15 ಕಿ.ಮೀ ದೂರ ನೀರಲ್ಲಿ ಕೊಚ್ಚಿ ಹೋಗಿಯೂ ಬದುಕಿದ ಬಡಜೀವ..!
ಮಂಗಳೂರು: ನೇತ್ರಾವತಿ ನದಿಯಲ್ಲಿ ಭಾರೀ ಅಚ್ಚರಿಯೊಂದು ನಡೆದಿದೆ. ನದಿ ನೀರಿನಲ್ಲಿ15 ಕಿ.ಮೀ ಕೊಚ್ಚಿಕೊಂಡು ಹೋದ್ರೂ ಚಮತ್ಕಾರಿ ರೀತಿಯಲ್ಲಿ 70 ವರ್ಷದ ವೃದ್ಧೆ ಪರಾಗಿದ್ದಾರೆ. ಈ ಅಚ್ಚರಿ ಕಂಡು ಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲ ಬಳಿ. ಕಡಬ ತಾಲೂಕಿನ ರಾಮಕುಂಜ ನಿವಾಸಿ 70 ವರ್ಷದ ವೃದ್ದೆ ರಾಮಕ್ಕ ಇಂದು ಬೆಳೆಗ್ಗೆ6 ಗಂಟೆ ಸುಮಾರಿಗೆ ಸಹಸ್ರಲಿಂಗೇಶ್ವರ ದೇಗುಲ ಬಳಿ ಇರುವ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಳು, ಸುಮಾರು 15 ಕಿಲೋಮೀಟರ್ ನೀರಿನಲ್ಲಿ […]
ಮಂಗಳೂರು: ನೇತ್ರಾವತಿ ನದಿಯಲ್ಲಿ ಭಾರೀ ಅಚ್ಚರಿಯೊಂದು ನಡೆದಿದೆ. ನದಿ ನೀರಿನಲ್ಲಿ15 ಕಿ.ಮೀ ಕೊಚ್ಚಿಕೊಂಡು ಹೋದ್ರೂ ಚಮತ್ಕಾರಿ ರೀತಿಯಲ್ಲಿ 70 ವರ್ಷದ ವೃದ್ಧೆ ಪರಾಗಿದ್ದಾರೆ.
ಈ ಅಚ್ಚರಿ ಕಂಡು ಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲ ಬಳಿ. ಕಡಬ ತಾಲೂಕಿನ ರಾಮಕುಂಜ ನಿವಾಸಿ 70 ವರ್ಷದ ವೃದ್ದೆ ರಾಮಕ್ಕ ಇಂದು ಬೆಳೆಗ್ಗೆ6 ಗಂಟೆ ಸುಮಾರಿಗೆ ಸಹಸ್ರಲಿಂಗೇಶ್ವರ ದೇಗುಲ ಬಳಿ ಇರುವ ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದಳು, ಸುಮಾರು 15 ಕಿಲೋಮೀಟರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ತೇಲಿಕೊಂಡು ಬಂದಿದ್ದನ್ನು ಕಂಡ ನಾವಿಕ ಅಬ್ಬಾಸ್ ಮತ್ತು ಕೇಶವರಿಂದ ರಾಮಕ್ಕನನ್ನು ಬಂಟ್ವಾಳ ತಾಲೂಕಿನ ಕಡೆಶಿವಾಲಯದ ಬಳಿ ರಕ್ಷಿಸಿದ್ದಾರೆ. ವೃದ್ಧೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಯದಿಂದ ಪರಾಗಿದ್ದಾಳೆ.