ವಾಹನಗಳಲ್ಲಿ ಅಳವಡಿಸುವ ಏರ್​ಬ್ಯಾಗ್ ಗಳು ಹೇಗೆ ನಿಮ್ಮನ್ನು ಅಪಾಯದಿಂದ ಪಾರು ಮಾಡುತ್ತವೆ? ಇಲ್ಲಿದೆ ಮಾಹಿತಿ

ಸೋಜಿಗದ ಸಂಗತಿಯೆಂದರೆ ಜಾಗತಿಕವಾಗಿ ಕೇವಲ ಶೇಕಡ ಮೂರಕ್ಕಿಂತ ಕಡಿಮೆ ವಾಹನ ಜನಸಂಖ್ಯೆಯನ್ನು ಹೊಂದಿದ್ದರೂ, ಪ್ರತಿ ವರ್ಷ ಸಂಭವಿಸುವ ಪ್ರಪಂಚದ ಶೇಕಡ 12 ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ಜರುಗುತ್ತವೆ.

ವಾಹನಗಳಲ್ಲಿ ಅಳವಡಿಸುವ ಏರ್​ಬ್ಯಾಗ್ ಗಳು ಹೇಗೆ ನಿಮ್ಮನ್ನು ಅಪಾಯದಿಂದ ಪಾರು ಮಾಡುತ್ತವೆ? ಇಲ್ಲಿದೆ ಮಾಹಿತಿ
ಕಾರೊಂದರಲ್ಲಿ ಏರ್​​ಬ್ಯಾಗ್​​ಗಳು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Sep 06, 2022 | 1:19 PM

ನವದೆಹಲಿ: ಟಾಟಾ ಸನ್ಸ್ ಸಂಸ್ಥೆಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ (Cyrus Mistry) ರವಿವಾರ ಸೆಪ್ಟೆಂಬರ್ 4 ರಂದು ತಾವು ಪ್ರಯಾಣಿಸುತ್ತಿದ್ದ ಕಾರು ಮುಂಬೈ ನಗರಕ್ಕೆ ಹತ್ತಿರದ ರಸ್ತೆ ವಿಭಜಕಕ್ಕೆವೊಂದಕ್ಕೆ (divider) ಢಿಕ್ಕಿ ಹೊಡೆದು ಉಂಟಾದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದರು. 54-ವರ್ಷದವರಾಗಿದ್ದ ಸೈರಸ್ ಇತರ ಮೂವರೊಂದಿಗೆ ತಮ್ಮ ಐಷಾರಾಮಿ ಮರ್ಸಿಡಿಸ್-ಬೆಂಜ್ ಕಾರಲ್ಲಿ ಅಹ್ಮದಾಬಾದ್ ನಿಂದ ಮುಂಬೈಗೆ (Mumbai) ಪ್ರಯಾಣಿಸುತ್ತಿದ್ದರು. ಲಭ್ಯವಿರುವ ಮಾಹಿತಿಯ ಪ್ರಕಾರ ಒಬ್ಬ ವೈದ್ಯರು ಕಾರನ್ನು ಓಡಿಸುತ್ತಿದ್ದರು ಮತ್ತು ಸೈರಸ್ ತಮ್ಮ ಒಬ್ಬ ಗೆಳೆಯನೊಂದಿಗೆ ಹಿಂಬದಿಯ ಅಸನದಲ್ಲಿ ಕುಳಿತಿದ್ದರು.

ಪೊಲೀಸರ ಮಾಹಿತಿ ಪ್ರಕಾರ ಮೀತಿಮೀರಿದ ವೇಗ ಹಾಗೂ ಡ್ರೈವರ್ ಎಸಗಿದ ಪ್ರಮಾದದಿಂದ ಅಪಘಾತ ಸಂಭವಿಸಿದೆ. ಸೈರಸ್ ಮತ್ತು ಅವರೊಂದಿಗೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಸ್ನೇಹಿತ ಅಪಘಾತದಲ್ಲಿ ಮೃತಪಟ್ಟರೆ, ಕಾರು ಓಡಿಸುತ್ತಿದ್ದ ವೈದ್ಯ ಮತ್ತು ಮುಂಬದಿ ಸೀಟನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಬಚಾವಾಗಿದ್ದಾರೆ. ಸೈರಸ್ ಮಿಸ್ತ್ರಿ ಅವರ ಭೀಕರ ಮತ್ತು ದುರದೃಷ್ಟಕರ ಸಾವು ಭಾರತದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸೋಜಿಗದ ಸಂಗತಿಯೆಂದರೆ ಜಾಗತಿಕವಾಗಿ ಕೇವಲ ಶೇಕಡ ಮೂರಕ್ಕಿಂತ ಕಡಿಮೆ ವಾಹನ ಜನಸಂಖ್ಯೆಯನ್ನು ಹೊಂದಿದ್ದರೂ, ಪ್ರತಿ ವರ್ಷ ಸಂಭವಿಸುವ ಪ್ರಪಂಚದ ಶೇಕಡ 12 ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ಜರುಗುತ್ತವೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಒದಗಿಸಿರುವ ಮಾಹಿತಿ ಪ್ರಕಾರ, 2021 ರಲ್ಲಿ ಭಾರತದಾದ್ಯಂತ ರಸ್ತೆ ಅಪಘಾತಗಳಲ್ಲಿ 1.55 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರಾಸರಿ, ಪ್ರತಿದಿನ 426 ಜನರು ಅಥವಾ ಪ್ರತಿ ಗಂಟೆಗೆ 18 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದು ಇಲ್ಲಿಯವರೆಗೆ ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲಾದ ಅತ್ಯಧಿಕ ಸಾವಿನ ಸಂಖ್ಯೆಯಾಗಿದೆ.

