AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್ ಗುಪ್ತಾ ಅಂತಿಮ ದರ್ಶನದಲ್ಲಿ ನಕ್ಕು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಕೇಶ್ ರೋಷನ್

ಶನಿವಾರ (ಅಕ್ಟೋಬರ್ 31) ನಿಧನರಾದ ನಿರ್ದೇಶಕ ಸಂಜಯ್ ಗುಪ್ತಾ ಅವರ ಅಂತಿಮ ದರ್ಶನವನ್ನು ಪಡೆಯಲು ರಾಕೇಶ್ ರೋಷನ್ ಅವರು ಆಗಮಿಸಿದ್ದರು. ಈ ವೇಳೆ ಅವರು ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ರಾಕೇಶ್ ರೋಷನ್ ವಿರುದ್ಧ ಗರಂ ಆಗಿದ್ದಾರೆ.

ಸಂಜಯ್ ಗುಪ್ತಾ ಅಂತಿಮ ದರ್ಶನದಲ್ಲಿ ನಕ್ಕು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಕೇಶ್ ರೋಷನ್
Rakesh Roshan Image Credit source: Instagram/instantbollywood)
ಮದನ್​ ಕುಮಾರ್​
|

Updated on: Nov 01, 2026 | 1:01 PM

Share

ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಗುಪ್ತಾ ಅವರ ಅಕಾಲಿಕ ನಿಧನವು ಅವರ ಕುಟುಂಬಕ್ಕೆ ಮತ್ತು ಚಿತ್ರರಂಗದ ಆತ್ಮೀಯರಿಗೆ ತೀವ್ರ ಆಘಾತವನ್ನುಂಟುಮಾಡಿದೆ. ಪ್ರತಿಯೊಬ್ಬರೂ ಈ ದುಃಖದ ವಾತಾವರಣದಲ್ಲಿದ್ದಾಗ, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಟ ಹೃತಿಕ್ ರೋಷನ್ ಅವರ ತಂದೆ ಹಾಗೂ ಹಿರಿಯ ನಿರ್ಮಾಪಕ-ನಿರ್ದೇಶಕ ರಾಕೇಶ್ ರೋಷನ್ ಅವರು ಅಂತ್ಯಕ್ರಿಯಲ್ಲಿ ನಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಅವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.

ಸಂಜಯ್ ಗುಪ್ತಾ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಕೇಶ್ ರೋಷನ್ ಅವರು ಸಾಂತ್ವನ ಹೇಳಲು ಅವರ ನಿವಾಸಕ್ಕೆ ಆಗಮಿಸಿದ್ದರು. ಆದರೆ ಅಲ್ಲಿ ನೆರೆದಿದ್ದ ವೇಳೆಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಕಮೆಂಟ್ ಮಾಡಿದ ಅನೇಕರು ರಾಕೇಶ್ ರೋಷನ್ ಅವರ ವರ್ತನೆ ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಇನ್ಸ್ಟಂಟ್ ಬಾಲಿವುಡ್’ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, ಸಂಜಯ್ ಗುಪ್ತಾ ಅವರ ಅಗಲಿಕೆಯಿಂದ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದ ನಿರ್ದೇಶಕ ಮಿಲಾಪ್ ಝವೇರಿ ಅವರ ಪಕ್ಕದಲ್ಲೇ ರಾಕೇಶ್ ರೋಷನ್ ನಿಂತಿರುವುದು ಕಂಡುಬಂದಿದೆ. ಮಿಲಾಪ್ ತಮ್ಮ ಗುರುವನ್ನು ನೆನೆದು ಕಣ್ಣೀರಿಡುತ್ತಿದ್ದರೆ, ಇನ್ನೊಂದೆಡೆ ರಾಕೇಶ್ ರೋಷನ್ ಅವರು ಚಿತ್ರರಂಗದ ಮತ್ತೊಬ್ಬ ಹಿರಿಯ ವ್ಯಕ್ತಿಯೊಂದಿಗೆ ಮಾತಡುತ್ತಾ ನಗುತ್ತಿರುವುದು ಸೆರೆಯಾಗಿದೆ.

57ನೇ ವಯಸ್ಸಿನಲ್ಲಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ನಿಧನರಾದ ಸಂಜಯ್ ಗುಪ್ತಾ ಅವರ ಅಂತಿಮ ದರ್ಶನದ ವೇಳೆ ಈ ರೀತಿ ಅಸಂವೇದನಾಶೀಲವಾಗಿ ವರ್ತಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ರೋಷನ್ ವಿರುದ್ಧ ಕಠಿಣ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ‘ಒಬ್ಬ ಕಣ್ಣೀರಿಡುತ್ತಿದ್ದಾನೆ, ಇನ್ನೊಬ್ಬ ನಗುತ್ತಿದ್ದಾನೆ, ಎಂತಹ ಕಾಲ ಬಂತು’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಸಂಜಯ್ ಗುಪ್ತಾ ನಿಧನ: ‘ಕಾಬಿಲ್’ ಸಿನಿಮಾ ನೆನೆದು ಹೃತಿಕ್ ರೋಷನ್ ಶ್ರದ್ಧಾಂಜಲಿ

‘ಇದು ಸಾಂತ್ವನ ಹೇಳುವ ಜಾಗ. ನಗಲು ಇಲ್ಲಿಗೇಕೆ ಬಂದಿದ್ದೀರಿ’ ಎಂದು ರಾಕೇಶ್ ರೋಷನ್ ಅವರನ್ನು ಕಮೆಂಟ್ ಮೂಲಕ ಜನರು ಪ್ರಶ್ನಿಸಿದ್ದಾರೆ. ‘ಅಂತ್ಯಕ್ರಿಯೆಯ ವಾತಾವರಣದಲ್ಲಿ ಯಾರಾದರೂ ನಗುತ್ತಾರೆಯೇ? ಇದು ಕಾಮಿಡಿ ಶೋ ಅಂದುಕೊಂಡಿದ್ದಾರಾ? ಕಲಿಯುಗದ ಪರಮಾವಧಿ ಇದು’ ಎಂದು ಹಲವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More