AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳನ ವೇಗ, ಆವೇಶ ನೋಡಿದ್ರೆ ಈ ರಾಶಿಯವರಿಗೆ ದೊಡ್ಡದಾಗಿ ಏನೋ ಕಾದಿದೆ

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಗವು ಜ್ಯೋತಿಷ್ಯದಲ್ಲಿ ಅಪರೂಪದ ಘಟನೆ. ಶಿಸ್ತುಬದ್ಧ ಶನಿ ಮತ್ತು ವೇಗದ ಮಂಗಳನ ಈ ಯುತಿಯು ಜಾಗತಿಕವಾಗಿ ನೈಸರ್ಗಿಕ ಬದಲಾವಣೆ, ರಾಜಕೀಯ ಅಸ್ಥಿರತೆ ತರಬಹುದು. ವೈಯಕ್ತಿಕವಾಗಿ ಆರ್ಥಿಕ ಸ್ಥಿರತೆ, ಧೈರ್ಯ ನೀಡಿದರೂ, ಮಾನಸಿಕ ದ್ವಂದ್ವ, ಅಪಘಾತದ ಭಯ, ಸಂಬಂಧಗಳಲ್ಲಿ ಬಿರುಕು ಉಂಟುಮಾಡಬಹುದು. ಸುಬ್ರಹ್ಮಣ್ಯ ಆರಾಧನೆ ಮತ್ತು ಶನಿವಾರದ ದೀಪಾರಾಧನೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಮಂಗಳನ ವೇಗ, ಆವೇಶ ನೋಡಿದ್ರೆ ಈ ರಾಶಿಯವರಿಗೆ ದೊಡ್ಡದಾಗಿ ಏನೋ ಕಾದಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Apr 01, 2026 | 5:55 PM

Share

ಮೀನ ರಾಶಿಯಲ್ಲಿ ಮಂಗಳ ಮತ್ತು ಶನಿಯರ ಸಂಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ದ್ವಂದ್ವ ಯುದ್ಧದಂತೆ ಭಾಸವಾಗುತ್ತದೆ. ಶನಿಯು ಶಿಸ್ತು, ನಿಧಾನಗತಿ ಮತ್ತು ಕರ್ಮದ ಸಂಕೇತವಾದರೆ, ಮಂಗಳನು ವೇಗ, ಆವೇಶ ಮತ್ತು ಶಕ್ತಿಯ ಪ್ರತೀಕ. ಈ ಎರಡು ಶಕ್ತಿಗಳು ಮೀನ ಎಂಬ ಜಲತತ್ವದ ರಾಶಿಯಲ್ಲಿ ಸಂಧಿಸಿದಾಗ ಉಂಟಾಗಲಿದೆ.

​ಜಾಗತಿಕ ಮತ್ತು ಸಾಮಾಜಿಕ ಪ್ರಭಾವಗಳು

​ಮೀನ ರಾಶಿಯು ಸಮುದ್ರ ಮತ್ತು ಜಲಮೂಲಗಳನ್ನು ಪ್ರತಿನಿಧಿಸುವುದರಿಂದ, ಈ ಯುತಿಯು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತದೆ.

​ನೈಸರ್ಗಿಕ ಬದಲಾವಣೆ: ಸಮುದ್ರದಲ್ಲಿ ಚಂಡಮಾರುತ, ಸುನಾಮಿ ಅಥವಾ ಅನಿರೀಕ್ಷಿತ ಮಳೆ ಹೆಚ್ಚಾಗಬಹುದು. ನೌಕಾಪಡೆ ಅಥವಾ ಜಲಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಅಡಚಣೆಗಳು ಎದುರಾಗಬಹುದು.

​ರಾಜಕೀಯ ಅಸ್ಥಿರತೆ: ಗಡಿ ವಿವಾದಗಳು ತಾರಕಕ್ಕೇರಬಹುದು. ವಿಶೇಷವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನ ದೇಶಗಳಲ್ಲಿ ಆಂತರಿಕ ಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.

​ಔಷಧೀಯ ಕ್ಷೇತ್ರ: ಹೊಸ ರೋಗಗಳ ಉಗಮ ಅಥವಾ ಇರುವ ರೋಗಗಳಿಗೆ ಹೊಸ ಔಷಧಗಳ ಸಂಶೋಧನೆಯಲ್ಲಿ ಈ ಗ್ರಹಗತಿಗಳು ವೇಗ ನೀಡುತ್ತವೆ.

​​ಲಾಭದಾಯಕ ಸ್ಥಿತಿ

​ಆರ್ಥಿಕ ಸ್ಥಿರತೆ: ಇವರಿಗೆ ಅನಿರೀಕ್ಷಿತವಾಗಿ ಸಿಗಬೇಕಾದ ಹಣಕಾಸು ಸೌಲಭ್ಯಗಳು ದೊರೆಯಲಿವೆ. ಹಳೆಯ ಆಸ್ತಿ ವಿವಾದಗಳು ಇವರ ಪರವಾಗಿ ತೀರ್ಪು ಬರಬಹುದು.

