AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ನಡೆದ ದೀಪಾವಳಿ ಸ್ನೇಹ ಸಮ್ಮಿಲದಿಂದ ಸಿದ್ದರಾಮಯ್ಯ ದೂರ: ರಾಹುಲ್ ಗಾಂಧಿಯೇ ಆಹ್ವಾನಿಸಿದ್ರೂ ಹೋಗದ ಮಾಜಿ ಸಿಎಂ

ಮಾಜಿ ಸಿಎಂ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ತನಿಖೆಯಿಂದ ಅಸಮಾಧಾನಗೊಂಡಿದ್ದಾರೆ. ರಾಹುಲ್ ಗಾಂಧಿ ಆಹ್ವಾನಿಸಿದ್ದ ದೆಹಲಿ ದೀಪಾವಳಿ ಸ್ನೇಹ ಸಮ್ಮಿಲನಕ್ಕೆ ಗೈರು ಹಾಜರಾಗಿದ್ದಾರೆ. ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಅಹಿಂದ ಮತ ದೂರವಾಗುತ್ತಿವೆ ಎಂದು ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ದೀಪಾವಳಿ ಸ್ನೇಹ ಸಮ್ಮಿಲದಿಂದ ಸಿದ್ದರಾಮಯ್ಯ ದೂರ: ರಾಹುಲ್ ಗಾಂಧಿಯೇ ಆಹ್ವಾನಿಸಿದ್ರೂ ಹೋಗದ ಮಾಜಿ ಸಿಎಂ
ಸಿದ್ದರಾಮಯ್ಯ, ರಾಹುಲ್ ಗಾಂಧಿ
ಗಂಗಾಧರ​ ಬ. ಸಾಬೋಜಿ
|

Updated on: Nov 07, 2026 | 10:18 PM

Share

ಬೆಂಗಳೂರು, ನವೆಂಬರ್​​ 07: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಹೊತ್ತಿರುವ ಕಿಚ್ಚು ಇನ್ನೂ ತಣ್ಣಗಾಗಿಲ್ವಾ? ಏಕೆಂದರೆ ದೆಹಲಿಯಲ್ಲಿ ದೀಪಾವಳಿ ಸ್ನೇಹ ಸಮ್ಮಿಲನಕ್ಕೆ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಆಹ್ವಾನಿಸಿದ್ರೂ, ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಹೋಗಿಲ್ಲ. ಮತ್ತೊಂದೆಡೆ ಅಹಿಂದ ನಾಯಕರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.

ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದಾರಾ ಸಿದ್ದರಾಮಯ್ಯ? 

ಹೌದು, ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ತನಿಖಾ ವೈಖರಿಗೆ, ಸರ್ಕಾರ ನಡೆದುಕೊಂಡ ರೀತಿಗೆ ಸಿಟ್ಟಾಗಿದ್ದಾರೆ. ಈ ವಿಚಾರವನ್ನ ಖುದ್ದು ರಾಹುಲ್ ಗಾಂಧಿ ಮುಂದೆಯೂ ಹೇಳಿದ್ದಾರೆ. ಆದರೆ ಶುಕ್ರವಾರ ದೆಹಲಿಯಲ್ಲಿ ರಾಹುಲ್ ಗಾಂಧಿ ಆಯೋಜಿಸಿದ್ದ ದೀಪಾವಳಿ ಸ್ನೇಹ ಸಮ್ಮಿಲನದಿಂದ ಸಿದ್ದರಾಮಯ್ಯ ದೂರ ಉಳಿದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಪರೋಕ್ಷವಾಗಿ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದಾರಾ? ಅನ್ನೋ ಪ್ರಶ್ನೆ ಎದ್ದಿದೆ.

ಹೆಚ್​ಡಿಕೆ ಮನೆಯಲ್ಲೇ ಆರೋಪಿಯ ಮೊಬೈಲ್​ ನೆಟ್​ವರ್ಕ್​ ಪತ್ತೆಯಾಗಿದೆ ಎಂದ ಯತಿಂದ್ರ

ಈ ಮಧ್ಯೆ ಸಿದ್ದರಾಮಯ್ಯ ಪುತ್ರ ಯತಿಂದ್ರ ಇದೇ ವಿಚಾರವಾಗಿ ಮಾತನಾಡಿದ್ದು, ‘ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ದೆಹಲಿ ನಿವಾಸದಲ್ಲೇ ಸ್ಟಿಂಗ್ ವಿಡಿಯೋ ನೆಟ್ ವರ್ಕ್ ಪತ್ತೆಯಾಗಿದೆ. ಅದನ್ನೇ ಕಮಿಷನರ್ ಹೇಳಿದ್ದಾರೆ. ಸ್ಟಿಂಗ್ ವಿಡಿಯೋ ಮಾಡಿದವರು, ಅಪ್ಲೋಡ್ ಮಾಡಿದವರು ಸೇರಿದಂತೆ ಎಲ್ಲರೂ ಪ್ರಕರಣದಲ್ಲಿ ಸಿಕ್ಕಿಬೀಳ್ತಾರೆ, ಎಲ್ಲರ ಮೇಲೂ ಕ್ರಮ ಆಗುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ.

LIVE TV

ಅಹಿಂದ ಮತ ದೂರವಾಗುತ್ತಿವೆ ಎಂದ ರಾಜೇಂದ್ರ 

ಇನ್ನೊಂದೆಡೆ ಮಾಜಿ ಸಚಿವ ರಾಜಣ್ಣ ಪುತ್ರ ಪರಿಷತ್ ಸದಸ್ಯ ರಾಜೇಂದ್ರ ಮಾತನಾಡಿ, ‘ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಹಿಡಿದು, ಈಗ ನಡೆಸಿಕೊಳ್ಳುತ್ತಿರುವ ರೀತಿಯಿಂದಾಗೇ, ಅಹಿಂದ ಮತಗಳು ಕಾಂಗ್ರೆಸ್‌ನಿಂದ ದೂರ ಹೋಗುತ್ತಿವೆ. ಆದಷ್ಟು ಬೇಗ ಪಕ್ಷ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತೆ ನೋಡಬೇಕು. ಸಿದ್ದರಾಮಯ್ಯ ಅವರು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಬಂದಿದ್ದಾರೆ, ಮುಖ್ಯಮಂತ್ರಿಗಳು ಭೇಟಿ ಮಾಡಿದ್ದಾರೆ. ಪ್ರಸ್ತುತವಾಗಿ ಇನ್ನೂ ಏನೆಲ್ಲಾ ಬೆಳವಣಿಗೆ ಆಗುತ್ತೆ ಕಾದು ನೋಡೋಣ’ ಎಂದಿದ್ದಾರೆ.

ಇದನ್ನೂ ಓದಿ: ಛಲವಾದಿ ನಿವಾಸಕ್ಕೆ ಚಾಕು ಪಾರ್ಸೆಲ್: NSUI ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ; ಕಮಿಷನರ್​​ಗೆ ದೂರು

ಇದೆಲ್ಲವನ್ನೂ ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಹೆಚ್.ಸಿ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೂ ಪಕ್ಷದೊಳಗೆ ಚರ್ಚೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೈ ಪಾಳಯದಲ್ಲಿ ಇನ್ನೆಷ್ಟು ರಾಜಕೀಯ ಭೂಕಂಪನಗಳಾಗಲಿವೆ ಕಾದು ನೋಡಬೇಕಿದೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಗಂಗಾಧರ​ ಬ. ಸಾಬೋಜಿ
ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