AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಅಮಿತ್ ಶಾಗೆ ಸುದ್ದಿ ಮುಟ್ಟಿಸಿದ್ದೇವೆ, ನಿಮ್ಮ ಪರ ನಾವಿದ್ದೇವೆ: ಶ್ರೀರಾಮುಲುಗೆ ಭರವಸೆ ಕೊಟ್ರಂತೆ ನಡ್ಡಾ

ಬಂಡಾಯವೆದ್ದಿರುವ ಬಿಜೆಪಿ ನಾಯಕ ಶ್ರೀರಾಮುಲು ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೂರವಾಣಿ ಕರೆ ಮಾಡಿ ಭರವಸೆಯ ಮಾತುಗಳನ್ನಾಡಿದ್ದಾರೆ. ಜತೆಗೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೂ ವಿಷಯ ತಿಳಿಸಲಾಗಿದೆ ಎಂದು ನಡ್ಡಾ ತಿಳಿಸಿರುವುದಾಗಿ ರಾಮುಲು ಮಾಹಿತಿ ನೀಡಿದ್ದಾರೆ.

ಮೋದಿ ಅಮಿತ್ ಶಾಗೆ ಸುದ್ದಿ ಮುಟ್ಟಿಸಿದ್ದೇವೆ, ನಿಮ್ಮ ಪರ ನಾವಿದ್ದೇವೆ: ಶ್ರೀರಾಮುಲುಗೆ ಭರವಸೆ ಕೊಟ್ರಂತೆ ನಡ್ಡಾ
ಶ್ರೀರಾಮುಲು
ವಿನಾಯಕ ಬಡಿಗೇರ್​
| Edited By: |

Updated on: Jan 24, 2025 | 12:57 PM

Share

ಬಳ್ಳಾರಿ, ಜನವರಿ 24: ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದಿರುವ ಶ್ರೀರಾಮುಲುಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕರೆ ಮಾಡಿ ಭರವಸೆಯ ಮಾತುಗಳನ್ನಾಡಿದ್ದಾರೆ. ಈ ವಿಚಾರವಾಗಿ ಖುದ್ದು ಶ್ರೀರಾಮುಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ರಾಮುಲು, ಜೆಪಿ ನಡ್ಡಾ ಗುರುವಾರ ದೂರವಾಣಿ ಮೂಲಕ ಮಾತನಾಡಿದ್ದಾರೆ. ಏನೇನು ನಡೆದಿದೆ ಎಂಬುದನ್ನು ಅವರಿಗೆ ವಿವರಿಸಿದ್ದೇನೆ. ಕೋರ್ ಕಮಿಟಿ ಸಭೆಯಲ್ಲಿ ರಾಧಾಮೋಹನ್ ಅಗರವಾಲ್ ಮಾತನಾಡಿದ ವಿಚಾರಗಳ ಬಗ್ಗೆಯೂ ಹೇಳಿದ್ದೇನೆ ಎಂದರು.

‘ರಾಮುಲು, ನಿಮ್ಮ ಪರವಾಗಿ ನಾನಿದ್ದೇನೆ, ಯಾವುದೇ ಯೋಚನೆ ಮಾಡಬೇಡಿ. ಮುಂದೆ ದೆಹಲಿಗೆ ಬರುವುದಾದರೆ ಬನ್ನಿ’ ಎಂದು ನಡ್ಡಾ ಹೇಳಿರುವುದಾಗಿ ರಾಮುಲು ಮಾಹಿತಿ ನೀಡಿದ್ದಾರೆ. ದೆಹಲಿಗೆ ಬರುವುದಾಗಿಯೂ, ಸಹಾಯಕರ ಅಪಾಯಿಟ್ಮೆಂಡ್ ತಗೊಂಡು ಬರುವುದಾಗಿಯೂ ನಡ್ಡಾಗೆ ಪ್ರತಿಕ್ರಿಯಿಸಿರುವುದಾಗಿ ರಾಮುಲು ತಿಳಿಸಿದ್ದಾರೆ.

ರಾಮುಲುಗೆ ನಡ್ಡಾ ಹೇಳಿದ್ದೇನು?

ಹಿಂದುಳಿದ ಸಮುದಾಯದ ಪರವಾಗಿ ನೀವಿದ್ದೀರಿ (ರಾಮುಲು). ಯಾವಾಗ ಬೇಕಿದ್ದರೂ ದೆಹಲಿಗೆ ಬನ್ನಿ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಸುದ್ದಿ ಮುಟ್ಟಿಸಿದ್ದೇವೆ. ನಿಮ್ಮ ಪರವಾಗಿ ನಾವಿದ್ದೇವೆ ಎಂದು ರಾಮುಲುಗೆ ನಡ್ಡಾ ಭರವಸೆ ನೀಡಿದ್ದಾರೆ.

ಪ್ರಲ್ಹಾದ್ ಜೋಶಿಯವರೂ ಕರೆ ಮಾಡಿ ನಡ್ಡಾ ಜೊತೆ ಮಾತನಾಡುವಂತೆ ಹೇಳಿದ್ದರು. ಆದರೆ, ಅಷ್ಟೊತ್ತಿಗೆ ನಡ್ಡಾ ಅವರೇ ಕರೆ ಮಾಡಿದ್ದಾರೆ ಎಂದು ರಾಮುಲು ತಿಳಿಸಿದ್ದಾರೆ.

ನಿಮಗೆ ನೋವಾಗಿದೆ ಎಂಬುದು ಗೊತ್ತಾಗಿದೆ. ಅಗರ್​ವಾಲ್ ಸಹಿತ ತಮ್ಮ ಮಾತು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ನೀವು ಪಕ್ಷ ಬಿಡುವ ಬಗ್ಗೆ ಯೋಚನೆ ಮಾಡಬೇಡಿ ಎಂದು ಜೋಶಿ ಹೇಳಿದ್ದಾಗಿಯೂ ರಾಮುಲು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶ್ರೀರಾಮುಲು, ಜನಾರ್ದನ ರೆಡ್ಡಿ ಸಮರ ನಿಯಂತ್ರಣಕ್ಕೆ ಬಿಜೆಪಿ ಹೈಕಮಾಂಡ್ ಎಂಟ್ರಿ: ವಿಜಯೇಂದ್ರಗೆ ಬಂತು ಖಡಕ್ ಸೂಚನೆ

ವಿಜಯೇಂದ್ರ ಕೂಡ ಗುರುವಾರ ಮಾತನಾಡಿ, ನಿಮಗೆ ಈ ರೀತಿ ಆಗಿರುವುದು ನೋವಾಗಿದೆ ಎಂದಿದ್ದಾರೆ. ಅಶೋಕಣ್ಣ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡರು ಮಾತನಾಡಿದ್ದಾರೆ. ಎಲ್ಲರಿಗೂ ನನ್ನ ಮೇಲೆ ವಿಶ್ವಾಸ ಇದೆ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಬಿಜೆಪಿ ಪಕ್ಷಕ್ಕೆ ಸಾಧ್ಯವಾದಷ್ಟು ಅಳಿಲು ಸೇವೆ ಸಲ್ಲಿಸಿದ್ದೇನೆ. ಹೀಗಾಗಿ ಅದನ್ನು ಗುರುತಿಸಿ ಮಾತನಾಡುತ್ತಿದ್ದಾರೆ. ನನ್ನ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಎಲ್ಲವನ್ನೂ ಪಾರ್ಟಿಯವರಿಗೆ ತಿಳಿಸಿದ್ದೇನೆ. ಇನ್ಮೇಲೆ ಏನೇ ಇದ್ರೂ ನಾಲ್ಕು ಗೋಡೆಗಳ ಮಧ್ಯೆ ಮಾತಾಡೋಣ ಎಂದಿದ್ದಾರೆ. ರಾಜಕಾರಣದಲ್ಲಿ ಕ್ರೆಡಿಬಿಲಿಟಿ ಬಹಳ ಮುಖ್ಯ. ಅದನ್ನ ನಾವು ಕಳೆದುಕೊಳ್ಳಬಾರದು. ಸ್ವಾಭಿಮಾನಕ್ಕೆ ತೊಂದರೆ ಆಗಿದ್ದರಿಂದ ನಾನು ಮಾತನಾಡಿದೆ. ಇದೀಗ ನನಗೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಅವರಿಟ್ಟ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಒಂದು ದಿನ ನಿಗದಿ ಮಾಡಿಕೊಂಡು ದೆಹಲಿಗೆ ಹೋಗುತ್ತೇನೆ. ಕಷ್ಟಕ್ಕೆ ಕೂಲಿ ಕೊಡಿ, ಅಗೌರವ ಮಾಡಬೇಡಿ, ಅಪಮಾನ ಮಾಡಬೇಡಿ, ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಎಂದಷ್ಟೇ ಕೇಳುತ್ತೇನೆ ಎಂದು ರಾಮುಲು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು