AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 21ರ ದಿನಭವಿಷ್ಯ

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 21ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 21ರ ದಿನಭವಿಷ್ಯ
ಸಂಖ್ಯಾಶಾಸ್ತ್ರImage Credit source: indianexpress.com
TV9 Web
| Edited By: |

Updated on: Jan 21, 2023 | 6:06 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 21ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Numerology Weekly Horoscope: ಸಂಖ್ಯಾಶಾಸ್ತ್ರ ಪ್ರಕಾರ ಜನವರಿ 15ರಿಂದ 21ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ತಂದೆ ಅಥವಾ ತಂದೆಗೆ ಸಮಾನರಾದವರು ಅಂದರೆ, ದೊಡ್ಡಪ್ಪ- ಚಿಕ್ಕಪ್ಪ, ಮಾವ ಇವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಈ ಹಿಂದೆ ನೀವು ಮಾಡಿದ್ದ ಹೂಡಿಕೆಗಳು ಅತ್ಯುತ್ತಮ ಲಾಭವನ್ನು ನೀಡುತ್ತವೆ. ಸೈಟು ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವುಗಳನ್ನು ಕಾಣುತ್ತೀರಿ. ಈ ದಿನ ದೂರದ ಬಂಧುಗಳು ಮನೆಗೆ ಬರಬಹುದು. ನಿಮ್ಮಿಂದ ಸಹಾಯ ಕೇಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಹೇಳುವ ವಿಚಾರಕ್ಕೆ ನಾನಾ ಬಣ್ಣ ಕಟ್ಟಿ ದುರಭಿಪ್ರಾಯ ಮೂಡಿಸಲಾಗುತ್ತದೆ. ಆಲಸ್ಯದಿಂದಲೋ ಅಸಡ್ಡೆಯಿಂದಲೋ ನೀವು ನಡೆದುಕೊಳ್ಳುವ ರೀತಿಗೆ ಸಮಸ್ಯೆ ತಂದುಕೊಳ್ಳುತ್ತೀರಿ. ಮನೆಯಲ್ಲಿ ನೆಮ್ಮದಿ ವಾತಾವರಣ, ಸಜ್ಜನರ ಸಹವಾಸ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳನ್ನು ಕಾಣಲಿದ್ದೀರಿ. ಒಟ್ಟಾರೆಯಾಗಿ ನೋಡಿದಾಗ ಮಿಶ್ರ ಫಲ ಕಾಣಲಿದ್ದೀರಿ. ವಿಷ್ಣುವಿನ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡದಿರಿ. ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ ಇರುತ್ತದೆ. ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು. ಇತರರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕಲು ಹೋಗಬೇಡಿ. ಒಂದು ವೇಳೆ ನೆರವು ಕೇಳಿ ಬಂದರೂ ಸನ್ನಿವೇಶವನ್ನು ಅಳೆದು- ತೂಗಿ ನಿರ್ಧಾರ ಕೈಗೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಣಕಾಸಿನ ಹರಿವಿಗೆ ಅಂಥ ದೊಡ್ಡ ಸಮಸ್ಯೆ ಏನೂ ಕಾಡುವುದಿಲ್ಲ. ಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ಆ ಮೂಲಕ ಕೆಲವು ಕಠಿಣವಾದ ಕೆಲಸ ಸಹ ಸಲೀಸಾಗಿ ಮಾಡಿ ಮುಗಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತದೆ. ವಿದೇಶಗಳಿಗೆ ವ್ಯಾಸಂಗಕ್ಕೆ ತೆರಳಬೇಕಾ ಅಥವಾ ಬೇಡವಾ ಎಂಬ ಗೊಂದಲದಲ್ಲಿ ಇರುವವರಿಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ಸಂಬಳ ಹೆಚ್ಚಳ, ಬಡ್ತಿ, ಹೊಸ ವ್ಯಾಪಾರದ ಆಲೋಚನೆಗಳು ಬರಲಿದೆ. ವ್ಯಾಪಾರವನ್ನು ಹೊಸದಾಗಿ ಆರಂಭಿಸಬೇಕು ಎಂದುಕೊಂಡವರಿಗೆ ಅನುಕೂಲಕರವಾದ ವೇದಿಕೆ ದೊರೆಯಲಿದೆ. ಪಾರ್ಟಿ ಅಥವಾ ಗೆಟ್ ಟು ಗೆದರ್ ಇಂಥದ್ದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟೂ ವದಂತಿಗಳಿಂದ ದೂರ ಇರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ವಾಕಿಂಗ್, ಜಾಗಿಂಗ್ ಮಾಡುವುದಕ್ಕೆ ಆಲಸ್ಯ ಮಾಡದಿರಿ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. ಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಹಾಗೇ ಮುಂದುವರಿಯಲಿದೆ. ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹಣಕಾಸಿನ ಹರಿವು ಚೆನ್ನಾಗಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅದು ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುತ್ತಾ ಬರುತ್ತಿರುವುದು ಅನುಭವಕ್ಕೆ ಬರಲಿದೆ. ದೊಡ್ಡ ಮಟ್ಟದ ಪ್ರಾಜೆಕ್ಟ್‌ಗಳಿಗೆ ಕೈ ಹಾಕುವುದಿದ್ದಲ್ಲಿ, ಸಾಲ ಮಾಡುವುದಿದ್ದಲ್ಲಿ ಸಾವಿರ ಬಾರಿ ಆಲೋಚನೆ ಮಾಡಿ. ನಿಮ್ಮಿಂದ ಸಾಧ್ಯ ಆಗುವಂಥದ್ದರ ಬಗ್ಗೆ ಮಾತ್ರ ಮಾತು ನೀಡಿ, ಇಲ್ಲದಿದ್ದರೆ ಮಾತು ತಪ್ಪುವಂತಾಗುತ್ತದೆ. ಸ್ನೇಹಿತರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಸವಾಲುಗಳನ್ನು ಮೀರಿ ನಿಲ್ಲುತ್ತೀರಿ. ಆದ್ಯತೆಗಳು, ಜೀವನಶೈಲಿ ಬದಲಾಗುತ್ತವೆ. ಸಾಲ ಇದ್ದಲ್ಲಿ ತೀರಿಸಿಕೊಳ್ಳುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜಾರಿಗೆ ತರಬೇಕು ಅಂದುಕೊಂಡಿದ್ದ ಹೊಸ ಹೊಸ ಯೋಜನೆಗಳನ್ನು ತರುತ್ತೀರಿ. ಈ ಹಿಂದೆ ನೀವು ನೀಡಿದ್ದ ಮಾತು- ಭರವಸೆಗಳ ಕಡೆಗೆ ಗಮನ ನೀಡಿ. ಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿ. ಮನೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ, ತರುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವಿನಾಕಾರಣ ಶತ್ರುತ್ವ ಬೆಳೆಯುವಂತೆ ಆಗುತ್ತದೆ. ವಾಹನಗಳು ಪದೇ ಪದೇ ರಿಪೇರಿಗೆ ಬರುತ್ತವೆ. ಸಾಧ್ಯವಾದಷ್ಟೂ ವಾಹನಗಳನ್ನು ಬೇರೆಯವರಿಗೆ ನೀಡದಿರಿ. ಅಥವಾ ನೀವೇ ಚಲಾಯಿಸುವಾಗ ಕೂಡ ಹೆಚ್ಚಿನ ನಿಗಾ ಮಾಡಿ. ದೇವರ ಮೇಲೆ ನಂಬಿಕೆ ಕಳೆದುಕೊಳ್ಳದಿರಿ ಹಾಗೂ ತಪ್ಪು ವಿಚಾರಗಳಿಗೆ ಮನಸ್ಸು ಕೊಡದಿರಿ. ಈ ದಿನ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಸಾಧ್ಯವಾಗದಿದ್ದಲ್ಲಿ ಮನೆಯಲ್ಲಿಯಾದರೂ ದೇವರ ಸ್ಮರಣೆ ಮಾಡಿ. ಲೇಖನ- ಎನ್‌.ಕೆ.ಸ್ವಾತಿ

Follow Us
TV9 Web
TV9 Web

TV9 Kannada

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