ಕೆಲವರು ರಸ್ತೆ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರೆ, ಉಳಿದವರು ವಾಹನದಲ್ಲಿ ಒದಗಿಸಲಾದ ಕೆಲವು ಸುರಕ್ಷತಾ ವೈಶಿಷ್ಟ್ಯತೆಗಳಿಂದಾಗಿ ಭೀಕರ ಅಪಘಾತಗಳ ಹೊರತಾಗಿಯೂ ಬದುಕುಳಿದಿದ್ದಾರೆ. ಈ ಲೇಖನದಲ್ಲಿ ನಾವು ಏರ್‌ಬ್ಯಾಗ್ ಸುರಕ್ಷತಾ ಗೇರ್‌ಗಳ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ. ನಾಲ್ಕು-ಚಕ್ರ ವಾಹನಗಳ ಅಂತರ್ಗತ ಭಾಗವಾಗಿರುವ ಏರ್ ಬ್ಯಾಗ್ ಗಳು ಮುಂಭಾಗದ ಪ್ರಯಾಣಿಕರು ಮತ್ತು ಇತರರ ಜೀವಗಳನ್ನು ಉಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ.

ಏರ್​ಬ್ಯಾಗ್ ವ್ಯವಸ್ಥೆ ಎಂದರೇನು?

ಕಾರುಗಳಲ್ಲಿ ಸುರಕ್ಷಾ ವೈಶಿಷ್ಟ್ಯತೆಗಳನ್ನು ಗಮನಿಸಿದ್ದೇಯಾದರೆ, ಏರ್‌ಬ್ಯಾಗ್ ವ್ಯವಸ್ಥೆಯು ಸುರಕ್ಷತೆಯ ಪ್ರಮುಖ ಭಾಗವಾಗಿದೆ. ಇದು ಗಾಳಿ ತುಂಬಬಹುದಾದ ಸುರಕ್ಷತಾ ಸಾಧನವಾಗಿದ್ದು, ಘರ್ಷಣೆಯಿಂದ ಉಂಟಾದ ಗಂಭೀರ ಗಾಯಗಳು ಅಥವಾ ಸಾವುನೋವುಗಳಿಂದ ಮುಂಭಾಗದ ಆಸನಗಳಲ್ಲಿ ಕುಳಿತು ಪ್ರಯಾಣಿಸುವವರ ಜೀವ ಉಳಿಸಲು ವಿನ್ಯಾಸಗೊಳಿಸಲಾಗಿದೆ. ಇದು ಪ್ರಯಾಣಿಕ ವ್ಯವಸ್ಥೆಯ ಭಾಗವಾಗಿದ್ದು ಏರ್ ಕುಶನ್ ಸಂಯಮ ವ್ಯವಸ್ಥೆ ಅಂತಲೂ ಇದನ್ನು ಕರೆಯಲಾಗುತ್ತದೆ.

ಸೀಟ್‌ಬೆಲ್ಟ್‌ಗಳು ಮತ್ತು ಏರ್‌ಬ್ಯಾಗ್‌ಗಳು ಹೇಗೆ ಪರಸ್ಪರ ಸಂಬಂಧ ಹೊಂದಿವೆ?

