AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಆಸ್ತಿ ಆರೋಪ: ಸ್ವಪಕ್ಷೀಯದವರ ಷಡ್ಯಂತ್ರ ಇದ್ದಾಗ ಹೀಗಾಗುತ್ತೆ; ಸಿದ್ದು ಸವದಿ

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದು ಸವದಿ ನೇರವಾಗಿ ಸೋಲಿಸಲಿಕ್ಕೆ ಆಗದೇ ಇದ್ದವರು, ಆರೋಪಗಳನ್ನ ಮಾಡುವ ಮೂಲಕ ಮಾನಸಿಕವಾಗಿ ಕುಗ್ಗಿಸಿ ಸೋಲಿಸುವ ಕನಸು ಕಂಡಿದ್ದಾರೆ ಎಂದರು.

ಅಕ್ರಮ ಆಸ್ತಿ ಆರೋಪ: ಸ್ವಪಕ್ಷೀಯದವರ ಷಡ್ಯಂತ್ರ ಇದ್ದಾಗ ಹೀಗಾಗುತ್ತೆ; ಸಿದ್ದು ಸವದಿ
ಶಾಸಕ ಸಿದ್ದು ಸವದಿ
TV9 Web
| Edited By: |

Updated on: Jan 30, 2023 | 12:55 PM

Share

ಬಾಗಲಕೋಟೆ: ನೇರವಾಗಿ ಸೋಲಿಸಲಿಕ್ಕೆ ಆಗಲ್ಲ, ಈ ರೀತಿ ಆರೋಪ‌ ಮಾಡುವ ಮೂಲಕ ಮಾನಸಿಕವಾಗಿ ಕುಗ್ಗಿಸಿ ಸೋಲಿಸುವ ಕನಸು ಕಂಡಿದ್ದಾರೆ. ಸ್ವಪಕ್ಷೀಯದವರೇ ಇದರಲ್ಲಿ ಇದ್ದಾಗ ಹೀಗಾಗುತ್ತೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲೋಕಾಯುಕ್ತಕ್ಕೆ  ದೂರು ನೀಡುವ ವಿಚಾರವಾಗಿ ಮಾತನಾಡಿದ ಅವರು ಹಾದಿ ಮೇಲೆ ಬೈಯುತ್ತ ಹೋದರೆ ಅವರಿಗೆ ಉತ್ತರ ಕೊಡಬೇಕಾ? ಆನೆ ಹೋಗುತ್ತಿರುತ್ತೆ ಯಾರು ಬೊಗಳುವವರು ಬೊಗಳುತ್ತಿರ್ತಾರೆ ಎಂದು ವಾಗ್ದಾಳಿ ಮಾಡಿದರು.

ಹಾಗಾದರೆ ನಿಮ್ಮೊಳಗೆನೆ ಅಸಮಾಧಾನ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲಿಲ್ಲ ಹೇಳಿ, ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಅಸಮಾಧಾನ ಇಲ್ವ, ಇಬ್ಬರೂ ಸಿಎಂ ಆಗಲಿಕ್ಕೆ ಹೊರಟಿದ್ದಾರೆ. ನಾವು ಅವರಿಗಿಂತ ಸಣ್ಣವರು, ನಮ್ಮಲ್ಲಿ ಇರೋದು ದೊಡ್ಡ ವಿಷಯವಲ್ಲ ಎಂದರು.

ತೇರದಾಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವ ವಿಚಾರವಾಗಿ ಮಾತನಾಡಿದ ಸವದಿಯವರು ನಾನೇ ಹೇಳಿದ್ದೇನೆ ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ತಮ್ಮ ವಿರುದ್ಧವೇ ಮಾತನಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತವು ಇರುವುದು ಸಹಜ. ತೆಗಳುವವರು ನಮ್ಮ ಮನೆ‌ ಮುಂದೆ ಇರಬೇಕು ಎಂದು ಬಸವಣ್ಣನವರೇ ಹೇಳಿಲ್ವ? ನಮ್ಮ ಅಂಕು-ಡೊಂಕುಗಳನ್ನು ತಿದ್ದುವವರು ಅವರೇ ಎಂದು. ಚುನಾವಣೆ ಸಮಯದಲ್ಲಿ ಇಂತವುಗಳು ಬೇಕಿತ್ತಾ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಹೇಗಿದ್ದೇನೆ ಅವರು ಹೇಗಿದ್ದಾರೆ? ಜನರಿಗೆ ಗೊತ್ತಿದೆ. ತಿದ್ದುಕೊಂಡು ಹೋದ್ರೆ ಪಾರ್ಟಿಯಲ್ಲಿ ಇರುವುದು ಚೆಂದ ಎಂದು ಹೇಳಿದರು.

