ನೀರು ಹರಿಯುತ್ತಿದ್ದ ಕಾಲುವೆ ಏಕಾಏಕಿ ಬಂದ್; ಹೇಮಾವತಿ ಜಲಾಶಯದ ನೀರು ನಂಬಿ ಭತ್ತ ಬಿತ್ತನೆ ಮಾಡಿದ ರೈತರಲ್ಲಿ ಆತಂಕ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದೊಡ್ದ ಸಂಘರ್ಷವೇ ಶುರುವಾಗಿದ್ದು, ಕಾವೇರಿ ನದಿ ನೀರು ನಿರ್ವಹಣಾ ಪ್ರಾದಿಕಾರದ ತೀರ್ಪನ್ನು ಸುಪ್ರಿಂಕೋರ್ಟ್ ಎತ್ತಿಹಿಡಿದಿರೋದು ಕಾವೇರಿಕೊಳ್ಳದ ರೈತರ ಹೋರಾಟಕ್ಕೆ ಕಿಚ್ಚು ಹಚ್ಚಿದೆ. ಇನ್ನೊಂದೆಡೆ ಈ ಭಾಗದ ಜಲಾಶಯಗಳ ನೀರನ್ನೇ ನಂಬಿ ಬೆಳೇ ಮಾಡಿದ್ದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ನೀರು ಹರಿಯುತ್ತಿದ್ದ ಕಾಲುವೆ ಏಕಾಏಕಿ ಬಂದ್; ಹೇಮಾವತಿ ಜಲಾಶಯದ ನೀರು ನಂಬಿ ಭತ್ತ ಬಿತ್ತನೆ ಮಾಡಿದ ರೈತರಲ್ಲಿ ಆತಂಕ
ಹಾಸನ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 21, 2023 | 4:11 PM

ಹಾಸನ, ಸೆ.21: ಒಂದುವರೆ ತಿಂಗಳಿಂದ ನೀರು ಹರಿಯುತ್ತಿದ್ದ ಕಾಲುವೆ ಏಕಾಏಕಿ ಬಂದ್​ ಮಾಡಲಾಗಿದ್ದು, ಹೇಮಾವತಿ ಜಲಾಶಯ (Hemavathi Dam)ದ ನೀರು ನಂಬಿ ಭತ್ತ ಬಿತ್ತನೆ ಮಾಡಿದ ರೈತರಲ್ಲಿ ಇದೀಗ ಆತಂಕ ಎದುರಾಗಿದೆ. ತಮಿಳುನಾಡಿಗೆ ನೀರು ಬಿಡಲೆಂದು ರೈತರಿಗೆ ಅನ್ಯಾಯ ಮಾಡುತ್ತಿದೆಯಾ ಸರ್ಕಾರ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ. ತಮಿಳುನಾಡಿಗೆ ನೀರು ಬಿಟ್ಟರೆ, ರೈತರ ಬೆಳೆಗೆ ನೀರಿಲ್ಲ. ಬೆಳೆಗೆ ನೀರು ಕೊಡದಿದ್ದರೆ ಬೆಳೆ ಉಳಿಯೋದು ಕಷ್ಟ.

ಹೌದು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕದ ಮದ್ಯೆ ನಡೆಯುತ್ತಿರುವ ಸಂಘರ್ಷ, ಇಂದು ಬೇರೆಯದೇ ಹಂತ ತಲುಪಿದೆ. ಸುಪ್ರಿಂಕೋರ್ಟ್ ಕೂಡ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿದ್ದು, ಕಾವೇರಿಕೊಳ್ಳದ ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಈ ಭಾಗದ ಪ್ರಮುಖವಾದ ಹೇಮಾವತಿ ಜಲಾಶಯದಲ್ಲಿ ಸದ್ಯ ಕೇವಲ 17 ಟಿಎಂಸಿ ನೀರಿದೆ. ಇದರಲ್ಲಿ ಬಳಕೆಗೆ ಯೋಗ್ಯ ನೀರು ಕೇವಲ 13 ಟಿಎಂಸಿ, ಗರಿಷ್ಟ 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶ ಇದೆ. ಆದರೆ, ಈ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮವಾಗಿ ಈಗ ಕೇವಲ 17 ಟಿಎಂಸಿ ಅಂದ್ರೆ 2896 ಅಡಿ ಮಾತ್ರ ನೀರಿದೆ.

ಇದನ್ನೂ ಓದಿ:ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುವ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಬೆಂಗಳೂರು ನಾಗರೀಕರು

ಸದ್ಯ ಜಲಾಶಯಕ್ಕೆ 2378 ಕ್ಯುಸೆಕ್ ಒಳಹರಿವು ಇದ್ದು, 1300ಕ್ಯುಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಜುಲೈನಲ್ಲಿ ಸುರಿದ ಮಳೆಯಿಂದ ಜಲಾಶಯಕ್ಕೆ 15 ಟಿಎಂಸಿಯಷ್ಟು ನೀರು ಬಂದಿತ್ತು. ಹಾಗಾಗಿಯೇ ಹೇಮಾವತಿ ಜಲಾನಯನ ಪ್ರದೇಶದ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರನ್ನು ಹರಿಸಲಾಗಿತ್ತು. ಇದನ್ನೇ ನಂಬಿದ ರೈತರು ಭತ್ತದ ಬೆಳೆಯನ್ನ ಬಿತ್ತನೆ ಮಾಡಿದರು. ಆದ್ರೆ, ಈಗ ಜಲಾಶಯದಲ್ಲಿ ನೀರಿನ ಸಂಗ್ರಹ ಕುಸಿದಿದೆ.

ತಮಿಳುನಾಡಿಗೂ ನೀರು ಬಿಡಬೇಕಾದ ಪರಿಸ್ಥಿತಿ ಹಿನ್ನಲೆಯಲ್ಲಿ ಕಾಲುವೆಗಳಿಗೆ ಹರಿಸಲಾಗುತ್ತಿದ್ದ ನೀರನ್ನ ನಿಲ್ಲಿಸಲಾಗಿದೆ. ಕಾಲುವೆ ನೀರನ್ನೆ ನಂಬಿ ತಿಂಗಳ ಹಿಂದೆ ಭತ್ತದ ಪೈರು ಬಿತ್ತಿದ್ದ ರೈತರು ಈಗ ದಿಢೀರ್ ನೀರು ನಿಲ್ಲಿಸಿರುವ ಕ್ರಮಕ್ಕೆ ಆಕ್ರೊಶ ಹೊರ ಹಾಕಿದ್ದಾರೆ. ದಿನದ 24 ಗಂಟೆಯೂ ನೀರಿರಬೇಕಾದ ಬೆಳೆ ಭತ್ತ. ಆದ್ರೆ, ಇಷ್ಟು ದಿನ ನೀರು ಬಿಟ್ಟು ಈಗ ಏಕಾಏಕಿ ನೀರು ನಿಲ್ಲಿಸಿರುವ ಕ್ರಮ ಸರಿಯಲ್ಲ. ಇನ್ನು ಮೂರು ತಿಂಗಳು ರೈತರ ಬೆಳೆಗಳಿಗೆ ನೀರು ಕೊಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ತಮಿಳುನಾಡಿಗೆ ನೀರು 

ಇನ್ನು ಹಾಸನ ಜಿಲ್ಲೆಯ ಗೊರೂರು ಸಮೀಪ ಇರೋ ಹೇಮಾವತಿ ಜಲಾಶಯ ಕಾವೇರಿಕೊಳ್ಳದ ಪ್ರಮುಖ ಜಲಾಶಯ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 44,980 ಹೆಕ್ಟೇರ್ ಪ್ರದೇಶವನ್ನು ನೀರಾವರಿ ಬೆಳೆಗಾಗಿ ಗುರುತಿಸಲಾಗಿದೆ. ಇದರಲ್ಲಿ 20,980 ಎಕರೆ ಭತ್ತ ಬೆಳೆಯುವ ಪ್ರದೇಶ ಇದೆ. ಉಳಿದಂತೆ ಕಬ್ಬು, ರಾಗಿ, ದ್ವಿದಳ ದಾನ್ಯಬೆಳೆ ಬೆಳೆಯಲು ಅವಕಾಶ ಇದೆ. ಆದರೆ, ಈ ವರ್ಷ ಮಳೆ ಕೊರತೆಯಿಂದ 4,105 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಬಿತ್ತನೆಯಾಗಿದೆ. ಉಳಿದ ಬೆಳೆಗಳು ನಾಶವಾಗಿ ಹೋಗಿದೆ.

ಒಟ್ಟು 15,301 ಹೆಕ್ಟೇರ್ ಪ್ರದೇಶದಲ್ಲಿ ವಿವಿದ ಬೆಳಗಳ ಬಿತ್ತನೆ ಮಾಡಿದ್ದು ಈಗ ರೈತರು ಬೆಳೆ ಕೆಳೆದುಕೊಳ್ಳೋ ಆತಂಕ ಎದುರಿಸುತ್ತಿದ್ದಾರೆ. ಇಷ್ಟು ದಿನ ನೀರುಬಿಟ್ಟಿದ್ದ ಅದಿಕಾರಿಗಳು ಈಗ ಕಾಲುವೆ ನೀರು ಆಶ್ರಿತ ಬೆಳೆ ಮಾಡೋ ಹಾಗಿಲ್ಲ ಎಂದು ಹೇಳುತ್ತಿದ್ದಾರೆ. ತುತ್ತಿನ ಬೆಳೆ ಭತ್ತವನ್ನ ಬಿತ್ತಿದ್ದ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ನೀರು ಬಿಡುತ್ತಾರೆಂದು ನಂಬಿ ಬೆಳೆ ಮಾಡಿದ ರೈತರು ಈಗ ಏಕಾಏಕಿ ನೀರು ನಿಲ್ಲಿಸಿರೋದ್ರಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಒಟ್ಟಿನಲ್ಲಿ ತಮಿಳುನಾಡಿಗೆ ನೀರು ಬಿಡಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಆದ್ರೆ, ತಮಿಳುನಾಡಿಗೆ ನೀರು ಹರಿಸಿದ್ರೆ, ನಮ್ಮ ರೈತರ ಬೆಳೆಗಳಿಗೆ ನೀರಿಲ್ಲದೆ ಇಲ್ಲಿನ ತುತ್ತಿನ ಬೆಳೆಯೇ ನೆಲ ಕಚ್ಚೋ ಆತಂಕದ ಜೊತೆಗೆ ಕುಡಿಯೋ ನೀರಿಗೂ ತತ್ವಾರ ಶುರುವಾಗುವ ಭೀತಿ ಸೃಷ್ಟಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್