AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದಕ್ಷಿಣೆ ಕಿರುಕುಳ ಆರೋಪ: ಸಾಫ್ಟ್​ವೇರ್​ ಇಂಜಿನಿಯರ್ ಎಂದು ಸುಳ್ಳು ಹೇಳಿ ದಂತ ವೈದ್ಯೆಗೆ ವಂಚನೆ

ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂದು ‌ಹೇಳಿ‌ ಮೋಸ ಮಾಡಿ ಮದುವೆ ಮಾಡಿದ್ರು. ಮದುವೆ ವೇಳೆ ಮೌನಿಕಾ ಪೋಷಕರಿಂದ 1 ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, 50 ಲಕ್ಷ ನಗದು ಪಡೆದಿದ್ದಾರೆ.

ವರದಕ್ಷಿಣೆ ಕಿರುಕುಳ ಆರೋಪ: ಸಾಫ್ಟ್​ವೇರ್​ ಇಂಜಿನಿಯರ್ ಎಂದು ಸುಳ್ಳು ಹೇಳಿ ದಂತ ವೈದ್ಯೆಗೆ ವಂಚನೆ
ಪತಿ ರಘುರಾಮ ರೆಡ್ಡಿ, ಪತ್ನಿ ದಂತ ವೈದ್ಯೆ ಮೌನಿಕಾ
TV9 Web
| Edited By: |

Updated on:Sep 04, 2022 | 11:13 AM

Share

ಬಳ್ಳಾರಿ: ಸಾಫ್ಟ್​ವೇರ್​ ಇಂಜಿನಿಯರ್ ಎಂದು ಸುಳ್ಳು ಹೇಳಿ ದಂತ ವೈದ್ಯೆಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಯತ್ನಿಸಿರುವಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿಯ ಸಂಗನಕಲ್ ನಿವಾಸಿ ರಘುರಾಮ ರೆಡ್ಡಿ ವಿರುದ್ಧ ಹೈದರಾಬಾದ್​ ಮೂಲದ ದಂತ ವೈದ್ಯೆ ಮೌನಿಕಾ ರೆಡ್ಡಿ ಆರೋಪ ಮಾಡಿದ್ದಾರೆ. ಮೊದಲ ಪತ್ನಿಗೆ ಡೈವರ್ಸ್ ನೀಡದೇ ರಘುರಾಮ 2ನೇ ಮದುವೆಯಾದ್ದಾನೆ. ಬಳ್ಳಾರಿಯ ಮಹಿಳಾ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 2019ರ ನ.28ರಂದು ಮೌನಿಕಾ-ರಘುರಾಮ ರೆಡ್ಡಿ ಮದುವೆ ಆಗಿತ್ತು. ಆಸ್ಟ್ರೇಲಿಯಾದಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಎಂದು​​ ಹೇಳಿ ದಂತ ವೈದ್ಯೆ ಮೌನಿಕಾ ರೆಡ್ಡಿ ಜತೆ  ರಘುರಾಮ ರೆಡ್ಡಿ ಮದುವೆ ಆಗಿದ್ದ. ಮದುವೆ ವೇಳೆ ಮೌನಿಕಾ ಪೋಷಕರಿಂದ 1 ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, 50 ಲಕ್ಷ ನಗದು ಪಡೆದಿದ್ದ. ಮದುವೆಯಾದ 2 ತಿಂಗಳ ಬಳಿಕ ಮತ್ತಷ್ಟು ಹಣ ತರುವಂತೆ ಪತ್ನಿ ಮೌನಿಕಾಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ.

ವರದಕ್ಷಿಣೆ ತರುವಂತೆ ಪತ್ನಿಯನ್ನು ತವರಿಗೆ ಕಳಿಸಿದ್ದ ರಘುರಾಮ ರೆಡ್ಡಿ, ಇದರ ಬೆನ್ನಲ್ಲೇ 2ನೇ ಮದುವೆಯಾಗಿದ್ದಾನೆ. ಮೊದಲ ಮದುವೆ ಆಗಿ 3 ವರ್ಷ ಕಳೆಯುವ ಮುನ್ನವೇ ಬಳ್ಳಾರಿ ಮೂಲದ ಯುವತಿ ಜತೆ ವಿವಾಹ ಆಗಿದ್ದಾನೆ. 2ನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಪತ್ನಿ ಮೌನಿಕಾ ಮೇಲೆ ಹಲ್ಲೆ ಮಾಡಿದ್ದು, ಅಲ್ಲದೆ ಕುಡುಗೋಲಿನಿಂದ ಕೊಲೆಗೆ ಯತ್ನಿಸಿದ ಆರೋಪ ಮಾಡಲಾಗಿದೆ. ಪತ್ನಿಯನ್ನು ಕೊಲೆ ಮಾಡಲು ಮುಂದಾದ ವಿಡಿಯೋ ವೈರಲ್ ಆಗಿದೆ. ಪತಿ ರಘುರಾಮರೆಡ್ಡಿ, 2ನೇ ಪತ್ನಿ ಹರ್ಷಿತಾ, ಅತ್ತೆ ವಿಶಾಲಾಕ್ಷಿ, ಮಾವ ನಾಗಿರೆಡ್ಡಿ, ಬಾಮೈದ ಹರೀಶ್ ರೆಡ್ಡಿ, ಇತರರ ವಿರುದ್ಧ ಕೇಸ್​ ದಾಖಲಾಗಿದ್ದು, ಪತಿ ರಘುರಾಮರೆಡ್ಡಿ, ಮಾವ ನಾಗಿರೆಡ್ಡಿ, ಬಾಮೈದ ಹರೀಶ್ ರೆಡ್ಡಿ ಬಂಧನ ಮಾಡಿದ್ದು, 2ನೇ ಪತ್ನಿ ಹರ್ಷಿತಾ, ಅತ್ತೆ ವಿಶಾಲಾಕ್ಷಿ, ಮತ್ತಿತರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನ ರಾಯಲ್ ಅರ್ಚಿಡ್ ಹೋಟೆಲ್ ಮೇಲೆ ಸಿಸಿಬಿ ರೇಡ್​: 100 ಜನರನ್ನು ವಶಕ್ಕೆ ಪಡೆದು ವಿಚಾರಣೆ

ಕುರಿತಾಗಿ ಡಾ. ಮೌನಿಕಾ ರೆಡ್ಡಿ ಹೇಳಿಕೆ ನೀಡಿದ್ದು, 2019ರಲ್ಲಿ‌‌‌ ಪುಟ್ಟಪರ್ತಿಯಲ್ಲಿ ಮದುವೆಯಾಗಿದ್ದೇವೆ. ಐವತ್ತು ಲಕ್ಷ ನಗದು ಒಂದು ಕೆ.ಜಿ. ಬಂಗಾರ, ಮತ್ತು ಒಂದು ಬೆಳ್ಳಿ ವರದಕ್ಷಿಣೆ ರೂಪದಲ್ಲಿ ಕೊಡಲಾಗಿದೆ. ಮದುವೆ ಮತ್ತು ಎಂಗೇಜ್ ಮೆಂಟ್ ಸೇರಿ ನಲವತ್ತು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಮದುವೆಯಾದ ಎರಡೇ ತಿಂಗಳಿಗೆ ಎಪ್ಪತ್ತು ಲಕ್ಷ ಮೌಲ್ಯದ ಪ್ಲಾಟ್ ಮತ್ತು ಐವತ್ತು ತೋಲೆ ಬಂಗಾರಕ್ಕೆ ಬೇಡಿಕೆ ಇಟ್ಟರು. ಮದುವೆ ಸರಿಯಾಗಿ ಮಾಡಿಲ್ಲವೆಂದು ಕಿರುಕುಳ ಪ್ರಾರಂಭ ಮಾಡಿದ್ರು. ನಂತರ ಬೆಂಗಳೂರಿನಲ್ಲಿರೋ ಮನೆಯ ಹದಿನಾಲ್ಕನೇ ಅಂತಸ್ತಿನ ಮನೆಯಿಂದ ಕೆಳಗೆ ಹಾಕಿ ಕೊಲ್ಲೋ ಯತ್ನ ಮಾಡಿದ್ರು. ನಂತರ ಹಣ ನೀಡಿ ಇಲ್ಲಾಂದ್ರೇ ನಿಮ್ಮ ‌ಮಗಳನ್ನು‌ಕರೆದುಕೊಂಡು ಹೋಗಿ ಎಂದು ನಮ್ಮ ತಂದೆಗೆ ಕರೆ ಮಾಡಿ ಬೆದರಿಸಿದ್ರು.

ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಎಂದು ‌ಹೇಳಿ‌ ಮೋಸ ಮಾಡಿ ಮದುವೆ ಮಾಡಿದ್ರು. ಅವರು ಮತ್ತವರ ತಮ್ಮ ಆಸ್ಟ್ರೇಲಿಯಾದಲ್ಲಿ ‌ಕೆಲಸ ಮಾಡ್ತಾರೆ ಅಂದ್ರು. ಆದರೆ ಅವರ ಬಳಿ‌ ಯಾವುದೇ ದಾಖಲೆಗಳಿಲ್ಲ. ಮದುವೆಯಾಗಿರೋ‌ ಹಣಕ್ಕಾಗಿ ಅನ್ನೋದು ನಂತರ ಗೊತ್ತಾಯ್ತು. ಡೈವರ್ಸ್ ಆಗೋದಕ್ಕೂ ಮುಂಚೆ ಎರಡನೇ ‌ಮದುವೆಯಾಗಿದ್ದಾರೆ. ಕೇಳೋಕೆ ಹೋದ್ರು ಆಟ್ಯಾಕ್ ಮಾಡಿ ನಮಗೆ ಹೋಡಿದ್ರು. ಮಾರಾಕಾಸ್ತ್ರಗಳಿಂದ ಕುಟುಂಬದ ಮೇಲೆ ಹಲ್ಲೆ ‌ಮಾಡಿದ್ರು. ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇ ದೊಡ್ಡ ಸಾಹಸ. ಈಗಾಗಲೇ ಹೈದರಾಬಾದ್​ನಲ್ಲಿ ದೂರು ದಾಖಲಾಗಿದೆ ಡೈವರ್ಸ್ ಆಗಿಲ್ಲ. ಹೀಗಾಗಿ ಇದೀಗ ‌ಮತ್ತೊಂದು ದೂರು ನೀಡಿದ್ದೇನೆ. ದೂರಿನ್ವಯ ಇದೀಗ ‌ನನ್ನ ಗಂಡ ಅವರ ತಂದೆ ಮತ್ತು ಸಹೋದರ ಬಂಧನವಾಗಿದೆ. ಎರಡನೇ ಹೆಂಡ್ತಿ‌ ಮತ್ತವರ ತಾಯಿ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಮತ್ತಷ್ಟ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:49 am, Sun, 4 September 22

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು