Horoscope: ನಿತ್ಯಭವಿಷ್ಯ; ಈ ರಾಶಿಯವರು ಇಂದು ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ-ಎಚ್ಚರ
ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 29 ಮಾರ್ಚ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಮಾರ್ಚ್ 29) ರಾಶಿ ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಶುಕ್ರ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವಜ್ರ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 31 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:06 ರಿಂದ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:03 ರಿಂದ 09:34
ಮೇಷ ರಾಶಿ : ಇಂದು ನಿಮಗೆ ಯಾರ ಜೊತೆಯೂ ಸ್ಪರ್ಧಿಸಲು ಆಸಕ್ತಿ ಇರದು. ನೀವು ಹಣವನ್ನು ಕೂಡಿಡುವ ಕಡೆ ಮನಸ್ಸು ಮಾಡಿದರೆ, ಖರ್ಚಿನ ಕಡೆ ಅದು ಹೋಗುವುದು. ಇಂದು ನಿಮ್ಮ ಬಹುಕಾಲದಿಂದ ಬಾಕಿ ಉಳಿದಿದ್ದ ವಿವಾದ ಬಗೆಹರಿಯಲಿದೆ. ನಿಮ್ಮ ಹರ್ಷಚಿತ್ತದ ವ್ಯಕ್ತಿತ್ವದಿಂದಾಗಿ ಇತರ ಜನರು ನಿಮ್ಮೊಂದಿಗೆ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ನಿಮ್ಮ ಮನೆಗೆ ಇಂದು ಅತಿಥಿಗಳ ಅನಿರೀಕ್ಷಿತ ಆಗಮನವಾಗಬಹುದು. ವ್ಯಾಪಾರಸ್ಥರು ಯಾವುದಾರೂ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬಹುದು. ಇಂದಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅಗತ್ಯಕ್ಕಿಂತ ಹೆಚ್ಚು ಖರ್ಚು ಬೇಡ. ಪ್ರೀತಿಪಾತ್ರರು ನಿಮಗೆ ಬೇಕಾದ ಸಹಕಾರ ಮಾಡುವರು. ಆಗಿದಹೋದ ವಿಚಾರವನ್ನು ಸಂಗಾತಿಯ ಜೊತೆ ಚರ್ವಿತಚರ್ವಣ ಮಾಡುವಿರಿ. ನಿಮಗೆ ಆಗದವರನ್ನು ಎಂದಿಗೂ ಮಾತನಾಡಿಸಲಾರಿರಿ. ಹಗುರವಾದಷ್ಟು ತೂಕ ಹೆಚ್ಚಾಗುವುದು.
ವೃಷಭ ರಾಶಿ : ಇಂದು ನಿಮ್ಮ ಪ್ರೀತಿಪಾತ್ರರಿಂದಲೇ ಕಿರಿಕಿರಿಯಾಗಬಹುದು. ನಿಮ್ಮ ದಿನಚರಿಯಲ್ಲಿ ವ್ಯತ್ಯಾಸ ಆದ ಕಾರಣ ಎಲ್ಲವೂ ವ್ಯತ್ಯಾಸವಾಗಬಹುದು. ನೀವು ಮಿತವಾಗಿ, ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಖರ್ಚು ಮಾಡಬೇಕು. ನೀವು ಕುಟುಂಬ ಸದಸ್ಯರಿಂದ ಒತ್ತಡವನ್ನು ಎದುರಿಸಬಹುದು. ಹಣದ ಬಗ್ಗೆ ವಾದಗಳು ಇರಬಹುದು. ಬೇಡವೆಂಬ ವಿಷಯಕ್ಕೆ ಮನಸ್ಸು ಮತ್ತೆ ಮತ್ತೆ ಹೋಗುವುದು. ಅನೇಕ ವಿಚಾರಗಳ ಬಗ್ಗೆ ಒಟ್ಟಿಗೇ ಚಿಂತಿಸುವುದು ಕಷ್ಟವಾದೀತು. ಬಂಧುಗಳ ಆಗಮನದಿಂದ ಹೆಚ್ಚು ಸಂತೋಷವು ಇರುವುದು. ಉತ್ತಮ ವಿದ್ಯೆಯ ಕಾರಣ ಉತ್ತಮ ಆದಾಯದ ಕೆಲಸವೂ ಸಿಗಲಿದೆ. ಹೊಸತನ ಅನ್ವೇಷಣೆಯಲ್ಲಿ ನೀವು ಇರುವಿರಿ. ಬಂಧುಗಳ ವಿಚಾರದಲ್ಲಿ ನಿಮಗೆ ಪೂರ್ಣವಾದ ನಂಬಿಕೆ ಇರದು. ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕಾಗುವುದು.
ಮಿಥುನ ರಾಶಿ : ಇಂದು ನಿಮಗೆ ಕಾರ್ಯದ ಸ್ಥಳದಲ್ಲಿ ಸಂತೋಷವಿರುವುದು. ಉದ್ಯಮದ ಕ್ಷೇತ್ರಕ್ಕೆ ಅನುಭವಿಗಳನ್ನು ಸೇರಿಸಿಕೊಂಡು ಮುಂದುವರಿಯುವಿರಿ. ನೀವು ಇಂದಿನ ವ್ಯಾಪಾರದಲ್ಲಿ ಲಾಭವನ್ನೂ ಪಡೆಯುತ್ತೀರಿ. ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ನಿಮ್ಮ ಗೌರವ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ಪ್ರಯೋಜನಗಳಿವೆ. ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭಿಸುವ ನಿರ್ಧಾರಕ್ಕೆ ಬರಬಹುದು. ನಿಮ್ಮ ಬೆಳವಣಿಗೆಯು ನಿಮಗೆ ಸಮಾಧಾನ ತರದೇ ಇದ್ದೀತು. ವ್ಯಾಪಾರದಲ್ಲಿ ಇಂದಿನ ನಿಮ್ಮ ಬೆಳವಣಿಗೆಯು ನಿಮಗೆ ಅಚ್ಚರಿಯನ್ನು ತರಬಹುದು. ನಿಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನು ನೀವು ಕೇಳಲು ಸಂಕೋಚಪಡುವಿರಿ. ಅವಕಾಶವನ್ನು ಬಿಟ್ಟು ನೀವು ದೊಡ್ಡವರಾಗುವುದು ಬೇಡ. ಕೆಟ್ಟ ಮಾತುಗಳನ್ನು ಇನ್ನೊಬ್ಬರ ಬಗ್ಗೆ ತಪ್ಪಿ ಆಡುವಿರಿ. ಮಕ್ಕಳ ವರ್ತನೆಗಳು ನಿಮಗೆ ಹಿಡಿಸದೇ ಇರಬಹುದು.
ಕಟಕ ರಾಶಿ : ನಿಮಗೆ ಮನೋ ನಿಯಂತ್ರಣದ ಬಗ್ಗೆ ಪಾಠವನ್ನು ಪಡೆಯಬೇಕಾಗುವುದು. ಇದು ನಿಮ್ಮ ಇಂದಿನ ಅನೇಕ ಕಾರ್ಯಗಳಿಗೆ ಉಪಯುಕ್ತವಾಗುವುದು. ಪರೋಪಕಾರದ ಬಗ್ಗೆ ಆಸಕ್ತಿಯು ಮೂಡಬಹುದು. ಅದೃಷ್ಟದಿಂದಲೂ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಜಾಗರೂಕರಾಗಿರಿ. ನಿಮ್ಮ ಆಹಾರದ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ವ್ಯಾಯಾಮವನ್ನು ಮಾಡಿ. ನಿಮ್ಮ ಇಂದಿನ ಎಲ್ಲ ಕೆಲಸಗಳೂ ಬಹಳ ವಿಳಂಬವಾಗಿ ಆಗುವುದು. ನಿಮ್ಮನ್ನು ನಂಬಿದವರಿಗೆ ನೀವು ಮೋಸ ಮಾಡುವುದು ಬೇಡ. ನಿಮ್ಮ ಸಂಗಾತಿಯ ಮನಃಸ್ಥಿತಿಯು ಬದಲಾಗಿದ್ದು ನಿಮಗೆ ಸಮಸ್ಯೆಯಾಗುವುದು. ಕೆಲವನ್ನು ಬಿಟ್ಟುಕೊಡುವುದು ಅನಿವಾರ್ಯವಗಬಹುದು. ನೀವು ಜಾಣ್ಮೆಯಿಂದ ವರ್ತಿಸಬೇಕಾದೀತು. ಮನೆಯಿಂದ ದೂರ ಇರಬೇಕಾದೀತು. ಸಜ್ಜನರ ಸಹವಾಸವನ್ನು ಹೆಚ್ಚು ಇಷ್ಟಪಡುವಿರಿ.




