AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ರಾಶಿಯವರ ಜೀವನ ಕಷ್ಟಕಾರ್ಪಣ್ಯದಲ್ಲೇ ಇರುತ್ತದೆ; ಅಲಸ್ಯ ಬಿಟ್ಟು, ಶ್ರಮಜೀವಿಯಾದರೆ ಹೆಚ್ಚು ಸಾಫಲ್ಯತೆ ಕಾಣಬಹುದು

ಇದೆಲ್ಲದರ ಹೊರತಾಗಿಯೂ ಜೀವನದಲ್ಲಿ ಫಲ ಸಿಗಲಿಲ್ಲ ಅಂದ್ರೆ ಅದಕ್ಕೆ ಅನೇಕ ಕಾರಣಗಳು ಇರಬಹುದು. ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯ ಜನರಿಗೆ ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ. ಆದರೆ ಅವರಿಗೆ ಆರ್ಥಿಕ ಕೊರತೆಯೇನೂ ಎದುರಾಗುವುದಿಲ್ಲ. ಅಲಸ್ಯ ಬಿಟ್ಟು, ಶ್ರಮಜೀವಿಯಾದರೆ ಹೆಚ್ಚು ಸಾಫಲ್ಯತೆ ಕಾಣಬಹುದು. ಯಾರು ಆ ನಾಲ್ಕು ರಾಶಿಯವರು, ಇಲ್ಲಿದೆ ವಿವರ.

ಈ ನಾಲ್ಕು ರಾಶಿಯವರ ಜೀವನ ಕಷ್ಟಕಾರ್ಪಣ್ಯದಲ್ಲೇ ಇರುತ್ತದೆ; ಅಲಸ್ಯ ಬಿಟ್ಟು, ಶ್ರಮಜೀವಿಯಾದರೆ ಹೆಚ್ಚು ಸಾಫಲ್ಯತೆ ಕಾಣಬಹುದು
ವಾರ ಭವಿಷ್ಯ
TV9 Web
| Updated By: ಸಾಧು ಶ್ರೀನಾಥ್​|

Updated on: Aug 28, 2021 | 7:39 AM

Share

ಜೀವನ ಅಂದ ಮೇಲೆ ಸಂಘರ್ಷ ಮತ್ತು ಪರಿಶ್ರಮದಿಂದ ಕೂಡಿರುತ್ತದೆ. ಅದಿದ್ದರೇನೆ ಜೀವನದಲ್ಲಿ ಏನಾದರೂ ಸಾಧನೆಯಾಗುವುದು. ಕೆಲವರಂತೂ ತಮ್ಮ ಜೀವನದಲ್ಲಿ ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾರೆ. ಆರ್ಥಿಕವಾಗಿಯೂ ಕಷ್ಟ ಪಡುತ್ತಾರೆ. ಆದರೆ ಕೆಲವರು ಇರುತ್ತಾರೆ. ಸ್ವಲ್ಪವೂ ಜೀವನದಲ್ಲಿ ಕಷ್ಟಪಡದೇ ಎಲ್ಲವನ್ನೂ ಸಾಧಿಸುತ್ತಾರೆ.

ಜೀವನದಲ್ಲಿ ಜನ ಒಂದಲ್ಲ ಒಂದು ಸಂಘರ್ಷ ಎದುರಿಸುತ್ತಿರುತ್ತಾರೆ. ಸಾಕಷ್ಟು ಪರಿಶ್ರಮ ಪಡುತ್ತಿರುತ್ತಾರೆ. ಜೀವನದಲ್ಲಿ ಏಳುಬೀಳುಗಳನ್ನು ಕಾಣುತ್ತಾರೆ. ಇದರಿಂದ ಕೊನೆಗೆ ಜೀವನದಲ್ಲಿ ಪರಿಪೂರ್ಣತೆ ಕಾಣುತ್ತಾರೆ. ಅದರಲ್ಲಿ ಕೆಲವರು ಹೆಚ್ಚು ಪರಿಶ್ರಮಪಟ್ಟರೆ ಇನ್ನು ಕೆಲವರು ಹೆಚ್ಚಾಗಿ ಕಷ್ಟ ಪಡುವುದೇ ಇಲ್ಲ. ಜೀವನವನ್ನು ಹಾಗೇ ಕಳೆದುಬಿಡುತ್ತಾರೆ.

ಇದೆಲ್ಲದರ ಹೊರತಾಗಿಯೂ ಜೀವನದಲ್ಲಿ ಫಲ ಸಿಗಲಿಲ್ಲ ಅಂದ್ರೆ ಅದಕ್ಕೆ ಅನೇಕ ಕಾರಣಗಳು ಇರಬಹುದು. ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯ ಜನರಿಗೆ ಜೀವನದಲ್ಲಿ ಕಷ್ಟಪಡಬೇಕಾಗುತ್ತದೆ. ಆದರೆ ಅವರಿಗೆ ಆರ್ಥಿಕ ಕೊರತೆಯೇನೂ ಎದುರಾಗುವುದಿಲ್ಲ. ಅಲಸ್ಯ ಬಿಟ್ಟು, ಶ್ರಮಜೀವಿಯಾದರೆ ಹೆಚ್ಚು ಸಾಫಲ್ಯತೆ ಕಾಣಬಹುದು. ಯಾರು ಆ ನಾಲ್ಕು ರಾಶಿಯವರು, ಇಲ್ಲಿದೆ ವಿವರ.

