AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಉದ್ಯೋಗ ಭವಿಷ್ಯ: ಹೊಸ ಉದ್ಯೋಗ ಸಂದರ್ಶನ, ಬಡ್ತಿ ಹಾಗೂ ಆದಾಯ ವೃದ್ಧಿಗೆ ಈ ವಾರ ಯಾವ ರಾಶಿಗೆ ಒಲಿಯಲಿದೆ ಅದೃಷ್ಟ?

ನವೆಂಬರ್ ಎರಡನೇ ವಾರದಲ್ಲಿ ಉದ್ಯೋಗ ಭವಿಷ್ಯವು ರಾಶಿಚಕ್ರದ ಪ್ರಕಾರ ಬದಲಾಗುತ್ತದೆ. ಹೊಸ ಯೋಜನೆಗಳು, ಆದಾಯ ಹೆಚ್ಚಳ, ಶತ್ರುಗಳ ಮೇಲೆ ಜಯ, ಸಂದರ್ಶನಗಳಲ್ಲಿ ಯಶಸ್ಸು ಮತ್ತು ವೃತ್ತಿಜೀವನದ ಪ್ರಗತಿ ಸಾಧ್ಯತೆಗಳಿವೆ. ಆದರೆ ಕೆಲ ರಾಶಿಗಳಿಗೆ ಒತ್ತಡ, ಅಡ್ಡಿ, ಆತುರ ಅಥವಾ ಅಸ್ಥಿರತೆಯ ಸವಾಲುಗಳೂ ಎದುರಾಗಬಹುದು. ಈ ವಾರದಲ್ಲಿ ಧೈರ್ಯದಿಂದ ಮುನ್ನಡೆಯುವುದು, ಸರಿಯಾದ ಸಲಹೆ ಸ್ವೀಕರಿಸುವುದು ಮತ್ತು ಜವಾಬ್ದಾರಿಯಿಂದ ವರ್ತಿಸುವುದು ಮುಖ್ಯ. ನಿಮ್ಮ ವೃತ್ತಿಜೀವನಕ್ಕೆ ಸರಿಯಾದ ಹೆಜ್ಜೆ ಇಡಲು ಜ್ಯೋತಿಷ್ಯದ ಮಾರ್ಗದರ್ಶನ ಪಡೆಯಿರಿ.

ವಾರದ ಉದ್ಯೋಗ ಭವಿಷ್ಯ: ಹೊಸ ಉದ್ಯೋಗ ಸಂದರ್ಶನ, ಬಡ್ತಿ ಹಾಗೂ ಆದಾಯ ವೃದ್ಧಿಗೆ ಈ ವಾರ ಯಾವ ರಾಶಿಗೆ ಒಲಿಯಲಿದೆ ಅದೃಷ್ಟ?
ಸಾಂದರ್ಭಿಕ ಚಿತ್ರ Image Credit source: Tv9 kannada
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 07, 2026 | 10:18 PM

Share

ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಆದಾಯ, ಶತ್ರುಕಾಟ, ಧೈರ್ಯದಿಂದ ಮುನ್ನಡೆ, ಆಹಾರದ ಉದ್ಯೋಗ, ನಾಯಕ ಸ್ಥಾನ, ನಿರೀಕ್ಷಿತ ಕಾರ್ಯಕ್ಕೆ ಅಡ್ಡಿ, ಸಲಹೆ ಸ್ವೀಕಾರ, ಉದ್ಯೋಗದ ಸಂದರ್ಶನ ಇವೆಲ್ಲ ಈ ವಾರದ ವಿಶೇಷ.

ಮೇಷ ರಾಶಿ : ಗುರು ಪಂಚಮದಲ್ಲಿರುವುದರಿಂದ ಹೊಸ ಯೋಜನೆ, ಕಲ್ಪನೆ ಮತ್ತು ಬೋಧನೆಯಲ್ಲಿ ಯಶಸ್ಸು. ಶನಿಯು ದ್ವಾದಶದಲ್ಲಿರುವುದರಿಂದ ತೆರೆಮರೆಯ ಕೆಲಸ ಹೆಚ್ಚು, ಮೇಲಧಿಕಾರಿಗಳ ಮೆಚ್ಚುಗೆ ತಡವಾಗಬಹುದು. ಮಂಗಳನು ಪಂಚಮಕ್ಕೆ ಬಂದು ಉತ್ಸಾಹ ಹೆಚ್ಚಿಸುತ್ತಾನೆ.

