ಆಕ್ಸಿಜನ್ ಘಟಕವಿದ್ದರೂ ಉತ್ಪಾದನೆ ಇಲ್ಲ, ಡಿಸಿಎಂ ಕಾರಜೋಳ ಕ್ಷೇತ್ರದಲ್ಲಿ ಇದೆಂತಾ ನಿರ್ಲಕ್ಷ್ಯ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಆಸ್ಪತ್ರೆಯಲ್ಲಿರುವ ಯಂತ್ರೋಪಕರಣಗಳನ್ನು ತಂದು ತಿಂಗಳಾದ್ರೂ ಅದರ ಜೋಡಣೆಯಾಗಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದ್ರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಇಲ್ಲಿ ದಿನಕ್ಕೆ 20 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದಿಸಬಹುದು. ಆದರೆ ಆಕ್ಸಿಜನ್ ಉತ್ಪಾದನೆ ಮಾಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ.

ಆಕ್ಸಿಜನ್ ಘಟಕವಿದ್ದರೂ ಉತ್ಪಾದನೆ ಇಲ್ಲ, ಡಿಸಿಎಂ ಕಾರಜೋಳ ಕ್ಷೇತ್ರದಲ್ಲಿ ಇದೆಂತಾ ನಿರ್ಲಕ್ಷ್ಯ
ಬಾಗಲಕೋಟೆ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಶುರುವಾಗದ ಆಕ್ಸಿಜನ್ ಘಟಕ

ಬಾಗಲಕೋಟೆ: ರಾಜ್ಯದ ಬಹುತೇಕ ಎಲ್ಲೆಡೆ ಮೆಡಿಕಲ್ ಆಕ್ಸಿಜನ್‌ಗೆ ಹಾಹಾಕಾರ ಶುರುವಾಗಿದೆ. ಜೀವ ವಾಯು ಸಿಗದೇ ಅದೆಷ್ಟೋ ಮಂದಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಆದರೆ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅಲೆಯುತ್ತಿದೆ ಬಾಗಲಕೋಟೆ ಜಿಲ್ಲಾಡಳಿತ. ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿಯೇ ನಿರ್ಲಕ್ಷ್ಯ ತಾಂಡವವಾಡುತ್ತಿದೆ.

ಹೌದು ಆಕ್ಸಿಜನ್ ಕೊರತೆ ಸದ್ಯ ರಾಜ್ಯಕ್ಕೆ ದೊಡ್ಡ ಕಂಟಕವಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಇಲ್ಲದ ಪರಿಣಾಮ ಜನ ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಬಾಗಲಕೋಟೆ ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಸಮಸ್ಯೆಗೆ ತಮ್ಮಲ್ಲಿ ಪರಿಹಾರವಿದ್ದರೂ ಸಮಸ್ಯೆ ಬಗೆಹರಿಸುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದೆ. ತಿಂಗಳಾದ್ರೂ ಯಂತ್ರೋಪಕರಣ ಜೋಡಣೆ ಮಾಡದೆ ನಿರ್ಲಕ್ಷ್ಯವಹಿಸುತ್ತಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಆಸ್ಪತ್ರೆಯಲ್ಲಿರುವ ಯಂತ್ರೋಪಕರಣಗಳನ್ನು ತಂದು ತಿಂಗಳಾದ್ರೂ ಅದರ ಜೋಡಣೆಯಾಗಿಲ್ಲ. ಆಕ್ಸಿಜನ್ ಯಂತ್ರೋಪಕರಣ ಧೂಳು ಹಿಡಿಯುತ್ತಿದ್ರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ಇಲ್ಲಿ ದಿನಕ್ಕೆ 20 ಜಂಬೋ ಸಿಲಿಂಡರ್ ಆಕ್ಸಿಜನ್ ಉತ್ಪಾದಿಸಬಹುದು. ಆದರೆ ಆಕ್ಸಿಜನ್ ಉತ್ಪಾದನೆ ಮಾಡದೆ ನಿರ್ಲಕ್ಷ್ಯವಹಿಸಲಾಗುತ್ತಿದೆ.

ಒಂದು ಕಡೆ ಆಕ್ಸಿಜನ್ಗಾಗಿ ಪರದಾಡುತಿದ್ರೆ ಮತ್ತೊಂದೆಡೆ ಆಕ್ಸಿಜನ್ ಪಡೆಯಲು ಅವಕಾಶ ಇದ್ದರೂ ಬಾಗಲಕೋಟೆ ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ. ಮುಧೋಳ ತಾಲೂಕು ಆಸ್ಪತ್ರೆಯಲ್ಲಿಯೇ ಸದ್ಯ 30 ಜನ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಕ್ಸಿಜನ್ ಘಟಕ ಶುರುವಾದರೆ ಇನ್ನು 20 ಜನರಿಗೆ ಪ್ರತಿ ದಿನ ಆಕ್ಸಿಜನ್‌ ನೀಡಬಹುದು. ಆಕ್ಸಿಜನ್ ಘಟಕ ಸ್ಥಾಪನೆಯಾಗದ ಕಾರಣ ಕೊವಿಡ್ ಸೋಂಕಿತರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಆದಷ್ಟು ಬೇಗ ಜಿಲ್ಲಾಡಳಿತ ಕುಂಭಕರಣ ನಿದ್ದೆಯಿಂದ ಎದ್ದು ಘಟಕ ಚಾಲನೆ ಮಾಡಿ ಆಕ್ಸಿಜನ್ ಉತ್ಪಾದಿಸಬೇಕಿದೆ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರ ಸಾವಿಗೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವಾಗಲಿದೆ.

ಇದನ್ನೂ ಓದಿ: ಡಿಸಿಎಂ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಆಪರೇಷನ್ ಆಕ್ಸಿಜನ್; ತಪ್ಪಿದ ಭಾರೀ ಅನಾಹುತ, ಉಳಿಯಿತು 200 ಸೋಂಕಿತರ ಜೀವ