​ಧೈರ್ಯ ಮತ್ತು ಸಾಹಸ: ಮಂಗಳನ ಪ್ರಭಾವದಿಂದ ಹೊಸ ಉದ್ಯಮ ಆರಂಭಿಸಲು ಬೇಕಾದ ಧೈರ್ಯ ಸಿಗುತ್ತದೆ, ಶನಿಯು ಅದಕ್ಕೆ ದೀರ್ಘಕಾಲದ ಭದ್ರತೆಯನ್ನು ನೀಡುತ್ತಾನೆ.

​ಸವಾಲಿನ ಸ್ಥಿತಿ

​ಮಾನಸಿಕ ದ್ವಂದ್ವ: ಮಾಡಬೇಕೋ ಬೇಡವೋ ಎಂಬ ಗೊಂದಲ ಇವರನ್ನು ಕಾಡಬಹುದು. ಶನಿಯು ತಡೆಹಿಡಿದರೆ ಮಂಗಳನು ತಳ್ಳುತ್ತಾನೆ, ಇದು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ.

​ಅಪಘಾತದ ಭಯ: ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಕಾಯಿಲೆಗಳು ಬಾಧಿಸಬಹುದು.

​ಸಂಬಂಧಗಳಲ್ಲಿ ಬಿರುಕು: ಕುಟುಂಬದಲ್ಲಿ ಹಿರಿಯರೊಂದಿಗೆ ವಾಗ್ವಾದ ಉಂಟಾಗಬಹುದು. ಮಾತಿನ ಮೇಲೆ ನಿಗಾ ಇಡುವುದು ಅನಿವಾರ್ಯ.

ವೃತ್ತಿ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ

​ಕಬ್ಬಿಣ ಮತ್ತು ಯಂತ್ರೋಪಕರಣ: ಈ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಜೊತೆಗೆ ಹೆಚ್ಚಿನ ಕೆಲಸದ ಒತ್ತಡವಿರುತ್ತದೆ.

​ರಿಯಲ್ ಎಸ್ಟೇಟ್: ಭೂಮಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಯಲ್ಲಿ ಕಾನೂನು ತೊಡಕುಗಳು ಎದುರಾಗಬಹುದು. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.

​ಷೇರು ಮಾರುಕಟ್ಟೆ: ಪೆಟ್ರೋಲಿಯಂ, ರಾಸಾಯನಿಕ ಮತ್ತು ರಕ್ಷಣಾ ವಲಯದ ಷೇರುಗಳಲ್ಲಿ ಏರಿಳಿತ ಕಂಡುಬರಬಹುದು.

​ಆಧ್ಯಾತ್ಮಿಕ ಮತ್ತು ಮಾನಸಿಕ ಪರಿಣಾಮ

​ಮೀನ ರಾಶಿಯು ಆಧ್ಯಾತ್ಮದ ನೆಲೆ. ಇಲ್ಲಿ ಈ ಎರಡು ಪಾಪ ಗ್ರಹಗಳ ಭೇಟಿಯು ವ್ಯಕ್ತಿಯಲ್ಲಿ ವೈರಾಗ್ಯ ಅಥವಾ ತೀವ್ರ ಜಿಜ್ಞಾಸೆಯನ್ನು ಹುಟ್ಟಿಸುತ್ತದೆ. ಕೆಟ್ಟ ಹವ್ಯಾಸಗಳಿಂದ ದೂರವಿರಲು ಇದು ಸುಸಮಯ. ಧ್ಯಾನ ಮತ್ತು ಪ್ರಾಣಾಯಾಮದ ಮೂಲಕ ಮಂಗಳನ ಆವೇಶವನ್ನು ಶಾಂತಗೊಳಿಸಿ ಶನಿಯ ಸ್ಥಿರತೆಯನ್ನು ಪಡೆಯಬಹುದು.

​ಪರಿಣಾಮಕಾರಿ ಪರಿಹಾರಗಳು ​ಸುಬ್ರಹ್ಮಣ್ಯ ಆರಾಧನೆ: ಮಂಗಳನ ದೋಷ ನಿವಾರಣೆಗೆ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಅಥವಾ ಷಷ್ಠಿ ಪಾರಾಯಣ ಮಾಡುವುದು ಶ್ರೇಯಸ್ಕರ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಶುಭ ತರುತ್ತದೆ. ​ – ಲೋಹಿತ ಹೆಬ್ಬಾರ್

Published On - 5:30 pm, Wed, 1 April 26

Follow Us