AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಪರಿಷತ್​ನಲ್ಲಿ 10 ವಿಧೇಯಕಗಳು ಮಂಡನೆ -ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಪರಿಷತ್​ನಲ್ಲಿ ರಾಷ್ಟ್ರಪತಿಗಳಿಂದ ಅಂಗೀಕಾರವಾದ 10 ವಿಧೇಯಕಗಳು ಮಂಡನೆಯಾಗಲಿವೆ ಎಂದು ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಪರಿಷತ್​ನಲ್ಲಿ 10 ವಿಧೇಯಕಗಳು ಮಂಡನೆ -ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ
ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ
TV9 Web
| Edited By: |

Updated on:Dec 18, 2022 | 3:12 PM

Share

ಬೆಳಗಾವಿ: ನಾಳೆಯಿಂದ ಡಿ.19 ರಿಂದ 30 ರವರಗೆ ಹತ್ತು ದಿನಗಳ ಕಾಲ ಸುವರ್ಣಸೌಧದಲ್ಲಿ (Suvarna Soudha) ಚಳಿಗಾಲದ ಅಧಿವೇಶನ (Winter Session) ನಡೆಯಲಿದೆ. 10 ದಿನಗಳ ಅಧಿವೇಶನದಲ್ಲಿ ರಾಷ್ಟ್ರಪತಿಗಳಿಂದ ಅಂಗೀಕಾರವಾದ 10 ವಿಧೇಯಕಗಳು ಮಂಡನೆಯಾಗಲಿವೆ ಎಂದು ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ (Raghunath Malkapure) ಹೇಳಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಷತ್​ ಸದಸ್ಯರು 1452 ಪ್ರಶ್ನೆಗಳನ್ನು ಕೇಳಲು ಅನುಮತಿ ಕೇಳಿದ್ದಾರೆ. ಆದರೆ 150 ಪ್ರಶ್ನೆಗಳನ್ನ ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಪ್ರತಿದಿನ 15 ಪ್ರಶ್ನೆ ಮೀರದಂತೆ ಚುಕ್ಕಿರಹಿತ ಪ್ರಶ್ನೆಗಳಿಗೆ ಅವಕಾಶ ಕೊಡಲಿದ್ದೇವೆ. ಲಿಖಿತ ರೂಪದಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರ ಕೊಡಲು ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸೂಚನೆಯ 51 ಅರ್ಜಿಗಳು ಬಂದಿವೆ. ತುಂಬಾ ಯೋಗ್ಯ ಹಾಗೂ ಮುಖ್ಯ ಎನಿಸಿರುವ ವಿಷಯಗಳಿಗೆ ಸಮಯವಕಾಶ ಕೊಡಲಾಗುತ್ತೆ. 1 ಖಾಸಾಗಿ ವಿಧೇಯಕ ಹಾಗೂ 1 ನಿರ್ಣಯವಿದೆ. 1 ವಿಧೇಯಕವನ್ನ ಚರ್ಚೆಗೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ; ಸುವರ್ಣಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಪರಿಷತ್ ಸಭಾಪತಿ ಸ್ಥಾನಕ್ಕೆ ಡಿ.22 ರಂದು ಚುನಾವಣೆ ನಡೆಯಲಿದೆ. ಡಿ.21 ರಂದು ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ. ನಾನು ಈ ಪೀಠದಲ್ಲಿರುವಾಗ ನಾನು ಅರ್ಜಿ ಸಲ್ಲಿಸುವುದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಸ್ಪಷ್ಟಪಡಿಸಿದರು.

ಖಾಸಾಗಿ ವಿಧೇಯಕಕ್ಕೆ ಪರಿಷತ್ ಸದಸ್ಯ ರವಿಕುಮಾರ್ ಅರ್ಜಿ

ಖಾಸಾಗಿ ವಿಧೇಯಕಕ್ಕೆ ಪರಿಷತ್ ಸದಸ್ಯ ರವಿಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಕಾನೂನು ವ್ಯಾಪ್ತಿಯಲ್ಲಿ ಅವಕಾಶ ಕೊಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆ ಬಿಸಿ, ಈ ಬಾರಿ ಅತೀ ಹೆಚ್ಚು ಪ್ರತಿಭಟನೆಗಳು ನೊಂದಣಿ

ಕಳೆದ ಬಾರಿ ವಕ್ಫ್ ಬೋರ್ಡ್ ಆಸ್ತಿಗೆ ಸಂಬಂಧಿಸಿದಂತೆ ಬಿಲ್ ಏಕಾಏಕಿಯಾಗಿ ಸದನಕ್ಕೆ ತಂದಿದ್ದ ವಿಚಾರವಾಗಿ ಮಾತನಾಡಿದ ಅವರು ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಿರೋಧ ಪಕ್ಷದಷ್ಟೇ ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ. ವಕ್ಫ್ ಆಸ್ತಿ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ ಅನ್ನೋ ವಿಚಾರ ನಾನು ರೂಲಿಂಗ್ ನೀಡಿದ್ದೇನೆ. ಈ ವಿಷಯ ನಿರ್ಣಯ ಮಾಡಿರೋದು ಸರಿಯಲ್ಲ. ನಿರ್ಣಯ ಪೇಪರ್‌ನಲ್ಲೇ ಮಾಡುವಂತೆ ಸೂಚನೆ ನೀಡಿದ್ದೇನೆ. ಏಕಾಏಕಿ ಒಬ್ಬ ಸದಸ್ಯರು ಇದನ್ನ ರೈಸ್ ಮಾಡಿದರು. ಇದು ಸರಿಯಾದ ವಿಚಾರ ಅಲ್ಲ. ಹಾಗಾಗಿ ಇದನ್ನ ಲೇ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದೇ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sun, 18 December 22