ದಂಡಂ ದಶಗುಣಂ: ಆರು ತಿಂಗಳಲ್ಲಿ ನಮ್ಮ ಮೆಟ್ರೋ ಬೊಕ್ಕಸಕ್ಕೆ ಲಕ್ಷ ಲಕ್ಷ ಹಣ ಜಮೆ

ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ದಾಣದಲ್ಲಿದ್ದರೆ ದಂಡ ಹಾಕಲಾಗುತ್ತಿದೆ. ಇತ್ತೀಚೆಗೆ ಬಿಎಂಆರ್​ಸಿಎಲ್​ ಈ ನಿಯಮವನ್ನು ಜಾರಿ ಮಾಡಿತ್ತು. ಓರ್ವ ಯುವಕ ದಂಡ ಕೂಡ ಕಟ್ಟಿದ್ದ. ಇದೀಗ ಇದೇ ರೀತಿಯ ನಿಯಮಗಳನ್ನು ಮೀರಿದ ಪ್ರಯಾಣಿಕರಿಂದ ದಂಡ ವಿಧಿಸಲಾಗಿದ್ದು, ಕಳೆದ ಆರು ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ 32 ಲಕ್ಷಕ್ಕೂ ಅಧಿಕ ದಂಡ ಸ್ವೀಕರಿಸಲಾಗಿದೆ.

ದಂಡಂ ದಶಗುಣಂ: ಆರು ತಿಂಗಳಲ್ಲಿ ನಮ್ಮ ಮೆಟ್ರೋ ಬೊಕ್ಕಸಕ್ಕೆ ಲಕ್ಷ ಲಕ್ಷ ಹಣ ಜಮೆ
ದಂಡಂ ದಶಗುಣಂ: ಆರು ತಿಂಗಳಲ್ಲಿ ನಮ್ಮ ಮೆಟ್ರೋ ಬೊಕ್ಕಸಕ್ಕೆ ಲಕ್ಷ ಲಕ್ಷ ಹಣ ಜಮೆ
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2024 | 3:11 PM

ಬೆಂಗಳೂರು, ಮೇ 31: ನಮ್ಮ ಮೆಟ್ರೋದಲ್ಲಿ  (namma metro) ಪ್ರಯಾಣಿಕರ ದುರ್ವತನೆ, ಅವಧಿ ಮೀರಿ ಪ್ರಯಾಣಕ್ಕೆ ಸೇರಿದಂತೆ ಕಳೆದ ಹತ್ತು ತಿಂಗಳಲ್ಲಿ ದಂಡದ ರೂಪದಲ್ಲಿ ಲಕ್ಷ ಲಕ್ಷ ರೂ. ಹಣ ವಸೂಲಿ ಮಾಡಲಾಗಿದೆ. ನಮ್ಮ ಮೆಟ್ರೋ ವ್ಯಾಪ್ತಿಯ 66 ನಿಲ್ದಾಣಗಳಿಂದ ಪ್ರತಿ ದಿನ ದಂಡ ಹಾಕಲಾಗುತ್ತಿದೆ. ಪ್ರತಿ ತಿಂಗಳು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಶನ್​ ಲಿಮಿಟೆಡ್​ಗೆ (BMRCL) ಐದು ಲಕ್ಷ ರೂ. ಹಣ ಜಮೆ ಆಗುತ್ತಿದೆ. ಹೀಗಾಗಿ ಕಳೆದ ಆರು ತಿಂಗಳಲ್ಲಿ 10 ಲಕ್ಷ ಪ್ರಯಾಣಿಕರಿಂದ 32 ಲಕ್ಷಕ್ಕೂ ಅಧಿಕ ದಂಡ ಸ್ವೀಕರಿಸಲಾಗಿದೆ.

ಸರಾಸರಿ 7 ಲಕ್ಷ ರೂ. ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಇದರಲ್ಲಿ ಸರಾಸರಿ 1.50 ಲಕ್ಷ ಪ್ರಯಾಣಿಕರು ನಿಲ್ದಾಣದ ಒಳಗಡೆ ಹೆಚ್ಚು ಹೊತ್ತು ಕಾಲಹರಣ ಮಾಡಿದ್ದಾರೆ. ಹಾಗೂ ಇನ್ನುಳಿದ ಕಾರಣಕ್ಕೆ ಬಿಎಂಆರ್ ಸಿಎಲ್​​ನಿಂದ ದಂಡ ವಿಧಿಸಲಾಗಿದೆ.

