ಇಡಿ ದಾಳಿ ಸತೀಶ್ ಜಾರಕಿಹೊಳಿಯನ್ನು ಬಿಜೆಪಿಗೆ ಸೆಳೆಯುವ ತಂತ್ರನಾ?: ಸಚಿವ ಕಾಶಪ್ಪನವರ್​​ ಹೇಳಿಕೆ ಬೆನ್ನಲ್ಲೇ ಹೀಗೊಂದು ಚರ್ಚೆ

ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲಿನ ಇಡಿ ದಾಳಿ ಬಿಜೆಪಿಯ ಕುತಂತ್ರ ಎಂದಿರುವ ಶಾಸಕ ವಿಜಯಾನಂದ ಕಾಶಪ್ಪನವರ್, ಬಿಜೆಪಿಗೆ ಸೇರದಿದ್ದರೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸತೀಶ್ ಮನೆ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್​ನವರ ಕೈವಾಡವಿದೆ. ಮುಡಾ ವಿವಾದದ ಹಿಂದೆಯೂ ಕಾಂಗ್ರೆಸ್​ನವರೇ ಇದ್ರು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿರುವುದನ್ನು ನಾನು ಗಮನಿಸಿಲ್ಲ. ಇಂತಹ ಆರೋಪಗಳು ಕೇಳಿ ಬರುತ್ತಿವೆ, ಆದ್ರೆ ಕಾಂಗ್ರೆಸ್​ನವರ ಕೈವಾಡವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಡಿ ದಾಳಿ ಸತೀಶ್ ಜಾರಕಿಹೊಳಿಯನ್ನು ಬಿಜೆಪಿಗೆ ಸೆಳೆಯುವ ತಂತ್ರನಾ?: ಸಚಿವ ಕಾಶಪ್ಪನವರ್​​ ಹೇಳಿಕೆ ಬೆನ್ನಲ್ಲೇ ಹೀಗೊಂದು ಚರ್ಚೆ
ಸತೀಶ್​​ ಜಾರಕಿಹೊಳಿ ಮತ್ತು ವಿಜಯಾನಂದ ಕಾಶಪ್ಪನವರ್​​
Image Credit source: Tv9 Kannada
Edited By:

Updated on: Sep 15, 2026 | 4:10 PM

ಬಾಗಲಕೋಟೆ, ಸೆಪ್ಟೆಂಬರ್​​ 15: ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಒಂದು ಕುತಂತ್ರ. ಈ ಹಿಂದೆ ಕಾಂಗ್ರೆಸ್​ನ 56 ಶಾಸಕರ ಪಟ್ಟಿ ಮಾಡಿದ್ದರು. ಆನೇಕ ಜನ ನಮ್ಮ ಹೆಸರನ್ನೂ ಕೊಟ್ಟಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ನಿಮ್ಮ ಮೇಲೆ ದಾಳಿ ಮಾಡ್ತೇವೆ ಅಂತಾರೆ. ಆದರೆ ನಾನು ಇಡಿ, ಐಟಿ ದಾಳಿ ಸೇರಿದಂತೆ ಎಲ್ಲವನ್ನೂ ಎದುರಿಸಲು ಸಿದ್ಧ. ಯಾವಾಗ ಬೇಕಾದ್ರೂ ನಮ್ಮ ಮನೆಗೆ ಇಡಿ, ಐಟಿಯವರು ಬರಬಹುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಅವರ ಈ ಹೇಳಿಕೆಯ ಬೆನ್ನಲ್ಲೇ ಇಡಿ ದಾಳಿ ಸತೀಶ್ ಜಾರಕಿಹೊಳಿಯನ್ನು ಬಿಜೆಪಿಗೆ ಸೆಳೆಯುವ ತಂತ್ರನಾ? ಎಂಬ ಪ್ರಶ್ನೆ ಉದ್ಭವಿಸಿದೆ.

‘ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ’

ಸತೀಶ್ ಮನೆ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್​ನವರ ಕೈವಾಡವಿದೆ. ಮುಡಾ ವಿವಾದದ ಹಿಂದೆಯೂ ಕಾಂಗ್ರೆಸ್​ನವರೇ ಇದ್ರು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿರುವುದನ್ನು ನಾನು ಗಮನಿಸಿಲ್ಲ. ಇಂತಹ ಆರೋಪಗಳು ಕೇಳಿ ಬರುತ್ತಿವೆ, ಆದ್ರೆ ಕಾಂಗ್ರೆಸ್​ನವರ ಕೈವಾಡವಿಲ್ಲ. ವಿನಾಕಾರಣ ಆರೋಪ ಮಾಡುತ್ತಾರೆ, ಅವೆಲ್ಲ ಸರಿಯಿಲ್ಲ, ಒಪ್ಪುವಂತಹದ್ದಲ್ಲ. ನಮ್ಮ ನಾಯಕರ ಬೆಳವಣಿಗೆ ಸಹಿಸದೆ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ. ಕಾಂಗ್ರೆಸ್​ನವರ ಮೇಲೆ ಮಾತ್ರ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ. ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ನವರ ಮೇಲೆ ದ್ವೇಷ, ಸೇಡಿನ ರಾಜಕಾರಣ ನಡೆಸಲಾಗ್ತಿದೆ. ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮನೆ ಮೇಲೆ ಇಡಿ ದಾಳಿ ಮಾಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಹಗರಣವಾಗಿದೆ, ಅವೆಲ್ಲವನ್ನೂ ಮುಚ್ಚಿಹಾಕಿದ್ದಾರೆ ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಆತುರ ಬೇಡ, ಕೇಂದ್ರದ ನಿಯಮಾನುಸಾರ ಬರ ಪೀಡಿತ ತಾಲೂಕುಗಳ ಘೋಷಣೆ: ಸಿಎಂ ಡಿ.ಕೆ. ಶಿವಕುಮಾರ್​​

ಇಡಿಗೆ ದೂರು ಕೊಟ್ಟಿದ್ದು ಯಾರೆಂದು ಗೊತ್ತು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೆ.ಎನ್.ರಾಜಣ್ಣ, ಮುಡಾ ದೂರು ಕೊಟ್ಟಿದ್ದು ಯಾರು, ಕಾಂಗ್ರೆಸ್​ನವರೇ ಅಲ್ವಾ? ಅಧಿಕಾರ ಅನ್ನೋದು ಪಾಯ್ಸನ್, ಗಿಡದ ಸುತ್ತ ಇರುವ ಕಳೆ ರೀತಿ ಅದು. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದನ್ನು ನಂಬುತ್ತೇನೆ ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Loading...
Unable to load recommendations.
Follow Us