ಹೂವು ಬೆಳೆಗಾರಿಗೂ ತಟ್ಟಿದ ಬರದ ಬಿಸಿ: ಮಳೆ ಇಲ್ಲದೇ ಇಳುವರಿ ಕಡಿಮೆ, ರೋಗಕ್ಕೆ ತುತ್ತಾದ ಚೆಂಡು ಹೂವು

Bagalkote News: ಬಾಗಲಕೋಟೆ ಜಿಲ್ಲೆಯಾದ್ಯಂತ ಸುಮಾರು 2 ಸಾವಿರ ಕ್ಕೂ ಅಧಿಕ ಎಕರೆಯಲ್ಲಿ ಚೆಂಡು ಹೂ ಬೆಳೆಯಲಾಗಿದೆ. ಇಳುವರಿ ಕಡಿಮೆಯಾಗುತ್ತಿರುವುದರಿಂದ ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮಸ್ಥರ ಗೋಳು ಹೇಳತೀರದಾಗಿದೆ. ಪ್ರತಿ ಎಕರೆಗೆ 10 ರಿಂದ 15 ಟನ್​ವರೆಗೆ ಚೆಂಡು ಹೂ ಬೆಳೆ ಇಳುವರಿ ಬರುತ್ತಿತ್ತು. ಹೂವು ಬೆಳೆಗಾರಿಗೂ ಬರದ ಬಿಸಿ ತಟ್ಟಿದೆ.

ಹೂವು ಬೆಳೆಗಾರಿಗೂ ತಟ್ಟಿದ ಬರದ ಬಿಸಿ: ಮಳೆ ಇಲ್ಲದೇ ಇಳುವರಿ ಕಡಿಮೆ, ರೋಗಕ್ಕೆ ತುತ್ತಾದ ಚೆಂಡು ಹೂವು
ಚೆಂಡು ಹೂವು ಬೆಳೆಗಾರರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 21, 2023 | 4:26 PM

ಬಾಗಲಕೋಟೆ, ಸೆಪ್ಟೆಂಬರ್​ 21: ಈಗ ಎಲ್ಲಾ ಕಡೆ‌ ಬರದ ಛಾಯೆ ಆವರಿಸಿದೆ. ಅದರಲ್ಲೂ ಈ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿ ಆಗಿದೆ. ಆದರೆ ನೀರಿಲ್ಲದೆ ಅಂತರ್ಜಲ‌ ಕುಸಿದಿದೆ. ಭೂಮಿ ಬರಡು ಭೂಮಿ ಆಗಿದೆ. ಮಳೆ ಇಲ್ಲದೇ ಇಳುವರಿ ಕಡಿಮೆ ಜೊತೆಗೆ ರೋಗಕ್ಕೆ ಚೆಂಡು ಹೂವು (flowers) ಗಳು ತುತ್ತಾಗುತ್ತಿದ್ದು, ಹೂವು ಬೆಳೆಗಾರಿಗೂ ಬರದ ಬಿಸಿ ತಟ್ಟಿದೆ. ಮಳೆ ಇಲ್ಲದೇ ಚೆಂಡು ಹೂವು ಬೆಳೆದ ರೈತ ಸಮೂಹ ಕಂಗಾಲಾಗಿದ್ದು, ಅವರ ಗೋಳು ಹೇಳತೀರದಾಗಿದೆ.

ಜಿಲ್ಲೆಯಾದ್ಯಂತ ಸುಮಾರು 2 ಸಾವಿರ ಕ್ಕೂ ಅಧಿಕ ಎಕರೆಯಲ್ಲಿ ಚೆಂಡು ಹೂ ಬೆಳೆಯಲಾಗಿದೆ. ಇಳುವರಿ ಕಡಿಮೆಯಾಗುತ್ತಿರುವುದರಿಂದ ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮಸ್ಥರ ಗೋಳು ಹೇಳತೀರದಾಗಿದೆ. ಪ್ರತಿ ಎಕರೆಗೆ 10 ರಿಂದ 15 ಟನ್​ವರೆಗೆ ಚೆಂಡು ಹೂ ಬೆಳೆ ಇಳುವರಿ ಬರುತ್ತಿತ್ತು. ಆದರೆ ಈ ಭಾರಿ‌ ಮಳೆ ಅಭಾವದಿಂದ ಕೇವಲ 5 ಟನ್ ನಷ್ಟು ಬರುತ್ತಿದೆ. ಎಕರೆಗೆ ಒಂದು ಲಕ್ಷ ಬರುತ್ತಿದ್ದ ಲಾಭ, ಇದೀಗ 30 ರಿಂದ 40 ಸಾವಿರ ರೂ. ಇಳಿಕೆ ಆಗಿದೆ.

