AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಧನ್ವೀರ್ ಗೌಡ ವಿರುದ್ಧ ಮತ್ತೊಂದು ದೂರು ದಾಖಲು

ದರ್ಶನ್​​ ಪಿಎ ನಾಗರಾಜು ಈಗಾಗಲೇ ನಟ ಧನ್ವೀರ್ ಗೌಡ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ತಿಮ್ಮ ಗೌಡ ಸಹ ವಿಜಯಲಕ್ಷ್ಮಿ, ನಾಗರಾಜು ಸೇರಿದಂತೆ ಇನ್ನೂ ಇಬ್ಬರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ನಡುವೆ ಇದೀಗ ಧನ್ವೀರ್ ವಿರುದ್ಧ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.

ನಟ ಧನ್ವೀರ್ ಗೌಡ ವಿರುದ್ಧ ಮತ್ತೊಂದು ದೂರು ದಾಖಲು
Dhanveer Gowda
ಮಂಜುನಾಥ ಸಿ.
|

Updated on: Oct 24, 2026 | 4:19 PM

Share

ಮುಖ್ಯಾಂಶಗಳು

  • ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲು
  • ಬೋಜರಾಜು ಎಂಬುವರಿಂದ ಧನ್ವೀರ್ ವಿರುದ್ಧ ದೂರು
  • ಧನ್ವೀರ್ ಬೆದರಿಕೆ ಹಾಕಿರುವುದಾಗಿ ಆರೋಪ

ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಗೌಡ ಅವರ ಮುನಿಸು, ಜಟಾ-ಪಟಿಯಾಗಿ ಬದಲಾಗಿದೆ. ಈಗಾಗಲೇ ದರ್ಶನ್​​ ಪಿಎ ಹಾಗೂ ವಿಜಯಲಕ್ಷ್ಮಿ ಅವರಿಗೆ ಆಪ್ತವಾಗಿರುವ ಪಿಎ ನಾಗರಾಜು ಈಗಾಗಲೇ ನಟ ಧನ್ವೀರ್ ಗೌಡ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಧನ್ವೀರ್ ಅವರ ತಂದೆ ತಿಮ್ಮ ಗೌಡ ಸಹ ವಿಜಯಲಕ್ಷ್ಮಿ, ನಾಗರಾಜು ಸೇರಿದಂತೆ ಇನ್ನೂ ಇಬ್ಬರ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ನಡುವೆ ಇದೀಗ ಧನ್ವೀರ್ ವಿರುದ್ಧ ಮತ್ತೊಬ್ಬರು ದೂರು ದಾಖಲಿಸಿದ್ದಾರೆ.

ಧನ್ವೀರ್ ಗೌಡ ವಿರುದ್ಧ ಬೋಜರಾಜ್ ಎಂಬುವರು ದೂರು ದಾಖಲಿಸಿದ್ದು, ಧನ್ವೀರ್, ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಬೋಜರಾಜ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಸ್ನೇಹಿತ ನಾಗರಾಜು (ದರ್ಶನ್ ಪಿಎ) ಅಕ್ಟೋಬರ್ 21ರಂದು ಕರೆ ಮಾಡಿ ಧನ್ವೀರ್ ಮನೆಯ ಬಳಿ ಬರಲು ಹೇಳಿದ್ದರು. ಅದರಂತೆ ನಾನು ಹೋಗಿ ನಾಗರಾಜು ಅವರನ್ನು ಕರೆದುಕೊಂಡು ಹೋಗಿದ್ದೆ. ಆ ಬಳಿಕ ಧನ್ವೀರ್ ಅವರು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದು, ಲೊಕೇಶನ್ ಕಳಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಪದೇ ಪದೇ ಬೆದರಿಕೆ ಸಂದೇಶಗಳನ್ನು ವಾಟ್ಸ್​​ಆಪ್​​ನಲ್ಲಿ ಸಹ ಕಳಿಸಿದ್ದರು. ಅವರು ನನಗೆ ಕಳಿಸಿರುವ ಸಂದೇಶಗಳನ್ನು ನಾನು ಪೊಲೀಸರಿಗೆ ನೀಡಲು ತಯಾರಿದ್ದೇನೆ. ಹಾಗೆಯೇ ನಾನು ಅವರ ಮನೆ ಬಳಿ ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅವುಗಳನ್ನು ಧನ್ವೀರ್ ಹಾಗೂ ಅವರ ಕಡೆಯವರು ಅಳಿಸಿ ಹಾಕುವ ಸಂಭವ ಇದ್ದು, ಅವುಗಳನ್ನು ಕೂಡಲೇ ಪಡೆದುಕೊಂಡು ತನಿಖೆ ನಡೆಸಬೇಕೆಂದು ಬೋಜರಾಜ್ ಮನವಿ ಮಾಡಿದ್ದಾರೆ. ಬೋಜರಾಜ್ ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಿದ್ದು, ಪೊಲೀಸರು ಎನ್​​ಸಿಆರ್ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಧನ್ವೀರ್ ವಿರುದ್ಧ ಆರ್.ಆರ್. ನಗರ ಠಾಣೆಯಲ್ಲಿ ದೂರು: ದರ್ಶನ್ ಮ್ಯಾನೇಜರ್ ನಾಗರಾಜ್‌ ಗಂಭೀರ ಆರೋಪ

