AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಮೊದಲು ಅಹಂಕಾರ, ನಂತರ ಪ್ರೇಮ, ಇಲ್ಲಿದೆ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ

ವಾರದ ಪ್ರೇಮ - ಪ್ರೀತಿ: ರಾಶಿ ಚಕ್ರದ ಮೂಲಕ ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರ ಅಂದರೆ ಅಕ್ಟೋಬರ್ 07ರಿಂದ ಅಕ್ಟೋಬರ್ 11 ವರೆಗೆ ಯಾವ ರಾಶಿಯವರಿಗೆ ಪ್ರೇಮ - ಪ್ರೀತಿ ಲಾಭ ಹಾಗೂ ನಷ್ಟಗಳು ಇದೆ ಎಂಬುದನ್ನು ಹೇಳಲಾಗಿದೆ. ಪ್ರೀತಿಯಲ್ಲಿ ಬರುವ ಸಂಕಷ್ಟಗಳು ಹಾಗೂ ಅದಕ್ಕೆ ಮಾಡಬೇಕಾದ ಪರಿಹಾರಗಳೇನು? ಯಾವ ರಾಶಿಯವರು ಈ ವಾರ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

Weekly Love Horoscope: ಮೊದಲು ಅಹಂಕಾರ, ನಂತರ ಪ್ರೇಮ, ಇಲ್ಲಿದೆ ಈ ವಾರದ ಪ್ರೇಮ - ಪ್ರೀತಿ ಭವಿಷ್ಯ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Oct 03, 2025 | 5:33 PM

Share

ಅಕ್ಟೋಬರ್ 07ರಿಂದ ಅಕ್ಟೋಬರ್ 11 ವರೆಗೆ ಈ ವಾರವಿದ್ದು (Weekly Love Horoscope) ಪ್ರೀತಿಯಲ್ಲಿ ಕೆಲವು ತಿರುವುಗಳು ಬರಲಿದ್ದು, ಅದನ್ನು ಸಮರ್ಥರಾದವರು ನಿಭಾಯಿಸುವಿರಿ. ಉತ್ತಮ ದಶೆಯಲ್ಲಿ ಸಮಸ್ಯೆಯನ್ನು ಅನಾಯಾಸವಾಗಿ ದಾಟಲು ಸಾಧ್ಯ. ದುಃಖದಿಂದ ಅನಾಹುತ ಮಾಡಿಕೊಳ್ಳದೇ ಧೈರ್ಯವಾಗಿ ಇರಿ.

ಮೇಷ ರಾಶಿ :

ರಾಶಿ ಚಕ್ರದ ಮೊದಲ ರಾಶಿಯವರಿಗೆ ಈ ವಾರ ಪ್ರೀತಿಯು ಎಲ್ಲ ಕಾರ್ಯಗಳಿಗೆ ಉತ್ಸಾಹ ತಂದುಕೊಡುವುದು. ತತ್ಕ್ಷಣದ ಆಕರ್ಷಣೆಯಿಂದ ಅಪಾಯ ಸಾಧ್ಯತೆ. ಈ ವಾರ ಪ್ರೀತಿಯಲ್ಲಿ ಸ್ವಲ್ಪ ಮಟ್ಟಿನ ಅಹಂಕಾರ ಎದ್ದು ತೋರಿಸುವರು. ನಿಜವಾಗಿಯೂ ನಿಮ್ಮಲ್ಲಿ ಪ್ರೀತಿ ಇದ್ದರೆ ಅದು ಎಲ್ಲವನ್ನೂ ತೂಗಿಸುವುದು. ಸಂಗಾತಿಗೆ ಮೆಚ್ಚುಗೆ ನೀಡುವ ಅನಿವಾರ್ಯತೆ ಬರಲಿದೆ. ಆಗಾಗ ಕೋಪದಿಂದ ಸಂಬಂಧಕ್ಕೆ ಬಿರುಕು ಬರುವ ಸಾಧ್ಯತೆ.

ವೃಷಭ ರಾಶಿ :

ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ನಿಷ್ಠೆ ಮತ್ತು ಅಗಾಧತೆ ಎದ್ದು ಕಾಣಿಸುವುದು. ಶಾರೀರಿಕ ಹಾಗೂ ಭಾವನಾತ್ಮಕ ಸಂಬಂಧಕ್ಕೆ ಮಹತ್ವವಿರಲಿದೆ. ಈ ವಾರ ಒಮ್ಮೆಲೇ ಈ ರಾಶಿಯವರ ಪ್ರೀತಿ ಸಿಗುತ್ತದೆ ಎಂದು ನಂಬಬೇಡಿ. ನಿಧಾನವಾಗಿ ಪ್ರೀತಿಗೆ ಕಟ್ಟುಬೀಳುವರು. ಆಮೇಲೆ ಬಲವಾಗುವುದು. ಇವರು ಸಂಗಾತಿಯಿಂದ ಪ್ರಾಮಾಣಿಕತೆಯನ್ನು ಬಯಸುವರು.

