Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೇಕ್ ಇನ್ ಇಂಡಿಯಾ’ ಕನಸಿಗೆ ಮತ್ತಷ್ಟು ಬಲ ನೀಡಿದ MEIL; ಸ್ವದೇಶಿ ನಿರ್ಮಿತ ಎರಡನೇ ಆಯಿಲ್ ರಿಗ್ ONGCಗೆ ಹಸ್ತಾಂತರ

MEIL Oil Rig: ಭಾರತದ ಮೇಕ್ ಇನ್ ಇಂಡಿಯಾ ಕನಸಿಗೆ ಬಲ ತುಂಬುವಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ ದೇಶದಲ್ಲೇ ತಯಾರಾದ ಎರಡನೇ ಆಯಿಲ್ ರಿಗ್​ ಅನ್ನು ಮೆಘಾ ಇಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ ಅಹಮದಾಬಾದ್​ನ ಒನ್​ಜಿಸಿಗೆ ಹಸ್ತಾಂತರಿಸಿದೆ.

‘ಮೇಕ್ ಇನ್ ಇಂಡಿಯಾ’ ಕನಸಿಗೆ ಮತ್ತಷ್ಟು ಬಲ ನೀಡಿದ MEIL; ಸ್ವದೇಶಿ ನಿರ್ಮಿತ ಎರಡನೇ ಆಯಿಲ್ ರಿಗ್ ONGCಗೆ ಹಸ್ತಾಂತರ
MEIL Oil Rig
Follow us
TV9 Web
| Updated By: shivaprasad.hs

Updated on:Aug 27, 2021 | 10:37 AM

ಭಾರತದ ‘ಮೇಕ್ ಇನ್ ಇಂಡಿಯಾ’ ಕನಸಿಗೆ ಮತ್ತಷ್ಟು ಬಲ ನೀಡುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಮೆಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(MEIL) ಸಂಸ್ಥೆಯು ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಸ್ವದೇಶಿ ನಿರ್ಮಿತ ಎರಡನೇ ಆಯಿಲ್ ರಿಗ್​ ಅನ್ನು ಸಂಸ್ಥೆಯು ಅಹಮದಾಬಾದ್​ನ ONGCಗೆ ಹಸ್ತಾಂತರಿಸಿದ್ದು, ಇನ್ನೂ 23 ರಿಗ್​ಗಳನ್ನು 2022ರ ಮಾರ್ಚ್ ಒಳಗೆ ಹಸ್ತಾಂತರಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಸುಮಾರು 6,500 ಕೋಟಿ ರೂಗಳ ಈ ಯೋಜನೆಯಲ್ಲಿ MEIL ಅಹಮದಾಬಾದ್​ನ ONGCಗೆ 47 ರಿಗ್​ಗಳನ್ನು ತಯಾರಿಸಲಿದೆ. ಅದರಲ್ಲಿ 23 ರಿಗ್​ಗಳನ್ನು ಮುಂದಿನ ವರ್ಷದ ಮಾರ್ಚ್ ಒಳಗೆ ಕಂಪನಿ ಹಸ್ತಾಂತರಿಸಲಿದೆ.

ಆಯಿಲ್​ ರಿಗ್​ಗಳು ಆಯಿಲ್ ಹೊರತೆಗೆಯಲು ಬಳಸುವ ಉಪಕರಣಗಳಾಗಿದ್ದು, ಇವುಗಳನ್ನು ಅತ್ಯಾಧುನಿಕ ಹೈಡ್ರಾಲಿಕ್ ತಂತ್ರಜ್ಞಾನದಿಂದ ತಯಾರಿಸಲಾಗಿದೆ. 47 ರಿಗ್​ಗಳನ್ನು ಆದಷ್ಟು ಶೀಘ್ರವಾಗಿ ಪೂರೈಸಲು ಪ್ರಯತ್ನಿಸುತ್ತೇವೆ ಎಂದು MEIL ತಿಳಿಸಿದೆ. ಕಂಪನಿ ನೀಡಿದ ಮೊದಲ ಆಯಿಲ್ ರಿಗ್ ಈಗಾಗಲೇ ಗುಜರಾತ್​ನ ಕಾಲೋಲ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಎರಡನೇ ರಿಗ್ ಕಾರ್ಯಾರಂಭ ಮಾಡಲು ಸಜ್ಜಾಗಿದೆ. MEIL ಸಂಸ್ಥೆಯು ರಿಗ್ ಉದ್ಯಮವನ್ನು ಸುಮಾರು 2 ಬಿಲಿಯನ್ ಡಾಲರ್​ಗಳಷ್ಟು ಬೆಳೆಸಲು ಯೋಜನೆ ರೂಪಿಸುತ್ತಿದೆ. ಕೇವಲ ಭಾರತಕ್ಕಲ್ಲದೇ ಜಾಗತಿಕ ಮಟ್ಟದಲ್ಲಿಯೂ ರಿಗ್​ಗಳನ್ನು ರಫ್ತು ಮಾಡಲು ಕಂಪನಿ ಸಿದ್ಧತೆ ನಡೆಸುತ್ತಿದೆ. ರಿಗ್​ಗಳು ಭಾರತದಲ್ಲಿಯೇ ತಯಾರಾಗುವುದರಿಂದ ಭಾರತಕ್ಕೆ ಆಮದು ವೆಚ್ಚ ಸುಮಾರು 250 ಮಿಲಿಯನ್ ಡಾಲರ್ ಉಳಿತಾಯವಾಗಲಿದೆ. ಈ ಅತ್ಯಾಧುನಿಕ ರಿಗ್​ಗಳು 1500 ಎಚ್‌ಪಿ ಸಾಮರ್ಥ್ಯದ ಮೂಲಕ ಭೂಗರ್ಭದಲ್ಲಿ 4000 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು, ಇಂಧನ ಬಾವಿಗಳನ್ನು ನಿರ್ಮಿಸಿ, ಇಂಧನ ನಿಕ್ಷೇಪವನ್ನು ಹೊರತರಲಿದೆ, ಈ ದೇಶೀ ನಿರ್ಮಿತ ರಿಗ್‌ಗಳು 40 ವರ್ಷಗಳ ಸುದೀರ್ಘ ಬಾಳಿಕೆ ಖಾತ್ರಿ ಕೂಡ ಹೊಂದಿವೆ.

MEIL ಗ್ರೂಪ್‌ನ ತೈಲ ರಿಗ್ ವಿಭಾಗದ ಮುಖ್ಯಸ್ಥ ಎನ್. ಕೃಷ್ಣಕುಮಾರ್ ಅವರು ರಿಗ್‌ಗಳು ಮತ್ತು ಇತರ ಸಂಬಂಧಿತ ಸಲಕರಣೆಗಳ ಪೂರೈಕೆಗಾಗಿ $ 1.5 ಬಿಲಿಯನ್ (ಅಂದಾಜು ರೂ 11,250 ಕೋಟಿ) ಮೌಲ್ಯದ ಆರ್ಡರ್‌ಗಳನ್ನು ಈಗಾಗಲೇ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ದೇಶೀಯವಾಗಿ ಮತ್ತು ವಿದೇಶದಲ್ಲಿ ಸುಮಾರು 15,000 ಕೋಟಿ ರೂಗಳ ಪ್ರಾಜೆಕ್ಟ್​ಗಳನ್ನು ಪಡೆಯುವ ನಿರೀಕ್ಷೆಯಿದೆ. MEIL ಗ್ರೂಪ್ ONGCಗೆ 47 ಡ್ರಿಲ್ಲಿಂಗ್ ರಿಗ್ ಗಳನ್ನು ಪೂರೈಸುವ ಒಪ್ಪಂದವನ್ನು 2019 ರಲ್ಲಿ ಮಾಡಿಕೊಂಡಿದ್ದು, ಅದರಲ್ಲಿ 20 ಅನ್ನು ಈಗಾಗಲೇ ಉತ್ಪಾದಿಸಲಾಗಿದೆ. ಉಳಿದ 27 ರಿಗ್‌ಗಳನ್ನು 2022 ರ ಅಂತ್ಯದ ವೇಳೆಗೆ ಕಂಪನಿಗೆ ಹಸ್ತಾಂತರಿಸಲಾಗುವುದು ಎಂದು ಕೃಷ್ಣಕುಮಾರ್ ಹೇಳಿದರು.

MEIL

ನೂತನವಾಗಿ ಸ್ಥಾಪಿಸಲಾಗಿರುವ ಆಯಿಲ್ ರಿಗ್​ನ ವಿಹಂಗಮ ನೋಟ

ONGCಗೆ ಪೂರೈಸಬೇಕಾದ 47 ರಿಗ್ ಗಳಲ್ಲಿ 14 ರಿಗ್ ಗಳನ್ನು ಪ್ರಸ್ತುತ ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಒಟ್ಟಾರೆಯಾಗಿ, ಈ ವರ್ಷದ ಅಂತ್ಯದ ವೇಳೆಗೆ 23 ರಿಗ್‌ಗಳನ್ನು ಒಎನ್‌ಜಿಸಿಗೆ ತಲುಪಿಸಲಾಗುತ್ತದೆ. ಈ ರಿಗ್‌ಗಳು ಭೂಮಿಯ ಹೊರಪದರವನ್ನು ಹೆಚ್ಚಿನ ವೇಗದಲ್ಲಿ ಸುಲಭವಾಗಿ ಅಗೆದು ಇಂಧನದ ನಿಕ್ಷೇಪಗಳನ್ನು ಹೊರತೆಗೆಯಲು ಸಹಾಯ ಮಾಡಲಿವೆ. ಇವುಗಳನ್ನು ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದಿಂದ ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಸಕ್ರಿಯ ಪಾತ್ರ ವಹಿಸುವುದು ತಮ್ಮ ಗುರಿಯಾಗಿದೆ ಎಂದು ಡ್ರಿಲ್ ಮೆಕ್​ನ ಅಧ್ಯಕ್ಷ ಬೊಮ್ಮಾರೆಡ್ಡಿ ಶ್ರೀನಿವಾಸ್ ವಿವರಿಸಿದ್ದಾರೆ.

ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಒಎನ್‌ಜಿಸಿ ಈ ಅತ್ಯಾಧುನಿಕ ರಿಗ್‌ಗಳನ್ನು ಪಡೆದುಕೊಳ್ಳುತ್ತಿರುವುದರಿಂದ, ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುತ್ತದೆ. ಜತೆಗೆ ಒಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಮೇಕ್ ಇನ್ ಇಂಡಿಯಾ”ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂಇಐಎಲ್ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದೆ. ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶೀಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿದ್ದು, ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಇದನ್ನೂ ಓದಿ: 

ರಿಗ್ ನಿರ್ಮಾಣದಲ್ಲಿ ದೇಶದಲ್ಲೇ ಮೊದಲು ಎನಿಸುವ ಹೆಜ್ಜೆ ಇರಿಸಿದ ಎಂಇಐಎಲ್; ದೇಶೀ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಗೆ ನಾಂದಿ

(Big boost to Make in India dream MEIL places country on global stage of oil rigs business)

Published On - 10:27 am, Fri, 27 August 21

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