ಜಿಲ್ಲೆಯಲ್ಲಿನ ಸಚಿವರು-ಸಚಿವರ ಮಧ್ಯೆ, ಶಾಸಕ-ಶಾಸಕರ ಮಧ್ಯೆ ಕಲಹದ ವಿಚಾರವಾಗಿ ಮಾತನಾಡಿದ ಅವರು  ಜನರಿಗೆ ಆ ರೀತಿ ಕಾಣುತ್ತೆ, ಆದರೆ ಒಳಗೆ ಆ ರೀತಿ ಇಲ್ಲ. ಕುರುಡರು ಆನೆ ಮುಟ್ಟಿದಂತೆ, ಹೊಟ್ಟೆ ಮುಟ್ಟಿದರೆ ಗೋಡೆ ಅಂತಾರೆ. ಕಾಲು ಮುಟ್ಟಿದರೆ ಕಂಬ ಅಂತಾರೆ, ಬಾಲ ಮುಟ್ಟಿದರೆ ಹಾವು ಅಂತಾರೆ. ಆದ್ರೆ ನಮ್ಮಲ್ಲಿ ಆನೆ ಆನೇನೆ ಇದೆ. ನಾವೆಲ್ಲರೂ ಸಚಿವರು, ಶಾಸಕರು ಒಗ್ಗಟ್ಟಾಗಿದ್ದೇವೆ. ಏಳಕ್ಕೆ ಏಳೂ ಸ್ಥಾನಗಳನ್ನು ಗೆಲ್ಲುತ್ತೇವೆ. ಅದರ ಬಗ್ಗೆ ಅನುಮಾನ ಬೇಡ ಎಂದರು.

ನಿಮ್ಮನ್ನ ಇಕ್ಕಟ್ಟಿನಲ್ಲಿ ಸಿಲುಕಿಸೋ ಪ್ರಯತ್ನದಲ್ಲಿ ಪ್ರಭಾವಿ ನಾಯಕರು ಇದ್ದಾರೆ ಎಂಬ ವಿಚಾರವಾಗಿ ಮಾತನಾಡಿ  ಯಾವುದೇ ಕುಮ್ಮಕ್ಕು ಇಲ್ದೇನೆ ಏನೂ ನಡೆಯಲ್ಲ. ನನ್ನ ತೇಜೋವಧೆ ಹಿಂದೆ ಜಿಲ್ಲೆಯ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಒಪ್ಪಿಕೊಂಡಿದ್ದಾರೆ. ಮೀರ್ ಸಾದಿಕ್​ನಂತವರು ಎಲ್ಲ ಕಡೆಗೂ ಇರ್ತಾರೆ. ನಮಗೇನು ವ್ಯತ್ಯಾಸ ಬೀರಲ್ಲ, ಅವರಿಗೆ ನಾನು ಉತ್ತರವನ್ನೂ ಕೊಡಲ್ಲ. ಉತ್ತರ ಕೊಟ್ರೆ ಅವರು ದೊಡ್ಡವರಾಗ್ತಾರೆ ಎಂದು ಹೇಳಿದರು.