ಸೀಟ್‌ಬೆಲ್ಟ್ ಮತ್ತು ಏರ್‌ಬ್ಯಾಗ್‌ನ ಕಾರ್ಯ ಪರಸ್ಪರ ಅವಲಂಬಿತವಾಗಿವೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಸೀಟ್ ಬೆಲ್ಟ್‌ಗಳಿಂದ ಒದಗಿಸಲಾದ ಮೂಲಭೂತ ಸುರಕ್ಷತೆಗೆ ಏರ್‌ಬ್ಯಾಗ್ ಸೇರ್ಪಡೆಯಾಗಿದೆ. ಈ ಕಾರಣದಿಂದಾಗಿ, ಅವುಗಳನ್ನು ಹೆಚ್ಚಾಗಿ ಏರ್ ಬ್ಯಾಗ್ ಪೂರಕ ಸಂಯಮ ವ್ಯವಸ್ಥೆಗಳು ಎಂದು ಕರೆಯಲಾಗುತ್ತದೆ. ಸೀಟ್‌ಬೆಲ್ಟ್ ಏರ್‌ಬ್ಯಾಗ್‌ಗಳ ಕಾರ್ಯನಿರ್ವಹಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ.

ಏರ್‌ಬ್ಯಾಗ್‌ ಹೆಚ್ಚು ಪರಿಣಾಮಕಾರಿಯಾಗಿ ನೆರವಾಗಲು, ಘರ್ಷಣೆಯ ಸಮಯದಲ್ಲಿ ಸೀಟ್‌ಬೆಲ್ಟ್ ಕಾರಿನಲ್ಲಿ ಪ್ರಯಾಣಿಕನ ಸ್ಥಾನದಲ್ಲಿರಿಸಬೇಕು. ಸೀಟ್‌ಬೆಲ್ಟ್ ಪ್ರಯಾಣಿಕರನ್ನು ಅವರು ಕೂತಿರುವ ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್ ನಲ್ಲಿ ತಕ್ಷಣವೇ ಗಾಳಿ ತುಂಬಿಕೊಳ್ಳುತ್ತದೆ ಮತ್ತು ಘರ್ಷಣೆಯ ಸಮಯದಲ್ಲಿ ಅವರನ್ನು ಸುರಕ್ಷಿತವಾಗಿರಿಸಲು ಪ್ರಯಾಣಿಕರಿಗೆ ಕುಶನ್‌ನಂತೆ ಕಾರ್ಯನಿರ್ವಹಿಸುತ್ತದೆ.

ಏರ್​ಬ್ಯಾಗ್ ಸಿಸ್ಟಮ್ ಭಾಗಗಳು

ಏರ್‌ಬ್ಯಾಗ್ ವ್ಯವಸ್ಥೆಯು ಸಾಮಾನ್ಯವಾಗಿ ಸ್ಟೀರಿಂಗ್ ಚಕ್ರವನ್ನು ಸಂಪರ್ಕಿಸುವ ಸುರುಳಿ, ಡೈಗ್ನೋಸ್ಟಿಕ್ ಮೇಲ್ವಿಚಾರಣಾ ಘಟಕ, ಏರ್‌ಬ್ಯಾಗ್ ಮಾಡ್ಯೂಲ್, ಕ್ರ್ಯಾಶ್ ಸೆನ್ಸಾರ್ ಗಳು ಮತ್ತು ಸೂಚಕ ದೀಪವನ್ನು ಒಳಗೊಂಡಿರುತ್ತದೆ. ಈ ಎಲ್ಲಾ ಭಾಗಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಮತ್ತು ಬ್ಯಾಟರಿಯಿಂದ ಚಾಲಿತವಾಗಿವೆ. ಇವುಗಳಲ್ಲಿ ಯಾವುದೇ ಭಾಗ ಅಸಮರ್ಪಕ ಕಾರ್ಯ ನಿರ್ವಹಣೆ ಏರ್ ಬ್ಯಾಗ್ ಸಿಸ್ಟಮ್ ಕಾರ್ಯನಿರ್ವಹಣೆಗೆ ತೊಡಕಾಗಬಹುದು.

ಆದರೆ, ಬ್ಯಾಟರಿ ಸಂಪರ್ಕ ಕಡಿತಗೊಂಡ ನಂತರವೂ ಏರ್‌ಬ್ಯಾಗ್‌ನ ಕಾರ್ಯನಿರ್ವಹಣೆಗಾಗಿ ಸಿಸ್ಟಮ್ ಬ್ಯಾಕ್‌ ಅಪ್ ಶಕ್ತಿಯನ್ನು ಹೊಂದಿದೆ. ಕಾರನ್ನು ಸ್ಟಾರ್ಟ್ ಮಾಡುವ ಪ್ರತಿ ಸಂದರ್ಭದಲ್ಲಿ, ಏರ್‌ ಬ್ಯಾಗ್‌ಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಆಂತರಿಕ ಸ್ವಯಂ-ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ಕ್ರ್ಯಾಶ್ ಸೆನ್ಸಾರ್ ಹೊಂದಿದ್ದು ಕಾರು ಹೊಂಡ, ಉಬ್ಬು, ಅಥವಾ ಸಣ್ಣ ಡಿಕ್ಕಿಯ ಸಂದರ್ಭದಲ್ಲ್ಲಿ ಏರ್‌ಬ್ಯಾಗ್‌ಗಳು ಉಬ್ಬಿಕೊಳ್ಳದ್ದನ್ನು ಖಚಿತಪಡಿಸುತ್ತದೆ.

