ಬಳ್ಳಾರಿಯಲ್ಲಿ ಅಂಗನವಾಡಿ ಜಾಗಕ್ಕೂ ಭೂಗಳ್ಳರ ಕಾಟ; ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಸಿದ ವ್ಯಕ್ತಿ
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಎಸ್.ಬಸಾಪುರ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ ಜಾಗ ಒತ್ತುವರಿ ಮಾಡಿಕೊಂಡಿ ಮನೆ ನಿರ್ಮಾಣ ಮಾಡಲಾಗಿದೆ. ಮನೆ ತೆರವು ಮಾಡುವಂತೆ ಕೋರ್ಟ್ ಆದೇಶಿಸಿದ್ರೂ, ಜಿಲ್ಲಾಡಳಿತ ನೋಟಿಸ್‌ಗೂ ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದು ನಮ್ಮ ಪೂರ್ವಜರ ಆಸ್ತಿ ಎಂದು ಮನೆ ಮಾಲೀಕ ಪಂಪಾಪತಿ ವಾದ ಮಾಡುತ್ತಿದ್ದಾರೆ.
ಬಳ್ಳಾರಿ, ಡಿ.30: ಜಿಲ್ಲೆಯಲ್ಲಿ ಅಂಗನವಾಡಿ ಜಾಗಕ್ಕೂ ಭೂಗಳ್ಳರ ಕಾಟ ಶುರುವಾಗಿದೆ (Land Acquisition). ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಎಸ್.ಬಸಾಪುರ ಗ್ರಾಮದಲ್ಲಿ ಸರ್ಕಾರಿ ಅಂಗನವಾಡಿ (Anganawadi) ಜಾಗ ಒತ್ತುವರಿ ಮಾಡಿಕೊಂಡಿ ಮನೆ ನಿರ್ಮಾಣ ಮಾಡಲಾಗಿದೆ. ಬಿ.ಪಂಪಾಪತಿ ಎಂಬುವವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜಾಗ ವಡ್ಡು ಗ್ರಾಮ ಪಂಚಾಯಿತಿಗೆ ಸೇರಿದೆ. ಮನೆ ತೆರವು ಮಾಡುವಂತೆ ಕೋರ್ಟ್ ಆದೇಶಿಸಿದ್ರೂ, ಜಿಲ್ಲಾಡಳಿತ ನೋಟಿಸ್‌ಗೂ ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ಇದು ನಮ್ಮ ಪೂರ್ವಜರ ಆಸ್ತಿ ಎಂದು ಪಂಪಾಪತಿ ವಾದ ಮಾಡುತ್ತಿದ್ದಾರೆ.
ವಡ್ಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸಾಪುರ ಗ್ರಾಮದ ಸರ್ಕಾರಿ ಜಾಗದಲ್ಲಿ ಅಂಗನವಾಡಿ ಕಟ್ಟಲು ಜಾಗ ನಿಗದಿ ಮಾಡಲಾಗಿತ್ತು. ಆದರೆ ಅಂಗನವಾಡಿ ನಿರ್ಮಾಣ ಆಗ್ಬೇಕಿದ್ದ ಜಾಗದಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಖಾತ ನಂ. 368 ಜಾಗ ಒತ್ತುವರಿ ಮಾಡಿ ಮನೆಗಳ ನಿರ್ಮಾಣ ಮಾಡಲಾಗಿದೆ. ಬಿ.ಪಂಪಾಪತಿ ಎಂಬುವವರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ. ಮನೆ ನಿರ್ಮಾಣ ಆದ ಜಾಗ ಪಂಚಾಯ್ತಿಗೆ ಸೇರಿದ್ದು ಎಂದು ಮನೆಗಳ ತೆರವಿಗೆ ಹೈಕೋರ್ಟ್ ಆದೇಶ ಮಾಡಿದರೂ ಮನೆ ಮಾಲೀಕ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಜಿಲ್ಲಾಡಳಿತ ನೋಟಿಸ್‌ಗಳಿಗೂ ತಲೆಬಾಗದೆ ಒತ್ತುವರಿ ಜಾಗದಲ್ಲಿ ಹೈಪೈ ಮನೆಗಳ ನಿರ್ಮಾಣ ಮಾಡಲಾಗಿದೆ. ಅಲ್ಲದೆ ಜಾಗ ಸರ್ವೆಗೆ ಬಂದ ಅಧಿಕಾರಿಗಳ ಮೇಲೂ ಮನೆ ಮಾಲೀಕ ಪಂಪಾಪತಿ ದರ್ಪ ಮೆರೆದಿದ್ದಾರೆ. ಇದು ನಮ್ಮ ಪೂರ್ವಾಜಿತರ ಆಸ್ತಿ. ರಾಜಕೀಯ ಷಡ್ಯಂತರದಿಂದ ದೌರ್ಜನ್ಯ ಆಗ್ತಿದೆ ಎಂದು ಕಣ್ಣೀರು ಹಾಕಿದ್ದಾರೆ. ನಿನ್ನೆ ಅಂಗನವಾಡಿ ತೆರೆಯುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತೆ. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಜಾಗ ಬಿಟ್ಟು ಕೊಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಹಾಸನ: ಜೆಡಿಎಸ್ ಭದ್ರಕೋಟೆ ಹೊಳೆನರಸೀಪುರ ಪುರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು
ಐಎಫ್‌ಎಸ್ ಅಧಿಕಾರಿ ಮೋಹನ್ ಕುಮಾರ್ ತಲೆದಂಡ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಅಕ್ರಮವಾಗಿ 126 ಮರಗಳನ್ನ ಕಡಿಯಲಾಗಿತ್ತು. ಈ ಪ್ರಕರಣದಲ್ಲಿ ಐಎಫ್‌ಎಸ್ ಅಧಿಕಾರಿ ಮೋಹನ್ ಕುಮಾರ್ ಸಹ ತಲೆದಂಡವಾಗಿದೆ. ಮೋಹನ್ ಕುಮಾರ್ರನ್ನ ಅಮಾನತುಗೊಳಿಸಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಆದೇಶಿಸಿದ್ರು. ಇನ್ನು ನಿನ್ನೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭುಗೌಡ ಬಿರಾದಾರ, ಬೇಲೂರು ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಬೇಲೂರು ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಹಾಗೂ ಅರಣ್ಯ ಗಸ್ತುಪಾಲಕ ರಘುಕುಮಾರ್ರನ್ನ ಅಮಾನತು ಮಾಡಲಾಗಿತ್ತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