ಗಣರಾಜ್ಯೋತ್ಸವದ ವೇಳೆ ಉಸ್ತುವಾರಿ ಸಚಿವ ಸಿಸಿ ಪಾಟೀಲ ಅನುಪಸ್ಥಿತಿ ವಿಚಾರ ಕುರಿತು ಹೇಳಿದ ಅವರು ಸಚಿವರಿಗೆ ಆರೋಗ್ಯ ಕೆಟ್ಟಿದೆ, ಆರೋಗ್ಯ ಸರಿಯಿಲ್ದಕ್ಕೆ ಬಂದಿಲ್ಲ. ಉದ್ದೇಶಪೂರ್ವಕವಾಗಿ ತಪ್ಪಿಸಬೇಕು ಅಂತಾ ತಪ್ಪಿಸಿಲ್ಲ. ಅವರ ಹೆಲ್ತ್ ಸರಿಯಿಲ್ಲ, ಹಾಗಾಗಿ ಬಂದಿಲ್ಲ ಈ ಸಾರಿ ಚುನಾವಣೆಯಲ್ಲಿ ಗೆಲ್ತಿರಾ ಎಂಬ ಪ್ರಶ್ನೆಗೆ ನೂರಕ್ಕೆ ನೂರರಷ್ಟು ಗೆಲ್ತೀವಿ. ಕಳೆದ ಸಾರಿ ಗೆಲುವಿನ ಅಂತರ 21 ಸಾವಿರ ಇತ್ತು. ಈ ಸಾರಿ ಗೆಲುವಿನ ಅಂತರ 25 ಸಾವಿರ ಇರಲಿದೆ. ಕೆಲಸ ಮಾಡಿದ ಆತ್ಮವಿಶ್ವಾಸ ನಮಗಿದೆ. ಮತದಾರರು ಹೇಂಗಿದಾರೆ ನಮಗೊತ್ತಿದೆ ನಾವು ಗೆಲ್ತೀವಿ ಎಂದಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಮಿಂಚಿನ ಸಂಚಾರ: ಜನ ಬೆಂಬಲ ನೋಡಿ ಬಿಜೆಪಿ ಸೀಕ್ರೆಟ್ ಸಭೆಯಲ್ಲಿ ಅಮಿತ್ ಶಾ ಫುಲ್ ಖುಷ್

ತೇರದಾಳ ಟಿಕೆಟ್ ಆಕಾಂಕ್ಷಿಗಳಲ್ಲಿ ಸ್ಥಳೀಯರಿಗೆ ಪ್ರಾಶಸ್ತ್ಯ ನೀಡಬೇಕು ಎನ್ನುವ ಕೂಗು ಕೇಳ್ತಿದೆ ಈ ಬಗ್ಗೆ ಮಾತನಾಡಿದ ಸವದಿ ಅವರು ಸ್ಥಳೀಯರೆಂದರೆ ಯಾರು? ಸ್ಥಳೀಯರೆಂದರೆ ಏನು ಅರ್ಥ ಅದಕ್ಕೆ? ಯಾರು ಕೇಳ್ತಿದಾರೋ ಅವರೇ ಸ್ಥಳೀಯರಲ್ಲ. ನಾವು ಮನೆ ಕಟ್ಟಿದ್ದೀವಿ, ಜಮೀನು ಹೊಂದಿದ್ದೀವಿ. ಉದ್ಯೋಗ ಇದೆ, ಸ್ಥಳೀಯರೆಂದರೆ ಮತ್ತಿನ್ನೇನು? ಹೇಳುವರನ್ನ ಕೇಳ್ರಿ ಯಾರು ಅಂತಾ ಹೇಳ್ತಾರೆ. ಕಾಂಟ್ರವರ್ಸಿಗಳಿದ್ರೇನೆ ಮಜಾ ಇರುತ್ತೆ. ನೇರವಾದಿಗಳಿಗೆ ಹೆಚ್ಚಾಗಿ ಇರ್ತಾರೆ. ನಾವು ಡೊಗ್ಗಿ, ಸೊಗ್ಗಿ ಹೋಗುವವರಲ್ಲ. ಸತ್ಯವನ್ನೆ ಮಾತನಾಡ್ತೀವಿ, ಸತ್ಯಕ್ಕೆ ಕಾಡಾಟ ಹೆಚ್ಚು. ಅದಕ್ಕೆ ಸತ್ಯ ಹರಿಶ್ಚಂದ್ರ ಸುಡುಗಾಡು ಕಾವಲು ಮಾಡಿದ. ಕೊನೆಗೆ ಜಯ ಆಗೋದು ಸತ್ಯಕ್ಕೆ ಎಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