1. ಮಿಥುನ ರಾಶಿ Gemini: ಮಿಥುನ ರಾಶಿಯ ಜನರು ಪ್ರತಿಭೆಯ ಗಣಿ ಆಗಿರುತ್ತಾರೆ. ಇವರು ಪೂರ್ತಿ ಕ್ಷಮತೆ ಮತ್ತು ಪರಿಶ್ರಮ ಹಾಕಿ ಕೆಲಸ ಮಾಡುತ್ತಾರೆ. ಈ ರಾಶಿಯವರು ತುಂಬಾ ಭಾವುಕರಾಗಿರುತ್ತಾರೆ. ಬೇರೊಬ್ಬರ ಬಗ್ಗೆಯೂ ಯೋಚಿಸುತ್ತಾರೆ. ಆದರೆ ಅನೇಕ ಬಾರಿ ಸಣ್ಣ ಪುಟ್ಟ ತಪ್ಪು ಎಸಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ ಇವರಿಗೆ. ಆದರೆ ಇವರು ತಮ್ಮ ಮನಸ್ಸು ಬುದ್ಧಿಯ ಮೇಲೆಹಿಡಿತ ಸಾಧಿಸಿದರೆ ಸಾಫಲ್ಯತೆ ಕಾಣುವುದರಲ್ಲಿ ಸಂಶಯ ಇಲ್ಲ.

2. ತುಲಾ ರಾಶಿ Libra: ತುಲಾ ರಾಶಿಯವರು ತುಂಬಾ ಬುದ್ಧಿವಂತರು. ಇವರು ತಮ್ಮಲ್ಲಿರುವ ಜ್ಞಾನ ಸಂಪತ್ತಿನಿಂದ ಎದುರಿಗಿರುವವರನ್ನು ಸದಾ ಪ್ರಭಾವಿತಗೊಳಿಸುತ್ತಾರೆ. ವಾಸ್ತವವಾಗಿ ಇವರು ಜೀವನದಲ್ಲಿ ಬಹಳ ಕಷ್ಟಪಡುತ್ತಾ ಇರುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಕಷ್ಟಪಟ್ಟು ಏಕಾಗ್ರತೆಯಿಂದ ಕೆಲಸ ಮಾಡಿದರೆ ಗುರಿ ತಲುಪಿ, ಉದ್ದೇಶ ಸಾಧಿಸಬಹುದು.

3. ಧನು ರಾಶಿ Sagittarius: ಧನು ರಾಶಿಯವರು ಜ್ಯೋತಿಷ್ಯದ ಪ್ರಕಾರ ತುಂಬಾ ಚಿಂತೆ ಮಾಡುವ ಸ್ವಭಾವದವರು. ಹಾಗಾಗಿ ಇವರ ಕೆಲಸ ಕಾರ್ಯಗಳು ಪೂರೈಸುವುದಿಲ್ಲ. ಈ ರಾಶಿಯ ಜನ ತುಂಬಾನೇ ಪ್ರತಿಭಾನ್ವಿತರು. ಆದರೆ ಒಂದೇ ಬಾರಿಗೆ ಅನೇಕ ಕೆಲಸಗಳಲ್ಲಿ ತೊಡಗುತ್ತಾರೆ. ಅದಕ್ಕೇ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ರಾಶಿಯ ಜನರೂ ಸಹ ತಮ್ಮ ಮನಸ್ಸಿನ ಮೇಲೆ ಏಕಾಗ್ರತೆ ಸಾಧಿಸಿ, ಕೆಲಸ ಮಾಡಿದರೆ ಜೀವನದಲ್ಲಿ ಸಾಫಲ್ಯತೆ ಸಾಧಿಸಬಹುದು. ಭವಿಷ್ಯದಲ್ಲಿ ಹೆಚ್ಚು ಧನಸಂಪತ್ತು ಗಳಿಸಬಹುದು.

4. ಮಕರ ರಾಶಿ Capricorn: ಮಕರ ರಾಶಿಯವರು ತಮ್ಮ ಕೆಲಸದಲ್ಲಿ ಆಲಸ್ಯ, ಉದಾಸೀನತೆ ತೋರುತ್ತಾರೆ. ಇದರಿಂದ ತಮ್ಮ ಕಡೆಗೆ ಬರುವ ಅವಕಾಶವನ್ನು ಕಳೆದುಕೊಂಡುಬಿಡುತ್ತಾರೆ. ನಂತರ, ಜೀವನದಲ್ಲಿ ಕಷ್ಟ ಪಡತೊಡಗುತ್ತಾರೆ. ಜ್ಯೋತಿಷಿಗಳ ಪ್ರಕಾರ ಮಕರ ರಾಶಿಯವರು ಅಲಸ್ಯ ಬಿಟ್ಟು, ಶ್ರಮಜೀವಿಯಾದರೆ ಹೆಚ್ಚು ಸಾಫಲ್ಯತೆ ಕಾಣಬಹುದು.

ಇದನ್ನೂ ಓದಿ: ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ 

Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

(these 4 zodiac sign have full life of struggle and then have good financial condition)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