ಧನ್ವೀರ್ ಅವರ ತಂದೆ ತಿಮ್ಮ ಗೌಡ ನೀಡಿರುವ ದೂರಿನಲ್ಲಿಯೂ ಬೋಜರಾಜ್ ಅವರ ಉಲ್ಲೇಖವಿದ್ದು, ಅಕ್ಟೋಬರ್ 21 ರಂದು ವಿಜಯಲಕ್ಷ್ಮಿ ಹಾಗೂ ದರ್ಶನ್ ಪಿಎ ನಾಗರಾಜು, ಧನ್ವೀರ್ ಮನೆಗೆ ಹೋಗಿದ್ದಾಗ. ನಾಗರಾಜು ಅವರು ಲೋಕೇಶ್ ಎಂಬುವರಿಗೆ ಕರೆ ಮಾಡಿ ಕರೆಸಿಕೊಂಡ ಇಬ್ಬರಲ್ಲಿ ಬೋಜರಾಜ್ ಸಹ ಒಬ್ಬರು ಎನ್ನಲಾಗಿತ್ತು.

ಈ ಹಿಂದೆ ದರ್ಶನ್ ಪಿಎ ನಾಗರಾಜು, ಧನ್ವೀರ್ ಗೌಡ ತಮಗೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದು, ಕರೆ ಮಾಹಿತಿ, ಸಂದೇಶಗಳನ್ನು ಸಹ ಪೊಲೀಸರಿಗೆ ನೀಡಿದ್ದರು. ಅದರ ಬೆನ್ನಲ್ಲೆ ಈಗ ಬೋಜರಾಜ್ ಸಹ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ಧನ್ವೀರ್ ಅವರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಧನ್ವೀರ್ ಮತ್ತು ವಿಜಯಲಕ್ಷ್ಮಿ ದರ್ಶನ್ ನಡುವೆ ಮುನಿಸು ಉಂಟಾಗಿದ್ದು, ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಆ ಮುನಿಸಿನ ಪ್ರತಿಫಲವೇ ಈಗ ಎರಡೂ ಕಡೆಯವರು ಒಬ್ಬರ ಮೇಲೊಬ್ಬರು ದೂರುಗಳನ್ನು ದಾಖಲು ಮಾಡಿಕೊಂಡಿದ್ದಾರೆ. ಪೊಲೀಸರು ಯಾವ ರೀತಿ ಈ ಪ್ರಕರಣವನ್ನು ನಿಭಾಯಿಸುತ್ತಾರೆ, ಪೊಲೀಸರ ಮುಂದಿನ ನಡೆ ಏನಾಗಿರಲಿದೆ ಎಂಬ ಕುತೂಹಲ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್, ಕಳ್ಳಾಟಕ್ಕೆ ಬ್ರೇಕ್
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ
ಹಾಸನಾಂಬ ಜಾತ್ರೆ: ಸ್ಥಳೀಯರಿಗೆ ಪ್ರತ್ಯೇಕ ಕ್ಯೂಗೆ ಶಾಸಕ ಸ್ವರೂಪ್ ಒತ್ತಾಯ