ಮಿಥುನ ರಾಶಿ :

ಬುಧನ ಆಧಿಪತ್ಯದ ಈ ರಾಶಿಗೆ ಈ ವಾರ ಪ್ರೀತಿಯ ಚಟುವಟಿಕೆ, ಮಾತನಾಡುವಿಕೆ ಎಲ್ಲರ ಆಕರ್ಷಣೆಯಾಗುವುದು. ಪ್ರೀತಿಯಲ್ಲಿನ ವೈವಿಧ್ಯ ಮನೆಯವರಿಗೂ ಇಷ್ಟವಾಗಲಿದೆ. ಅತಿಯಾದ ಮುದ್ದು ಕೆಲವೊಮ್ಮೆ ಅಸ್ಥಿರತೆಯಿಂದ ಅನ್ಯ ಪರಿಣಾಮವನ್ನು ಬೀರುವುದು. ಈ ವಾರ ಪ್ರೀತಿಯ ಮಾತನಾಡದೇ ಸ್ನೇಹದ ಭಾವವೇ ಮುಂದುವರಿಯಲಿ.

ಕರ್ಕಾಟಕ ರಾಶಿ :

ಚಂದ್ರನು ರಾಶಿಯ ಅಧಿಪತಿಯಾಗಿದ್ದು ಈ ವಾರ ಪ್ರೀತಿಯನ್ನು ತುಂಬಾ ಭಾವನಾತ್ಮಕವಾಗಿ ಕಾಣುವಿರಿ. ಇಷ್ಟು ದಿನ ಕುಟುಂಬ ಕೇಂದ್ರಿತವಾಗಿದ್ದ ಪ್ರೀತಿ, ಪ್ರೇಯಸಿಯ ಮೇಲೆ ತಿರುಗುವುದು. ಈ ವಾರ ಪ್ರೀತಿ ಅತಿಯಾದರೆ ಸಣ್ಣ ತಪ್ಪಿಗೂ ನೋವಾಗುವುದು. ಸಂಗಾತಿಗೆ ತಾಯಿಯಂತೆ ನೋಡಿಕೊಳ್ಳುವರು.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ಪ್ರೀತಿಗೆ ಸಂಬಂಧಿಸಿದಂತೆ ನಾಟಕೀಯ ವ್ಯವಹಾರ ಕಾಣಿಸುವುದು. ಅನೇಕರ ಆಕರ್ಷಣೆಗೆ ನಿಮ್ಮ ವರ್ತನೆ ಇರುವುದು. ಸಂಗಾತಿಯ ಮನೆಯವರ ಮೇಲೆ ಮೆಚ್ಚುಗೆ, ಗೌರವ ಬರಲಿದೆ. ಈ ವಾರ ಪ್ರೀತಿಯಲ್ಲಿ ಸ್ವಲ್ಪ ಸ್ವಾಮಿತ್ವಭಾವ ನಿಮಗೆ ಗೊತ್ತಾಗದಂತೆ ಬೆಳೆಯುವುದು. ಎಲ್ಲದಕ್ಕೂ’ನಾನೇ’ ಎನ್ನುವ ಭಾವನೆ ಬರುವುದು.

ಕನ್ಯಾ ರಾಶಿ :

ರಾಶಿ ಚಕ್ರದ ಆರನೇ ರಾಶಿಯವರಿಗೆ ಅಕ್ಟೋಬರ್ ತಿಂಗಳ ಮೊದಲನೇ ವಾರ ಪ್ರೀತಿಯಲ್ಲಿ ನಿಖರತೆ ಇರುವುದು. ಯಾರಲ್ಲಿಯೂ ಹೇಳಿಕೊಳ್ಳದೇ ನಿಮ್ಮೊಳಗೇ ಪ್ರೀತಿಸುವಿರಿ. ಈ ವಾರ ಸಂಗಾತಿಯ ಪ್ರತಿಯೊಂದು ವಿಚಾರದಲ್ಲಿಯೂ ಕಾಳಜಿಯನ್ನು ಅವರಿಗೆ ಗೊತ್ತಾಗದಂತೆ ನಟಿಸಿ, ಮಾಡುವಿರಿ. ಆಪ್ತರಿಂದ ಕೆಲವೊಮ್ಮೆ ಟೀಕೆಗಳು ಬಂದು, ಮುಜುಗರವಾಗಬಹುದು. ಆ ಕ್ಷಣದಲ್ಲಿ ನಾಚಿದರೂ ಬದಲಾವಣೆಯ ಮಾತಿಲ್ಲ.

ತುಲಾ ರಾಶಿ :

ಶುಕ್ರನ ಆಧಿಪತ್ಯದ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ತುಂಬಾ ರೋಮ್ಯಾಂಟಿಕ್ ಮಾನಸಿಕತೆ ಇರುವುದು. ಪ್ರೀತಿಯನ್ನೂ ಕುಟುಂಬವನ್ನೂ ಸಮತೋಲನದಲ್ಲಿ ನಿರ್ವಹಿಸುವಿರಿ. ಈ ವಾರ ಆಕರ್ಷಣೆಗೆ ಮತ್ತಷ್ಟು ಆಕರ್ಷಣೆ ಬರುವಂತೆ ಸಂಗಾತಿಗೆ ಐಡಿಯಾ ಕೊಡುವಿರಿ. ಸಂಗಾತಿಯ ಜೊತೆ ಪ್ರೀತಿಯನ್ನು ಸಮರ್ಥನೆ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ :

ಅಕ್ಟೋಬರ್ ತಿಂಗಳ ಈ ವಾರದಲ್ಲಿ ಕುಜನ ಆಧಿಪತ್ಯದ ಈ ರಾಶಿಗೆ ಗಾಢವೂ ತೀವ್ರವೂ ಆದ ಪ್ರೀತಿ ಅನ್ಯರ ಮೇಲೆ ಬರಲಿದೆ. ನಿಮಗೆ ಗೊತ್ತಾಗದಂತೆ ಪ್ರೀತಿಯಲ್ಲಿ ಅತಿ ಆಳಕ್ಕೆ ಹೋಗುವಿರಿ. ಅನ್ಯರಿಂದ ನಿಮ್ಮ ಪ್ರೀತಿಗೆ ಅಸೂಯೆ ಬರಲಿದೆ. ಯಾವುದಾದರೂ ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ.

ಧನು ರಾಶಿ :

ಗುರುವಿನ ಆಧಿಪತ್ಯದ ಈ ರಾಶಿಗೆ ಮೊದಲ ವಾರ ಪ್ರೀತಿಯನ್ನು ಸಾಹಸದ ಮೂಲಕ ಪ್ರದರ್ಶಿಸುವಿರಿ.‌ ಸಂಗಾತಿಗೆ ಸ್ವಾತಂತ್ರ್ಯ ಕೊಡುವಿರಿ. ಹೊಸ ವಿಚಾರಗಳನ್ನು ಮಾತನಾಡಲು ಬಯಸಿ ಸಂಗಾತಿ ಜೊತೆ ಹಂಚಿಕೊಳ್ಳುವಿರಿ. ಬಂಧನ ಇಷ್ಟವಿಲ್ಲ, ಬಿಗಿಯಾಗಿ ಹಿಡಿದರೆ ದೂರ ಹೋಗುವರು. ಹಾಡಿನ ಮೂಲಕ ಆಕರ್ಷಿಸುವಿರಿ.

ಮಕರ ರಾಶಿ :

ಶನಿ ಅಧಿಪತಿಯಾದ ಈ ರಾಶಿಗೆ ಈ ವಾರ ಗಂಭೀರವೂ ಜವಾಬ್ದಾರಿಯುತವೂ ಆದ ಪ್ರೀತಿ ಇರುವುದು. ಪ್ರೀತಿಯನ್ನು ತಮಾಷೆಯಾಗಿ ತೆಗೆದುಕೊಳ್ಳುವಿರಿ. ಈ ವಾರ ಉದ್ಯೋಗದಲ್ಲಿ ಹೊಸ ಪ್ರೇಮ ಹುಟ್ಟುವುದು. ಉಡುಗೊರೆಯನ್ನು ಕೊಟ್ಟು ವಶಮಾಡಿಕೊಳ್ಳುವಿರಿ. ಮನೆಯವರಿಗೆ ಅರ್ಥಮಾಡಿಸುವುದು ಆಗದು.

ಇದನ್ನೂ ಓದಿ:  ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ

ಕುಂಭ ರಾಶಿ :

ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಪ್ರೀತಿಯನ್ನು ವಿಭಿನ್ನವಾಗಿ ತಿಳಿಸುವಿರಿ. ಸಂಗಾತಿಯ ವಿರೋಧವನ್ನು ತಡೆಯಲಾಗದು. ಆರೋಗ್ಯದ ಸಹಾಯಕ್ಕೆ ಹೋಗುವಿರಿ. ಈ ವಾರ ಸ್ವಾತಂತ್ರ್ಯವನ್ನು ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ. ಪ್ರೀತಿಯಲ್ಲಿ ಬುದ್ಧಿವಂತಿಕೆ ಮುಖ್ಯ.

ಇದನ್ನೂ ಓದಿ: ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ

ಮೀನ ರಾಶಿ :

ಗುರುವಿನ ಆಧಿಪತ್ಯದ ಈ ರಾಶಿಗೆ ಪ್ರೀತಿಯ ಕಾಲ್ಪನಿಕತೆಯ ಜಗತ್ತು ತೆರೆಯುವುದು. ನಿಮ್ಮ ಸಂಗಾತಿಗೆ ಹೆಚ್ಚು ಸಮಯ ಕೊಡುವಿರಿ. ಕಲಾವಿದರಿಗೆ ಮತ್ತೊಬ್ಬ ಕಲಾವಿದರ ಮೇಲೆ ಪ್ರೀತಿಯ ಆರಂಭವಾಗಲಿದೆ. ಯಾರಾದರೂ ಕಿವಿಕಚ್ಚಿ ಮನಸ್ಸನ್ನು ಬದಲಾಯಿಸುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Fri, 3 October 25

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More