Kia EV6: ಹೊಸ ಕಿಯಾ ಕಾರು: ಮೈಲೇಜ್ ಬರೋಬ್ಬರಿ 475 ಕಿ.ಮೀ
Kia EV6 Price in India: ಕಂಪನಿಯು ಆಲ್-ಎಲೆಕ್ಟ್ರಿಕ್ ಕಿಯಾ ಇವಿ 6 ಅನ್ನು ಎರಡು ರೀತಿಯ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಪರಿಚಯಿಸಿದೆ. ಇದು ಪ್ರಮಾಣಿತ 58 kWh ಬ್ಯಾಟರಿ ಪ್ಯಾಕ್ ಮತ್ತು ದೀರ್ಘ ಶ್ರೇಣಿಯ 77.4-KWh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಲಿದೆ.
ದಕ್ಷಿಣ ಕೊರಿಯಾದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿ ಕಿಯಾ ದೇಶೀಯ ಮಾರುಕಟ್ಟೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಸೆಡಾನ್ ಕಾರು ಕಿಯಾ ಇವಿ 6 (Kia EV6) ಅನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಹ್ಯುಂಡೈ ಮೋಟಾರ್ ಗ್ರೂಪ್‌ನ ಇವಿ-ಒನ್ಲಿ ಎಲೆಕ್ಟ್ರಿಕ್-ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ಅಳವಡಿಸಿರುವುದು ವಿಶೇಷ.
ದಕ್ಷಿಣ ಕೊರಿಯಾ ವಾಹನ ಮಾರುಕಟ್ಟೆಯಲ್ಲಿ Kia EV6 ಈಗಾಗಲೇ ಸಂಚಲನ ಸೃಷ್ಟಿಸಿದ್ದು, ಹೊಸ ಕಾರನ್ನು 30,000 ಕ್ಕೂ ಅಧಿಕ ಪ್ರಿ-ಆರ್ಡರ್ ಮಾಡಿದ್ದಾರೆ. ಹಾಗೆಯೇ ಕಿಯಾ ಕಂಪೆನಿಯ ನೂತನ ಕಾರಿಗೆ ಯುರೋಪ್ ಮತ್ತು ಯುಎಸ್ಎನಲ್ಲೂ ಭಾರೀ ಬೇಡಿಕೆ ಕಂಡು ಬಂದಿದೆ. ಅದರಂತೆ Kia EV6 ಮೊದಲ ಆವೃತ್ತಿಗಾಗಿ 8,800 ಪ್ರಿ-ಆರ್ಡರ್ ಸ್ವೀಕರಿಸಿದ್ದೇವೆ ಎಂದು ಕಂಪನಿ ಹೇಳಿದೆ.
ಯೊನ್ಹಾಪ್ ವರದಿಯ ಪ್ರಕಾರ, ಕಿಯಾ ಮೋಟಾರ್ಸ್ ತನ್ನ ಕೊರಿಯಾದಲ್ಲಿ ಮೊದಲ ಆವೃತ್ತಿಯಲ್ಲಿ 13,000 ಕಾರುಗಳನ್ನು ಮತ್ತು ವಿದೇಶಿ ಮಾರುಕಟ್ಟೆಯಲ್ಲಿ 17,000 ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ದಕ್ಷಿಣ ಕೊರಿಯಾದಲ್ಲಿ EV6 ನ ಬೆಲೆ 47 ಮಿಲಿಯನ್ ವೊನ್ ನಿಂದ 57 ಮಿಲಿಯನ್ ವೊನ್ ($ 40,800 ರಿಂದ $ 49,500) ವರೆಗೆ ಇರಲಿದೆ.
