AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 26ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 26ರ ಸೋಮವಾರದ ದಿನ ಭವಿಷ್ಯ (numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 26ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
TV9 Web
| Updated By: Digi Tech Desk|

Updated on:Dec 26, 2022 | 10:21 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ (Numerology Prediction) ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 26ರ ಸೋಮವಾರದ ದಿನ ಭವಿಷ್ಯ (numerology daily horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Leo Health Horoscope 2023: ಮುಂದಿನ ವರ್ಷ ಸಿಂಹ ರಾಶಿಯವರ ಆರೋಗ್ಯ ಹೇಗಿರಲಿದೆ?

ಜನ್ಮಸಂಖ್ಯೆ 1

ರಕ್ತದೊತ್ತಡ ಸಮಸ್ಯೆ ಇರುವವರು ಕಡ್ಡಾಯವಾಗಿ ಔಷಧೋಪಚಾರದ ಕಡೆಗೆ ಗಮನ ನೀಡಿ. ವೈದ್ಯರ ಬದಲಾವಣೆ ಅಥವಾ ಆಹಾರಪಥ್ಯದಲ್ಲಿ ಬದಲಾವಣೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದ ಇರಬೇಕು. ತಂದೆ- ತಾಯಿಯ ಪ್ರಯಾಣ ಅಥವಾ ಆರೋಗ್ಯತಪಾಸಣೆಗೆ ಹಣ ಖರ್ಚು ಮಾಡಲಿದ್ದೀರಿ.

ಜನ್ಮಸಂಖ್ಯೆ 2

ಬ್ಯೂಟಿ ಪಾರ್ಲರ್ ನಡೆಸುವವರಿಗೆ ಸಾಲ ಬಾಧೆ ಕಾಡಲಿದೆ. ಪತ್ರಕರ್ತರಿಗೆ, ಕಲಾವಿದರಿಗೆ ಸಮಾಜದಲ್ಲಿ ಸನ್ಮಾನ ದೊರೆಯಲಿದೆ. ಹಿರಿಯ ಸಹೋದ್ಯೋಗಿಗಳಿಂದ ಅಮೂಲ್ಯವಾದ ಸಲಹೆ ದೊರೆಯಲಿದೆ. ಈ ಹಿಂದೆ ಹಣಕಾಸು ಹೂಡಿಕೆ ಮಾಡಿದ್ದಲ್ಲಿ ನಷ್ಟಅನುಭವಕ್ಕೆ ಬರಲಿದೆ.

ಜನ್ಮಸಂಖ್ಯೆ 3

ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ವಿಚಾರದಲ್ಲಿ ಹಿನ್ನಡೆ ಆಗಲಿದೆ. ಡೇರಿ ವ್ಯವಹಾರಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳಿವೆ. ಆದಾಯದ ಮೂಲದಲ್ಲಿ ಹೆಚ್ಚಳ ಆಗಲಿದ್ದು, ಮದುವೆ ಮತ್ತಿತರ ಶುಭಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ.

ಜನ್ಮಸಂಖ್ಯೆ 4

ಹೆಣ್ಣುಮಕ್ಕಳು ತವರುಮನೆಗೆ ಹೋಗುವ ಯೋಗ ಇದೆ. ಸೋದರ ಅಥವಾ ಸೋದರಿಯ ಆಹ್ವಾನದ ಮೇರೆಗೆ ನೀವು ತೆರಳಬಹುದು. ವೃತ್ತಿಪ್ರರರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಯೋಗ ಇದೆ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರು ಹೊಸಕಚೇರಿಗೆ ಬದಲಾವಣೆ ಮಾಡಲು ನಿರ್ಧಾರ ಕೈಗೊಳ್ಳುತ್ತೀರಿ.

ಜನ್ಮಸಂಖ್ಯೆ 5

ವೃತ್ತಿಪರರಿಗೆ ಬಹಳ ಗೊಂದಲ ಏರ್ಪಡಲಿದೆ. ಭವಿಷ್ಯದ ಯೋಜನೆಗಳ ಅನುಷ್ಠಾನವನ್ನು ಕೆಲ ಸಮಯ ಮುಂದಕ್ಕೆಹಾಕಿಕೊಳ್ಳಬೇಕಾಗುತ್ತದೆ. ದೇವತಾರಾಧನೆಗೆ ಆಹ್ವಾನ ಬರಲಿದೆ. ಬಂಧು- ಮಿತ್ರರನ್ನು ಭೇಟಿಯಾಗಿ, ತೀರ್ಥಕ್ಷೇತ್ರ ದರ್ಶನ ಮಾಡುವಬಗ್ಗೆ ಚರ್ಚೆ ನಡೆಸಲಿದ್ದೀರಿ.

ಜನ್ಮಸಂಖ್ಯೆ 6

ಲಾಭ- ನಷ್ಟದ ಲೆಕ್ಕ ಹಾಕಿಕೊಳ್ಳದೆ ಉತ್ತಮ ಉದ್ದೇಶದಿಂದ ಕೆಲವು ಕೆಲಸಗಳನ್ನು ಮಾಡಲಿದ್ದೀರಿ. ವಾಹನ ಖರೀದಿ- ಮಾರಾಟಮಾಡುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಮನೆಯಲ್ಲಿ ದೇವತಾರಾಧನೆ ಆಯೋಜಿಸುವ ಬಗ್ಗೆ ಆಲೋಚನೆ ಮಾಡುತ್ತೀರಿ. ಖರ್ಚಿನ ಪ್ರಮಾಣ ಹೆಚ್ಚಾಗಲಿದೆ.

ಜನ್ಮಸಂಖ್ಯೆ 7

ಸಂಗಾತಿಯ ಜವಾಬ್ದಾರಿಗಳ ಪೈಕಿ ಕೆಲವನ್ನು ನೀವು ಹಂಚಿಕೊಳ್ಳಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ನಡೆಸುತ್ತಿರುವವರಿಗೆ ಅಲ್ಪಪ್ರಗತಿ ಇದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಅನಿರೀಕ್ಷಿತವಾಗಿ ಧನಾಗಮದ ಯೋಗ ಇದ್ದು, ಅದು ಹಾಗೇ ಖರ್ಚು ಕೂಡ ಆಗಬಹುದು.

ಜನ್ಮಸಂಖ್ಯೆ 8

ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಪ್ರೇಮಿಗಳಿಗೆ ಜತೆಯಾಗಿ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಮಕ್ಕಳಮದುವೆಗೆ ಸಂಬಂಧ ಹುಡುಕುತ್ತಿದ್ದಲ್ಲಿ ಸೂಕ್ತ ವಧು ಅಥವಾ ವರ ದೊರೆಯಲಿದ್ದಾರೆ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಸಾಧ್ಯತೆಗಳಿವೆ.

ಜನ್ಮಸಂಖ್ಯೆ 9

ಗೃಹ ಬಳಕೆ ವಸ್ತು ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕೃಷಿಕರಿಗೆ ಸಾಲದ ಬಾಕಿ ಬರಬೇಕಿದ್ದಲ್ಲಿ ಆ ಬಗ್ಗೆ ಮಾಹಿತಿದೊರೆಯಲಿದೆ. ಕ್ರಿಯೇಟಿವ್ ರಂಗದಲ್ಲಿ ಇರುವವರಿಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ಆಹಾರ- ನೀರು ಸೇವನೆ ಬಗ್ಗೆಎಚ್ಚರಿಕೆಯಿಂದ ಇರಬೇಕು. ಲೇಖನ- ಎನ್‌.ಕೆ.ಸ್ವಾತಿ

Published On - 6:00 am, Mon, 26 December 22

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