ಇದನ್ನೂ ಓದಿ: ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷಕ್ಕಿಂತ ಹೆಚ್ಚು ಸಮಯ ಇದ್ದಿದ್ದಕ್ಕೆ ದಂಡ: ಅಸಲಿ ಕಾರಣ ಬಿಚ್ಚಿಟ್ಟ ಯುವಕ

ಪ್ರಯಾಣದ ಬಳಿಕ ನಿಲ್ದಾಣದಲ್ಲಿ 20 ನಿಮಿಷದ ಬಳಿಕ ಇರುವಂತಿಲ್ಲ. ಅದಕ್ಕಿಂತ ಹೆಚ್ಚು ಅವಧಿ ಉಳಿದರೆ ಬಿಎಂಆರ್ ಸಿಎಲ್​​ 50-100 ದಂಡ ವಿಧಿಸುತ್ತಿದೆ. ಯಾವುದೇ ನಿಲ್ದಾಣದಲ್ಲಿ ಪ್ರಯಾಣಿಕರ ನೂಕುನುಗ್ಗಲು ಆಗದಂತೆ, ಸಹ ಪ್ರಯಾಣಿಕರಿಗೆ ತೊಂದರೆ, ಕಿರಿಕಿರಿ ಆಗಬಾರದು ಎಂಬ ಕಾರಣಕ್ಕೆ ಕ್ರಮಕೈಗೊಳ್ಳಾಗಿದ್ದು, 50- 100 ರೂ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರೇ ಹುಷಾರ್: 20 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ದಾಣದಲ್ಲಿದ್ರೆ ದಂಡ ಗ್ಯಾರಂಟಿ

ಸ್ಮಾರ್ಟ್ ಕಾರ್ಡ್, ದಿನದ ಪಾಸ್ ಇದ್ದರೆ ನಿಲ್ದಾಣದಿಂದ ಹೊರಬರುತ್ತಿದ್ದಂತೆ ವೇಳೆ ಸ್ವಯಂ ಚಾಲಿತವಾಗಿ ಈ ಮೊತ್ತ ಕಡಿತವಾಗುತ್ತದೆ. ಟೋಕನ್ ಪಡೆದು ಪ್ರಯಾಣ ಮಾಡಿದ್ದಲ್ಲಿ ಕೌಂಟರ್​ಗೆ ದಂಡ ಕಟ್ಟಬೇಕು. ಇಲ್ಲದಿದ್ದರೆ ನಿಲ್ದಾಣದಿಂದ ಹೊರ ಹೋಗಲು ಸಾಧ್ಯವಾಗುವುದಿಲ್ಲ.

ಯಾವ ತಿಂಗಳಲ್ಲಿ ಎಷ್ಟು ದಂಡ?

  • ನವೆಂಬರ್​ನಲ್ಲಿ 1,72,173 ಪ್ರಯಾಣಿಕರು ಪ್ರಯಾಣಿಸಿದ್ದು 5,55,674 ಲಕ್ಷ ರೂ. ದಂಡ ಸಂಗ್ರಹ
  • ಡಿಸೆಂಬರ್​ನಲ್ಲಿ 1,99,688 ಪ್ರಯಾಣಿಕರು ಪ್ರಯಾಣಿಸಿದ್ದು 5,90,318 ಲಕ್ಷ ರೂ. ದಂಡ ಸಂಗ್ರಹ
  • ಜನವರಿಯಲ್ಲಿ 1,84,089 ಪ್ರಯಾಣಿಕರು ಪ್ರಯಾಣಿಸಿದ್ದು 5,45,791 ಲಕ್ಷ ರೂ. ದಂಡ ಸಂಗ್ರಹ
  • ಫೆಬ್ರವರಿ 1,73,979 ಪ್ರಯಾಣಿಕರು ಪ್ರಯಾಣಿಸಿದ್ದು 5,25,717 ಲಕ್ಷ ರೂ. ದಂಡ ಸಂಗ್ರಹ
  • ಮಾರ್ಚ್ 1,69,434 ಪ್ರಯಾಣಿಕರು ಪ್ರಯಾಣಿಸಿದ್ದು 5,01,398 ಲಕ್ಷ ರೂ. ದಂಡ ಸಂಗ್ರಹ
  • ಏಪ್ರಿಲ್ 1,77,207 ಪ್ರಯಾಣಿಕರು ಪ್ರಯಾಣಿಸಿದ್ದು 5,29,610 ಲಕ್ಷ ರೂ. ದಂಡ ಸಂಗ್ರಹ
  • ಒಟ್ಟು 10,76,570 ಪ್ರಯಾಣಿಕರು ಪ್ರಯಾಣಿಸಿದ್ದು ಓವರ್ ಸ್ಟೇ, ಓವರ್ ಟ್ರಾವೆಲ್​ ಸೇರಿದಂತೆ ಒಟ್ಟು 32,48,508 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.