ವೃಷಭ ರಾಶಿ : ಶನಿಯು ಲಾಭದಲ್ಲಿ, ಸೂರ್ಯನು ಷಷ್ಠದಲ್ಲಿ ಇರುವುದರಿಂದ ಕೆಲಸದಲ್ಲಿ ಶತ್ರುಗಳು ಸೋಲುತ್ತಾರೆ, ಬಾಕಿ ಕೆಲಸ ಮುಗಿಯುತ್ತದೆ. ರಾಹು ದಶಮದಲ್ಲಿರುವುದರಿಂದ ಹೊಸ ಅವಕಾಶ ಅಥವಾ ಹುದ್ದೆ ಬದಲಾವಣೆಯ ಸಾಧ್ಯತೆ. ಸಂಬಳ ಅಥವಾ ಆದಾಯ ಹೆಚ್ಚಳದ ಮಾತುಕತೆಗೆ ವಾರಾಂತ್ಯ ಒಳ್ಳೆಯದು.

ಮಿಥುನ ರಾಶಿ : ಶನಿ ದಶಮದಲ್ಲಿರುವುದರಿಂದ ಜವಾಬ್ದಾರಿ ಮತ್ತು ಒತ್ತಡ ಹೆಚ್ಚು. ಆದರೆ ಶ್ರಮಕ್ಕೆ ಫಲ ಖಂಡಿತ ಸಿಗುತ್ತದೆ. ಮಂಗಳನು ತೃತೀಯದಲ್ಲಿ ಬಲಿಷ್ಠನಾಗಿ ಧೈರ್ಯದಿಂದ ಹೊಸ ಕೆಲಸ ಕೈಗೊಳ್ಳಲು ನೆರವಾಗುತ್ತಾನೆ. ಮಾರಾಟ ಮತ್ತು ಸಂವಹನ ಕ್ಷೇತ್ರದವರಿಗೆ ಅನುಕೂಲ.

ಕರ್ಕಾಟಕ ರಾಶಿ : ಮಂಗಳ ನಿಮ್ಮ ರಾಶಿಯಲ್ಲೇ ನೀಚನಾಗಿರುವುದರಿಂದ ಕೋಪ ಮತ್ತು ಆತುರ ತಪ್ಪಿಸಿ. ಗುರು ದ್ವಿತೀಯದಲ್ಲಿರುವುದರಿಂದ ಹಣಕಾಸು ಸ್ಥಿರ. ಬ್ಯಾಂಕಿಂಗ್, ಹಣಕಾಸು ಮತ್ತು ಆಹಾರ ಸಂಬಂಧಿತ ಉದ್ಯೋಗದವರಿಗೆ ಉತ್ತಮ.

ಸಿಂಹ ರಾಶಿ : ಗುರು, ಕೇತು ಮತ್ತು ಮಂಗಳ ಒಂದೇ ರಾಶಿಯಲ್ಲಿ ಸೇರುವುದರಿಂದ ಶಕ್ತಿ ಹೆಚ್ಚಿದರೂ ಗೊಂದಲವೂ ಇರುತ್ತದೆ. ನಾಯಕತ್ವದ ಅವಕಾಶ ಬರುತ್ತದೆ. ಆದರೆ ಅಹಂಕಾರ ಮತ್ತು ಆತುರ ತಪ್ಪಿಸಿ. ಶನಿ ಅಷ್ಟಮದಲ್ಲಿರುವುದರಿಂದ ದೊಡ್ಡ ಬದಲಾವಣೆಗಳನ್ನು ಮುಂದೂಡುವುದು ಲೇಸು.

ಕನ್ಯಾ ರಾಶಿ : ಗುರು ದ್ವಾದಶದಲ್ಲಿರುವುದರಿಂದ ವಿದೇಶ, ದೂರದ ಊರು ಅಥವಾ ಮೂಲಭೂತ ವ್ಯವಸ್ಥೆ ಕಷ್ಟವಾಗುವ ಕೆಲಸದ ಅವಕಾಶ ಸಾಧ್ಯ. ಖರ್ಚೂ ಹೆಚ್ಚು. ಶುಕ್ರನು ನಿಮ್ಮ ರಾಶಿಗೆ ಬರುವುದರಿಂದ ಸಂಬಂಧ ಮತ್ತು ಕೆಲಸದ ವಾತಾವರಣ ಸುಧಾರಿಸುತ್ತದೆ.

ತುಲಾ ರಾಶಿ : ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲಿ, ಗುರು ಲಾಭದಲ್ಲಿ, ಶನಿಯು ಷಷ್ಠದಲ್ಲಿ ಇರುವುದರಿಂದ ಸ್ಥಾನಮಾನ, ಮೆಚ್ಚುಗೆ ಮತ್ತು ಲಾಭ ಸಿಗುತ್ತದೆ. ಬುಧ ವಕ್ರಿಯಾಗಿರುವುದರಿಂದ ಹಳೆಯ ಅರ್ಧಂಬರ್ಧ ಕೆಲಸಗಳನ್ನು ಪೂರ್ಣಗೊಳಿಸಲು ಈ ವಾರ ಒಳ್ಳೆಯದು. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮೊದಲು ನಿಧಾನಿಸಿ.