ಕಿಯಾ ಎಲೆಕ್ಟ್ರಿಕ್ EV6 ಕಾರಿನ ವಿಶೇಷತೆಗಳೇನು? ಕಂಪನಿಯು ಆಲ್-ಎಲೆಕ್ಟ್ರಿಕ್ ಕಿಯಾ ಇವಿ 6 ಅನ್ನು ಎರಡು ರೀತಿಯ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಪರಿಚಯಿಸಿದೆ. ಇದು ಪ್ರಮಾಣಿತ 58 kWh ಬ್ಯಾಟರಿ ಪ್ಯಾಕ್ ಮತ್ತು ದೀರ್ಘ ಶ್ರೇಣಿಯ 77.4-KWh ಸಾಮರ್ಥ್ಯದ ಬ್ಯಾಟರಿಯಿಂದ ಚಾಲಿತವಾಗಲಿದೆ. ಅಂದರೆ 58-kWh ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಬರೋಬ್ಬರಿ 370 ಕಿಮೀ ಚಲಿಸಬಹುದು. ಹಾಗೆಯೇ ಮತ್ತು 77.4-kWh ಬ್ಯಾಟರಿ ಪ್ಯಾಕ್ನ ಒಮ್ಮೆ ಪೂರ್ತಿ ಮಾಡಿದರೆ ಬರೋಬ್ಬರಿ 475 ಕಿಮೀ ವರೆಗೆ ಚಲಿಸಬಹುದು ಎಂದು ಕಂಪೆನಿ ತಿಳಿಸಿದೆ.
ಈ ಸೆಡಾನ್ ಕಾರಿನ ವೇಗದ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 5.2 ಸೆಕೆಂಡುಗಳಲ್ಲಿ ಶೂನ್ಯದಿಂದ ಗಂಟೆಗೆ 60 ಮೈಲುಗಳ (ಸುಮಾರು 97 ಕಿಲೋಮೀಟರ್) ವೇಗವನ್ನು ಪಡೆಯಬಹುದು. ಹಾಗೆಯೇ ಕೇವಲ 18 ನಿಮಿಷಗಳ ಕಾಲ ಚಾರ್ಜ್ ಮಾಡಿದರೆ 210 ಮೈಲುಗಳ (338 ಕಿಮೀ) ವ್ಯಾಪ್ತಿಯವರೆಗೆ ಚಲಿಸಬಹುದು. ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ 10 ವರ್ಷಗಳ ವಾರೆಂಟಿಯನ್ನು ಕೂಡ ಕಂಪೆನಿ ನೀಡಿದೆ.
Kia EV6 ಎಲೆಕ್ಟ್ರಿಕ್ ಕಾರಿನ ಬೆಲೆ ಎಷ್ಟು? (Kia EV6 Price in India) ದಕ್ಷಿಣ ಕೊರಿಯಾದಲ್ಲಿ EV6 ನ ಬೆಲೆ 47 ಮಿಲಿಯನ್ ವೊನ್ ನಿಂದ 57 ಮಿಲಿಯನ್ ವೊನ್ ($ 40,800 ರಿಂದ $ 49,500) ವರೆಗೆ ಇದೆ. ಇದು ಭಾರತದ ಮಾರುಕಟ್ಟೆಯಲ್ಲಿ ಸುಮಾರು 41 ರಿಂದ 45 ಲಕ್ಷ ರೂ.ಗೆ ಲಭಿಸಲಿದೆ.
ಇದನ್ನೂ ಓದಿ: PV Sindhu: ಪದಕ ಗೆದ್ದರೂ ಅಭಿನಂದಿಸಿಲ್ಲ, ಬಾಡ್ಮಿಂಟನ್ ತಾರೆಯರ ಒಳ ಮನಿಸು..!
ಇದನ್ನೂ ಓದಿ: BCCI: ಯುವ ಕ್ರಿಕೆಟಿಗರತ್ತ ಬಿಸಿಸಿಐ ಚಿತ್ತ: ಶೀಘ್ರದಲ್ಲೇ ಅಂಡರ್-25 ಟೂರ್ನಮೆಂಟ್
ಇದನ್ನೂ ಓದಿ: IPL 2021: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಸ್ಟಾರ್ ಆಟಗಾರರು ಕಣಕ್ಕಿಳಿಯುವುದು ಖಚಿತ