ಬಾಗಲಕೋಟೆಯಲ್ಲಿ ರಂಗೇರಿದ ಯುವಕ-ಯುವತಿಯರ ಕಬ್ಬಡ್ಡಿ ಖದರ್

ಬಾಗಲಕೋಟೆಯಲ್ಲಿ ರಂಗೇರಿದ ಯುವಕ-ಯುವತಿಯರ ಕಬ್ಬಡ್ಡಿ ಖದರ್

ಬಾಗಲಕೋಟೆ: ಕ್ರಿಕೆಟ್, ಫುಟ್​ಬಾಲ್​ಗೆ ಸೀಮಿತವಾಗಿದ್ದ ಯುವಕರ ಕ್ರೀಡಾ ಕ್ರೇಜ್ ಈಗ ಕಬ್ಬಡ್ಡಿಗೆ ಟ್ರಾನ್ಸ್​ಫರ್ ಆಗಿದೆ. ಬೌಂಡರಿ, ಕ್ಯಾಚ್, ರನೌಟ್ ಅಂತಿದ್ದವ್ರೆಲ್ಲಾ ಕಬ್ಬಡ್ಡಿ ಕಮಾಲ್ ಕಣ್ತುಂಬಿಕೊಳ್ಳಲು ಮುಗಿಬೀಳ್ತಿದ್ದಾರೆ. ಹೀಗೆ ಇಲ್ಲೊಂದು ಹಳ್ಳಿಯ ಯುವ ಸಮೂಹ ತೊಡೆ ತಟ್ಟಿ ಕಬ್ಬಡ್ಡಿ ಅಖಾಡಕ್ಕೆ ಇಳಿದು, ಕಮಾಲ್ ಸೃಷ್ಟಿಸಿತು. ಫ್ರೀ ಸೈಜ್ ಜೆರ್ಸಿ ತೊಟ್ಟು ಕಬ್ಬಡ್ಡಿ ಅಖಾಡದಲ್ಲಿ ಌಕ್ಟಿವ್ ಆಗಿರೋ ಗಂಡು ಹೈಕಳು. ಇನ್ನು ನಾವು ಯಾರಿಗೂ ಕಮ್ಮಿ ಇಲ್ಲ ಅಂತಾ ಕಬ್ಬಡ್ಡಿ ಕೋರ್ಟ್​ನಲ್ಲಿ ಸದ್ದು ಮಾಡ್ತಿರೋ ಹೆಣ್ಣುಮಕ್ಕಳು. ಅಂದಹಾಗೆ ಇದು ಅಂತಾರಾಷ್ಟ್ರೀಯ […]

sadhu srinath

|

Dec 24, 2019 | 7:01 AM

ಬಾಗಲಕೋಟೆ: ಕ್ರಿಕೆಟ್, ಫುಟ್​ಬಾಲ್​ಗೆ ಸೀಮಿತವಾಗಿದ್ದ ಯುವಕರ ಕ್ರೀಡಾ ಕ್ರೇಜ್ ಈಗ ಕಬ್ಬಡ್ಡಿಗೆ ಟ್ರಾನ್ಸ್​ಫರ್ ಆಗಿದೆ. ಬೌಂಡರಿ, ಕ್ಯಾಚ್, ರನೌಟ್ ಅಂತಿದ್ದವ್ರೆಲ್ಲಾ ಕಬ್ಬಡ್ಡಿ ಕಮಾಲ್ ಕಣ್ತುಂಬಿಕೊಳ್ಳಲು ಮುಗಿಬೀಳ್ತಿದ್ದಾರೆ. ಹೀಗೆ ಇಲ್ಲೊಂದು ಹಳ್ಳಿಯ ಯುವ ಸಮೂಹ ತೊಡೆ ತಟ್ಟಿ ಕಬ್ಬಡ್ಡಿ ಅಖಾಡಕ್ಕೆ ಇಳಿದು, ಕಮಾಲ್ ಸೃಷ್ಟಿಸಿತು.

ಫ್ರೀ ಸೈಜ್ ಜೆರ್ಸಿ ತೊಟ್ಟು ಕಬ್ಬಡ್ಡಿ ಅಖಾಡದಲ್ಲಿ ಌಕ್ಟಿವ್ ಆಗಿರೋ ಗಂಡು ಹೈಕಳು. ಇನ್ನು ನಾವು ಯಾರಿಗೂ ಕಮ್ಮಿ ಇಲ್ಲ ಅಂತಾ ಕಬ್ಬಡ್ಡಿ ಕೋರ್ಟ್​ನಲ್ಲಿ ಸದ್ದು ಮಾಡ್ತಿರೋ ಹೆಣ್ಣುಮಕ್ಕಳು. ಅಂದಹಾಗೆ ಇದು ಅಂತಾರಾಷ್ಟ್ರೀಯ ಪಂದ್ಯವಂತೂ ಅಲ್ಲ. ಆದರೆ ಜನರ ಬೆಂಬಲ ಮಾತ್ರ ಅಂತಾರಾಷ್ಟ್ರೀಯ ಪಂದ್ಯವನ್ನೂ ಮೀರಿಸುವಂತಿತ್ತು.

ಪ್ರವಾಹ ಪೀಡಿತ ಜಿಲ್ಲೆಯಲ್ಲಿ ಕಬಡ್ಡಿ ಆಟದ ಕಮಾಲ್..! ಅಂದಹಾಗೆ ಇದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನಲ್ಲಿರುವ ಸೊನ್ನ ಗ್ರಾಮ. ಮಾರುತೇಶ್ವರ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಜೈಸಿದ್ದ ಸ್ಫೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸೊನ್ನ ಗ್ರಾಮದಲ್ಲಿ ಅಂತಾರಾಜ್ಯ ಕಬಡ್ಡಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಂತಾರಾಜ್ಯ ಮಟ್ಟದ ಕಬಡ್ಡಿ ಕೂಟದಲ್ಲಿ ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ಮಹಾರಾಷ್ಟ್ರ, ಹರ್ಯಾಣ, ಉತ್ತರಪ್ರದೇಶದಿಂದ ಯುವಕ-ಯುವತಿಯರು ತಂಡ ಕಟ್ಟಿಕೊಂಡು ಹಾಜರಾಗಿದ್ದರು.

ಸ್ಪರ್ಧೆಯಲ್ಲಿ ಯುವಕರ 40 ತಂಡಗಳು ಹಾಗೂ ಯುವತಿಯರ 30 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವಾಗಿ 40 ಸಾವಿರ, ದ್ವಿತೀಯ ಬಹುಮಾನವಾಗಿ 30 ಹಾಗೂ ತೃತೀಯ ಸ್ಥಾನ ಪಡೆದವರಿಗೆ 20 ಸಾವಿರ ನಗದು ಬಹುಮಾನ ನೀಡಲಾಯಿತು.

ಒಟ್ನಲ್ಲಿ ದೇಸಿ ಆಟ ಕಬಡ್ಡಿಯನ್ನ ಉಳಿಸಿ ಬೆಳಸಬೇಕಾಗಿದ್ದು, ಇತರ ಕ್ರೀಡೆಗಳ ಜೊತೆಗೆ ಕಬಡ್ಡಿಗೂ ಉತ್ತೇಜನ ನೀಡಬೇಕಿದೆ. ಇಂದಿನ ಯುವ ಪೀಳಿಗೆಗೆ ಕಬಡ್ಡಿಯ ಮಹತ್ವ ಸಾರಬೇಕಿದೆ ಅನ್ನೋದು ಕಬಡ್ಡಿ ಪ್ರಿಯರ ಸಲಹೆ.

Follow us on

Related Stories

Most Read Stories

Click on your DTH Provider to Add TV9 Kannada