AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಪ್ರೇಮ ಭವಿಷ್ಯ: ಹಳೆಯ ಗೊಂದಲಗಳಿಗೆ ಮುಕ್ತಿ, ಹೊಸ ಸಂಬಂಧಗಳ ಆರಂಭ; ಈ ವಾರ ನಿಮ್ಮ ಪ್ರೇಮ ರಾಶಿ ಹೇಗಿದೆ?

ನವೆಂಬರ್ 8-14ರ ವಾರದಲ್ಲಿ ವಕ್ರಿ ಬುಧ ಮತ್ತು ಶುಕ್ರರ ಪ್ರಭಾವದಿಂದ ಹಳೆಯ ಪ್ರೇಮ ಸಂಬಂಧಗಳು, ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತವೆ. ಈ ವಾರ ಹೊಸ ವಾಗ್ದಾನಕ್ಕಿಂತ ಹಳೆಯ ಗೊಂದಲಗಳನ್ನು ಬಗೆಹರಿಸಲು ಉತ್ತಮ. ರಾಹು, ಕೇತು, ಶನಿ ಗ್ರಹಗಳ ಸ್ಥಾನಪಲ್ಲಟವು ಪ್ರತಿಯೊಂದು ರಾಶಿಗಳ ಪ್ರೇಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ವಿಸ್ತೃತ ವಿಶ್ಲೇಷಣೆ ಇಲ್ಲಿದೆ.

ವಾರದ ಪ್ರೇಮ ಭವಿಷ್ಯ: ಹಳೆಯ ಗೊಂದಲಗಳಿಗೆ ಮುಕ್ತಿ, ಹೊಸ ಸಂಬಂಧಗಳ ಆರಂಭ; ಈ ವಾರ ನಿಮ್ಮ ಪ್ರೇಮ ರಾಶಿ ಹೇಗಿದೆ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 07, 2026 | 10:31 PM

Share

ನವೆಂಬರ್ ೮ರಿಂದ ೧೪ರವರೆಗಡ ಬುಧ ತುಲಾದಲ್ಲಿ ವಕ್ರಿ, ರಾಹು ಕುಂಭದಲ್ಲಿ, ಕೇತು ಸಿಂಹದಲ್ಲಿ, ಶನಿ ಮೀನದಲ್ಲಿ. ವಕ್ರಿ ಶುಕ್ರ ಮತ್ತು ವಕ್ರಿ ಬುಧರ ಕಾರಣ ಹಳೆಯ ಸಂಬಂಧ, ಹಳೆಯ ಮಾತು ಮತ್ತು ಹಳೆಯ ಪರಿಚಯಗಳು ಮತ್ತೆ ಮುನ್ನೆಲೆಗೆ ಬರುತ್ತವೆ. ಹೊಸ ವಾಗ್ದಾನಕ್ಕಿಂತ ಹಳೆಯ ಗೊಂದಲ ಬಗೆಹರಿಸಲು ಈ ವಾರ ಉತ್ತಮ.

ಮೇಷ ರಾಶಿ : ಸಪ್ತಮದಲ್ಲಿ ವಕ್ರಿ ಶುಕ್ರ ಇರುವುದರಿಂದ ಸಂಗಾತಿ ಜೊತೆ ಹಳೆಯ ವಿಷಯ ಮತ್ತೆ ಚರ್ಚೆಗೆ ಬರಬಹುದು. ಅವಿವಾಹಿತರಿಗೆ ಹಳೆಯ ಪರಿಚಿತರಿಂದ ಪ್ರಸ್ತಾಪ ಬರುವ ಸಾಧ್ಯತೆ. ಗುರು ಪಂಚಮದಲ್ಲಿ ಇರುವುದರಿಂದ ಪ್ರೇಮದಲ್ಲಿ ಮೂಲ ಸಂತೋಷ ಉಳಿಯುತ್ತದೆ. ಶುಕ್ರ ಷಷ್ಠಕ್ಕೆ ಹೋಗುವುದರಿಂದ ಸಣ್ಣ ವಿಷಯಕ್ಕೆ ವಾದ ಬರಬಹುದು, ಮಾತಿನಲ್ಲಿ ಮೃದುತ್ವ ಇರಲಿ.

ವೃಷಭ ರಾಶಿ : ಷಷ್ಠದಲ್ಲಿ ಶುಕ್ರ ಇರುವುದರಿಂದ ಪ್ರೇಮ ಭಾವನೆ ಸ್ವಲ್ಪ ಮಂದ. ಸಂಗಾತಿಯ ಆರೋಗ್ಯ ಅಥವಾ ದೈನಂದಿನ ಕೆಲಸದ ವಿಷಯದಲ್ಲಿ ಅಸಮಾಧಾನ ಸಾಧ್ಯ. ಶುಕ್ರ ಪಂಚಮಕ್ಕೆ ಬಂದು ಮನಸ್ಸು ಹಗುರವಾಗಿ ಪ್ರೇಮ ಚಿಗುರುತ್ತದೆ. ಆದರೆ ಶುಕ್ರ ದುರ್ಬಲನಾಗಿರುವುದರಿಂದ ಹೆಚ್ಚಿನ ನಿರೀಕ್ಷೆ ಇಟ್ಟರೆ ನಿರಾಶೆಯಾಗಬಹುದು.

ಮಿಥುನ ರಾಶಿ : ಪಂಚಮದಲ್ಲಿ ಶುಕ್ರ ಇರುವುದರಿಂದ ಪ್ರೇಮ ಸಂಬಂಧಗಳಿಗೆ ಈ ವಾರ ಅನುಕೂಲ. ಹಳೆಯ ಪ್ರೀತಿ ಮರಳುವ ಅಥವಾ ಹಳೆಯ ಸ್ನೇಹ ಪ್ರೀತಿಯಾಗುವ ಸಾಧ್ಯತೆ ಇದೆ. ಮಂಗಳ ತೃತೀಯಕ್ಕೆ ಬಂದು ಮನಸ್ಸಿನ ಮಾತು ಹೇಳುವ ಧೈರ್ಯ ನೀಡುತ್ತಾನೆ. ಶುಕ್ರ ಚತುರ್ಥಕ್ಕೆ ಹೋಗಿ ಮನೆಯವರ ಅಭಿಪ್ರಾಯ ಮುಖ್ಯವಾಗುತ್ತದೆ.

ಕರ್ಕಾಟಕ ರಾಶಿ : ಗುರು ದ್ವಿತೀಯದಲ್ಲಿ ಇರುವುದರಿಂದ ಕುಟುಂಬ ಬೆಂಬಲ ಸಿಗುತ್ತದೆ, ವಿವಾಹದ ಮಾತುಕತೆ ಮುಂದುವರಿಯಬಹುದು. ಮಂಗಳ ನಿಮ್ಮ ರಾಶಿಯಲ್ಲೇ ದುರ್ಬಲನಾಗಿರುವುದರಿಂದ ಕೋಪ, ಅಸಹನೆ ಮತ್ತು ಮನಃಸ್ಥಿತಿ ಬದಲಾವಣೆ ಹೆಚ್ಚು. ಸಂಗಾತಿಯ ಜೊತೆ ವಾಗ್ವಾದ ಬೇಡ. ವಾತಾವರಣ ತಿಳಿಯಾಗುತ್ತದೆ.

ಸಿಂಹ ರಾಶಿ : ಗುರು ನಿಮ್ಮ ರಾಶಿಯಿಂದ ಸಪ್ತಮ ನೋಟ ಬೀರುವುದರಿಂದ ವಿವಾಹ ಸಂಬಂಧಗಳಿಗೆ ಅನುಕೂಲ. ಆದರೆ ಕೇತುವಿನ ಪ್ರಭಾವದಿಂದ ಮನಸ್ಸು ಕೆಲವೊಮ್ಮೆ ದೂರ ಸರಿದಂತೆ ಅನಿಸಬಹುದು. ಮಂಗಳ ಬಂದು ಭಾವನೆಗಳು ತೀವ್ರವಾಗುತ್ತವೆ, ಅಹಂ ಬಿಟ್ಟು ಮಾತನಾಡಿದರೆ ಸಂಬಂಧ ಗಟ್ಟಿಯಾಗುತ್ತದೆ.

ಕನ್ಯಾ ರಾಶಿ : ಶುಕ್ರ ನಿಮ್ಮ ರಾಶಿಯಲ್ಲಿ ನೀಚನಾಗುವುದರಿಂದ ಆತ್ಮವಿಶ್ವಾಸ ಕುಸಿತ, ಸಂಶಯ ಅಥವಾ ಭಾವನಾತ್ಮಕ ಅಂತರ ಬರಬಹುದು. ಗುರು ದ್ವಾದಶದಲ್ಲಿರುವುದರಿಂದ ಏಕಾಂತ ಬೇಕೆನಿಸುತ್ತದೆ. ಸಂಗಾತಿಗೆ ನಿಮ್ಮ ಮನಸ್ಥಿತಿ ತಿಳಿಸಿ, ಮೌನವಾಗಿ ಕೊರಗಬೇಡಿ.

ತುಲಾ ರಾಶಿ : ಶುಕ್ರ ನಿಮ್ಮ ರಾಶಿಯಲ್ಲಿ ವಕ್ರಿಯಾಗಿರುವುದರಿಂದ ಹಳೆಯ ಸಂಬಂಧಗಳ ಬಗ್ಗೆ ಆಲೋಚನೆ ಹೆಚ್ಚು. ಗುರು ಲಾಭದಲ್ಲಿರುವುದರಿಂದ ಸ್ನೇಹಿತರ ಮೂಲಕ ಸಂತೋಷ ಮತ್ತು ಹೊಸ ಪರಿಚಯ ಸಾಧ್ಯ. ಯಾವುದೇ ಹೊಸ ಬದ್ಧತೆಯನ್ನು ತೀರ್ಮಾನಿಸುವುದು ಲೇಸು.

ವೃಶ್ಚಿಕ ರಾಶಿ : ದ್ವಾದಶದಲ್ಲಿ ಶುಕ್ರ ಇರುವುದರಿಂದ ಗುಟ್ಟಿನ ಭಾವನೆ ಮತ್ತು ಒಂಟಿತನ ಹೆಚ್ಚು. ಖಾಸಗಿ ಸಮಯದಲ್ಲಿ ಮನಸ್ಸು ಹಗುರ. ಶುಕ್ರ ಲಾಭಕ್ಕೆ ಬಂದು ಹೊಸ ಪರಿಚಯ ಅಥವಾ ಹಳೆಯ ಸ್ನೇಹ ಪ್ರೀತಿಯ ರೂಪ ತಾಳಬಹುದು.

ಧನು ರಾಶಿ : ಲಾಭದಲ್ಲಿ ಶುಕ್ರ, ನವಮದಲ್ಲಿ ಗುರು ಇರುವುದರಿಂದ ಸ್ನೇಹದಿಂದ ಪ್ರೇಮ ಬೆಳೆಯುವ ಸಾಧ್ಯತೆ. ಹಿರಿಯರ ಆಶೀರ್ವಾದದಿಂದ ವಿವಾಹ ಮಾತುಕತೆ ಸುಗಮ. ಶುಕ್ರ ದಶಮಕ್ಕೆ ಹೋಗುವುದರಿಂದ ಕೆಲಸದ ಒತ್ತಡದಿಂದ ಸಂಗಾತಿಗೆ ಸಮಯ ಕಡಿಮೆಯಾಗದಂತೆ ನೋಡಿಕೊಳ್ಳಿ.

ಮಕರ ರಾಶಿ : ಶುಕ್ರ ದಶಮದಲ್ಲಿರುವುದರಿಂದ ಕೆಲಸದ ಸ್ಥಳದ ಪರಿಚಯ ಆಪ್ತವಾಗಬಹುದು. ಆದರೆ ಗುರು ಮತ್ತು ಮಂಗಳ ಅಷ್ಟಮ ಪ್ರಭಾವದಲ್ಲಿ ಇರುವುದರಿಂದ ಅನಗತ್ಯ ವಿವಾದ ಅಥವಾ ಗುಟ್ಟು ಬಯಲಾಗುವ ಸಾಧ್ಯತೆ. ಸಂಬಂಧದಲ್ಲಿ ಪಾರದರ್ಶಕತೆ ಇರಲಿ.

ಕುಂಭ ರಾಶಿ : ಈ ವಾರದ ಅತ್ಯುತ್ತಮ ರಾಶಿಗಳಲ್ಲಿ ಒಂದು. ಗುರು ಸಪ್ತಮ ನೋಟ ಬೀರುವುದರಿಂದ ವಿವಾಹ ನಿಶ್ಚಯ, ಪ್ರಸ್ತಾಪ ಮತ್ತು ಸಂಗಾತಿಯೊಡನೆ ಹೊಂದಾಣಿಕೆಗೆ ಶುಭ. ರಾಹು ನಿಮ್ಮ ರಾಶಿಯಲ್ಲಿರುವುದರಿಂದ ಮನಸ್ಸು ಚಂಚಲ ಮತ್ತು ಮಾತಿನಲ್ಲಿ ಅತಿಶಯೋಕ್ತಿ ಬರಬಹುದು. ಭರವಸೆ ಕೊಡುವ ಮೊದಲು ಯೋಚಿಸಿ.

ಮೀನ ರಾಶಿ : ಅಷ್ಟಮದಲ್ಲಿ ಶುಕ್ರ ಇರುವುದರಿಂದ ಭಾವನೆಗಳು ಆಳವಾಗಿ, ಕೆಲವೊಮ್ಮೆ ಗೊಂದಲವಾಗಿ ಇರುತ್ತವೆ. ಶುಕ್ರ ಸಪ್ತಮದಲ್ಲಿ ನೀಚನಾಗುವುದರಿಂದ ಸಂಗಾತಿಯೊಡನೆ ತಪ್ಪು ತಿಳುವಳಿಕೆ ಆಗಬಹುದು. ಶನಿ ನಿಮ್ಮ ರಾಶಿಯಲ್ಲಿರುವುದರಿಂದ ಸಂಬಂಧದ ಬೆಳವಣಿಗೆ ನಿಧಾನ, ಆದರೆ ಸ್ಥಿರ.

– ​ಲೋಹಿತ್ ಹೆಬ್ಬಾರ್

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್