ಬಾಗಲಕೋಟೆ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ; ನೀರು ನುಗ್ಗಿ ಕುಂಬಾರಗಲ್ಲಿ ವ್ಯಾಪಾರಿಗಳ ಶೆಡ್‌ ಮುಳುಗಡೆ

ಡಿಸಿಎಂ ಗೋವಿಂದ ಕಾರಜೋಳ ಮತ್ತು ಕ್ಷೇತ್ರದ ಶಾಸಕರು ನಮ್ಮ ಕಡೆ ತಿರುಗಿ ನೋಡಿಲ್ಲ. ಅವರು ಇದ್ದು ಇಲ್ಲದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಬದುಕಿದ್ದೀರೊ ಸತ್ತೀರೊ ಎಂದು ನೋಡಲು ಬಂದಿಲ್ಲ ಎಂದು ವ್ಯಾಪಾರಿ ರೇಖಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ; ನೀರು ನುಗ್ಗಿ ಕುಂಬಾರಗಲ್ಲಿ ವ್ಯಾಪಾರಿಗಳ ಶೆಡ್‌ ಮುಳುಗಡೆ
ನೀರು ನುಗ್ಗಿ ಕುಂಬಾರಗಲ್ಲಿ ವ್ಯಾಪಾರಿಗಳ ಶೆಡ್‌ ಮುಳುಗಡೆ
Follow us
TV9 Web
| Updated By: preethi shettigar

Updated on:Jul 26, 2021 | 1:34 PM

ಬಾಗಲಕೋಟೆ: ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ, ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಕುಂಬಾರಗಲ್ಲಿಯಲ್ಲಿನ ಬಡ ವ್ಯಾಪಾರಸ್ಥರ ತಗಡಿನ ಶೆಡ್ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಪುಟ್ ಪಾತ್ ಚಪ್ಪಲಿ ವ್ಯಾಪಾರಿಗಳು ಸಂಕಷ್ಟಕ್ಕೆ ಗುರಿಯಾಗಿದ್ದು, ಶೆಡ್​ನಲ್ಲಿದ್ದ ಚಪ್ಪಲಿಗಳು ಜಲಾವೃತವಾಗಿದೆ. ಮನೆಯ ಅನೇಕ ವಸ್ತುಗಳು ನೀರಲ್ಲಿ ಮುಳುಗಡೆಯಾಗಿದೆ. ವ್ಯಾಪರಕ್ಕೆ ತಂದ ಚಪ್ಪಲಿಗಳು ಕೂಡ ನೀರು ಪಾಲಾಗಿದೆ ಎಂದು ಕಾಳಜಿ ಕೇಂದ್ರದಲ್ಲಿ ವ್ಯಾಪಾರಿ ರೇಖಾ ಅಳಲು ತೋಡಿಕೊಂಡಿದ್ದಾರೆ.

ಮೂರು ವರ್ಷದಿಂದ ಇದೇ ರೀತಿ ಮನೆ ಮುಳುಗಡೆ ಆಗುತ್ತಿದೆ. ನಮಗೆ ಮುಧೋಳ ‌ನಗರಸಭೆಯಿಂದ ಆಸರೆ ಮನೆ ಕೊಡುತ್ತಿಲ್ಲ. ಬರಿ ಜಾಗ ಇಲ್ಲ ಎಂಬ ನೆಪ ಹೇಳಿ ಮುಂದೂಡುತ್ತಿದ್ದಾರೆ. ಇದರಿಂದ ನಾವು ಪ್ರತಿ ಬಾರಿ ಪ್ರವಾಹ ಬಂದಾಗ ಈ ರೀತಿ ಗೋಳಾಡಬೇಕಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಮತ್ತು ಕ್ಷೇತ್ರದ ಶಾಸಕರು ನಮ್ಮ ಕಡೆ ತಿರುಗಿ ನೋಡಿಲ್ಲ. ಅವರು ಇದ್ದು ಇಲ್ಲದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಬದುಕಿದ್ದೀರೊ ಸತ್ತೀರೊ ಎಂದು ನೋಡಲು ಬಂದಿಲ್ಲ ಎಂದು ವ್ಯಾಪಾರಿ ರೇಖಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡಹಳ್ಳಿ ಗ್ರಾಮಕ್ಕೆ ನುಗ್ಗಿದ ನದಿ‌‌ ನೀರು ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ, ಯಡಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ಈ ಗ್ರಾಮದ 30ಮನೆಗಳು ನೀರಿನಿಂದ ಜಲಾವೃತವಾಗಿದೆ. ಆದರೂ ಯಾವುದೇ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿಲ್ಲ. ಹೀಗಾಗಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಯಡಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಸಂತ್ರಸ್ತರು ಅಡುಗೆ ಮಾಡಿಕೊಳ್ಳುತ್ತಿದ್ದಾರೆ.

ದೋಣಿ ಮೂಲಕ ಜಾನುವಾರು ಸ್ಥಳಾಂತರ ಗುಹೇಶ್ವರ ನಡುಗಡ್ಡೆ ಬಳಿಯ ಕೃಷ್ಣಾ ನದಿ ಪ್ರವಾಹ ಸ್ಥಿತಿ ಹಿನ್ನಲೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಂಕಣವಾಡಿಯಲ್ಲಿನ ಜಾನುವಾರುಗಳನ್ನು ದೋಣಿ ಮೂಲಕ ಸ್ಥಳಾಂತರ ಮಾಡಲಾಗಿದೆ. ಈ ವೇಳೆ ನದಿಯೊಳಗೆ ಎಮ್ಮೆಕರು ಹೋಗಿದ್ದು, ದೋಣಿಯಿಂದ ಜಿಗಿದು ಯುವಕ, ಎಮ್ಮೆಕರುವನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ.

cow rescue

ಎಮ್ಮೆಕರುವನ್ನು ದಡಕ್ಕೆ ಕರೆದುಕೊಂಡು ಬರುತ್ತಿರುವ ದೃಶ್ಯ

ಕಸಬಾಜಂಬಗಿ ಗ್ರಾಮದ ಹಲವಾರ ಮನೆಗಳಿಗೆ ನುಗ್ಗಿದ ನೀರು ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಸಬಾಜಂಬಗಿ ಗ್ರಾಮದ ಹಲವಾರ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಮನೆಯಲ್ಲಿನ ವಸ್ತುಗಳನ್ನು ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ.

ಗೋವನಕೊಪ್ಪ-ಕೊಣ್ಣೂರು ನಡುವಿನ ಸೇತುವೆ ಮುಳುಗಡೆ ಮಲಪ್ರಭಾ ನದಿಯಲ್ಲಿ ಪ್ರವಾಹ ಹೆಚ್ಚಿದ ಹಿನ್ನೆಲೆಯಲ್ಲಿ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗೋವನಕೊಪ್ಪ-ಕೊಣ್ಣೂರು ನಡುವಿನ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಜಲಾವೃತದಿಂದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿದೆ.

ಜಮಖಂಡಿ ತಾಲೂಕಿನ ಹತ್ತಾರು ಹಳ್ಳಿಗಳು ಜಲಾವೃತ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಜಮಖಂಡಿ ತಾಲೂಕಿನ ಹತ್ತಾರು ಹಳ್ಳಿಗಳು ಜಲಾವೃತವಾಗಿದೆ. ಕಂಕಣವಾಡಿ ಗ್ರಾಮದ ತೋಟದ ವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು, ನಡುಗಡ್ಡೆ ಪ್ರದೇಶದ ಜನರನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ಟ್ರ್ಯಾಕ್ಟರ್ ಎಂಜಿನ್​ಗಳನ್ನು ಕೂಡ ಬೋಟ್ ಮೂಲಕ ಸ್ಥಳಾಂತರ ಮಾಡಲಾಗಿದ್ದು, ತಾಲೂಕು ಆಡಳಿತ ಜನರ ನೆರವಿಗೆ ನಿಂತಿದೆ.

ಇದನ್ನೂ ಓದಿ: Karnataka Dams Water Level: ಮಳೆನಾಡು ಕರ್ನಾಟಕ, ಶೇ 20ರಷ್ಟು ಅಧಿಕ ಮಳೆ, 12 ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

Bengaluru Rains: ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿತ್ತು ಮನೆ; ರಸ್ತೆಯಲ್ಲಿ ಮೊಣಕಾಲಿನ ತನಕ ನಿಂತ ನೀರು

Published On - 11:55 am, Mon, 26 July 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್