AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 19 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ
ರಾಶಿ ಭವಿಷ್ಯ
TV9 Web
| Edited By: |

Updated on: May 19, 2024 | 12:45 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ರಿಂದ 06:53ರ ವರೆಗೆ, ಯಮಘಂಡ ಕಾಲ 12:29 ರಿಂದ ಮಧ್ಯಾಹ್ನ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:17ರ ವರೆಗೆ.

ಧನು ರಾಶಿ: ನೀವು ಕುಟುಂಬದ ಸಮಸ್ಯೆಗಳನ್ನು ಕುಳಿತು ಮಾತನಾಡಬಹುದು. ಕೆಲವು ದುಃಖದ ಸುದ್ದಿಗಳು ಮನಸ್ಸನ್ನು ಹತಾಶೆಗೊಳಿಸಬಹುದು. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆದರೆ, ಸಮಾಧಾನವಿರಲಿದೆ. ವೃತ್ತಿಜೀವನದಲ್ಲಿ ಏರಿಳಿತಗಳು ಆಗಲಿವೆ. ಸಂಬಂಧಿಸಿದ ಯೋಜನೆಯಲ್ಲಿ ವಿಫಲವಾಗಿ ಮತ್ತೆ ಪ್ರಯತ್ನಿಸಬೇಕಾಗಬಹುದು. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಒಂಟಿಯಾಗಿ ಇರಬೇಕು ಎನಿಸಬಹುದು. ಸಹೋದರಿಯರ ನಡುವೆ ಮನಸ್ತಾಪವು ಬರುತ್ತದೆ. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ. ಪ್ರಶಂಸೆಯಿಂದ ಅಹಂಕಾರವು ಬರುವುದು. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ.

ಮಕರ ರಾಶಿ: ಇಂದು ನಿಮ್ಮ ಸಂಬಂಧವನ್ನು ಹೆಚ್ಚು ಆನಂದದಿಂದ ಇಟ್ಟುಕೊಳ್ಲಕುವಿರಿ. ಅಪಾಯಕಾರಿಯಾಗಿರುವ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಡಿ. ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ನಿಮ್ಮ ಮೇಲೆ ಹೊಸ ಜವಾಬ್ದಾರಿ ಬರುವುದರಿಂದ, ದಿನಚರಿಯು ಸ್ವಲ್ಪ ಒತ್ತಡದಿಂದ ಇರಲಿದೆ. ಹಿಂದಿನ ನಕಾರಾತ್ಮಕ ವಿಷಯಗಳು ವರ್ತಮಾನದ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಅಹಂಕಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ರಾಜಕೀಯ ವ್ಯಕ್ತಿಗಳಿಂದ ನಿಮಗೆ ಪ್ರೇರಣೆ ಸಿಗುವುದು. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ. ಅನವಶ್ಯಕವಾಗಿ ಆಡುವ ಮಾತುಗಳು ನಿಮ್ಮ ಮೇಲಿನ ಗೌರವವನ್ನು ಕಡಿಮೆ ಮಾಡಿಸೀತು.

ಕುಂಭ ರಾಶಿ: ಇಂದು ನೀವು ಮಾತನಾಡುವ ರೀತಿ ಜನರನ್ನು ಆಕರ್ಷಿಸಬಹುದು. ಸಂಬಂಧದ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವಿರಿ. ನಕಾರಾತ್ಮಕ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಡಿ ಮತ್ತು ವರ್ತಮಾನದಲ್ಲಿ ಬದುಕಲು ಕಲಿಯಬೇಕಿದೆ. ಇಂದು ಆರ್ಥಿಕ ವಿಷಯಗಳ ಬಗ್ಗೆ ಯೋಚಿಸುವ ಅವಶ್ಯಕತೆಯಿದೆ. ಮುಗ್ಗರಿಸಬೇಡಿ. ದಾಂಪತ್ಯದಲ್ಲಿ ಬಾಂಧವ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಇಂದು ಆದ ನಿದ್ರಾಭಂಗದಿಂದ‌ ದಿನವು ಸರಿಯಾಗದೇ ಹೋಗಬಹುದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು.

ಮೀನ ರಾಶಿ: ಇಂದು ನಿಮ್ಮನ್ನು ನೀವು ಆಶಾವಾದಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳುವಿರಿ. ಯಶಸ್ಸಿನ ದಾರಿಯನ್ನು ತೋರಿಸುತ್ತದೆ. ಕುಟುಂಬದ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ಕಳೆವ ಕ್ಷಣ ಸ್ಮರಣೀಯವಾಗಿರುತ್ತದೆ. ನಿಮ್ಮ ದೌರ್ಬಲ್ಯವು ಬಹಿರಂಗವಾಗಿಸಿಕೊಂಡು ಅವಮಾನವಾಗಲಿದೆ. ಸಹೋದರ ಸಹೋದರಿಯರ ಆರೋಗ್ಯದ ಬಗ್ಗೆ ಕಳವಳ ಉಂಟಾಗಬಹುದು. ವ್ಯಾಪಾರದಲ್ಲಿ ಪ್ರಗತಿಗೆ ಸರಿಯಾದ ಅವಕಾಶ ದೊರೆಯುತ್ತದೆ. ಪ್ರೇಮಾಕರ್ಷಣೆಯು ನಿಮ್ಮ ಗುರಿಯಿಂದ ನಿಮ್ಮನ್ನು ದೂರವಿಡಬಹುದು. ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಬೇಜವಾಬ್ದಾರಿತನದಿಂದ ನಿಮ್ಮ ಅಧಿಕಾರವನ್ನು ಕಳೆದುಕೊಳ್ಳಬೇಕಾಗುವುದು. ಅನಾರೋಗ್ಯದ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ಬಹಳ‌ ಪ್ರಯತ್ನದಿಂದ ಪಡೆಯುವಿರಿ.

ಲೋಹಿತ ಹೆಬ್ಬಾರ್-8762924271 (what’s app only)

Follow Us
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