AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪ -ಮಗನ ಸಂಯೋಗದಿಂದ ಈ ರಾಶಿಯವರಿಗೆ ಕಾದಿದೆ ಬಹುದೊಡ್ಡ ಕಂಟಕ

ಮಾರ್ಚ್ 2026 ರಲ್ಲಿ ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ಸಂಭವಿಸಲಿದೆ. ಈ ಶತ್ರು ಗ್ರಹಗಳ ಯುತಿಯು ವೃತ್ತಿ, ಸಂಬಂಧ, ಆರೋಗ್ಯದ ಮೇಲೆ ಮಿಶ್ರ ಪ್ರಭಾವ ಬೀರಲಿದೆ. ಮೀನ, ಕನ್ಯಾ, ಸಿಂಹ, ಕುಂಭ ರಾಶಿಗಳ ಮೇಲೆ ವಿಶೇಷ ಪರಿಣಾಮವಿರುತ್ತದೆ. ಸವಾಲುಗಳು ಮತ್ತು ಶುಭ ಫಲಗಳೆರಡೂ ನಿರೀಕ್ಷಿತ. ಈ ಸಂಯೋಗದ ಅಶುಭ ಪ್ರಭಾವ ತಗ್ಗಿಸಲು ಶನಿ ಚಾಲೀಸಾ ಪಠಣ, ಸೂರ್ಯ ನಮಸ್ಕಾರ, ಮತ್ತು ಶನಿವಾರ ಕಪ್ಪು ಎಳ್ಳು ದಾನದಂತಹ ಪರಿಹಾರಗಳನ್ನು ಅನುಸರಿಸಬಹುದು.

ಅಪ್ಪ -ಮಗನ ಸಂಯೋಗದಿಂದ ಈ ರಾಶಿಯವರಿಗೆ ಕಾದಿದೆ ಬಹುದೊಡ್ಡ ಕಂಟಕ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 23, 2026 | 4:48 PM

Share

ಮಾರ್ಚ್ 2026ರ ಈ ಅವಧಿಯಲ್ಲಿ ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯರ ಸಂಯೋಗ ಸಂಭವಿಸುತ್ತಿದೆ. ಕಾಲಜ್ಞಾನ ಶಾಸ್ತ್ರದ ಪ್ರಕಾರ ಸೂರ್ಯ ತಂದೆ ಮತ್ತು ಶನಿ ಮಗ. ಇಬ್ಬರೂ ಪರಸ್ಪರ ಶತ್ರು ಗ್ರಹಗಳು. ಈ ಇಬ್ಬರೂ ಒಂದೇ ರಾಶಿಯಲ್ಲಿದ್ದಾಗ ಸಂಘರ್ಷ, ಶಿಸ್ತು ಮತ್ತು ಪರಿವರ್ತನೆಯ ಕಾಲಘಟ್ಟ ನಿರ್ಮಾಣವಾಗುತ್ತದೆ.

​ಈ ಸಂಯೋಗದಿಂದ ಯಾವ ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ ಎಂಬ ವಿವರ ಇಲ್ಲಿದೆ.

​ಮೀನ ರಾಶಿ :

​ಈ ಸಂಯೋಗ ನಿಮ್ಮ ಸ್ವಂತ ರಾಶಿಯಲ್ಲೇ ನಡೆಯುತ್ತಿರುವುದರಿಂದ ನೀವು ಹೆಚ್ಚಿನ ಮಿಶ್ರಫಲ ಅನುಭವಿಸುವಿರಿ. ವೃತ್ತಿಜೀವನದಲ್ಲಿ ದೊಡ್ಡ ಜವಾಬ್ದಾರಿಗಳು ಅರಸಿ ಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಅನಗತ್ಯ ಭಯ ಮತ್ತು ಆರೋಗ್ಯದಲ್ಲಿ ಏರುಪೇರಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.

​ಕನ್ಯಾ ರಾಶಿ :

​ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಅಂದರೆ ಸಪ್ತಮ ಭಾವ ಈ ಯುತಿ ನಡೆಯುತ್ತಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳನ್ನು ಎದುರಿಸಬೇಕಾಗಬಹುದು.

ಸಿಂಹ ರಾಶಿ :

​ನಿಮ್ಮ ರಾಶ್ಯಾಧಿಪತಿ ಸೂರ್ಯ ಎಂಟನೇ ರಾಶಿಯಲ್ಲಿ ಶನಿಯೊಂದಿಗೆ ಇರುವುದರಿಂದ ಜಾಗರೂಕತೆ ಅಗತ್ಯ. ನಿಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಲಾಭವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದು ಸ್ವಲ್ಪ ಕಠಿಣ ಸಮಯ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

​ಕುಂಭ ರಾಶಿ :

​ನಿಮ್ಮ ರಾಶಿಯಿಂದ ಎರಡನೇ ರಾಶಿಯಲ್ಲಿ ಈ ಸಂಯೋಗ ಆಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಕುಟುಂಬದ ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನ ಹರಿವು ಇದ್ದರೂ ಉಳಿತಾಯ ಮಾಡುವುದು ಕಷ್ಟವಾಗಬಹುದು. ಮಾತಿನಿಂದಾಗಿ ಆಪ್ತರೊಂದಿಗೆ ಕಹಿಯಾದ ಸಂಬಂಧ ಉಂಟಾಗುವ ಸಾಧ್ಯತೆ ಇದೆ.

ಈ ಅವಧಿಯಲ್ಲಿ ಸೂರ್ಯ ಮತ್ತು ಶನಿಯ ಅಶುಭ ಪ್ರಭಾವ ತಗ್ಗಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ​ಶನಿ ಚಾಲೀಸಾ ಅಥವಾ ಹನುಮಾನ್ ಚಾಲೀಸಾ ಪಠಿಸುವುದು. ​ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಅರ್ಪಿಸುವುದು. ​ಶನಿವಾರದಂದು ಕಪ್ಪು ಎಳ್ಳನ್ನು ಸಂಕಲ್ಪ ಪೂರ್ವಕ ದಾನ ಮಾಡುವುದು.

– ಲೋಹಿತ ಹೆಬ್ಬಾರ್

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More