ವೃಶ್ಚಿಕ ರಾಶಿ : ಗುರು ದಶಮದಲ್ಲಿರುವುದರಿಂದ ಹುದ್ದೆ ಏರಿಕೆ ಅಥವಾ ಹೊಸ ಜವಾಬ್ದಾರಿಯ ಸೂಚನೆ. ಸೂರ್ಯನು ದ್ವಾದಶದಲ್ಲಿರುವುದರಿಂದ ಅನಗತ್ಯ ಪ್ರಯಾಣ ಮತ್ತು ಖರ್ಚು ಆಗಬಹುದು. ವಾರದ ಅನಂತರ ಸೂರ್ಯ ನಿಮ್ಮ ರಾಶಿಗೆ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾನೆ.

ಧನು ರಾಶಿ : ಸೂರ್ಯ ಲಾಭದಲ್ಲಿ, ಗುರು ನವಮದಲ್ಲಿ ಇರುವುದರಿಂದ ಅದೃಷ್ಟ ಮತ್ತು ಹಿರಿಯರ ಬೆಂಬಲ ಸಿಗುತ್ತದೆ. ಉನ್ನತ ಶಿಕ್ಷಣ, ಕಾನೂನು, ಸಲಹೆಗಾರಿಕೆ ಕ್ಷೇತ್ರದವರಿಗೆ ವಿಶೇಷ ಲಾಭ. ಶನಿ ಚತುರ್ಥದಲ್ಲಿರುವುದರಿಂದ ಮನೆ ಮತ್ತು ಕೆಲಸದ ನಡುವೆ ಸಮತೋಲನ ಬೇಕು.

ಮಕರ ರಾಶಿ : ಸೂರ್ಯ ದಶಮದಲ್ಲಿ ಇರುವುದರಿಂದ ಅಧಿಕಾರಿಗಳ ಗಮನ ಮತ್ತು ಮೆಚ್ಚುಗೆ ಸಿಗುತ್ತದೆ. ಶನಿ ತೃತೀಯದಲ್ಲಿರುವುದರಿಂದ ಪರಿಶ್ರಮಕ್ಕೆ ಫಲ. ಮಂಗಳ ಮತ್ತು ಗುರು ಅಷ್ಟಮ ಪ್ರಭಾವದಲ್ಲಿರುವುದರಿಂದ ಅನಿರೀಕ್ಷಿತ ಅಡ್ಡಿ ಸಾಧ್ಯ, ಹೊಸ ಅಪಾಯಕಾರಿ ಹೂಡಿಕೆಯ ಹೆಜ್ಜೆ ಬೇಡ.

ಕುಂಭ ರಾಶಿ : ಗುರು ಸಪ್ತಮದಲ್ಲಿ ಇರುವುದರಿಂದ ಪಾಲುದಾರಿಕೆ, ಗ್ರಾಹಕರ ಸಂಬಂಧ ಮತ್ತು ತಂಡದ ಕೆಲಸದಲ್ಲಿ ಯಶಸ್ಸು. ರಾಹು ನಿಮ್ಮ ರಾಶಿಯಲ್ಲಿರುವುದರಿಂದ ಮನಸ್ಸು ಅಸ್ಥಿರವಾಗಬಹುದು. ಯಾವುದೇ ಒಪ್ಪಂದದ ಷರತ್ತುಗಳನ್ನು ಸ್ಪಷ್ಟವಾಗಿ ಓದಿ, ನಿರ್ಧರಿಸುವುದು ಶ್ರೇಯಸ್ಕರ.

ಮೀನ ರಾಶಿ : ಶನಿ ನಿಮ್ಮ ರಾಶಿಯಲ್ಲಿರುವುದರಿಂದ ಪ್ರಗತಿ ನಿಧಾನ, ಆದರೆ ಸ್ಥಿರವಾಗಿರಲಿದೆ. ಗುರು ಷಷ್ಠದಲ್ಲಿರುವುದರಿಂದ ಕೆಲಸದ ಸ್ಥಳದ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತವೆ. ಮಂಗಳನು ಷಷ್ಠಕ್ಕೆ ಬಂದು ಸ್ಪರ್ಧೆ ಮತ್ತು ಸಂದರ್ಶನಗಳಲ್ಲಿ ಬಲ ನೀಡುತ್ತಾನೆ.

-ಲೋಹಿತ್ ಹೆಬ್ಬಾರ್

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್