ಬ್ಯಾಟರಿ ಚಾಲಿತ ಜೀಪ್ ಸಿದ್ಧಪಡಿಸಿದ ಯುವಕ; ಇದರಲ್ಲಿನ ವಿಶೇಷತೆಗೆ ಫಿದಾ ಆದ ಆನಂದ್ರ ಮಹೀಂದ್ರ ಹೇಳಿದ್ದೇನು ಗೊತ್ತಾ?

ತಮಿಳುನಾಡಿನ ವ್ಯಕ್ತಿಯೊಬ್ಬರು ಬ್ಯಾಟರಿ ಚಾಲಿತ ಜೀಪ್ ನಿರ್ಮಿಸಿದ್ದು, ಇವರ ಈ ಸಾಧನೆಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡು ಉದ್ಯಮಿ ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದರು. ಸದ್ಯ ಟ್ವೀಟ್​ಗೆ ಆನಂದ್ ಮಹೀಂದ್ರಾ ಅವರು ಪ್ರತಿಕ್ರಿಯಿಸಿದ್ದಾರೆ.

ಬ್ಯಾಟರಿ ಚಾಲಿತ ಜೀಪ್ ಸಿದ್ಧಪಡಿಸಿದ ಯುವಕ; ಇದರಲ್ಲಿನ ವಿಶೇಷತೆಗೆ ಫಿದಾ ಆದ ಆನಂದ್ರ ಮಹೀಂದ್ರ ಹೇಳಿದ್ದೇನು ಗೊತ್ತಾ?
ಬ್ಯಾಟರಿ ಚಾಲಿತ ಜೀಪ್ ಸಿದ್ಧಪಡಿಸಿದ ತಮಿಳುನಾಡಿನ ಯುವಕ
Follow us
TV9 Web
| Updated By: Rakesh Nayak Manchi

Updated on:Aug 22, 2022 | 1:07 PM

ಅಟೋಮೊಬೈಲ್ ಕ್ಷೇತ್ರದಲ್ಲಿ ಸಾಧನೆಗೆ ಮುಂದಾಗಿರುವ ತಮಿಳುನಾಡಿನ ಯುವಕನೊಬ್ಬ ಮನೆಯಲ್ಲೇ ಒಂದು ಬ್ಯಾಟರಿ ಚಾಲಿತ ಜೀಪ್ ಅನ್ನು ಸಿದ್ಧಪಡಿಸಿದ್ದಾನೆ. ತಮಿಳುನಾಡಿನ ಕೀಜಾಡಿ ಗ್ರಾಮದ ಯುವಕ ಗೌತಮ್, ಎಲೆಕ್ಟ್ರಿಕ್ ಜೀಪ್‌ ಸಿದ್ಧಪಡಿಸಿ ಅದರ ವಿಡಿಯೋವನ್ನು ಟ್ವಟರ್​ನಲ್ಲಿ ಹಂಚಿಕೊಂಡು “ದಯವಿಟ್ಟು ನನಗೆ ಕೆಲಸ ಕೊಡಿ, ಸರ್” ಎಂದು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರನ್ನು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ, “ಇದಕ್ಕಾಗಿಯೇ ಭಾರತವು ಇವಿಗಳಲ್ಲಿ ಅಗ್ರಸ್ಥಾನದಲ್ಲಿದೆ ಎಂದು ನನಗೆ ಮನವರಿಕೆಯಾಗಿದೆ” ಎಂದು ಹೇಳಿಕೊಂಡಿದ್ದಾರೆ.

ಆನಂದ್ ಅವರು ಗೌತಮ್ ಅವರನ್ನು ಸಂಪರ್ಕಿಸುವಂತೆ ಕಂಪನಿಯ ಕಾರ್ಯನಿರ್ವಾಹಕ ಆರ್. ವೇಲುಸಾಮಿ ಅವರಲ್ಲಿ ಸೂಚಿಸಿದ್ದಾರೆ. ಅಲ್ಲದೆ, “ಕಾರುಗಳು ಮತ್ತು ತಂತ್ರಜ್ಞಾನದ ಬಗ್ಗೆ ಜನರ ಉತ್ಸಾಹ ಮತ್ತು ಗ್ಯಾರೇಜ್ ಟಿಂಕರಿಂಗ್ ಮೂಲಕ ಅವರ ನಾವೀನ್ಯತೆಯಿಂದಾಗಿ ಅಮೆರಿಕವು ಆಟೋಗಳಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ತಮ್ಮ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಬ್ಯಾಟರಿ ಚಾಲಿತ ಜೀಪ್ ತಯಾರಕ ಗೌತಮ್ ಆನಂದ್ ಮಹೀಂದ್ರಾ ಅವರಿಗೆ ಧನ್ಯವಾದ ಹೇಳಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಗೌತಮ್ ಅವರು ಭಾರತೀಯ ಸೇನೆಗೆ ಸೇರುವ ಭರವಸೆಯಲ್ಲಿದ್ದಾರೆ. ಬ್ಯಾಟರಿ ಚಾಲಿತ ಜೀಪ್ ಅನ್ನು ಮುಖ್ಯವಾಗಿ ಕೃಷಿ ಬಳಕೆಗಾಗಿ ತಯಾರಿಸಿದೆ ಎಂದು ವರದಿಯಾಗಿದೆ.

ಬ್ಯಾಟರಿ ಚಾಲಿತ ಜೀಪ್​ನ ವಿಶೇಷತೆ ಏನು?

ಲಿಥಿಯಂ ಬ್ಯಾಟರಿ ಚಾಲಿತವಾಗುವ ಜೀಪ್​ನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗಿರುವುದು ವಿಶೇಷವಾಗಿದೆ. ಈ ಬಗ್ಗೆ ಸ್ವತಃ ಗೌತಮ್ ಅವರು ಟ್ವಿಟರ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಜೀಪ್ ಅನ್ನು ವಾಹನಗಳ ತ್ಯಾಜ್ಯ ಭಾಗಗಳಿಂದ ನಿರ್ಮಿಸಲಾಗಿದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Mon, 22 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್