Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಗ್ ನಿರ್ಮಾಣದಲ್ಲಿ ದೇಶದಲ್ಲೇ ಮೊದಲು ಎನಿಸುವ ಹೆಜ್ಜೆ ಇರಿಸಿದ ಎಂಇಐಎಲ್; ದೇಶೀ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಗೆ ನಾಂದಿ

ಭೂಮಿಯ ಆಳದಿಂದ ಇಂಧನ ಮೇಲೆತ್ತುವುದು ಸುಲಭವಾದ ಸಂಗತಿಯಲ್ಲ. ಅತ್ಯಾಧುನಿಕ ರಿಗ್​ಗಳಿಲ್ಲದೆ ಸಮಸ್ಯೆ ಎದುರಿಸುತ್ತಿರುವ ವಲಯಕ್ಕೆ ಬೆಳ್ಳಿಚುಕ್ಕೆಯಂತೆ ಬಂದಿದೆ ಎಂಇಐಎಲ್ ಕಂಪೆನಿಯ ರಿಗ್. ಇದರ ವೈಶಿಷ್ಟ್ಯ ಏನು ಗೊತ್ತಾ?

ರಿಗ್ ನಿರ್ಮಾಣದಲ್ಲಿ ದೇಶದಲ್ಲೇ ಮೊದಲು ಎನಿಸುವ ಹೆಜ್ಜೆ ಇರಿಸಿದ ಎಂಇಐಎಲ್; ದೇಶೀ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಗೆ ನಾಂದಿ
MEIL ಕಂಪೆನಿಯ ರಿಗ್
Follow us
Srinivas Mata
|

Updated on: Apr 07, 2021 | 3:16 PM

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಘೋಷಣೆಗೆ ಪೂರಕವಾಗಿ ಮೆಗಾ ಇಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟಕ್ಚರ್ (ಎಂಇಐಎಲ್) ಸಂಸ್ಥೆಯು ಇಂಧನ ನಿಕ್ಷೇಪ ಎತ್ತುವಳಿಗೆ ಅತ್ಯಾಧುನಿಕ ಮತ್ತು ದೇಶೀಯ ನಿರ್ಮಿತ ರಿಗ್‌ಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದೆ. ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವ ಚೊಚ್ಚಲ ಖಾಸಗಿ ಸಂಸ್ಥೆ ಎಂಇಐಎಲ್ (MEIL) ಆಗಿದೆ. 1500 ಎಚ್‌ಪಿ ಸಾಮರ್ಥ್ಯದ ಮೂಲಕ ಭೂಗರ್ಭದಲ್ಲಿ 4000 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು, ಇಂಧನ ಬಾವಿಗಳನ್ನು ನಿರ್ಮಿಸಿ, ಇಂಧನ ನಿಕ್ಷೇಪವನ್ನು ಹೊರತರಲಿದೆ, ಈ ದೇಶೀ ನಿರ್ಮಿತ ರಿಗ್‌ಗಳು 40 ವರ್ಷಗಳ ಸುದೀರ್ಘ ಬಾಳಿಕೆ ಖಾತ್ರಿ ಕೂಡ ಹೊಂದಿವೆ.

ಎಂಇಐಎಲ್ ಸಂಸ್ಥೆಯ ಈ ಅತ್ಯಾಧುನಿಕ ರಿಗ್ ಗುಜರಾತ್‌ನ ಅಹ್ಮದಾಬಾದ್ ವ್ಯಾಪ್ತಿಯಲ್ಲಿನ ಕಲೂಲ್‌ನಲ್ಲಿ ಬುಧವಾರದಿಂದ ಕಾರ್ಯಾರಂಭಿಸಿವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಪಿ. ರಾಜೇಶ್ ರೆಡ್ಡಿ ತಿಳಿಸಿದ್ದಾರೆ. 2019ರಲ್ಲಿ ಇಂತಹ ಅತ್ಯಾಧುನಿಕ 47 ರಿಗ್‌ಗಳ ನಿರ್ಮಾಣಕ್ಕೆ ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು, ಈ ಸರಬರಾಜು ಆದೇಶಕ್ಕೆ ಪ್ರತಿಯಾಗಿ ಬುಧವಾರ ಸಂಸ್ಥೆಯ ಮೊದಲ ರಿಗ್ ಕಾರ್ಯ ನಿರ್ವಹಣೆ ಆರಂಭಗೊಂಡಿದೆ ಮತ್ತು ಇನ್ನುಳಿದಂತೆ 46 ರಿಗ್‌ಗಳು ವಿವಿಧ ನಿರ್ಮಾಣ ಹಂತಗಳಲ್ಲಿವೆ ಎಂದು ರೆಡ್ಡಿ ಹೇಳಿದ್ದಾರೆ.

ದೇಶಿಯ ಅಗ್ಗಳಿಕೆ ಈಗಾಗಲೇ ಬಳಕೆಯಲ್ಲಿರುವ ಇಂಧನ ಬಾವಿಗಳಿಂದ ಹೆಚ್ಚಿನ ಉತ್ಪಾದನೆಗೆ ಅನುವಾಗುವಂತೆ ಮತ್ತು ಇಂಧನ ಬಾವಿಗಳ ದುರಸ್ತಿಗೆ ಎಂಇಐಎಲ್ ನಿರ್ಮಿತ ಈ ಅತ್ಯಾಧುನಿಕ ರಿಗ್‌ಗಳು ಸಹಕಾರಿಯಾಗಲಿವೆ. ಭೂತಳದಲ್ಲಿನ ಇಂಧನ ನಿಕ್ಷೇಪವನ್ನು ತಲುಪಿ, ಅಲ್ಲಿಂದ ಮೇಲೆತ್ತಿ ತರಲು ಈ ಅತ್ಯಾಧುನಿಕ ರಿಗ್‌ಗಳ ಕಾರ್ಯಕ್ಷಮತೆ ನೆರವಾಗಲಿದೆ. 1500 ಮೀಟರ್‌ನಿಂದ ಆರಂಭಗೊಂಡು 6000 ಮೀಟರ್‌ವರೆಗೆ ಭೂಮಿಯನ್ನು ಕೊರೆದು, ಇಂಧನ ಮೇಲೆತ್ತಲಿದೆ. ಎಂಇಐಎಲ್ ನಿರ್ಮಿತ ಅತ್ಯಾಧುನಿಕ ರಿಗ್‌ಗಳಿಗೆ ಹೋಲಿಕೆ ಮಾಡಿದಲ್ಲಿ, ಪ್ರಸ್ತುತ ಬಳಸುತ್ತಿರುವ ರಿಗ್‌ಗಳು ಕೇವಲ 1000 ಮೀಟರ್ ಆಳದವರೆಗೆ ರಿಗ್ ಮಾಡುವ ಸಾಮರ್ಥ್ಯ ಹೊಂದಿವೆ.

20 ರಿಗ್‌ಗಳ ಪೈಕಿ 12 ರಿಗ್‌ಗಳು 50 ಮೀಟರ್‌ವರೆಗೆ ಸ್ವಯಂ ಚಾಲಿತವಾಗಿದ್ದು, 100 ಮೀಟರ್ ಮತ್ತು 150 ಮೀಟರ್ ಸಾಮರ್ಥ್ಯದ 4 ರಿಗ್‌ಗಳ ನಿರ್ಮಾಣ ಕಾರ್ಯವೂ ಸಾಗಿದೆ. 1500 ಎಚ್​ಪಿ ಮತ್ತು 2000 ಎಚ್​ಪಿ ಶಕ್ತಿಯ ರಿಗ್‌ಗಳ ತಯಾರಿಕೆ ದೇಶದಲ್ಲಿ ಇದೇ ಮೊಟ್ಟ ಮೊದಲಾಗಿದೆ. ಪ್ರಸ್ತುತ ಗುಜರಾತ್‌ನಲ್ಲಿ ಒಂದು ರಿಗ್ ಯಶಸ್ವಿಯಾಗಿ ಕಾರ್ಯಾರಂಭಿಸಿದ್ದರೆ, ಎರಡನೇ ರಿಗ್ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ. ಮತ್ತು ಇನ್ನುಳಿದ 46 ರಿಗ್‌ಗಳ ಪೈಕಿ ಆಂಧ್ರ ಪ್ರದೇಶದ ರಾಜಮಂಡ್ರಿ ಇಂಧನ ನಿಕ್ಷೇಪ ಪ್ರದೇಶಕ್ಕೆ ಸರಬರಾಜಾಗಿದ್ದರೆ, ಉಳಿದ ರಿಗ್‌ಗಳು ಒಎನ್‌ಜಿಸಿಯ ಅಸ್ಸಾಂ, ತ್ರಿಪುರಾ ಮತ್ತು ತಮಿಳುನಾಡು ಇಂಧನ ನಿಕ್ಷೇಪ ಪ್ರದೇಶಗಳಿಗೆ ಸರಬರಾಜಾಗಲಿವೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ರಿಗ್‌ಗಳು ಅತಿ ಕಡಿಮೆ ವಿದ್ಯುತ್ ಬಳಕೆ ಮಾಡಲಿದೆ. ಅತ್ಯಾಧುನಿಕ ಹೈಡ್ರಾಲಿಕ್ ಮತ್ತು ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ 1500 ಎಚ್​ಪಿ ಸಾಮರ್ಥ್ಯದಿಂದ 4000 ಮೀಟರ್ ಆಳವನ್ನು ಸುಲಭದಲ್ಲಿ ಕ್ರಮಿಸಲಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ದೇಶೀಯ ಇಂಧನ ಉತ್ಪಾದನೆಗೆ ಒತ್ತು ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಒಎನ್‌ಜಿಸಿ ಈ ಅತ್ಯಾಧುನಿಕ ರಿಗ್‌ಗಳನ್ನು ಪಡೆದುಕೊಳ್ಳಲಿದ್ದು, ಇದರಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುತ್ತದೆ. ಜತೆಗೆ ಒಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಮೇಕ್ ಇನ್ ಇಂಡಿಯಾ”ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂಇಐಎಲ್ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದೆ. ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶೀಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿದ್ದು, ದೇಶವೇ ಹೆಮ್ಮೆ ಪಡುವಂಥ ಬೆಳವಣಿಗೆ ಇದಾಗಿದೆ.

ಇದನ್ನೂ ಓದಿ: ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ

(MEIL is the first firm in the country, which manufactured rig, which can dig 4000 meters to extract oil.)

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