

– ಲೋಹಿತ ಹೆಬ್ಬಾರ್ – 8762924271 (what’s app only)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