ಇದನ್ನೂ ಓದಿ: Drought: ಬೆಳಗಾವಿ -ಬಾಗಲಕೋಟೆ ಜಿಲ್ಲೆಗಳಲ್ಲಿ ಬರದ ನರಕ ದರ್ಶ‌ನ, ಕೃಷಿ ಭೂಮಿಗಳು ಒಣಒಣ ಭಣಭಣ, ಇಲ್ಲಿದೆ ಸಂಪೂರ್ಣ ವರದಿ

ಮಳೆ ಅಭಾವದಿಂದ ಕುಂಕುಮ ರೋಗಕ್ಕೆ ಚೆಂಡು ಮಲ್ಲಿಗೆ ತುತ್ತಾಗುತ್ತಿದೆ. ಜೊತೆಗೆ ಮಳೆ ಅಭಾವದಿಂದ  ಚೆಂಡು ಹೂ ಇಳುವರಿ ಸಹ ಕಡಿಮೆಯಾಗುತ್ತಿದೆ. ಹಾಗಾಗಿ ಚೆಂಡು ಹೂ ಬೆಳೆದ ರೈತರು ಮಾತ್ರ ಕಂಗಾಲಾಗಿದ್ದಾರೆ.

ಬರದ ಮಧ್ಯೆ ರೈತರಿಗೆ ಕಾಡು ಹಂದಿಗಳ ಕಾಟ

ಬಾಗಲಕೋಟೆ ‌ತಾಲ್ಲೂಕಿನ ನೀರಲಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಬರ ನರ್ತನ ಶುರುವಾಗಿದೆ. ಮಳೆಯಿಲ್ಲದೆ, ಬೆಳೆಯಿಲ್ಲದೆ ಭೂಮಿ‌ ಬರಡಾಗಿ ರೈತರು‌ ಕಂಗಾಲಾಗಿದ್ದಾರೆ. ಆದರೆ ಇದೇ ಬೆನ್ನಲ್ಲೇ ನೀರಲಕೇರಿ ಗ್ರಾಮದ ರೈತರಿಗೆ ಮಾತ್ರ ಕಾಡು ಹಂದಿಗಳ ಕಾಟ ಶುರುವಾಗಿದೆ. ಊರ ಸುತ್ತ ಇರುವ ಗುಡ್ಡದಿಂದ ರಾತ್ರಿ ಹಿಂಡು ಹಿಂಡಾಗಿ ‌ಕಾಡು ಹಂದಿಗಳು ಹೊಲಕ್ಕೆ ದಾಳಿ ಮಾಡುತ್ತಿವೆ.

ಇದನ್ನೂ ಓದಿ: ನೀರು ಹರಿಯುತ್ತಿದ್ದ ಕಾಲುವೆ ಏಕಾಏಕಿ ಬಂದ್; ಹೇಮಾವತಿ ಜಲಾಶಯದ ನೀರು ನಂಬಿ ಭತ್ತ ಬಿತ್ತನೆ ಮಾಡಿದ ರೈತರಲ್ಲಿ ಆತಂಕ

ಗೋವಿನ ಜೋಳಕ್ಕೆ ನುಗ್ಗಿ ತಿಂದು ತೇಗುತ್ತಿವೆ. ಜೊತೆಗೆ ಗೋವಿನಜೋಳ ನೆಲಕ್ಕುರುಳಿ ಕೂಡ ಹಾಳಾಗುತ್ತಿದೆ. ಬರದ‌ ಮಧ್ಯೆ ಅಲ್ಲೋ ಇಲ್ಲೋ ಅಲ್ಪ ಸ್ವಲ್ಪ ಬರುತ್ತಿರುವ ಬೋರ್ವೆಲ್ ನೀರಿನಿಂದ ಬೆಳೆದ‌ ಗೋವಿನಜೋಳ ಕಾಡು ಹಂದಿ ಪಾಲಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ನೀರಲಕೇರಿ ಗ್ರಾಮದಲ್ಲಿ ಬೆಳೆದ ಮೆಣಸಿನ‌ ಬೆಳೆ‌, ಸಜ್ಜೆ ಎಲ್ಲವೂ ಮಳೆಯಿಲ್ಲದೆ ಹಾಳಾಗಿದೆ. ಗೋವಿನ‌ಜೋಳ ಕೆಲವೊಂದು ಕಡೆ ಅಲ್ಪ ಸ್ವಲ್ಪ ನೀರು ಬರುವ ಬೋರ್ವೆಲ್ ಮೂಲಕ‌ ಬೆಳೆಯಲಾಗಿದೆ. ಆದರೆ ಅದಕ್ಕೆ ಕಾಡು ಹಂದಿಗಳ‌ ಕಾಟ ಜೋರಾಗಿದ್ದು, ಇಡೀ ರಾತ್ರಿ ರೈತರು ನಿದ್ದೆಯಿಲ್ಲದೆ ಕಾಡು ಹಂದಿ ಕಾಯುವ ಪರಿಸ್ಥಿತಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:25 pm, Thu, 21 September 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