ಏರ್​ಬ್ಯಾಗ್ ಗಳ ಕಾರ್ಯ ವೈಖರಿ ಹೇಗಿರುತ್ತದೆ?

ಕಾರಿನ ಮುಂಭಾಗಲ್ಲಿ ಅಳವಡಿಸಲಾಗಿರುವ ಡಿಕ್ಕಿ ಸೆನ್ಸರ್ ಗಳು ಕಾರಿನ ವೇಗ ಇದಕ್ಕಿದ್ದಂತೆ ಕಡಿಮೆಯಾದಾಗ ಇನಿಶಿಯೇಟರನ್ನು ಕಾರ್ಯರೂಪಕ್ಕೆ ತರಲು ಎಲೆಕ್ಟ್ರಿಕಲ್ ಸಿಗ್ನಲ್ ಗಳನ್ನು ರವಾನಿಸುತ್ತದೆ. ಇನಿಶಿಯೇಟರ್ ನಲ್ಲಿ ಅಳವಡಿಸಲಾಗಿರುವ ಒಂದು ತೆಳ್ಳನೆಯ ವೈರ್ ಬಿಸಿಯಾಗಿ ಪ್ರೊಪೆಲ್ಲಂಟ್ ಚೇಂಬರ್ ಪ್ರವೇಶಿಸುತ್ತದೆ. ನಂತರ ಅದು ಇನ್ಪ್ಲೇಟರ್ ಒಳಭಾಗದಲ್ಲಿರುವ ರಾಸಾಯನಿಕ ಪ್ರೊಪೆಲ್ಲಂಟ್ ನಲ್ಲಿ ಶೀಘ್ರಗತಿಯ ರಾಸಾಯನಿಕ ಕ್ರಿಯೆಗೆ ಕಾರಣವಾಗುತ್ತದೆ. ಈ ರಾಸಾಯನಿಕ ಕ್ರಿಯೆಯನ್ನು ಪೈರೊಟೆಕ್ನಿಕ್ ಚೇನ್ ಅಂತಲೂ ಕರೆಯುವುದುಂಟು.

ಸದರಿ ಕ್ರಿಯೆಯಿಂದ ನೈಟ್ರೋಜನ್ ಉತ್ಪತ್ತಿಯಾಗಿ ಅದು ಏರ್ ಬ್ಯಾಗ್ ನಲ್ಲಿ ತುಂಬಿಕೊಳ್ಳುತ್ತದೆ. ಸೆಕೆಂಡಿನ 1/12 ಸಮಯದಲ್ಲಿ ಇದೆಲ್ಲ ನಡೆದು ಬಿಡುತ್ತದೆ. ಸಂಪೂರ್ಣ ಪ್ರತಿಕ್ರಿಯೆಯು ಪ್ಲಾಸ್ಟಿಕ್ ಮಾಡ್ಯೂಲ್ ಕವರ್ ಅನ್ನು ಸ್ಫೋಟಿಸುತ್ತದೆ ಮತ್ತು ಕಾರಿನಲ್ಲಿ ಕುಳಿತಿರುವ ವ್ಯಕ್ತಿಯ ಮುಂದೆ ಅದನ್ನು ಉಬ್ಬಿಸುತ್ತದೆ. ಬ್ಯಾಗ್ ಸೆಕೆಂಡಿನ ಹತ್ತನೇ ಒಂದು ಭಾಗದಷ್ಟು ಊದಿಕೊಳ್ಳುತ್ತದೆ ಮತ್ತು ಪರಿಣಾಮದ ನಂತರ ಸೆಕೆಂಡಿನ ಮೂರು-ಹತ್ತನೇ ಭಾಗದ ಸಮಯದಲ್ಲಿ ಡಿಫ್ಲೇಟ್ ಆಗುತ್ತದೆ. ಕಾರ್ನ್‌ಸ್ಟಾರ್ಚ್ ಅಥವಾ ಟಾಲ್ಕಮ್ ಪೌಡರ್‌ನ ಲೇಪನವನ್ನು ಏರ್‌ಬ್ಯಾಗ್‌ನ ಒಳಭಾಗದಲ್ಲಿ ಒದಗಿಸಲಾಗಿದೆ, ಬ್ಯಾಗನ್ನು ತೆರೆದಾಗ ಅದು ಬಿಡುಗಡೆಯಾಗುತ್ತದೆ.

Published On - 1:17 pm, Tue, 6 September 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು